ವಿಶೇಷ ಭದ್ರತಾ ಕೊಠಡಿಗೆ ನಟ ದುನಿಯಾ ವಿಜಯ್‌


Team Udayavani, Sep 24, 2018, 12:30 PM IST

vishesha.jpg

ಬೆಂಗಳೂರು: ಜಿಮ್‌ ತರಬೇತುದಾರ ಮಾರುತಿಗೌಡ ಅವರನ್ನು ಅಪಹರಿಸಿ ಹಲ್ಲೆ ನಡೆಸಿದ ಆರೋಪ ಪ್ರಕರಣದಲ್ಲಿ 14ದಿನಗಳ ನ್ಯಾಯಾಂಗ ಬಂಧನದಲ್ಲಿರುವ ನಟ ದುನಿಯಾ ವಿಜಯ್‌ಗೆ ಪರಪ್ಪನ ಅಗ್ರಹಾರ ಕಾರಾಗೃಹದ ವಿಶೇಷ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ.

ಕೋರಮಂಗಲದ ನ್ಯಾಯಾಧೀಶರ ಮನೆಯಿಂದ ವಿಜಯ್‌ ಸೇರಿದಂತೆ ನಾಲ್ವರು ಆರೋಪಿಗಳು  ಭಾನುವಾರ ರಾತ್ರಿ 9-40ರ ಸುಮಾರಿಗೆ ಜೈಲಿಗೆ ಕರೆತರಲಾಯಿತು. ಬಳಿಕ ನಿಯಮಾವಳಿಗಳಂತೆ ಎಂಟ್ರಿ ನಮೂದಿಸಿ, ವೈದ್ಯಕೀಯ ತಪಾಸಣೆ ನಡೆಸಿ  ವಶಕ್ಕೆ ಪಡೆದು ವಿಜಯ್‌ ಅವರನ್ನು ವಿಶೇಷ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ಉಳಿದ ಮೂವರು ಆರೋಪಿಗಳನ್ನು ಬ್ಯಾರಕ್‌ ಒಂದರಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ನಲಪಾಡ್‌ ಇದ್ದ ಕೊಠಡಿಯಲ್ಲಿ ವಿಜಯ್‌!: ಉದ್ಯಮಿ ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಗುರಿಯಾಗಿದ್ದ ಮೊಹಮದ್‌ ನಲಪಾಡ್‌ ಇದ್ದ ವಿಶೇಷ ಭದ್ರತಾ ಕೊಠಡಿಯಲ್ಲಿಯೇ ನಟ ವಿಜಯ್‌ರನ್ನು ಇಡಲಾಗಿದೆ ಎಂದು ತಿಳಿದು ಬಂದಿದೆ. ವಿಜಯ್‌ ಸೃಷ್ಟಿಸಿದ್ದ ವಿವಾದಗಳು!

ಚಿತ್ರ ನಟ ದುನಿಯಾ ವಿಜಯ್‌ 2013ರಿಂದಲೂ ಹಲವು ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. 2013ರಲ್ಲಿ ಮೊದಲ ಪತ್ನಿ ನಾಗರತ್ನ ಅವರಿಗೆ ಜೀವಬೆದರಿಕೆ ಹಾಕಿದ ಆರೋಪ ಸಂಬಂಧ ದೂರು ದಾಖಲಾಗಿತ್ತು. ಬಳಿಕ ಸ್ನೇಹಿತರೊಬ್ಬರ ಕೌಟುಂಬಿಕ ಜಗಳದಲ್ಲಿ ಮಧ್ಯಪ್ರವೇಶಿಸಿದ್ದ ವಿಜುಯ್‌, ಹಿರಿಯ ವೃದ್ಧರ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಚನ್ನಮ್ಮನ ಅಚ್ಚುಕಟ್ಟು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇದಲ್ಲದೆ ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಸಾಹಸ ಕಲಾವಿದರಾದ ಅನಿಲ್‌ ಹಾಗೂ ಉದಯ್‌ ಮೃತಪಟ್ಟ ಪ್ರಕರಣದ ಆರೋಪಿ ಚಿತ್ರನಿರ್ಮಾಪಕ ಸುಂದರ್‌ಗೌಡ ಅವರನ್ನು ಪೊಲೀಸ್‌ ಪೇದೆ ಬಂಧಿಸಲು ತೆರಳಿದಾಗ ಅವರ ಮೇಲೆ ಹಲ್ಲೆ ನಡೆಸಿದ್ದ ವಿಜಯ್‌, ಸುಂದರ್‌ ಗೌಡ ಪರಾರಿಯಾಗಲು ಸಹಕರಿಸಿದ್ದ.

ಈ ಪ್ರಕರಣ ಸಂಬಂಧ ಹಲವು ದಿನಗಳ ಕಾಲ ತಲೆ ಮರೆಸಿಕೊಂಡಿದ್ದ ವಿಜಯ್‌ನನ್ನು ಕಳೆದ ಜೂನ್‌ನಲ್ಲಿ ಸಿ.ಕೆ ಅಚ್ಚುಕಟ್ಟು ಠಾಣೆ ಪೊಲೀಸರು ತಮಿಳುನಾಡು ಗಡಿಯ ರೆಸಾರ್ಟ್‌ನಿಂದ ಬಂಧಿಸಿ ಕರೆತಂದಿದ್ದರು. ಈ ಪ್ರಕರಣದಲ್ಲಿ ಮೊದಲೇ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದ ಕಾರಣ ನ್ಯಾಯಾಂಗ ಬಂಧನ ಭೀತಿಯಿಂದ ಪಾರಾಗಿದ್ದರು. ಈ  ಬೆನ್ನಲ್ಲೇ ನಿವೃತ್ತ ಯೋಧ ವೆಂಕಟೇಶ್‌ ಎಂಬುವವರು ಕೂಡ ದುನಿಯಾ ವಿಜಯ್‌ ವಿರುದ್ಧ ಜೀವ ಬೆದರಿಕೆ ಆರೋಪ ಮಾಡಿದ್ದಾರೆ. 

ವಿಜಯ್‌ ಭಾವಮೈದ ಕಿರಣ್‌ಗೆ 4 ಲಕ್ಷ. ರೂ. ಸಾಲ ನೀಡಿದ್ದು, ವಾಪಾಸ್‌ ನೀಡಿರಲಿಲ್ಲ. ಈ ವಿಚಾರವನ್ನು ತಿಳಿಸಲು ವಿಜಯ್‌ ಮನೆಯ ಹತ್ತಿರ ಹೋಗಿದ್ದಾಗ, ಮತ್ತೂಮ್ಮೆ ಮನೆಯ ಹತ್ತಿರ ಬಂದರ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ನಿಂದಿಸಿ ಪ್ರಾಣಬೆದರಿಕೆ  ಒಡ್ಡಿದ್ದರು ಎಂದು ವೆಂಕಟೇಶ್‌ ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ. 

ಪ್ರಕರಣದ ಟೈಮ್‌ ಲೈನ್‌ 
* ಶನಿವಾರ ರಾತ್ರಿ 10: ಮಾರುತಿಗೌಡನ ಜತೆ ಜಗಳ 
* ರಾತ್ರಿ 10.30: ಮಾರುತಿ ಗೌಡನ ಅಪಹರಣ ಹಲ್ಲೆ 
* ರಾತ್ರಿ 11:30: ಹೈಗ್ರೌಂಡ್ಸ್‌ ಪೊಲೀಸರಿಂದ ವಿಜಯ್‌ ಸೇರಿ ಆರೋಪಿಗಳ ಬಂಧನ 
* ಭಾನುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ವೈಯಾಲಿಕಾವಲ್‌ ಆಸ್ಪತ್ರೆಗೆ ಸ್ಥಳಾಂತರ 
* ರಾತ್ರಿ: 9 ಗಂಟೆ – ನ್ಯಾಯಾಧೀಶರಿಂದ 14 ದಿನಗಳ ನ್ಯಾಯಾಂಗ ಬಂಧನ ಆದೇಶ 
* ರಾತ್ರಿ 9:40 – ಪರಪ್ಪನ ಅಗ್ರಹಾರ ಜೈಲಿಗೆ 

ಟಾಪ್ ನ್ಯೂಸ್

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Organ Donation: ಸಾವಿನ ನಂತರವೂ ನೆರವಾದ ಜೀವ

Organ Donation: ಸಾವಿನ ನಂತರವೂ ನೆರವಾದ ಜೀವ

15-bng

Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್‌ ಆಯುಕ್ತರಿಗೆ ದೂರು

14-bng

Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು

9-munirathna

Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್‌ ಕೇಸ್‌: ಪಿಐ ಸೆರೆ

8-bng

Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.