ನಗರದಲ್ಲಿ ಶ್ರದ್ಧಾ ಭಕ್ತಿಯ ಈದ್ ಮಿಲಾದ್
Team Udayavani, Dec 3, 2017, 1:01 PM IST
ಬೆಂಗಳೂರು: ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮದಿನದ ಪ್ರಯುಕ್ತ ಈದ್ ಮಿಲಾದ್ ಹಬ್ಬವನ್ನು ಶನಿವಾರ ನಗರದೆಲ್ಲೆಡೆ ಮುಸ್ಲಿಂ ಬಾಂಧವರು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು. ಮರ್ಕಝಿ ಮಿಲಾದ್-ಓ-ಸೀರತ್ ಕಮಿಟಿ ಸುನ್ನಿ ಜಮಿಯತ್ ಆಲ್ ಕರ್ನಾಟಕ ಹಾಗೂ ಮರ್ಕಝಿ ಜುಲೂಸ್-ಏ-ಮಹಮ್ಮದಿ ಕಮಿಟಿಯ ಮೇಲುಸ್ತುವಾರಿಯಲ್ಲಿ ನಗರದ ವಿವಿಧ ಭಾಗಗಳಲ್ಲಿ ಜುಲೂಸ್ (ಮೆರವಣಿಗೆ) ನಡೆಯಿತು.
ಮಧ್ಯಾಹ್ನದಿಂದ ಶಿವಾಜಿನಗರ, ಟ್ಯಾನರಿ ರಸ್ತೆ, ಫ್ರೆಜರ್‌ಟೌನ್, ಹೆಗಡೆನಗರ, ನಾಗವಾರ, ಮೈಸೂರು ರಸ್ತೆ, ನಾಯಂಡಹಳ್ಳಿ, ಚಾಮರಾಜಪೇಟೆ, ಕೆ.ಆರ್. ಮಾರುಕಟ್ಟೆ, ಗೋರಿಪಾಳ್ಯ, ಕಲಾಸಿಪಾಳ್ಯ, ಜಯನಗರ, ಜೆ.ಪಿ. ನಗರ, ಬಿಟಿಎಂ ಲೇಔಟ್, ಬಿಸ್ಮಿಲ್ಲಾನಗರ, ಶಾಂತಿನಗರ ಮತ್ತಿತರ ಕಡೆಗಳಿಂದ ಹೊರಟ ಜುಲೂಸ್ ತಂಡಗಳು ಸಂಜೆ ವೇಳೆಗೆ ನೃಪತುಂಗ ರಸ್ತೆಯ ವೈಎಂಸಿಎ ಮೈದಾನ ಸೇರಿದವು.
ಜುಲೂಸ್‌ನಲ್ಲಿ ಮುಸ್ಲಿಮರ ಪವಿತ್ರ ಆರಾಧನ ಸ್ಥಳಗಳಾದ ಮೆಕ್ಕಾ ಹಾಗೂ ಮದೀನಾದ ಸ್ತಬ್ಧ ಚಿತ್ರಗಳು ಆಕರ್ಷಣೆಯ ಕೇಂದ್ರ ಬಿಂದು ಆಗಿದ್ದವು. ಅಲ್ಲದೇ ಸಾರೋಟ, ಒಂಟೆಗಳ ಮೆರವಣಿಗೆ ಮನಸೊರೆಗೊಳಿಸಿತು. ಜುಲೂಸ್‌ನಲ್ಲಿ ಪಾಲ್ಗೊಂಡಿದ್ದ ಮಕ್ಕಳು ವಿಶೇಷ ವೇಷ-ಭೂಷಣಗಳನ್ನು ತೊಟ್ಟು ಸಂಭ್ರಮಿಸಿದರು. ಮೆರವಣಿಗೆಯುದ್ದಕ್ಕೂ ವಾದ್ಯಗಳನ್ನು ನುಡಿಸುವ ಮೂಲಕ ಪ್ರವಾದಿಗಳ ಕುರಿತ ಸ್ತುತಿಗೀತೆ, ಕೀರ್ತನೆಗಳನ್ನು ಹಾಡಲಾಯಿತು.
ಭಯೋತ್ಪಾದನೆಗೆ ತಳಕು ಸಲ್ಲದು: ಮುಸಲ್ಮಾನ ಸಂಘಟನೆಗಳ ನೇತೃತ್ವದಲ್ಲಿ ಸಂಜೆ ವೈಎಂಸಿಎ ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಆರ್. ರೋಷನ್‌ಬೇಗ್, ಭಯೋತ್ಪಾದನೆಗೂ ಇಸ್ಲಾಂ ಧರ್ಮಕ್ಕೂ ತಳಕು ಹಾಕುವುದು ಹಾಗೂ ಮುಸ್ಲಿಮರನ್ನು ಸಂಶಯದಿಂದ ಕಾಣುವುದು ಸಲ್ಲದು ಎಂದರು.
ರಾಜ್ಯಸಭಾ ಸದಸ್ಯ ಕೆ. ರಹಮಾನ್ ಖಾನ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಉತ್ತರ ಪ್ರದೇಶದ ಧಾರ್ಮಿಕ ವಿದ್ವಾಂಸ ಮೌಲಾನ ಅಝØರುಲ್ ಖಾದ್ರಿ, ಶಾಸಕರಾದ ಎನ್.ಎ. ಹ್ಯಾರಿಸ್, ಕಾಂಗ್ರೆಸ್ ಮುಖಂಡ ಓಬೇದುಲ್ಲಾ ಶರೀಫ್, ಜುಲೂಸೆ ಮಹ್ಮದಿ ಕಮೀಟಿಯ ಅಫÕರ್‌ಬೇಗ್, ಅಮೀರ್‌ಜಾನ್ ಖಾದ್ರಿ, ಅಯ್ಯೂಬ್ ಖಾನ್ ಮತ್ತಿತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.