ವಿಜಯೇಂದ್ರಗೆ ಟಿಕೆಟ್ ತಪ್ಪಿಸಿದ್ದಲ್ಲ, ಆದರ್ಶ ಪಾಲಿಸಿದ್ದೇವೆ!
Team Udayavani, Apr 30, 2018, 6:10 AM IST
ಬೆಂಗಳೂರು: ಸದ್ಯ ಕಿಂಗ್ ಮೇಕರ್ ಆಗುತ್ತೇವೆ ಎನ್ನುತ್ತಿರುವವರು ಚುನಾವಣೆ ಬಳಿಕ ಕಾಣೆಯಾಗುತ್ತಾರೆ. ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ. ಅಂತಿಮವಾಗಿ ಬಿಜೆಪಿಯೇ ಕಿಂಗ್ ಹಾಗೂ ಕಿಂಗ್ ಮೇಕರ್ ಆಗಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆ ಚುನಾವಣೆ ಪ್ರಚಾರದ ನಡಯಯೇ “ಉದಯವಾಣಿ’ಗೆ ಸಂದರ್ಶನ ನೀಡಿದ ಅವರು, ಸದ್ಯ ಬಿಜೆಪಿ- ಕಾಂಗ್ರೆಸ್ ಸ್ಥಾನ ಗಳಿಕೆ ಸಮಾನಾಂತರವಾಗಿದ್ದು, ಜೆಡಿಎಸ್ ಕಿಂಗ್ ಮೇಕರ್ ಆಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಒಂದು ಪ್ರವಾಸದ ನಂತರ ಎಲ್ಲ ಮತಗಳು ಬಿಜೆಪಿ ಕಡೆಗೆ ಒಗ್ಗೂಡಲಿದ್ದು, ನಾವೇ ಕಿಂಗ್ ಆಗುತ್ತೇವೆ. ಕಿಂಗ್ ಮೇಕರ್ ಆಗುತ್ತೇವೆ ಎಂದು ಹೇಳಿದರು.
ಬಿಜೆಪಿಯು “ಮಿಷನ್ 150′ ಗುರಿ ತಲುಪುವುದೇ?
ನಮ್ಮ ಗುರಿಯಂತೆ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಇದಕ್ಕೆ ಮೂರು ಕಾರಣಗಳಿವೆ. ಮೊದಲಿಗೆ ಸಂಘಟನೆ ಶಕ್ತಿ. ಆರು ತಿಂಗಳಿನಿಂದ ಬೂತ್ ಮಟ್ಟದಲ್ಲಿ ಸಂಘಟನೆ ನಡೆದಿದೆ. 13 ಮಂದಿಯ ಬೂತ್ ಸಮಿತಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರತಿ ಕಾರ್ಯಕರ್ತರಿಗೆ ಮತಗಟ್ಟೆಯನ್ನೇ ವಿಧಾನಸಭಾ ಕ್ಷೇತ್ರದಂತೆ ಪರಿಗಣಿಸಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಸ್ಥಳೀಯ ಸಮುದಾಯಗಳ ಪ್ರಮುಖರನ್ನು ಒಳಗೊಂಡ ನವಶಕ್ತಿ ತಂಡ, ಪೇಜ್ ಪ್ರಮುಖರು ಸಂಘಟನೆಯಲ್ಲಿ ತೊಡಗಿದ್ದಾರೆ. ಶೇ.100ರಷ್ಟು ಬಿಜೆಪಿ ಮತದಾರರು, ಶೇ.100ರಷ್ಟು ಇತರೆ ಪಕ್ಷದ ಮತದಾರರು ಹಾಗೂ ತಟಸ್ಥ ಮತದಾರರನ್ನು ಗುರುತಿಸಲಾಗಿದೆ. ಅದರಂತೆ ಮತದಾರರನ್ನು ಸೆಳೆಯುವ ಕಾರ್ಯ ನಡೆದಿದೆ.
ಬಿಜೆಪಿಗೆ ಪೂರಕವಾಗಿವೆ ಎನ್ನಬಹುದಾದ ಅಂಶಗಳೇನು?
ಪ್ರಧಾನಿ ನರೇಂದ್ರ ಮೋದಿಯವರ ನಾಲ್ಕು ವರ್ಷಗಳ ಅದ್ಭುತ ಆಡಳಿತವು ಪಕ್ಷಕ್ಕೆ ದೊಡ್ಡ ನೈತಿಕ ಬಲ ನೀಡಿದೆ. 16 ರಾಜ್ಯಗಳಲ್ಲಿ ಬಿಜೆಪಿ ಹಾಗೂ 5 ರಾಜ್ಯಗಳಲ್ಲಿ ಬಿಜೆಪಿ ಮೈತ್ರಿ ಆಡಳಿತವಿದ್ದು, ಅಲ್ಲಿನ ಆಡಳಿತ ಹಾಗೂ ಪ್ರಧಾನಿಯವರ ಕಾರ್ಯವೈಖರಿಯ ಆಡಳಿತ ವ್ಯವಸ್ಥೆ ರಾಜ್ಯದಲ್ಲೂ ಬರಬೇಕೆಂಬ ಭಾವನೆ ರಾಜ್ಯದವರಲ್ಲಿದೆ. ಇನ್ನೊಂದೆಡೆ ಅಹಂಕಾರಿ, ಸರ್ವಾಧಿಕಾರಿ ಧೋರಣೆಯ ಪ್ರಥಮ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ. ಅವರ ಅಧಿಕಾರಾವಧಿಯಲ್ಲಿ ನಡೆದ ವಿಭಜಿತ ರಾಜನೀತಿ, ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದು, ಆರ್ಥಿಕ ನಿರ್ವಹಣೆಯಲ್ಲಿನ ಅವ್ಯವಸ್ಥೆಯಿಂದಾಗಿ ಕರ್ನಾಟಕವನ್ನು ಸಿದ್ದರಾಮಯ್ಯ ಹಾಳು ಮಾಡಿದ್ದಾರೆ ಎಂಬ ಭಾವನೆ ಇದೆ. ಹಾಗಾಗಿ ಜನ ಬದಲಾವಣೆ ಅನಿವಾರ್ಯ ಎಂಬ ನಿರ್ಧಾರಕ್ಕೆ ಬಂದಂತಿದೆ. ಇದರಿಂದ ಬಿಜೆಪಿಯ ಮಿಷನ್-150 ಯಶಸ್ವಿಯಾಗಲಿದೆ.
ವರುಣಾ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದ ವಿಜಯೇಂದ್ರ ಅವರಿಗೆ ಟಿಕೆಟ್ ನೀಡದಿರುವುದರಿಂದ ಆ ಭಾಗದಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವುದೆ?
ವಿಜಯೇಂದ್ರ ಅವರಿಗೆ ಟಿಕೆಟ್ ತಪ್ಪಿಸಿದ್ದಲ್ಲ. ಅದೊಂದು ಆದರ್ಶ ಪಾಲನೆ. ಪಕ್ಷದ ನೀತಿಗೆ ಅನುಗುಣವಾಗಿ ಅವರಿಗೆ ಟಿಕೆಟ್ ನೀಡಲಿಲ್ಲವಷ್ಟೆ. ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಕುಟುಂಬದ ಮತ್ತೂಬ್ಬ ಸದಸ್ಯರು ಸ್ಪರ್ಧಿಸಬಾರದು ಎಂಬ ಮಾನದಂಡ ಅನುಸರಿಸಲಾಗಿದೆ. ಪಕ್ಷಕ್ಕೆ ಗೆಲ್ಲುವ ಸ್ಥಾನದ ಸಂಖ್ಯೆಗಿಂತ ಆದರ್ಶ ಮುಖ್ಯ. ಹಾಗಾಗಿ ಅವರಿಗೆ ಟಿಕೆಟ್ ನೀಡಿಲ್ಲ.
ಗಣಿ ಉದ್ಯಮಿ ಜನಾರ್ದನ ರೆಡ್ಡಿ ಪಕ್ಷದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಬಿಜೆಪಿ ಹಿನ್ನಡೆ ಉಂಟು ಮಾಡುವುದೇ?
ಜನಾರ್ದನರೆಡ್ಡಿ ಹಾಗೂ ಬಿಜೆಪಿಗೆ ಯಾವುದೇ ಸಂಬಂಧವಿಲ್ಲ ಎಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ಆದರೆ ಶ್ರೀರಾಮುಲು ಹಾಗೂ ಜನಾರ್ದನರೆಡ್ಡಿ ಅವರ ಸಂಬಂಧವನ್ನು ನಾವು ಕೆಡಿಸಲು ಹೋಗುವುದಿಲ್ಲ. ಅದು ಅವರ ವೈಯಕ್ತಿಕ ವಿಚಾರ.ಪ್ರಜಾತಂತ್ರ ವ್ಯವಸ್ಥೆಯಲ್ಲಿ ವ್ಯಕ್ತಿಗತವಾಗಿ ಯಾರು ಏನು ಬೇಕಾದರೂ ಮಾಡಬಹುದು. ಆದರೆ ಜನಾರ್ದನರೆಡ್ಡಿ ಪಕ್ಷದಲ್ಲಿ ಹಸ್ತಕ್ಷೇಪ ಮಾಡಿದರೆ ಆಗ ಪಕ್ಷ ಗಮನಿಸಲಿದೆ. ಸದ್ಯ ಅಂಥದ್ದೇನಿಲ್ಲ.
ಪ್ರಚಾರದಲ್ಲಿ ರಾಜ್ಯ ನಾಯಕರಿಗಿಂತ ಕೇಂದ್ರ ನಾಯಕರೇ ಮುಂಚೂಣಿಯಲ್ಲಿರುವ ಬಗೆಗಿನ ಆಕ್ಷೇಪಗಳ ಬಗ್ಗೆ ಏನು ಹೇಳುವಿರಿ?
ರಾಜ್ಯ ನಾಯಕರಿಗಿಂತ ರಾಷ್ಟ್ರೀಯ ನಾಯಕರು ಪ್ರಚಾರಕ್ಕೆ ಬಂದಾಗ ಹೆಚ್ಚು ಆದ್ಯತೆ ಸಿಗುತ್ತದೆ. ಆದರೆ ಬಹುತೇಕ ರಾಜ್ಯ ನಾಯಕರೇ ನಡೆಸಿದ ಪರಿವರ್ತನಾ ರ್ಯಾಲಿ ಯಶಸ್ವಿಯಾಯಿತು. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಪಕ್ಷ ಸಂಘಟನೆಗೆ ಕೈಗೊಂಡ ಕಾರ್ಯಯೋಜನೆಯನ್ನು ರಾಜ್ಯದಲ್ಲೂ ಅನುಷ್ಠಾನಗೊಳಿಸುತ್ತಿದೆ. ಕಾಂಗ್ರೆಸ್‌ಗೆ ಕೇಂದ್ರದಲ್ಲಿ ನಾಯಕರೇ ಇಲ್ಲ. ಬಿಜೆಪಿಯಲ್ಲಿ ಸಾಕಷ್ಟು ಪ್ರಬುದ್ಧ ರಾಷ್ಟ್ರೀಯ ನಾಯಕರಿದ್ದಾರೆ. ಕಾಂಗ್ರೆಸ್‌ಗೆ ಇರುವುದು ಒಬ್ಬರೇ ನಾಯಕರು. ಅವರು ಸಹ ಅಪ್ರಬುದ್ಧರು. ಏಕೋಪಾಧ್ಯಾಯ ಶಾಲೆಗೆ ಮುಖ್ಯೋಪಾಧ್ಯಾಯ ಇದ್ದಂತೆ. ಹೀಗಾಗಿ ಹೊಟ್ಟೆಕಿಚ್ಚು ಸಹಜ.
ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಅಜೆಂಡಾ ಏನು?
ಸುಶಾಸನ ಹಾಗೂ ಅಭಿವೃದ್ಧಿ. ವಿಭಜಿತ ರಾಜನೀತಿಗೆ ತಿಲಾಂಜಲಿ ಹಾಡುವುದು. ತುಷ್ಟೀಕರಣ ಹಾಗೂ ಭ್ರಷ್ಟಾಚಾರದ ನಿಯಂತ್ರಣ. ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಅಂತ್ಯವಾಗಬೇಕಿದೆ. ಭ್ರಷ್ಟಾಚಾರರಹಿತ ಹಾಗೂ ಅಭಿವೃದ್ಧಿಪರ ಆಡಳಿತ ನೀಡುವುದು ಪಕ್ಷದ ಅಜೆಂಡಾ.
ಕಾಂಗ್ರೆಸ್ ಕೂಡ ಅಭಿವೃದ್ಧಿ ಅಜೆಂಡಾ ಪಠಿಸುತ್ತಿದ್ದು, ಬಿಜೆಪಿಗೂ ಕಾಂಗ್ರೆಸ್ ಅಭಿವೃದ್ಧಿಗೂ ವ್ಯತ್ಯಾಸವೇನು?
ಎಲ್ಲ ರಾಜಕೀಯ ಪಕ್ಷಗಳು ಅಭಿವೃದ್ಧಿ ಪದವನ್ನು ಬಳಸುತ್ತವೆ. ಆದರೆ ಬಿಜೆಪಿಯದ್ದು ವಾಸ್ತವದ ಅಭಿವೃದ್ಧಿ. ಕಾಂಗ್ರೆಸ್‌ನದ್ದು ಪ್ರಚಾರದ ಅಭಿವೃದ್ಧಿ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ “ನಮ್ಮ ನಡಿಗೆ ಕೃಷ್ಣೆ ಕಡೆಗೆ’ ಅಭಿಯಾನ ನಡೆಸಿದಾಗ ಕೃಷ್ಣಾ ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ 10 ಸಾವಿರ ಕೋಟಿ ರೂ. ಅನುದಾನ ಘೋಷಿಸಿದ್ದರು. ಆದರೆ ಭರವಸೆ ಭಾಷಣದಲ್ಲೇ ಉಳಿಯಿತು.
ಬಿಜೆಪಿಯಲ್ಲಿ ಮತ್ತೆ ಗುಂಪುಗಾರಿಕೆ ಅಲ್ಲಲ್ಲಿ ಕಾಣಲಾರಂಭಿಸಿದೆ ಎಂಬ ಆರೋಪ ನಿಜವೇ?
ಪ್ರಾರಂಭದಲ್ಲಿ ಅಲ್ಪಸ್ವಲ್ಪ ಆ ರೀತಿ ವಾತಾವರಣವಿದ್ದು ಹಿರಿಯ ನಾಯಕರಲ್ಲಿ ಭಿನ್ನಾಭಿಪ್ರಾಯವಿತ್ತು. ಒಂದು ಹಂತದಲ್ಲಿ ಕೇಂದ್ರ ನಾಯಕರು ಮಧ್ಯಪ್ರವೇಶಿಸಿ ಪರಿಹಾರ ಸೂತ್ರ ನೀಡಿದ ನಂತರ ಎಲ್ಲರೂ ಬಗೆಹರಿದಿದೆ. ಸಂಘಟನೆಯಲ್ಲಿ ಶೇ.100ರಷ್ಟು ಯಶಸ್ಸು ಸಾಧಿಸಿದ್ದು, ಮತದಾರರನ್ನು ತಲುಪಿದ್ದೇವೆ. ಇನ್ನೇನಿದ್ದರೂ ಮತದಾರರನ್ನು ಮತ ಹಾಕಿಸುವ ಕೆಲಸ ಮಾಡಿದರೆ “ಮಿಷನ್ 150′ ಪೂರ್ಣವಾಗಲಿದೆ.
– ಎಂ.ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Punjab; ಗುಂಡಿನ ಚಕಮಕಿ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರ ಬಂಧನ
Aranthodu: ವಾಹನ ಡಿಕ್ಕಿ ಹೊಡೆದು ಕಾಡು ಹಂದಿ ಸಾವು
Artificial Intelligence: ಎಐ ಯುಗದಲ್ಲಿ ನಾವು ನೀವು?
Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್ ಟೈಮ್ ಎಷ್ಟು?
Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.