ಶುಲ್ಕ ಹೆಚ್ಚಿಸಿ ಗ್ರಾಹಕರ ಹಿಡಿದಿಡಲು ತಂತ್ರ
Team Udayavani, Jan 18, 2023, 2:58 PM IST
ಬೆಂಗಳೂರು: ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ)ಗಳು ಈ ಬಾರಿ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗಕ್ಕೆ ಸಲ್ಲಿಸಿದ ದರ ಪರಿಷ್ಕರಣೆಗೆ ಸಂಬಂಧಿಸಿದ ಪ್ರಸ್ತಾವನೆಯಲ್ಲಿ ನಿಗದಿತ ಶುಲ್ಕ ಮತ್ತು ಬೇಡಿಕೆ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳಕ್ಕೆ ಮನವಿ ಮಾಡಿದ್ದು, ಈ ಮೂಲಕ ಮುಕ್ತ ಮಾರುಕಟ್ಟೆ ಕಡೆಗೆ ಮುಖಮಾಡುತ್ತಿರುವ ಗ್ರಾಹಕರನ್ನು ತನ್ನ ಬಳಿಯೇ ಹಿಡಿದಿಡುವ ಕಸರತ್ತು ನಡೆಸಿವೆ.
ಕೈಗಾರಿಕೆ ಗ್ರಾಹಕರು ಎಸ್ಕಾಂಗಳಿಂದ 6.60ರಿಂದ 7.60 ರೂ. ಖರೀದಿಸುವ ಬದಲಿಗೆ ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಯೂನಿಟ್‌ಗೆ ಕೇವಲ 3ರಿಂದ 4 ರೂ.ಗೆ ಪಡೆಯುತ್ತಿದ್ದಾರೆ. ಮತ್ತೂಂದೆಡೆ ಕೆಲವರು ತಾವೇ ಉತ್ಪಾದನೆ ಮಾಡಿ ಬಳಕೆ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಕೂಡ ಉತ್ತೇಜನ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಎಚ್‌ಟಿ (ಹೈ-ಟೆನÒನ್) ಗ್ರಾಹಕರು ಎಸ್ಕಾಂಗಳಿಂದ ವಿಮುಖರಾಗುತ್ತಿದ್ದಾರೆ. ಆದರೆ, ಆದಾಯದ ದೊಡ್ಡ ಮೂಲ ಆಗಿರುವ ಈ ವರ್ಗವನ್ನು ಹಿಡಿದಿಡುವ ಉದ್ದೇಶದಿಂದ ನಿಗದಿತ ಶುಲ್ಕ ಮತ್ತು ಬೇಡಿಕೆ ಶುಲ್ಕ ಹೆಚ್ಚಳಕ್ಕೆ ಮುಂದಾಗಿದೆ. ಉದಾಹರಣೆಗೆ ಎಚ್‌ಟಿ 2ಎ ಬಳಕೆದಾರರಿಗೆ ಮೊದಲ 1 ಕಿ.ವಾ. ಪ್ರಸ್ತುತ ಇರುವ ನಿಗದಿತ ಶುಲ್ಕ 100 ರೂ. ಪ್ರಸ್ತಾವಿತ ಶುಲ್ಕ 415 ರೂ. ಆಗಿದೆ. ಅದೇ ರೀತಿ, 50 ಕಿ.ವಾ.ವರೆಗೆ 110 ರೂ. ಇದ್ದದ್ದು, 560 ರೂ.ಗೆ ಹೆಚ್ಚಿಸಲು ಅನುಮತಿ ಕೋರಲಾಗಿದೆ. ಅದೇ ರೀತಿ, ಸ್ವಂತ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ “ಕ್ಯಾಪ್ಟಿವ್ ಜನರೇಷನ್’ (ನಿರ್ಬಂಧಿತ ಉತ್ಪಾ ದನೆ) ಗ್ರಾಹಕರಿಗೂ “ಗ್ರಿಡ್ ಸಪೋರ್ಟ್ ಚಾರ್ಜ್’ (ಜಾಲ ಬಳಕೆ ಶುಲ್ಕ)ದ ಹೆಸರಿನಲ್ಲಿ ಪ್ರತಿ ಯೂನಿಟ್‌ಗೆ 2.74 ರೂ. ನಿಗದಿಪಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಶುಲ್ಕ ಏರಿಸಿದರೆ ಖರೀದಿ ಅನಿವಾರ್ಯ ಹೇಗೆ?: ಗ್ರಾಹಕರು ಎಸ್ಕಾಂಗಳಿಂದ ವಿದ್ಯುತ್ ಪಡೆ ಯಲಿ ಅಥವಾ ಬಿಡಲಿ ನಿಗದಿತ ಶುಲ್ಕ ಅಥವಾ ಬೇಡಿಕೆ ಶುಲ್ಕ ಪಾವತಿಸುವುದು ಕಡ್ಡಾಯ. ಅದರಂತೆ ಮುಕ್ತ ಮಾರುಕಟ್ಟೆಯಲ್ಲಿ ವಿದ್ಯುತ್ ಪಡೆ ದರೂ, ಆಯಾ ಎಸ್ಕಾಂಗಳಿಗೆ ಶುಲ್ಕ ಪಾವತಿಸ ಬೇಕಾಗುತ್ತದೆ. ಆಗ ಸಹಜವಾಗಿ ಹೊರೆಯಾಗಲಿದೆ. ಇದರಿಂದ ತಪ್ಪಿಸಿಕೊಳ್ಳಲು ಎಸ್ಕಾಂಗಳಿಂದಲೇ ಖರೀದಿಸಬೇಕಾಗುತ್ತದೆ ಎಂಬುದು ಇದರ ಹಿಂದಿನ ಲೆಕ್ಕಾಚಾರ ಇಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಎಸ್ಕಾಂಗಳಿಗೆ ಸಮಸ್ಯೆ ಏನು?: ಅತಿ ಹೆಚ್ಚು ಆದಾಯ ತಂದುಕೊಡುವ ವರ್ಗ ಇದಾಗಿದೆ. ಸರ್ಕಾರ ಘೋಷಿಸುವ ವಿವಿಧ ಯೋಜನೆಗಳಡಿ ಹಲವು ವರ್ಗಗಳಿಗೆ ನೀಡಲಾಗುವ ರಿಯಾಯ್ತಿ ಅಥ ವಾ ಉಚಿತ ವಿದ್ಯುತ್‌ನಿಂದಾಗುವ ವೆಚ್ಚವನ್ನು ಕ್ರಾಸ್ ಸಬ್ಸಿಡಿ ರೂಪದಲ್ಲಿ ಭರಿಸಲಾಗುತ್ತದೆ. ಅದರಲ್ಲಿ ದೊಡ್ಡ ಕೊಡುಗೆ ಎಚ್‌ಟಿ ಮತ್ತು ತಕ್ಕಮಟ್ಟಿನ ಎಲ್‌ಟಿ ಗ್ರಾಹಕರದ್ದಾಗಿದೆ. ಅವರು ವಿಮುಖರಾದರೆ, ಎಸ್ಕಾಂಗಳ ಮೇಲೆ ಸಹಜವಾಗಿ ಹೊರೆ ಆಗಲಿದೆ. ಮೂರ್‍ನಾಲ್ಕು ವರ್ಷಗಳಲ್ಲಿ ಎಚ್‌ಟಿ ಗ್ರಾಹಕರು ಎಸ್ಕಾಂಗಳಿಂದ ಪಡೆಯುವ ವಿದ್ಯುತ್ ಪ್ರಮಾಣ ಇಳಿಕೆಯಾಗಿದೆ. 2017-18ರಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲೇ 14,920 ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿದ್ದು, ವಾರ್ಷಿಕ 8,205 ಮಿ.ಯೂ. ವಿದ್ಯುತ್ ಖರೀದಿಸುತ್ತಿದ್ದು. 2020-21ರಲ್ಲಿ ಗ್ರಾಹಕರ ಸಂಖ್ಯೆ 18,929 ಇದ್ದು, ವಿದ್ಯುತ್ ಖರೀದಿ ಪ್ರಮಾಣ 6,274 ಮಿ.ಯೂ. ಆಗಿದೆ. ಒಟ್ಟಾರೆ ಎಸ್ಕಾಂಗಳಲ್ಲಿ 2017-18ರಲ್ಲಿ 11,342 ಮಿ.ಯೂ. ಖರೀದಿಸುತ್ತಿದ್ದ ಕೈಗಾರಿಕಾ ಗ್ರಾಹಕರು, 2021-22ರಲ್ಲಿ 10,941 ಮಿ.ಯೂ. ಮಾತ್ರ ಪಡೆಯುತ್ತಿದ್ದಾರೆ ಎಂದು ಎಸ್ಕಾಂ ಮಾಹಿತಿ ನೀಡಿದೆ.
ಬಳಕೆ ಕಡಿಮೆ; ದುಬಾರಿ ಬಿಲ್!?: ಗೃಹ ಬಳಕೆದಾರರಿಗೂ ಈ ನಿಗದಿತ ಶುಲ್ಕವನ್ನು ಹೆಚ್ಚಳ ಮಾಡಲಾಗಿದ್ದು, ಇದಕ್ಕೆ ಕೆಇಆರ್‌ಸಿ ಅನುಮತಿ ನೀಡಿದರೆ ಆ ವರ್ಗಕ್ಕೂ ಇದರ “ಬರೆ’ ಬೀಳುವುದು ಖಚಿತ. ಇದರಿಂದ ವಿದ್ಯುತ್ ಬಳಕೆ ಕಡಿಮೆಯಾದರೂ ಪಾವತಿಸುವ ಬಿಲ್ ಹೆಚ್ಚಿರಲಿದೆ!
ಈ ಮೊದಲು ಸ್ವಂತ ವಿದ್ಯುತ್ ಉತ್ಪಾದಕರೂ ಆಗಿರುವ ಬಳಕೆದಾರರಿಗೆ “ಗ್ರಿಡ್ ಸಪೋರ್ಟ್ ಚಾರ್ಜ್’ ಎಂಬುದು ಇರಲೇ ಇಲ್ಲ. ಯಾಕೆಂದರೆ, ಅವರು ಸ್ವಂತ ಖರ್ಚಿನಲ್ಲಿ ವಿದ್ಯುತ್ ಘಟಕ ಸ್ಥಾಪಿಸಿ ಉತ್ಪಾದಿಸಿ, ಅದನ್ನು ಬಳಕೆ ಮಾಡುತ್ತಿದ್ದಾರೆ. ಆದರೆ, ಈಗ ಅವರಿಗೂ ಪ್ರತಿ ಯೂನಿಟ್‌ಗೆ 2.74 ರೂ. ಶುಲ್ಕ ವಿಧಿಸಲು ಮುಂದಾಗಿರುವುದು ಖಂಡನೀಯ. ಇದರಿಂದ ವಿದ್ಯುತ್ ಕ್ಷೇತ್ರಕ್ಕೆ ಮಾತ್ರವಲ್ಲ; ಉದ್ಯಮಕ್ಕೂ ಭಾರಿ ಹೊಡೆತ ಬೀಳಲಿದೆ. -ಎಂ.ಜಿ. ಪ್ರಭಾಕರ್, ಸಲಹಾ ಸಮಿತಿ ಮಾಜಿ ಸದಸ್ಯರು, ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)
ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಯೂನಿಟ್‌ಗೆ 3-4 ರೂ.ಗೇ ಸಿಗುತ್ತಿದೆ. ಇಲ್ಲಿ ಯಾಕೆ ತೆಗೆದುಕೊಳ್ಳಬೇಕು? ನೆರೆಯ ರಾಜ್ಯಗಳ ನೆಪ ಮುಂದಿಟ್ಟುಕೊಂಡು ಇಲ್ಲಿ ಅನುಷ್ಠಾನಗೊಳಿಸುವುದಾಗಿ ಹೇಳುತ್ತಾರೆ. ಆದರೆ, ನೆರೆಯ ರಾಜ್ಯಗಳಲ್ಲಿ ಭೂಮಿ ಬೆಲೆ ಸೇರಿದಂತೆ ಇತರೆ ಮೂಲಸೌಕರ್ಯ ಹೇಗಿದೆ? ಅಷ್ಟಕ್ಕೂ ಒಂದೆಡೆ ಸೋಲಾರ್, ಪವನ ವಿದ್ಯುತ್ ಖರೀದಿಸಿ ಅಂತ ಉತ್ತೇಜನ ನೀಡುತ್ತಾರೆ. ಮತ್ತೂಂದೆಡೆ ಪರೋಕ್ಷವಾಗಿ ಹೊರೆ ಹಾಕುತ್ತಾರೆ. ಎಷ್ಟರಮಟ್ಟಿಗೆ ಸರಿ? – ಬಿ.ವಿ. ಗೋಪಾಲ್ ರೆಡ್ಡಿ, ಅಧ್ಯಕ್ಷರು, ಎಫ್ಕೆಸಿಸಿಐ
-ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.