![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 4, 2022, 3:09 PM IST
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮುಂಜಾನೆ ಎದ್ದು ನಗರದ ಬೀದಿಗಳನ್ನು ಸ್ವತ್ಛಗೊಳಿಸಿ ಸುಂದರವಾಗಿಸುವಲ್ಲಿ ಪರಿಶ್ರಮಪಡುವ ಮಹಿಳಾ ಸ್ವಚ್ಛಕರ್ಮಿಗಳಿಗೆ ಕರ್ತವ್ಯದ ಸಂದರ್ಭದಲ್ಲಿ ಶೌಚಾಲಯ ಅರಿಸಿ ಹೋಗುವುದೇ ದೊಡ್ಡ ತಲೆ ನೋವು.
ಪೌರ ಕಾರ್ಮಿಕರ ಈ ಸಮಸ್ಯೆ ಮನಗಂಡ ಬಿಬಿ ಎಂಪಿ ಅವರಿಗಾಗಿ ನಗರದ ಹಲವೆಡೆ ಖಾಸಗಿ ಸಹ ಭಾಗಿತ್ವದಲ್ಲಿ ಇ-ಶೌಚಾಲಯ ನಿರ್ಮಿಸಲು ಮುಂದಾಗಿದೆ.
ಪೌರಕಾರ್ಮಿಕರಿಗಾಗಿ ಪ್ರಾರಂಭಿಸಲಾಗುತ್ತಿರುವ ಇ-ಶೌಚಾಲಯವನ್ನು ಪಿಪಿಪಿ ಮಾಡೆಲ್ ಮೂಲಕ ನಿರ್ಮಾಣ ಮಾಡಲಾಗುತ್ತಿದೆ. ಬಿಬಿಎಂಪಿ ಪ್ರದೇಶ ದಲ್ಲಿ ದುರ್ಗಾ ಖಾಸಗಿ ಸಂಸ್ಥೆ ಇ-ಶೌಚಾಲಯ ನಿರ್ಮಿ ಸಲು ಮುಂದಾಗಿದೆ. ಇದರ ಮೊದಲ ಹಂತ ದಲ್ಲಿ ಬನಶಂಕರಿ ಮತ್ತು ಮಾರನಹಳ್ಳಿ ಠಾಣೆಗಳಲ್ಲಿ ಎರಡು ಇ-ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. ಇದೀಗ ಹೊಸದಾಗಿ ಬಿಬಿಎಂಪಿ ವ್ಯಾಪ್ತಿಯ ಬೆಂಗಳೂರು ದಕ್ಷಿಣದ ಜಯನಗರ, ಬನಶಂಕರಿ ಮಹಿಳಾ ಪೊಲೀಸ್ ಠಾಣೆ, ಅಂಗನವಾಡಿ ಸೇರಿ 8 ಕಡೆ ಇ- ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಮುಂಜಾನೆ ಉದ್ಯೋಗಕ್ಕಾಗಿ ಮನೆ ಬಿಡುವವರು ರಸ್ತೆಯನ್ನು ಸ್ವತ್ಛಗೊಳಿಸುವುದರಲ್ಲಿ ಮಗ್ನರಾಗಿರುತ್ತಾರೆ. ಇವರು ಕೆಲಸ ಮುಗಿದ ಬಳಿಕವಷ್ಟೇ ಮನೆಯತ್ತ ಮುಖ ಮಾಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಪೌರಕಾರ್ಮಿಕರಿಗೆ ಎಲ್ಲಿಯೂ ಸುಲಭ ಶೌಚಾಲಯಕ್ಕೆ ಅವಕಾಶವೇ ಇಲ್ಲವಾದಂತಾಗಿದೆ. ಕೆಲವೊಂದು ಕಡೆ ಶೌಚಾಲಯವಿದ್ದರೂ, ಹಣ ಪಾವತಿಸಿ ಹೋಗ ಬೇಕಾಗುತ್ತದೆ. ಇದರಿಂದಾಗಿ ಮಹಿಳಾ ಪೌರಕಾರ್ಮಿ ಕರು ಅವರ ಕರ್ತವ್ಯ ಅವಧಿ ಮುಗಿಸಿದ ಬಳಿಕ ಮನೆಗೆ ತೆರಳಿ ಶೌಚ ಮಾಡುತ್ತಾರೆ. ಸುದೀರ್ಘ ಸಮ ಯ ಶೌಚಾಲಯಕ್ಕೆ ಹೋಗದ ಕಾರಣ ಅವರಲ್ಲಿ ಹೊಟ್ಟೆ ನೋವಿನಂತಹ ಅನಾರೋಗ್ಯದ ಸಮಸ್ಯೆ ಕಾಡುತ್ತದೆ.
ಅದರಲ್ಲೂ ಬೇಸಿಗೆಯಲ್ಲಿ ಸಾಮಾನ್ಯವಾಗಿ ಹೆಚ್ಚು ನೀರು ಸೇವಿಸುವುದರಿಂದ ಶೌಚಾಲಯ ಅಗತ್ಯತೆ ಹೆಚ್ಚಾಗಿರುತ್ತದೆ. ಇ-ಶೌಚಾಲಯವನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ಮಿ ಸಲಾಗುತ್ತದೆ. ಒಂದು ಶೌಚಾಲಯ 3ಗಿ3 ಅಳತೆ ಇರಲಿದ್ದು, ಸುಮಾರು 55ರಿಂದ 60 ಸಾವಿರ ರೂ.ವೆಚ್ಚವಾಗಲಿದೆ. ಬಿಬಿಎಂಪಿ ಮಹಿಳಾ ದಿನಾಚರಣೆ ಅಂಗವಾಗಿ ಈಗಾಗಲೇ ಅನುಷ್ಠಾನಗೊಳಿಸಲಾದ ಇ-ಟಾಯ್ಲೆಟ್ ಗಳಿಗೆ ಪೌರಕಾರ್ಮಿರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಉಳಿದ ಆರು ಇ-ಟಾಯ್ಲೆಟ್‌ಗಳ ಪೈಕಿ ಮುಂದಿನ ವಾರದಲ್ಲಿ ಬನಶಂಕರಿ ನಗರ ಮತ್ತು ಪಟ್ಟಾಭಿರಾಮ ನಗರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಬಳಿಕ ನಗರಾದ್ಯಂತ ನಿರ್ಮಿಸುವ ಗುರಿ ಇದೆ ಎಂದು ದುರ್ಗಾ ಸ್ವಯಂ ಸಂಸ್ಥೆಯ ಸಂಸ್ಥಾಪಕ ಪ್ರಿಯಾ ವರದರಾಜನ್ ತಿಳಿಸುತ್ತಾರೆ.
ಬೆಳಗ್ಗೆ ಏಳು ಗಂಟೆಯಿಂದ ಮಧ್ಯಾಹ್ನ 2.30ರವರೆಗೆ ಕಸ ಗುಡಿಸುತ್ತೇವೆ. ಈ ಮಧ್ಯೆ ಶೌಚಾಲಯಕ್ಕೆ ಹೋಗಲು ಸರಿಯಾದ ವ್ಯವಸ್ಥೆ ಇರಲಿಲ್ಲ. ಆದರೆ, ಈಗ ಇ-ಶೌಚಾಲಯ ನಿರ್ಮಿಸಿ ನಮ್ಮಂತಹ ಅದೆಷ್ಟೋ ಹೆಣ್ಣುಮಕ್ಕಳಿಗೆ ಉಪಯೋಗವಾಗುವಂತೆ ಮಾಡಲಾಗಿದೆ. –ಚಂದ್ರಕಲಾ, ಪೌರಕಾರ್ಮಿಕರು
ಬೇಸಿಗೆ ಪ್ರಾರಂಭವಾಗಿ ಸುಡುವ ಬಿಸಿಲಿನಲ್ಲಿ ಕೆಲಸ ಮಾಡುವ ನಾವು ಹೆಚ್ಚು ನೀರು ಕುಡಿಯುತ್ತೇವೆ. ಈ ವೇಳೆ ಶೌಚಾಲಯದ ಅವಶ್ಯಕತೆ ಇರುತ್ತದೆ. ಸುಮಾರು 10 ಗಂಟೆ ಶೌಚಾಲಯಕ್ಕೆ ಹೋಗದೆ ಇರುವುದು ಅಸಾಧ್ಯ. ಇ-ಶೌಚಾಲಯವನ್ನು ನಿರ್ಮಾಣ ಮಾಡಿ ಉತ್ತಮ ಕೆಲಸ ಮಾಡಿದ್ದಾರೆ. –ಉಮಾ, ಪೌರಕಾರ್ಮಿಕರು
–ಭಾರತಿ ಸಜ್ಜನ್
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.