ಬೀದಿಯಲ್ಲೇ ಕೊಚ್ಚಿ ಕೊಂದ ಹಂತಕರು ನೆರೆ ರಾಜ್ಯಕ್ಕೆ ಪರಾರಿ
Team Udayavani, Mar 10, 2017, 11:43 AM IST
ಬೆಂಗಳೂರು: ರೌಡಿಶೀಟರ್ ಸುನೀಲ್‌ನನ್ನು ಕಮಲಾನಗರ ಬಳಿ ಬರ್ಬರವಾಗಿ ಕೊಲೆಗೈದು ಪರಾರಿಯಾಗಿರುವ ನಾಗರಾಜ ಅಲಿಯಾಸ್ ಸ್ಪಾಟ್ ನಾಗ ಹಾಗೂ ಆತನ ಸಹಚರರು ನೆರೆ ರಾಜ್ಯಕ್ಕೆ ಪರಾರಿಯಾಗಿರುವ ಮಾಹಿತಿ ಸಿಕ್ಕಿದ್ದು, ಆರೋಪಿಗಳ ಬಂಧನಕ್ಕೆ ಪಶ್ಚಿಮ ವಿಭಾಗ ಪೊಲೀಸರು ಬಲೆ ಬೀಸಿದ್ದಾರೆ.
ಆರೋಪಿಗಳ ಪತ್ತೆಗಾಗಿ ಬಸವೇಶ್ವರ ನಗರ, ಮಾಗಡಿ ರೋಡ್ ಪೊಲೀಸ್ ಠಾಣೆ, ಕಾಮಾಕ್ಷಿಪಾಳ್ಯ ಠಾಣೆಯ ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ಮೂರು ತಂಡ ಹಾಗೂ ಡಿಸಿಪಿ ಸ್ಕ್ಯಾಡ್ ತಂಡ ಕಾರ್ಯಾಚರಣೆ ಆರಂಭಿಸಿದೆ. ರೌಡಿ ಶೀಟರ್ ಸುನೀಲ್‌ನನ್ನು ಹತ್ಯೆಗೈದ ಬಳಿಕ ಆರೋಪಿಗಳು ಧರ್ಮಸ್ಥಳ, ಚೆನೈ, ಆಂಧ್ರಪ್ರದೇಶದ ಧರ್ಮಾವರಂ ಈ ಮೂರು ಪ್ರದೇಶಗಳಿಗೆ ತೆರಳಿರುವ ಸಾಧ್ಯತೆಯಿದೆ.
ಹೀಗಾಗಿ ಮೂರು ಪ್ರದೇಶಗಳಿಗೆ ಒಂದೊಂದು ತನಿಖಾ ತಂಡ ತೆರಳಿದೆ. ಮತ್ತೂಂದು ತಂಡ ಬೆಂಗಳೂರಿನಲ್ಲಿಯೇ ಇದ್ದು ಆರೋಪಿಗಳ ಹಳೇ ಸಹಚರರನ್ನು ವಿಚಾರಣೆ ನಡೆಸುತ್ತಿದೆ. ಜತೆಗೆ ಆರೋಪಿಗಳ ಸಂಬಂಧಿಕರ ಮೊಬೈಲ್ ಟ್ರ್ಯಾಕ್ ಮಾಡಿ ಆರೋಪಿಗಳ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ. ಎರಡು ಮೂರುದಿನಗಳಲ್ಲಿ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಬುಧವಾರ ಬೆಳ್ಳಂಬೆಳಗ್ಗೆ ಕಮಲಾನಗದಲ್ಲಿರುವ ರೌಡಿ ಸುನೀಲ್ ಮನೆಗೆ ಮಾರಕಾಸ್ತ್ರಗಳೊಂದಿಗೆ ನುಗ್ಗಿದ್ದ ದುಷ್ಕರ್ಮಿಗಳು ಕುಟುಂಬ ಸದಸ್ಯರ ಎದುರೇ ಆತನನ್ನು ಮನೆಯಿಂದ ಹೊರಗೆಳೆದು ಬರ್ಭರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಕುಖ್ಯಾತ ರೌಡಿಶೀಟರ್ ನಾಗರಾಜ್ ಅಲಿಯಾಸ್ ಸ್ಪಾಟ್ ನಾಗ ಮತ್ತು ತಂಡ ಈ ಭೀಕರ ಕೃತ್ಯ ಎಸಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕುಡುಪು, ಮಂಗಳಜ್ಯೋತಿ ಬಳಿ ಅಂಡರ್‌ಪಾಸ್
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್ ಲೈಟ್ ಉರಿಯುತ್ತಿಲ್ಲ!
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.