ರೋಗಿಗಳಿಗೆ ಹತ್ತಿರವಾದ ಇ ಸಂಜೀವಿನಿ

ರಾಷ್ಟ್ರೀಯ ಟೆಲಿಮೆಡಿಸಿನ್‌ ಸೇವೆಗೆ ರಾಜ್ಯದಲ್ಲಿ ಉತ್ತಮ ಸ್ಪಂದನೆ

Team Udayavani, Sep 13, 2020, 12:09 PM IST

bng-tdy-5

ಸಾಂದರ್ಭಿಕ ಚಿತ್ರ

ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ “ಇ ಸಂಜೀವಿನಿ’ ರಾಷ್ಟ್ರೀಯ ಟೆಲಿಮೆಡಿಸಿನ್‌ ಸೇವೆಗೆ ಕರ್ನಾಟಕದಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ದೇಶದಲ್ಲಿಯೇ ಆರೋಗ್ಯ ಉಪ ಕೇಂದ್ರಗಳ ಮೂಲಕ ಇ ಸಂಜೀವಿನಿ ಸೇವೆ ಬಳಕೆಯಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದ್ದು, ಈ ಕುರಿತು ಕೇಂದ್ರ ಸರ್ಕಾರದಿಂದ ಪ್ರಶಂಸೆ ವ್ಯಕ್ತವಾಗಿದೆ.

ಇದರ ಬೆನ್ನಲ್ಲೇ ಕಳೆದ ವಾರ “ಇ ಸಂಜೀವಿನಿ ಒಪಿಡಿ’ ಟೆಲಿಮೆಡಿಸಿನ್‌ ಸೇವೆ ಆರಂಭವಾಗಿದ್ದು, ರಾಜ್ಯದ 706 ಸರ್ಕಾರಿ ವೈದ್ಯರು ಟೆಲಿಮೆಡಿಸಿಸ್‌ ಸೇವೆ ನೀಡಲು ನೋಂದಣಿಯಾಗಿದ್ದಾರೆ. ಸಾರ್ವಜನಿಕರು ಮನೆಯಲ್ಲಿಯೇ ಕುಳಿತು ಮೊಬೈಲ್‌ ಮೂಲಕ ಸಾಮಾನ್ಯ ಕಾಯಿಲೆ, ಫಾಲೋಅಪ್‌ ಚಿಕಿತ್ಸೆ, ತಜ್ಞ ವೈದ್ಯರ ಸಲಹೆ ಪಡೆಯಬಹುದಾಗಿದೆ. ಇದಕ್ಕಾಗಿಯೇ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 38 ಟೆಲಿಮೆಡಿಸಿನ್‌ ಹಬ್‌ಗಳು ಕಾರ್ಯಾಚರಣೆ ನಡೆಸುತ್ತಿವೆ.

ದೇಶದಲ್ಲಿ ಕೋವಿಡ್ ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ದೇಶಾದ್ಯಂತ 2 ವಿಧದ ಟೆಲಿಮೆಡಿಸಿನ್‌ ಸೇವೆಯನ್ನು ಕೇಂದ್ರ ಸರ್ಕಾರ ಆರಂಭಿಸಿತು. 1. ರೋಗಿಗಳು ಸ್ಥಳೀಯ ಮಟ್ಟದ ಆರೋಗ್ಯ ಉಪಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಕಿರಿಯ ಆರೋಗ್ಯ ಸಹಾಯಕಿಯರ ನೆರವಿನಿಂದ ತಜ್ಞ ವೈದ್ಯರೊಂದಿಗೆ ಟೆಲಿ ಸಮಾಲೋಚನೆಗೆ ಒಳಗಾಗುವುದು. 2. “ಇ ಸಂಜೀವಿನಿ ಒಪಿಡಿ” ಕಾರ್ಯಕ್ರಮದಡಿ ರೋಗಿಯೇ ಮೊಬೈಲ್‌ ಆ್ಯಪ್‌, ಆನ್‌ಲೈನ್‌ ಮೂಲಕ ನೇರವಾಗಿ ವೈದ್ಯರ ಸಂಪರ್ಕಿಸುವುದು. ಈವರೆಗೂ ದೇಶಾದ್ಯಂತ 3 ಲಕ್ಷಕ್ಕೂ ಅಧಿಕ ಟೆಲಿಮೆಡಿಸಲ್‌ ಸೇವೆ ಲಭ್ಯವಾಗಿವೆ. ಉಪ ಕೇಂದ್ರಗಳ ಟೆಲಿಮೆಟಿಸಿನ್‌ ಸೇವೆಯಲ್ಲಿ ಕರ್ನಾಟಕ ಈವರೆಗೂ 6,731 ಮಂದಿಗೆ 7,474 ಸೇವೆಗಳನ್ನು ನೀಡುವ ಮೂಲಕ ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಮೂರು ಸ್ಥಾನದಲ್ಲಿ ಹಿಮಾಚಲ ಪ್ರದೇಶ, ಆಂಧ್ರಪ್ರದೇಶ, ಗುಜರಾತ್‌ ರಾಜ್ಯಗಳಿವೆ.

ರೋಗಿಗೆ ಮೊಬೈಲ್‌ನಲ್ಲೆ ಚಿಕಿತ್ಸೆ: ಕರ್ನಾಟಕದಲ್ಲಿ 5 ತಿಂಗಳಿನಿಂದ ಕೇವಲ ಆರೋಗ್ಯ ಉಪಕೇಂದ್ರಗಳಲ್ಲಿ ಮಾತ್ರ ಇ ಸಂಜೀವಿನಿ ಸೇವೆ ಲಭ್ಯವಿತ್ತು. ಆದರೆ, ಸೆ. 1 ರಿಂದ ಮೊಬೈಲ್‌ ಆ್ಯಪ್‌ ಅಥವಾ ಆನ್‌ಲೈನ್‌ ಮೂಲಕ “ಇ ಸಂಜೀವಿನಿ ಒಪಿಡಿ” ಸೇವೆ ಆರಂಭವಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗಾಗಲೇ 300ಕ್ಕೂ ಹೆಚ್ಚು ರೋಗಿಗಳು ಆ್ಯಪ್‌ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ವಾರದಲ್ಲಿಯೇ 650 ವೈದ್ಯರ ನೋಂದಣಿ: ಈ ಹಿಂದೆ ರಾಜ್ಯದಲ್ಲಿ 50 ವೈದ್ಯರು ಮಾತ್ರ ಟೆಲಿಮೆಟಿಸಿನ್‌ ಸೇವೆಗೆ ನೋಂದಣಿ ಮಾಡಿಕೊಂಡಿದ್ದರು. ಆರೋಗ್ಯ ಇಲಾಖೆ ಇ ಸಂಜೀವಿನ ಒಪಿಡಿ ಸೇವೆ ಆರಂಭಿಸಿದ ಹಿನ್ನೆಲೆ ಜಿಲ್ಲಾಸ್ಪತ್ರೆಗಳ ವೈದ್ಯರುಗಳನ್ನು ಟೆಲಿಮೆಡಿಸನ್‌ ಸೇವೆಆಹ್ವಾನಿಸಿತ್ತು. ಒಂದು ವಾರದಲ್ಲಿ 650ಕ್ಕೂ ಹೆಚ್ಚು ವೈದ್ಯರು ನೋಂದಣಿ ಮಾಡಿಕೊಂಡಿದ್ದಾರೆ. ಸದ್ಯ 706 ವೈದ್ಯರು ಇ ಸಂಜೀವಿನಿ ಟೆಲಿಮೆಡಿಸಿನ್‌ ಸೇವೆಗೆ ಲಭ್ಯವಿದ್ದಾರೆ. ರಾಜ್ಯ ಜಿಲ್ಲಾಸ್ಪತ್ರೆ ಮತ್ತು ರೆಫೆರಲ್‌ ಆಸ್ಪತ್ರೆ ಸೇರಿ 38 ಕಡೆ ಟೆಲಿಮೆಡಿಸಿನ್‌ ಸೇವಾ ಹಬ್‌ಗಳನ್ನು ತೆರೆಯಲಾಗಿದೆ. ಪಾಳಿಯಲ್ಲಿ ವೈದ್ಯರು ಕಾರ್ಯನಿರ್ವಹಿಸಲಿದ್ದು, ಜನರಲ್‌ ಒಪಿಡಿ ಇಲ್ಲದ ದಿನ ಟೆಲಿ ಮೆಡಿಸಿನ್‌ ಒಪಿಡಿ ಸೇವೆ ನೀಡಲಿದ್ದು, ನಿತ್ಯ 2000 ರೂ. ಗೌರವಧನ ನೀಡಲಾಗುವುದು ಎಂದು ಇ-ಆರೋಗ್ಯ ಉಪನಿರ್ದೇಶಕ ಡಾ.ಅರುಣ್‌ ಕುಮಾರ್‌ ತಿಳಿಸಿದ್ದಾರೆ.

ಮೊಬೈಲ್‌ ಮೂಲಕ ಚಿಕಿತ್ಸೆ ಹೇಗೆ? :  ಮೊಬೈಲ್‌ನಲ್ಲಿ ಪ್ಲೇ ಸ್ಟೋರ್‌ ಅಥವಾ ಕಂಪ್ಯೂಟರ್‌ನಲ್ಲಿ ಗೂಗಲ್‌ಗೆ ತೆರಳಿ “ಇ ಸಂಜೀವಿನಿ ಒಪಿಡಿ’ ಆಯ್ಕೆ ಮಾಡಿಕೊಳ್ಳಬೇಕು. ಇ- ಸಂಜೀವಿನಿ ಮುಖ ಪುಟ ತೆರೆದುಕೊಳ್ಳಲಿದೆ. ಇದರಲ್ಲಿ ರೋಗಿಯ ಮೊಬೈಲ್‌ ನಂಬರ್‌ ನೀಡಿ, ಒಟಿಪಿ ಪಡೆದು ನೋಂದಣಿ ಮಾಡಿಕೊಳ್ಳಬೇಕು. ಬಳಿಕ ರೋಗಿಯ ಪ್ರಾಥಮಿಕ ಮಾಹಿತಿ ನಮೂದಿಸಿ ಕಾಯಿಲೆ ವಿಧದ ಆಯ್ಕೆ ಮಾಡಿದ ಕೂಡಲೇ ರೋಗಿ ಐಡಿ, ಟೋಕನ್‌ ಸಂಖ್ಯೆ ಬರಲಿದೆ. ಅದನ್ನು ಬಳಸಿ ಲಾಗ್‌ ಇನ್‌ ಆದರೆ ಆ್ಯಪ್‌ ಅಥವಾ ವೆಬ್‌ಪುಟದಲ್ಲೆ ವಿಡಿಯೋ ಕಾಲ್‌ ಮೂಲಕ ವೈದ್ಯರನ್ನು ಸಂಪರ್ಕಿಸಬಹುದು. ಬಳಿಕ ಇ- ಔಷಧ ಚೀಟಿಯನ್ನು ವೈದ್ಯರು ನೀಡುತ್ತಾರೆ. ಅದನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಪ್ರತಿ ದಿನದ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ವರೆಗೆ ಲಭ್ಯವಿರು ತ್ತದೆ. ಒಮ್ಮೆ ನೋಂದಣಿ ಆದ ಬಳಿಕ ಸಮಾಲೋಚನೆ ಅಗತ್ಯವಿದ್ದಾಗ ಟೋಕನ್‌ ನಂಬರ್‌ ಪಡೆದು ನೇರವಾಗಿ ವಿಡಿಯೋ ಕಾಲ್‌ ಮಾಡಬಹುದು. ಆರೋಗ್ಯ ಉಪಕೇಂದ್ರಗಳಿಗೆ ಭೇಟಿ ನೀಡಿಯೂ ಇ ಸಂಜೀವಿನಿ ಟೆಲಿಮೆಡಿಸಿನ್‌ ನೆರವು ಪಡೆಯಬಹುದು.

ಇ ಸಂಜೀವಿನಿ ಒಪಿಡಿ ಸೇವೆ ಬಳಸುವ ಮೂಲಕ ರೋಗಿಗಳು ಆಸ್ಪತ್ರೆಯ ಅಲೆದಾಟದಿಂದ ತಪ್ಪಿಸಿಕೊಳ್ಳಬಹುದು. ಮನೆಯಲ್ಲೆ ಕುಳಿತು ತಜ್ಞ ವೈದ್ಯರನ್ನು ಸಂಪರ್ಕಿಸಬಹುದು. ರೆಫ‌ರಲ್‌ ಆಸ್ಪತ್ರೆಗಳ ತಜ್ಞ ವೈದ್ಯರು ಸೇರಿ 700ಕ್ಕೂ ವೈದ್ಯರು ಟೆಲಿಮೆಡಿಸಿನ್‌ ಸೇವೆಗೆ ಲಭ್ಯವಿದ್ದಾರೆ. ಉಪ ಕೇಂದ್ರಗಳಲ್ಲೂ ಸೇವೆ ಪಡೆಯಬಹುದಾಗಿದೆ.  ಡಾ.ಅರುಣ್‌ ಕುಮಾರ್‌, ಇ-ಆರೋಗ್ಯ ಉಪನಿರ್ದೇಶಕರು

ಆರೋಗ್ಯ ಉಪ ಕೇಂದ್ರಗಳ ಮೂಲಕ ಇ ಸಂಜೀವಿನಿ ಸೇವೆ ಬಳಕೆಯಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಸದ್ಯ ಇ ಸಂಜೀವಿನಿ ಒಪಿಡಿ ಸೇವೆಯೂ ಆರಂಭವಾಗಿದ್ದು, ಅಗತ್ಯ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಟೆಲಿಮೆಡಿಸಿನ್‌ ಸೇವೆ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುವ ವಿಶ್ವಾಸವಿದೆ.  ಸುರೇಶ್‌ ಜಂಬಗಿ, ತಾಂತ್ರಿಕ ಅಧಿಕಾರಿ, ಸಿ-ಡಿಎಸಿ, ಚಂಡೀಗಡ

 

ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

23-bng

Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?

22-bng

Bengaluru: ಏರ್ಪೋರ್ಟ್‌ ಟಿ-2ಗೆ ವರ್ಟಿಕಲ್‌ ಗಾರ್ಡನ್‌ ರಂಗು

21-bng

Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ

20-flipama

Bengaluru: 19 ಕಡೆ ಫ್ಲಿಪ್‌ ಕಾರ್ಟ್‌, ಅಮೆಜಾನ್‌ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ

19-bng

Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

sand

Bramavara: ಬೆಣ್ಣೆಕುದ್ರು; ಮರಳು ಅಕ್ರಮ ಸಾಗಾಟ

crime

Brahmavara: ಯಡ್ತಾಡಿ; ಬೈಕ್‌ ಅಪಘಾತ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

byndoor

Udupi: ಬೈಕಿಗೆ ಕಾರು ಢಿಕ್ಕಿ; ಸವಾರನಿಗೆ ಗಾಯ

dw

Puttur: ಕೆರೆಗೆ ಬಿದ್ದು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.