ಉದ್ಯೋಗ ಸೃಷ್ಟಿಯೇ ದೊಡ್ಡ ಸವಾಲು
Team Udayavani, Jul 28, 2018, 11:43 AM IST
ಬೆಂಗಳೂರು: ರೋಬೋಟಿಕ್ಸ್, ಆಟೋಮೇಶನ್ ಇತ್ಯಾದಿ ನೂತನ ತಂತ್ರಜ್ಞಾನ ಕ್ಷೇತ್ರದ ಅನ್ವೇಷಣೆಗಳಿಂದ ಉದ್ಯೋಗಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿವೆ. ಉದ್ಯೋಗ ಸೃಷ್ಟಿ ಎಂಬ ದೊಡ್ಡ ಸವಾಲು ಈಗ ನಮ್ಮೆದುರಿಗಿದೆ ಎಂದು ರಾಜ್ಯ ಕಂದಾಯ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಆರ್. ದೇಶಪಾಂಡೆ ಹೇಳಿದರು.
ಅವರು ಶುಕ್ರವಾರ ಯಲಹಂಕದ ಬಳಿಯಿರುವ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜನೆಗೊಂಡಿದ್ದ ಎರ್ಸಿಕಾ-2018 ಘಉRಇಐಇಅ 2018] (ಕಂಪ್ಯೂಟಿಂಗ್, ಮಾಹಿತಿ, ಸಂವಹನ ಹಾಗೂ ಅನ್ವಯಿಕೆ ಕ್ಷೇತ್ರಗಳಲ್ಲಿ ನಡೆಯುತ್ತಿರುವ ನವನವೀನ ಶೋಧಗಳನ್ನು ಕುರಿತ ಅಂತರಾಷ್ಟ್ರೀಯ ಸಮ್ಮೇಳನ) ಅನ್ನು ಉದ್ಘಾಟಿಸಿ ಮಾತನಾಡಿದರು.
ನಂತರ ಏರೋಸ್ಪೇಸ್ ವಿಭಾಗವನ್ನು ಉದ್ಘಾಟಿಸಿದ ಸಚಿವರು, ಪ್ರೊ ಎನ್. ಆರ್. ಶೆಟ್ಟಿ ಅವರ ನೇತೃತ್ವದಲ್ಲಿ ವೈಮಾನಿಕ ತಂತ್ರಜಾnನ ಕ್ಷೇತ್ರದಲ್ಲಿ ಯುವಜನರ ಕೌಶಲ್ಯವರ್ಧನೆಗಾಗಿ ವಿಶ್ವೇಶ್ವರಯ್ಯನವರ ಜನ್ಮಸ್ಥಳ ಮುದ್ದೇನಹಳ್ಳಿಯಲ್ಲಿ ಮಾಸ್ಟರ್ ಟ್ರೆçನರ್ಸ್‌ಗಳನ್ನು ತರಬೇತಿಗೊಳಿಸುವ ಸುಸಜ್ಜಿತ ಔನ್ನತ್ಯ ಕೇಂದ್ರವನ್ನು ಸ್ಥಾಪಿಸಲು ನಿಟ್ಟೆ ವಿವಿ ಮುಂದಾಗಿರುವುದು ಸ್ವಾಗತಾರ್ಹ ಎಂದರು.
ಮನುಷ್ಯ ಮಾಡುತ್ತಿದ್ದ ಶ್ರಮದಾಯಕ ಕೆಲಸಗಳನ್ನು ರೋಬೋಟ್‌ಗಳು ನಿರ್ವಹಿಸಲಿರುವುದರಿಂದ ಬಹುದೊಡ್ಡ ಪ್ರಮಾಣದಲ್ಲಿ ಉದ್ಯೋಗಗಳು ಮಾಯವಾಗಲಿವೆ. ಇದಕ್ಕಾಗಿ ಆತಂಕ ಪಡುವುದು ಬೇಡ, ಏಕೆಂದರೆ ನವೀನ ತಂತ್ರಜಾnನಕ್ಕೆ ಹೊಂದಿಕೊಂಡಂತೆ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಆದರೆ, ಈ ಹೊಸ ಉದ್ಯೋಗಗಳಿಗೆ ನಮ್ಮ ಯುವಜನರನ್ನು ಸಜ್ಜುಗೊಳಿಸಲು ಕೌಶಲ್ಯವರ್ಧನೆ ಅತ್ಯಗತ್ಯ. ನಾವು ಆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ.
ಭವಿಷ್ಯದಲ್ಲಿ ವೈಮಾನಿಕ ತಂತ್ರಜಾnನ ಕ್ಷೇತ್ರದಲ್ಲಿ ಅಸಂಖ್ಯಾತ ಉದ್ಯೋಗಗಳು ಸೃಷ್ಟಿಯಾಗಲಿವೆ. ನಾನು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವನಾಗಿದ್ದಾಗ ದೇವನಹಳ್ಳಿ ಬಳಿ 3000 ಎಕರೆ ಪ್ರದೇಶವನ್ನು ಈ ಉದ್ದೇಶಕ್ಕಾಗಿಯೇ ಮೀಸಲಿಟ್ಟಿದ್ದೆ. ಈಗಾಗಲೇ ಅಲ್ಲಿ ಅನೇಕ ಕೈಗಾರಿಕೆಗಳು ಕಾರ್ಯನಿರ್ವಸುತ್ತಿವೆ ಎಂದು ನುಡಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಎನ್. ಆರ್. ಶೆಟ್ಟಿ ಅವರು ಮಾತನಾಡಿ, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ಆಯೋಜಿಸಿರುವ ಈ ಅಂತಾರಾಷ್ಟ್ರೀಯ ಸಮ್ಮೇಳನ ಅತ್ಯಾಧುನಿಕ ವಿಜಾnನದ ಪರಸ್ಪರ ವಿನಿಮಯಕ್ಕೆ ವೇದಿಕೆಯಾಗಿದೆ. ಈ ತರಹದ ಸಮ್ಮೇಳನಗಳು ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಬಂಡವಾಳ ಹೂಡಲು ಪ್ರೇರೇಪಣೆ ನೀಡುತ್ತಿವೆ.
ಈ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗಗಳು ಪ್ರಾಪ್ತಿಯಾದಂತಾಗುತ್ತವೆ ಎಂದರು. ಸಮಾರಂಭದಲ್ಲಿ ಪ್ರಾಂಶುಪಾಲ ಡಾ. ಹೆಚ್. ಸಿ. ನಾಗರಾಜ್, ಅಮೆರಿಕದ ನಾರ್ಥ್ ಡಕೋಟ ಸ್ಟೇಟ್ ಯೂನಿವರ್ಸಿಟಿಯ ತಂತ್ರಜಾnನ ಕ್ಷೇತ್ರದ ದಿಗ್ಗಜ ಡಾ. ಗುರ್‌ಸಿಮ್ರನ್ ಸಿಂಗ್ ವಾಲಿಯಾ, ಡಾ. ಕಾಳಿದಾಸ ಶೆಟ್ಟಿ ಮತ್ತು ಪ್ರೊ. ಅಲೆಕ್ಸ್ ರೇಡರ್‌ಮಾಚರ್ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.