ಈಜುಕೊಳ ಕ್ಲೀನ್ ಮಾಡುವಾಗ ವಿದ್ಯುತ್ ಶಾಕ್!
Team Udayavani, Feb 15, 2018, 11:20 AM IST
ಮಹದೇವಪುರ: ಈಜುಕೊಳ ಸ್ವತ್ಛಗೊಳಿಸುತ್ತಿದ್ದ ಕಾರ್ಮಿಕ ವಿದ್ಯುತ್ ಶಾಕ್‌ನಿಂದ ಗಾಯಗೊಂಡಿರುವ ಘಟನೆ ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕೊಡಿಗೇಹಳ್ಳಿಯ ಎಸ್‌ಎಲ್‌ವಿ ಸನ್‌ಶೈನ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಕೆ.ಆರ್.ಪುರದ ಗಾಯಿತ್ರಿ ಬಡಾವಣೆ ನಿವಾಸಿ, ನಾಗಮಂಗಲ ಮೂಲದ ಉಮೇಶ್ (35) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈಜುಕೊಳ ಅಪಾರ್ಟ್‌ಮೆಂಟ್‌ನ ಕೊನೆಯ ಮಹಡಿಯ ರೂಫ್ನಲ್ಲಿದ್ದು, ಅದರ ಮೇಲೇ ಹೈಟೆನ್ಷನ್ ವಿದ್ಯುತ್ ಲೈನ್
ಹಾದುಹೋಗಿದೆ. ಈಜುಕೊಳ ಸ್ವತ್ಛಗೊಳಿಸಲು ಉಮೇಶ್ ಕಬ್ಬಿಣದ ಹಿಡಿಕೆಯಿರುವ ಉಪಕರಣ ಬಳಸಿದ್ದರು. ಒಂದು ಹಂತದಲ್ಲಿ ಕೈಲಿದ್ದ ಪಕರಣವನ್ನು ಉಮೇಶ್ ಮೇಲಕ್ಕೆತ್ತಿದ್ದು, ಅದು ಹೈಟೆನ್ಷನ್ ವೈರ್‌ಗೆ ತಗುಲಿದೆ. ತಕ್ಷಣ ಉಮೇಶ್ ಮೈಯ್ಯಲ್ಲಿ ವಿದ್ಯುತ್ ಪ್ರವಹಿಸಿದೆ. ಪರಿಣಾಮ ಮುಖ, ಹೊಟ್ಟೆ, ತೊಡೆ ಸೇರಿದಂತೆ ದೇಹದ ಬಹುತೇಕ ಭಾಗದಲ್ಲಿ ಸುಟ್ಟ ಗಾಯಗಳಾಗಿವೆ.
ಆಗಿದ್ದೇನು?: ಕೊಡಿಗೇಹಳ್ಳಿಯಲ್ಲಿನ ನಾಲ್ಕು ಮಹಡಿಯ ಎಸ್‌ಎಲ್‌ವಿ ಸನ್ ಶೈನ್ ಅಪಾರ್ಟ್‌ಮೆಂಟ್‌ನ ರೂಫ್ ನಲ್ಲಿರುವ ಈಜುಕೊಳದ ಪೈಪ್‌ಲೈನ್ ಕಟ್ಟಿಕೊಂಡು ಒಂದು ತಿಂಗಳಾಗಿದ್ದು, ಕೊಳದ ನೀರು ಬದಲಿಸಲಾದೆ ನೀರೆಲ್ಲಾ ಕೊಳಕಾಗಿತ್ತು. ಪೂಲ್ ಸ್ವತ್ಛ ಮಾಡಿಸುವಂತೆ ಅಪಾರ್ಟ್‌ಮೆಂಟ್ ಮಾಲೀಕರಿಗೆ ಹೇಳಿ ಹೇಳಿ ಬೇಸತ್ತಿದ್ದ ನಿವಾಸಿಗಳು, ಈಜುಕೊಳ ಸ್ವತ್ಛಗೊಳಿಸಲು ಉಮೇಶ್‌ನನ್ನು ಕರೆಸಿದ್ದರು. ಅದರಂತೆ ಉಮೇಶ್ ಈಜುಕೊಳ ಕ್ಲೀನ್ ಮಾಡುವಾಗ ಅತೀ ಕಡಿಮೆ ಅಂತರದಲ್ಲಿ ಹಾದುಹೋಗಿದ್ದ
ಹೈಟೆನ್ಷನ್ ವಿದ್ಯುತ್ ತಂತಿಗೆ ಉಮೇಶ್ ಕೈಲಿದ್ದ ಕಬ್ಬಿಣದ ಹಿಡಿಕೆಯ ಉಪಕರಣ ತಗುಲಿದೆ. ಪರಿಣಾಮ ಮೊದಲೇ ನೀರಿನಲ್ಲಿ ನಿಂತಿದ್ದ ಉಮೇಶ್ ಮೈಯ್ಯಲ್ಲಿ ವಿದ್ಯುತ್ ಪ್ರವಹಿಸಿದೆ. ಉಮೇಶ್ ಮೈಮೇಲಿದ್ದ ಬಟ್ಟೆಗಳು ಹರಿದು ಚಿಂದಿಯಾಗಿವೆ. ದೇಹದ ಬಹುತೇಕ ಭಾಗ ಸುಟ್ಟುಹೋಗಿದೆ. ಕೂಡಲೆ ನೆರವಿಗೆ ಬಂದ ಅಪಾರ್ಟ್‌ಮೆಂಟ್ ನಿವಾಸಿಗಳು, ಉಮೆಶ್‌ನನ್ನು ವೈಟ್‌ಫೀಲ್ಡ್‌ನ ವೈದೇಹಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
45 ಪ್ಲ್ಯಾಟ್‌ಗಳಿರುವ ಎಸ್‌ಎಲ್‌ವಿ ಸನ್‌ಶೈನ್ ಅಪಾರ್ಟ್‌ಮೆಂಟ್‌ನಲ್ಲಿ 35 ಕುಟುಂಬಗಳು ವಾಸಿವಾಗಿವೆ. ನಿಯಮ ಉಲ್ಲಂ ಸಿ ಹೈಟೆನ್ಷನ್ ಲೈನ್‌ನ ಕೆಳಗೇ ಸಮುತ್ಛಯ ನಿರ್ಮಿಸಿರುವುದರಿಂದ ನಿವಾಸಿಗಳು ಭಯದಲ್ಲೇ ದಿನ ದೂಡುತ್ತಿದ್ದಾರೆ. ಲೈನ್ ತೆರವಿಗೆ ಅಥವಾ ಅದರಿಂದಾಗುವ ಅಪಾಯ ತಡೆಯಲು ಕ್ರಮ ಕೈಗೊಳ್ಳಿ ಎಂದು ಹೇಳಿದರೂ ಕಟ್ಟಡ ಮಾಲೀಕ ಕಿವಿ ಮೇಲೆ ಹಾಕಿಕೊಳ್ಳುತ್ತಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.
ಇನ್ನೊಂದೆಡೆ ಹೈಟೆನ್ಷನ್ ಲೈನ್ ಕೆಳಗೇ ಈಜುಕೊಳ ನಿರ್ಮಿಸಿರುವುದರಿಂದಲೇ ಅವಘಡ ಸಂಭವಿಸಿದೆ ಎಂದು ಸ್ಥಳೀಯ ಅರೋಪಿಸಿದ್ದಾರೆ.
ಪೂಲ್‌ನಿಂದ ಕೈಗೆಟುಕುವ ಅಂತರದಲ್ಲಿ ಹಾದು ಹೋಗಿರುವ ಹೈಟೆನ್ಷನ್ ಲೈನ್ ಮಹದೇವಪುರದ ಎಸ್‌ಎಲ್‌ವಿ ಸನ್‌ಶೈನ್ ಅಪಾರ್ಟ್‌ಮೆಂಟ್ ನಲ್ಲಿ ಘಟನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Bengaluru: ಏರ್ಪೋರ್ಟ್ ಟಿ-2ಗೆ ವರ್ಟಿಕಲ್ ಗಾರ್ಡನ್ ರಂಗು
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.