ಗಾಂಜಾ ಮಾರುತ್ತಿದ್ದ ಎಂಟು ಮಂದಿ ಬಂಧನ
Team Udayavani, Oct 24, 2017, 12:05 PM IST
ಬೆಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಎಂಟು ಮಂದಿಯನ್ನು ಬಂಧಿಸಿರುವ ವೈಟ್‌ಫೀಲ್ಡ್ ವಿಭಾಗದ ಪೊಲೀಸರು 36 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.
ಅಸ್ಸಾಂ, ಬಿಹಾರ, ಒಡಿಶಾ ಮತ್ತು ಆಂಧ್ರ ಪ್ರದೇಶದ ಮೂಲಕ ಗಾಂಜಾವನ್ನು ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದ ಆಂಧ್ರಪ್ರದೇಶದ ರವಿ, ಕೋಲಾರದ ಅಮ್ಜದ್ ಖಾನ್, ಒಡಿಶಾದ ಗಗನ್ ಕುಮಾರ್, ಬಿಜಯ್ ನಾಯಕ್, ಪಶ್ಚಿಮ ಬಂಗಳಾದ ಕುಮಾರ್ ಬಿಸ್ವಾಸ್, ನಿತೇಶ್, ಯಲಹಂಕದ ಇಮ್ರಾನ್ ಅನಿಲ್ ಕುಮಾರ್ ಬಂಧಿತರು.
ಆರೋಪಿಗಳು ತಮ್ಮ ರಾಜ್ಯಗಳಿಂದ ಮಾದಕ ವಸ್ತುಗಳನ್ನು ತಂದು ಶೈಕ್ಷಣಿಕ ಸಂಸ್ಥೆಗಳ ಬಳಿ ವಿದ್ಯಾರ್ಥಿಗಳು ಹಾಗೂ ಕೂಲಿ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡುತ್ತಿದ್ದರು. ಈ ಪೈಕಿ ಕೆಲ ಆರೋಪಿಗಳು ತಮ್ಮ ಜಮೀನಿನಲ್ಲೇ ಗಾಂಜಾ ಬೆಳೆಯುತ್ತಿದ್ದರು. ಅಲ್ಲದೆ ಇನ್ನು ಕೆಲವರು ನೆರೆ ರಾಜ್ಯಗಳಿಂದ ತಂದು ಮಾರಾಟ ಮಾಡುತ್ತಿದ್ದರು ಎಂದು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿದ್ಯಾರ್ಥಿಗಳೇ ಟಾರ್ಗೆಟ್: ಆರೋಪಿ ರವಿ ಆಂಧ್ರಪ್ರದೇಶದ ಕದರಿಯ ತನ್ನ ಜಮೀನಿನಲ್ಲಿ ಗಾಂಜಾ ಬೆಳೆದು ಮಾರತ್‌ಹಳ್ಳಿ ವ್ಯಾಪ್ತಿಯ ಕಾಲೇಜು ವಿದ್ಯಾರ್ಥಿಗಳು ಮತ್ತು ಕೂಲಿ ಕಾರ್ಮಿಕರಿಗೆ ತಲಾ 10 ಗ್ರಾಂಗೆ 100-200 ರೂ.ನಂತೆ ಮಾರಾಟ ಮಾಡುತ್ತಿದ್ದ.
ಅಮ್ಜದ್ ಖಾನ್ ಮತ್ತು ಗಗನ್ ಕುಮಾರ್ ಒಡಿಶಾ ಹಾಗೂ ಅಸ್ಸಾಂ ಮೂಲದ ಗಾಂಜಾ ತರಿಸಿ ಕಾಡುಗೋಡಿಯಲ್ಲಿ ಕೂಲಿ ಕಾರ್ಮಿಕರಿಗೆ ಮಾರಾಟ ಮಾಡುತ್ತಿದ್ದರು. ಬಿಜಯ್ ನಾಯಕ್ ತನ್ನ ಕೊಂಕುಣಿ ಗ್ರಾಮದ ಜಮೀನಿನಲ್ಲಿ ಗಾಂಜಾ ಬೆಳೆದು ಕೆ.ಆರ್.ಪುರ ಠಾಣಾ ವ್ಯಾಪ್ತಿಯಲ್ಲಿರುವ ವಿದ್ಯಾರ್ಥಿಗಳಿಗೆ ಹಾಗೂ ಕೂಲಿಕಾರ್ಮಿಕರಿಗೆ 10 ಗ್ರಾಂಗೆ 100 ರಿಂದ 200 ರೂ.ಗೆ ಮಾರಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ.
ಮತ್ತೂಬ್ಬ ಆರೋಪಿ ಕುಮಾರ್ ಬಿಸ್ವಾಸ್ ಮೂಲದ ಕೆ.ಆರ್.ಪುರದ ಶೀಗೇಹಳ್ಳಿಯ ಬಾಡಿಗೆ ಮನೆಯ ಮುಂದೆ ಖಾಲಿ ಜಾಗದ ಪೊದೆಯಲ್ಲಿ ಗಾಂಜಾ ಬೆಳೆದು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ. ಪಶ್ಚಿಮ ಬಂಗಾಳ ಮೂಲದ ನಿತೇಶ್ ಹಾಗೂ ಇಮ್ರಾನ್ ಕದಿರಿ ಗ್ರಾಮದಲ್ಲಿ ಗಾಂಜಾ ಬೆಳೆದು ಕಾಲೇಜು ವಿದ್ಯಾರ್ಥಿಗಳಿಗೆ ಕೂಲಿ ಕಾರ್ಮಿಕರಿಗೆ ಮಾರಾಟ ಮಾಡುತ್ತಿದ್ದರು ಎಂದು ಅವರು ವಿವರಿಸಿದರು.
ಪೊಲೀಸರಿಂದ ಆಪ್ತಸಲಹೆ: ಆಟೋ ಚಾಲಕರು, ವಿದ್ಯಾರ್ಥಿಗಳು ಸೇರಿದಂತೆ ಮಾದಕ ವಸ್ತುಗಳ ವ್ಯಸನಿಗಳಿಗೆ ಆಪ್ತಸಲಹೆ ನೀಡಿ ಮನಪರಿವರ್ತನೆ ಮಾಡುವಂತಹ ವಿಶೇಷ ಕಾರ್ಯಕ್ರಮವನ್ನು ವೈಟ್‌ಫೀಲ್ಡ್ ಡಿಸಿಪಿ ಅಬ್ದುಲ್ ಅಹ್ಮದ್ ಹಮ್ಮಿಕೊಂಡಿದ್ದಾರೆ. ನಗರದ ನಾರ್ಕೊಟಿಕ್ ಅನಾನಿಮಸ್ ಸಂಸ್ಥೆಯೊಂದಿಗೆ ಮಾದಕ ದ್ರವ್ಯ ವ್ಯಸನ ಜಾಗೃತಿ ಮತ್ತು ಆಪ್ತ ಸಲಹಾ ಕಾರ್ಯಾಗಾರವನ್ನು ಹಮ್ಮಿಕೊಂಡು 67 ಮಂದಿಗೆ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.