ಸಿಲಿಕಾನ್ ಸಿಟಿಯಲ್ಲಿ ಧೂಳೇ ಧೂಳು!
Team Udayavani, Sep 18, 2017, 12:02 PM IST
ಬೆಂಗಳೂರು: ವೇಗವಾಗಿ ಬೆಳಯುತ್ತಿರುವ ನಗರದ ವೈಟ್‌ಫೀಲ್ಡ್ ಹಾಗೂ ದೊಮ್ಮಲೂರು ರೀತಿಯ ಪ್ರಮುಖ ಭಾಗಗಳಲ್ಲಿ ವಾಯು ಮಾಲಿನ್ಯ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿರುವುದು ಆತಂಕ ಮೂಡಿಸಿದೆ.
ಇತ್ತೀಚೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಾಯು ಗುಣಮಟ್ಟ ಮಾಪನ ಪರಿಶೀಲನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಳೆದೊಂದು ವರ್ಷದ ವಾಯು ಮಾಲಿನ್ಯ ಪ್ರಮಾಣ ತಿಳಿಸಲು ಮುಂದಾಗಿದೆ. ಆ ಹಿನ್ನೆಲೆಯಲ್ಲಿ ನಗರದ 16 ಭಾಗಗಳಲ್ಲಿರುವ ರಾಷ್ಟ್ರೀಯ ಪರಿವೇಷ್ಟಕಗಳಿಂದ ಮಾಹಿತಿ ಪಡೆಯಲಾಗಿದ್ದು, ವೈಟ್‌ಫೀಲ್ಡ್ ಹಾಗೂ ದೊಮ್ಮಲೂರು ಭಾಗಗಳಲ್ಲಿ ರಾಷ್ಟ್ರೀಯ ಮಿತಿಗಿಂತ ಹೆಚ್ಚಿನ ಪ್ರಮಾಣದ ಧೂಳಿನ ಕಣಗಳಿರುವುದು ಬೆಳಕಿಗೆ ಬಂದಿದೆ.
ಮಂಡಳಿಯ ಅಧಿಕಾರಿಗಳು ಕಳೆದ ಐದು ವರ್ಷಗಳ ಅಂಕಿ ಅಂಶಗಳನ್ನು ಕಲೆಹಾಕಿದ್ದಾರೆ. ಅದರಂತೆ ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ಧೂಳಿನ ಕಣ ಪ್ರಮಾಣ ದುಪ್ಪಟ್ಟಾಗಿದೆ. ಧೂಳಿನ ಕಣಗಳ ರಾಷ್ಟ್ರೀಯ ಪ್ರಮಾಣವನ್ನು ಒಂದು ಸಾವಿರ ಲೀಟರ್ ಗಾಳಿಗೆ 60 ಮೈಕ್ರೋ ಗ್ರಾಂಗಳಿಗೆ ಮಿತಿಗೊಳಿಸಲಾಗಿದೆ. ಆದರೆ, ದೊಮ್ಮಲೂರು ಭಾಗದಲ್ಲಿ ಈ ಪ್ರಮಾಣದ 2016-17ನೇ ಸಾಲಿನಲ್ಲಿ 120 ಮೈ.ಗ್ರಾಂ ಇರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.
ಇದರೊಂದಿಗೆ ಐಟಿ ಹಬ್ ಎಂದು ಗುರುತಿಸಿಕೊಂಡಿರುವ ವೈಟ್‌ಫೀಲ್ಡ್ ಭಾಗದಲ್ಲಿ ಕಳೆದ ಐದು ವರ್ಷಗಳಲ್ಲಿಯೇ ಅತಿಹೆಚ್ಚು ಮಾಲಿನ್ಯ ಪ್ರಮಾಣ ದಾಖಲಾಗಿದ್ದು, ವರ್ಷದಿಂದ ವರ್ಷಕ್ಕೆ ಈ ಭಾಗದಲ್ಲಿ ಮಾಲಿನ್ಯ ಪ್ರಮಾಣ ಏರುಮುಖವಾಗುತ್ತಿರುವುದು ಅಂಕಿ-ಅಂಶಗಳಿಂದ ಕಂಡು ಬಂದಿದೆ. ಕಳೆದ ಐದು ವರ್ಷಗಳಿಂದ ಮಾಲಿನ್ಯ ಪ್ರಮಾಣ ಏರಿಕೆಯಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಮಾಲಿನ್ಯ ಪ್ರಮಾಣ 83 ಮೈ.ಗ್ರಾಂ ದಾಖಲಾಗಿದೆ.
ಸಾರಿಗೆ ವಲಯ ಕಾರಣ: ನಗರಗಳಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಾಗಲು ಸಾರಿಗೆ ವಲಯವೇ ಪ್ರಮಖ ಕಾರಣ ಎಂಬುದು ಹಲವು ಅಧ್ಯಯನಗಳಿಂದ ತಿಳಿದುಬಂದಿದೆ. ಇದರೊಂದಿಗೆ ಮಂಡಳಿ ಅಧಿಕಾರಿಗಳು ಸಾರಿಗೆ ಇಲಾಖೆ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಮತ್ತು ಪೊಲೀಸ್ ಇಲಾಖೆಗಳ ಸಹಯೋಗದಲ್ಲಿ ವಾಹನಗಳ ಹೊರಸೂಸುವ ಹೊಗೆಯ ತಪಾಸಣಾ ಕಾರ್ಯವನ್ನು ಹಮ್ಮಿಕೊಂಡಿದ್ದರು.
ಇತ್ತೀಚೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯು ವಾಹನಗಳ ಹೊಗೆ ಮಾಪನ ಮಾಡುವ ಉಪಕರಣಗಳನ್ನೊಳಗೊಂಡ 12 ಸಂಚಾರಿ ವಾಹನಗಳನ್ನು ಖರೀದಿಸಿ ಬೆಂಗಳೂರು ನಗರಕ್ಕೆ 6 ವಾಹನ, ಮೈಸೂರು, ಮಂಗಳೂರು, ಧಾರವಾಡ, ಕಲಬುರ್ಗಿ, ಬಳ್ಳಾರಿ ಮತ್ತು ಚಿತ್ರದುರ್ಗ ನಗರಗಳಿಗೆ ತಲಾ ಒಂದೊಂದು ವಾಹನಗಳನ್ನು ನೀಡಿ ವಾಹನಗಳ ಮಾಲಿನ್ಯ ತಪಾಸಣೆ ನಡೆಸಿತ್ತು. ಮಂಡಳಿಯು ಡೀಸೆಲ್ ಹಾಗೂ ಪೆಟ್ರೋಲ್ ಬಳಕೆಯ ಸುಮಾರು 15 ಸಾವಿರ ವಾಹನಗಳನ್ನು ತಪಾಸಣೆಗೆ ಒಳಪಡಿಸಿದೆ.
ತಪಾಸಣೆಗೆ ಒಳಪಟ್ಟ 15 ಸಾವಿರ ವಾಹನಗಳ ಪೈಕಿ ಶೇ.28ರಷ್ಟು ಡೀಸೆಲ್ ವಾಹನಗಳು ಹಾಗೂ ಶೇ.15ರಷ್ಟು ಪೆಟ್ರೋಲ್ ವಾಹನಗಳು ನಿಗದಿತ ಮಿತಿಗಿಂತ ಹೆಚ್ಚು ಹೊಗೆ ಸೂಸುತ್ತಿರುವುದು ಬಯಲಾಗಿದೆ.
ಮೆಟ್ರೋ ಬಂದರೂ ನಿಲ್ಲದ ಮಾಲಿನ್ಯ: ನಗರದ ಹಲವು ಭಾಗಗಳಲ್ಲಿ ನಮ್ಮ ಮೆಟ್ರೋ ಸೇವೆ ಆರಂಭವಾಗಿದ್ದರೂ ಮಾಲಿನ್ಯ ಪ್ರಮಾಣದಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಹಲವು ಭಾಗಗಳಲ್ಲಿ ಮಾಲಿನ್ಯ ಪ್ರಮಾಣ ಕಡಿಮೆಯಾಗಿದ್ದರೂ ರಾಷ್ಟ್ರೀಯ ಮಿತಿಗಿಂತಲೂ ಹೆಚ್ಚಿರುವುದು ವರದಿಯಿಂದ ತಿಳಿಸಿದೆ. ಮೈಸೂರು ರಸ್ತೆಯಲ್ಲಿ ಧೂಳಿನ ಹಣಗಳ ಪ್ರಮಾಣ 119 ಮೈ. ಗ್ರಾಂಗಳು ದಾಖಲಾಗಿದ್ದರೆ, ಪ್ರಸಕ್ತ ವರ್ಷದಲ್ಲಿ 107 ಮೈ.ಗ್ರಾಂ ದಾಖಲಾಗಿದೆ. ಅದೇ ರೀತಿ ಯಶವಂಪುರ ಭಾಗದಲ್ಲಿ ಕಳೆದ ಸಾಲಿನಲ್ಲಿ 105 ಮತ್ತು ಈ ವರ್ಷ 93 ಮೈ.ಗ್ರಾಂ ಇದೆ.
ಶಿವನಗರದಲ್ಲಿ ಕಳೆದ ವರ್ಷ 72 ಮೈ.ಗ್ರಾಂ ದಾಖಲಾಗಿದ್ದರೆ, ಈ ವರ್ಷ 46 ಮೈ.ಗ್ರಾಂ ಇದೆ. ಅದೇ ರೀತಿ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕಳೆದ ವರ್ಷ 127 ಹಾಗೂ ಈ ವರ್ಷ 109 ಮೈ.ಗ್ರಾಂ ಧೂಳಿನ ಕಣಗಳಿರುವುದು ಕಂಡು ಬಂದಿದೆ. ಜತೆಗೆ ಕಳೆದ ಐದು ವರ್ಷಗಳಿಗೆ ಹೋಲಿಕೆ ಮಾಡಿದರೆ ನಗರದಲ್ಲಿ ಗಂಧಕದ ಡೈ ಆಕ್ಸೆ„ಡ್ (ಖO2), ಸಾರಜನಕದ ಡೈ ಆಕ್ಸೆ„ಡ್ (NO2) ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ವರದಿಯಲ್ಲಿ ಉಲ್ಲೇಖವಾಗಿದೆ.
ಮಾಪನ ಕೇಂದ್ರಗಳಲ್ಲಿ ದಾಖಲಾಗಿರುವ ಮಾಹಿತಿ
-ಮಾಪನ ಕೇಂದ್ರ SO2 NO2 ಧೂಳಿನ ಕಣಗಳು (KM10)
-ಐಟಿಪಿಎಲ್ 2.0 33.1 131
-ಯಲಹಂಕ 2.0 28.5 111
-ಪೀಣ್ಯ 2.0 37 109
-ಮೈಸೂರು ರಸ್ತೆ 2.0 38 107
-ಯಶವಂತಪುರ ಪೊಲೀಸ್ ಠಾಣೆ 2.0 39.6 93
-ಹೊಸೂರು ರಸ್ತೆ 2.3 39.4 132
-ವಿಕ್ಟೋರಿಯಾ ರಸ್ತೆ 2.0 33.7 127
-ಶಿವನಗರ 3.7 30.3 46
-ಬಾಣಸವಾಡಿ 2.0 26.8 80
-ನಗರ ರೈಲು ನಿಲ್ದಾಣ 6.8 45.8 102
-ವೈಟ್‌ಫೀಲ್ಡ್ 2.0 24.3 83
-ದೊಮ್ಮಲೂರು 2.0 32 120
(ಪ್ರತಿ ಸಾವಿರ ಲೀಟರ್ ಗಾಳಿಗೆ SO2 50 ಮೈ.ಗ್ರಾಂ NO2 40 ಮೈ.ಗ್ರಾಂ ಹಾಗೂ PM10 60ಮೈ.ಗ್ರಾಂ ರಾಷ್ಟ್ರೀಯ ಮಿತಿಯನ್ನು ನಿಗದಿಗೊಳಿಸಲಾಗಿದೆ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
Road mishap: ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್ ಕಾನ್‌ಸ್ಟೇಬಲ್ ಸಾವು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.