ಯುವಕರಲ್ಲಿ ಕುತೂಹಲ ಹೆಚ್ಚಿಸಿದ ಸುಲಭ ಕೃಷಿ
ನಾಲ್ಕು ದಿನಗಳ ಕೃಷಿ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರೇ ಭೇಟಿ
Team Udayavani, Nov 13, 2021, 9:33 AM IST
ಬೆಂಗಳೂರು: ಕೊರೊನಾ ನಂತರದ ಕಾಲಘಟ್ಟದಲ್ಲಿ ನಗರ ಜೀವನಕ್ಕೆ ಗುಡ್ ಬೈ ಹೇಳಿ ಹಳ್ಳಿಗಳತ್ತ ಸಾಗಿರುವ ಯುವಕರು, ಕೃಷಿಯತ್ತ ಒಲವು ತೋರಿದ್ದಾರೆ. ಸುಲಭವಾಗಿ ಕೃಷಿ ಮಾಡಲು ಸಿಗಬಹುದಾದ ಯಂತ್ರೋ ಪಕರಣ ಗಳಿಗೆ ಹುಡುಕಾಟದಲ್ಲಿ ನಿರತರಾಗಿದ್ದರು. ಜಿಕೆವಿಕೆಯಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಕೃಷಿ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರೇ ಭೇಟಿ ನೀಡುತ್ತಿದ್ದು, ಆಧುನಿಕ ಕೃಷಿ ಯಂತ್ರೋಪಕರಣ ಗಳು, ನೂತನ ಕೃಷಿ ಪದ್ಧತಿ, ಉತ್ತಮ ಇಳುವರಿ ನೀಡ ಬಹುದಾದ ಬೆಳೆಗಳು, ವಾಣಿಜ್ಯ ಬೆಳೆಗಳು ಮತ್ತು ಸಣ್ಣ ರೈತರಾಗಿ ಒಂದೆರಡು ಎಕರೆ ಪ್ರದೇಶಗಳಲ್ಲಿ ಬೆಳೆಯ ಬಹುದಾದ ಮತ್ತು ಉತ್ತಮ ಆದಾಯ ಬರುವಂತಹ ಬೆಳೆಗಳತ್ತ ಯುವಕರು ನೋಟ ಹರಿಸಿದ್ದರು.
ಇತ್ತೀಚಿನ ದಿನಗಳಲ್ಲಿ ಕೃಷಿ ಕಾರ್ಮಿಕರ ಸಂಖ್ಯೆ ಇಳಿಮುಖವಾಗು¤ತಿದೆ. ಅದರ ಜೊತೆಗೆ ಕೃಷಿ ಕಾರ್ಮಿಕರ ಕೂಲಿ ಕೂಡ ಹೆಚ್ಚಳವಾಗುತ್ತಿದೆ. ಇದರಿಂದ ಸಣ್ಣ ರೈತರು, ವ್ಯವಸಾಯಕ್ಕೆ ಹೂಡಿರುವ ಹಣದ ಜೊತೆಗೆ ಲಾಭ ಕಡಿಮೆಯಾಗುತ್ತಿದೆ. ಹೀಗಾಗಿ, ಕೃಷಿ ಯಂತ್ರೋಪಕರಣಗಳನ್ನು ಬಳಸಿ ಸುಲಭವಾಗಿ ಕೃಷಿ ಮಾಡಬಹುದಾದ ಯಂತ್ರಗಳ ಮಾಹಿತಿಯನ್ನು ಯುವಕರು ಕೇಳಿ ಪಡೆಯುತ್ತಿದ್ದರು.
ಯಾವ ಬೆಳೆಗಳಿಗೆ ಆದ್ಯತೆ?: ತೋಟಗಾರಿಕಾ ಬೆಳೆಗಳಾದ ಟೊಮ್ಯಾಟೋ, ದಪ್ಪ ಮೆಣಸಿನಕಾಯಿ, ಹಸಿರು ಮೆಣಸಿನಕಾಯಿ, ಹುರುಳಿಕಾಯಿ, ಬದನೆಕಾಯಿ, ಕ್ಯಾರೇಟ್, ಆಹಾರ ಬೆಳೆಗಳಾದ ರಾಗಿ, ಭತ್ತ, ಕಡಿಮೆ ನೀರಿನಲ್ಲಿ ಮತ್ತು ಖುಷ್ಕಿ ಜಮೀನುಗಳಲ್ಲಿ ಬೆಳೆಯ ಬಹುದಾದ ಸಿರಿಧಾನ್ಯಗಳಾದ ಸಾಮೆ, ಆರ್ಕ, ನವಣೆ, ಬರಗು, ಎಣ್ಣೆಕಾಳುಗಳು ಮತ್ತು ಫಾಸ್ಟ್ ಫುಡ್ ಗಳಿಗೆ ಬಳಸಬಹುದಾದ ವಿದೇಶಿ ತರಕಾರಿಗಳನ್ನು ಬೆಳೆಯಲು ಯುವ ರೈತರು ಆಸಕ್ತಿ ತೋರುತ್ತಿದ್ದಾರೆ.
ಇದಕ್ಕಾಗಿ ಕಳೆ ತೆಗೆಯುವುದು, ಬದು ನಿರ್ಮಾಣ, ಗುಳಿ ತೋಡುವುದು, ಉಳುಮೆ ಮಾಡುವುದು, ಕೀಟನಾಶಕ ಸಿಂಪಡಣೆ ಮತ್ತು ಕೊಯ್ಲು ಕೆಲಸವನ್ನು ಸುಲಭಗೊಳಿಸುವ ಯಂತ್ರಗಳಿಗೆ ಹೆಚ್ಚಿನ ಜನರು ಆಸಕ್ತಿಯಿಂದ ನೋಡುತ್ತಿದ್ದರು. ಈ ಕುರಿತು ಮಾತನಾಡಿದ ಮೈಸೂರಿನ ರೈತ ಮಹದೇವಪ್ಪ, ಇಸ್ರೇಲ್ ಮಾದರಿ ಕೃಷಿಯಿಂದ ನೀರಿನ ಬಳಕೆ ಮತ್ತು ಕೃಷಿ ಕಾರ್ಮಿಕರ ಬಳಕೆ ಎರಡೂ ಕೂಡ ಕಡಿಮೆಯಾಗುತ್ತದೆ.
ಯಂತ್ರೋಪಕರಣಗಳನ್ನು ಬಳಸಿಕೊಳ್ಳುವ ಜೊತೆಗೆ ಆಧುನಿಕ ತಂತ್ರಜ್ಞಾನ ಗಳನ್ನು ಅಳವಡಿಸಿಕೊಂಡರೆ, ಹೆಚ್ಚಿನ ಪ್ರಮಾಣದಲ್ಲಿ ಇಳುವರಿ ತೆಗೆಯಲು ಸಾಧ್ಯವಾಗುತ್ತದೆ. ಅದಕ್ಕಾಗಿ ಬೇಕಾಗುವ ಸಲಕರಣೆಗಳನ್ನು ನೋಡುತ್ತಿದ್ದೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಾಮಾನ್ಯವಾಗಿ ಮಂಡ್ಯ, ಮೈಸೂರು, ಚಾಮರಾಜನಗರದಲ್ಲಿ ದೇಸಿ ಬೆಳೆಗಳಾದ ಕಬ್ಬು, ಭತ್ತ, ರಾಗಿಯನ್ನೇ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ.
ಇದನ್ನೂ ಓದಿ:- ಪ್ರಧಾನಿ ಮೋದಿ 4 ಗಂಟೆಯ ಕಾರ್ಯಕ್ರಮಕ್ಕೆ 23 ಕೋಟಿ ರೂ ಖರ್ಚು ಮಾಡುತ್ತಿದೆ ಮ.ಪ್ರದೇಶ ಸರ್ಕಾರ!
ಇದರ ಬದಲಾಗಿ ರೈತರಿಗೆ ಆದಾಯವನ್ನು ತರುವಂತಹ ಬೆಳೆಗಳನ್ನು ಬೆಳೆಯಲು ಆಸಕ್ತನಾಗಿದ್ದೇನೆ. ಹೀಗಾಗಿ, ಕೃಷಿ ಮೇಳದಲ್ಲಿ ಏನಾದರೂ ಅನುಕೂಲವಾಗಬಹುದು ಎಂಬ ಉದ್ದೇಶದಿಂದ ಬಂದಿದ್ದೇನೆ ಎಂದು ತಿಳಿಸಿದರು. ಕೋಲಾರದಿಂದ ಬಂದಿದ್ದ ಸತೀಶ್ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ತರಕಾರಿ- ಹೂಗಳನ್ನು ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ನೀರಿನ ಅಭಾವ ಇರುವುದರಿಂದ ಕಡಿಮೆ ನೀರು ಬಳಸಿಕೊಂಡು ಬೆಳೆಯಬಹುದಾದ ಆಧುನಿಕ ತಂತ್ರಜ್ಞಾನಗಳನ್ನು ತಿಳಿದುಕೊಳ್ಳಲು ಬಂದಿದ್ದೇನೆ ಎಂದು ಹೇಳಿದರು.
“ಸಿಲಿಕಾನ್ ಸಿಟಿಯಲ್ಲಿ ಫಾಸ್ಟ್ ಫುಡ್ ಗಳಿಗೆ ತುಂಬಾನೇ ಬೇಡಿಕೆ ಇದೆ. ಪಿಜ್ಜಾ, ಬರ್ಗರ್ ಸೇರಿದಂತೆ ಇನ್ನಿತರ ಫಾಸ್ಟ್ ಫುಡ್‌ಗಳಿಗೆ ಬೇಕಾಗುವ ಸೊಪ್ಪು-ತರಕಾರಿ ಬೆಳೆಯಲು ಕೃಷಿ ಇಲಾಖೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು.” – ಸಿದ್ಧಲಿಂಗಪ್ಪ, ತುಮಕೂರು.
“ಸಿರಿಧಾನ್ಯಗಳನ್ನು ಒಕ್ಕಣೆ ಮಾಡಲು ಮತ್ತು ಸ್ವತ್ಛಗೊಳಿಸಲು ಬೇಕಾಗುವ ಸಲಕರಣೆಗಳನ್ನು ಒದಗಿಸುವ ಬಗ್ಗೆ ಸರ್ಕಾರ ಮತ್ತಷ್ಟು ಕಾಳಜಿ ವಹಿಸಬೇಕು. ನಗರದ ಜನತೆ ಸಿರಿಧಾನ್ಯಗಳನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದಾರೆ. ಬೇಡಿಕೆ ಕಡಿಮೆ ಇರುವುದರಿಂದ ಸಿರಿಧಾನ್ಯಗಳಿಗೆ ಹೆಚ್ಚಿನ ಬೆಲೆ ಇದೆ. ದೊಡ್ಡ ಮಟ್ಟದಲ್ಲಿ ಬೆಳೆದರೆ, ಎಲ್ಲರೂ ಸಿರಿಧಾನ್ಯ ಬಳಸಲು ಸಹಕಾರಿಯಾಗಲಿದೆ.” — ತಿಪ್ಪೇಸ್ವಾಮಿ, ಚಿತ್ರದುರ್ಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Egg Thrown Case: 100-150 ಜನರಿಂದ ನನ್ನ ಮೇಲೆ ದಾಳಿ: ಶಾಸಕ ಮುನಿರತ್ನ ದೂರು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.