ತೋಟಗಾರಿಕೆ ಮೇಳಕ್ಕೆ ಅದ್ಧೂರಿ ತೆರೆ

15 ಲಕ್ಷ ಮಂದಿ ಆನ್‌ಲೈನ್‌ನಲ್ಲಿ ವೀಕ್ಷಣೆ,ಮೇಳದಲ್ಲಿ 720 ಕೆವಿಕೆಗಳು, 900 ಎಫ್ಪಿಒಗಳು ಭಾಗಿ

Team Udayavani, Feb 13, 2021, 1:06 PM IST

ತೋಟಗಾರಿಕೆ ಮೇಳಕ್ಕೆ ಅದ್ಧೂರಿ ತೆರೆ

ಬೆಂಗಳೂರು: ದೇಶದ ಅತಿದೊಡ್ಡ ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ಶುಕ್ರವಾರ ಅದ್ಧೂರಿ ತೆರೆಬಿದ್ದಿತು. ಐದು ದಿನಗಳ ಈ ಮೇಳದಲ್ಲಿ ಲಕ್ಷ ನೋಂದಣಿಯೂ ಸೇರಿ ಒಟ್ಟಾರೆ 16.3 ಲಕ್ಷ ಜನ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಾಕ್ಷಿಯಾದರು. ಕೊನೆಯ ದಿನ ಕಣ್ಣುಹಾಯಿಸಿದಷ್ಟು ದೂರ ಜನಸ್ತೋಮ ಕಂಡುಬಂತು. ಪ್ರಾತ್ಯಕ್ಷಿಕೆಗಳು, ಪ್ರದರ್ಶನ ಮಳಿಗೆಗಳು, ಯಂತ್ರೋಪಕರಣಗಳ ಮುಂದೆ ಜನ ಜಮಾವಣೆಗೊಂಡು ಕುತೂಹಲದಿಂದ ವೀಕ್ಷಿಸುತ್ತಿರುವುದು, ಮಾಹಿತಿ ಪಡೆಯುತ್ತಿರುವುದು ಸರ್ವೇಸಾಮಾನ್ಯವಾಗಿತ್ತು.

ಸಂಜೆವರೆಗೂ ಜನರ ಹರಿವು ಕಡಿಮೆ ಆಗಿರಲಿಲ್ಲ. ಬರೀ ಬೆಂಗಳೂರು ಮತ್ತು ಸುತ್ತಲಿನ ಪ್ರದೇಶಗಳಿಂದ ಮಾತ್ರವಲ್ಲ; ಹೊರರಾಜ್ಯಗಳಿಂದಲೂ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕೋವಿಡ್ ಹಾವಳಿ ನಡುವೆಯೂ ಈ ಸ್ಪಂದನೆಯು ಮೇಳದ ಯಶಸ್ಸನ್ನು ಸಾಕ್ಷೀಕರಿಸುವಂತಿತ್ತು. “ಕಳೆದ ಐದು ದಿನಗಳಲ್ಲಿ 16.3 ಲಕ್ಷ ಜನ ಮೇಳವನ್ನು ಕಣ್ತುಂಬಿಕೊಂಡಿದ್ದಾರೆ. ನೋಂದಣಿ ಕಡ್ಡಾಯ ಸಡಿಲಿಕೆ ಮಾಡಿದ್ದರೆ ಹಾಗೂ ಕೋವಿಡ್‌ ಹಾವಳಿ ಇಲ್ಲದಿದ್ದರೆ ಇನ್ನೂ ಹತ್ತು ಲಕ್ಷ ಜನ ಹರಿದುಬರುತ್ತಿದ್ದರು. ಮೇಳದಲ್ಲಿ ಏಳು ಹೊಸ ಉದ್ಯಮಿಗಳು ಐಐಎಚ್‌ಆರ್‌ನ 15 ತಂತ್ರಜ್ಞಾನಗಳಿಗೆ ಪರವಾನಗಿ ಪಡೆದು, ರೈತರಿಗೆ ಅನುಕೂಲ ಆಗುವಂತೆ ವಾಣಿಜ್ಯೀಕರಣಗೊಳಿಸಲಿದ್ದಾರೆ. ಇನ್ನು ರೋಗನಿರೋಧಕ ಶಕ್ತಿ ಹೊಂದಿರುವ ಮೆಣಸಿನಕಾಯಿ, ಜರ್ಬೆರಾ, ಕಲ್ಲಂಗಡಿ ಮತ್ತಿತರ ತಳಿಗಳಿಗೆ ರೈತರು ಹೆಚ್ಚು ಆಸಕ್ತಿ ತೋರಿಸಿದ್ದು ಕಂಡುಬಂದಿದೆ.ಒಟ್ಟಾರೆ 720 ಕೆವಿಕೆಗಳು, 900 ಎಫ್ ಪಿಒಗಳು ಇದರಲ್ಲಿ ಭಾಗವಹಿಸಿದ್ದವು’ ಎಂದು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) ನಿರ್ದೇಶಕ ಡಾ.ದಿನೇಶ್‌ ತಿಳಿಸಿದರು.

ಈ ಬಾರಿ ಮೇಳಕ ಸ್ಥಳೀಯ ರೈತರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿತ್ತು. ಆದರೂ ನೆರೆಯ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ರಾಜ್ಯಗಳಿಂದ ಅಧಿಕ ಸಂಖ್ಯೆಯಲ್ಲಿ ರೈತರು, ಯುವ ಉದ್ಯಮಿಗಳು ಆಗಮಿಸಿದ್ದರು. ದೂರದ ಗುಜರಾತ್‌, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತಿತರ ರಾಜ್ಯಗಳಿಂದಲೂ ಜನ ಬಂದಿದ್ದರು.

“ಸಿದ್ದು’ ತಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು! :

ಎಂದಿನಂತೆ ಮೇಳದಲ್ಲಿ “ಸಿದ್ದು’ ಹಲಸಿಗೆ ಭಾರೀ ಬೇಡಿಕೆ ಇತ್ತು. ನಿತ್ಯ ಮಧ್ಯಾಹ್ನದ ಹೊತ್ತಿಗೇ ಸಸಿಗಳು ಖಾಲಿ ಆಗಿರುತ್ತಿದ್ದವು. ಇನ್ನು ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಳಿಗೆಗಳಲ್ಲಿ ಜನ ತುಂಬಿ ತುಳುಕುತ್ತಿದ್ದರು. ಅಲ್ಲದೆ, ಒಂದೂವರೆ ವರ್ಷದಲ್ಲಿ ಫ‌ಲಕೊಡುವ “ಅದ್ಭುತ ಹಲಸು’ ಮಳಿಗೆಗೆ ಹೆಚ್ಚಿನ ಆಸಕ್ತರು ಮುಗಿಬಿದ್ದರು. ಶುಕ್ರವಾರ ಒಂದೇ ದಿನ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಹಲಸಿನ ಸಸಿಗಳು ಮಾರಾಟವಾಗಿವೆ ಎಂದು ಮಳಿಗೆ ಮಾಲಿಕ ಜಾಕ್‌ ಅನಿಲ್‌ ಪುತ್ತೂರು ತಿಳಿಸಿದರು. ಉಚಿತ ವಸತಿ ವ್ಯವಸ್ಥೆ: ಮೇಳದ ಆರಂಭದ ಮುನ್ನ ದಿನ ಅಂದರೆ ಫೆ. 7ರಿಂದಲೇ ಬೇರೆ ಬೇರೆ ಜಿಲ್ಲೆಗಳು ಮತ್ತು ಹೊರ ರಾಜ್ಯಗಳಿಂದ ಮೇಳಕ ಬೆR ರುವಂತಹವರಿಗೆ ವಸತಿ ಸೌಕರ್ಯ ಕಲ್ಪಿಸಲಾಗಿದೆ. ಪ್ರಗತಿಪರ ರೈತರು, ಕೃಷಿ ಆಸಕ್ತರು, ವಿಜ್ಞಾನಿಗಳು, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳಿಗೆ, ಮೇಳದ ಮಳಿಗೆಗಳ ಸಿಬ್ಬಂದಿಗೆ ತಂಗುವ ವ್ಯವಸ್ಥೆ ಮಾಡಲಾಗಿತ್ತು. ಹೆಸರಘಟ್ಟದ ಟಿ.ಬಿ. ಕ್ರಾಸ್‌ನಲ್ಲಿ ಮೂರು ಕಲ್ಯಾಣ ಮಂಟಪಗಳು, ಐಐಎಚ್‌ಆರ್‌ ವಸತಿ ನಿಲಯ, ಐಐಸಿಆರ್‌ ಅತಿಥಿಗೃಹ, ಜಿಕೆವಿಕೆಯ ಸುವರ್ಣ ಭವನ, ರೈತ ತರಬೇತಿ ಕೇಂದ್ರದಲ್ಲಿ ವಸತಿಗೆ ಅನುವು ಮಾಡಿಕೊಡಲಾಗಿತ್ತು ಎಂದು ಐಐಎಚ್‌ಆರ್‌ ಪ್ರಧಾನ ವಿಜ್ಞಾನಿ ಹಾಗೂ ಮೇಳದ ವಸತಿ ಸಮಿತಿ ಮುಖ್ಯಸ್ಥ ಡಾ.ಟಿ.ಎಂ. ಗಜಾನನ ಹೇಳಿದರು.

5 ದಿನಗಳ ಈ ಮೇಳದಲ್ಲಿ ಎಂದೂ ಕೂಡ ಊಟೋಪಚಾರಕ್ಕೆ ಜನರು ನೂಕುನುಗ್ಗಲು ಕಂಡುಬರಲಿಲ್ಲ. ಊಟ, ತಿಂಡಿ ವ್ಯವಸ್ಥೆ ಯನ್ನು ತುಂಬಾ ಚೆನ್ನಾಗಿ ಐಐಎಚ್‌ಆರ್‌ ಮಾಡಿತ್ತು. ಕಡಿಮೆ ಬೆಲೆಗೆ ನಿತ್ಯ ರುಚಿಕರ ತಿಂಡಿ ಮತ್ತು ಊಟ ನೀಡಲಾಯಿತು.

ರೈತರ ಬೆಳೆಗೆ ಬೆಲೆ ನಿಗದಿ ಅಗತ್ಯ :

ರೈತನಿಗೆ ನ್ಯಾಯವಾದ ಬೆಲೆ ಸಿಗದೆ ಮದ್ಯವರ್ತಿಗಳ ಪಾಲುಗುತ್ತಿದೆ. ರೈತರಿಗೆ ತಾವು ಬೆಳೆದ ಬೆಳೆಗಳಿಗೆ ನಿಗದಿತ ಬೆಲೆ ಸಿಗುವಂತಾಗಬೇಕು ಎಂದು ಬಿಡಿಎ ಅಧ್ಯಕ ಎಸ್‌.ಆರ್‌. ವಿಶ್ವನಾಥ್‌ ತಿಳಿಸಿದರು. ಮೇಳದ ಸಮಾರೋಪದಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿಗಳು 2022ರ ವೇಳೆಗೆ ರೈತರ ಆದಾಯ ದುಪ್ಪಟ್ಟು ‌ಗೊಳಿಸುವ ಸಂಕಲ್ಪ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ. ಇದು ಸಾಧ್ಯವಾಗಬೇಕಾದರೆ, ಎಲ್ಲ ಬೆಳೆಗಳಿಗೆ ಅಗತ್ಯ ಬೆಂಬಲ ಬೆಲೆ ಅಗತ್ಯ ನಿಗದಿ ಮಾಡಬೇಕು ಎಂದು ವಿಶ್ವನಾಥ ಅಭಿಪ್ರಾಯಪಟ್ಟರು. ಬೆಂ ಕೃಷಿ ವಿವಿ ಉಪಕುಲಪತಿ ಆರ್‌. ರಾಜೇಂದ್ರ ಪ್ರಸಾದ್‌ ಮತ್ತಿತರರು ಉಪಸ್ಥಿತರಿದ್ದರು.

14-15 ಲಕ್ಷ ಮೊತ್ತದ ಉತ್ಪನ್ನಗಳ ಮಾರಾಟ :

ಐದು ದಿನಗಳ ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ಬೀಜೋತ್ಪಾದನೆ ಸೇರಿದಂತೆ ಐಐಎಚ್‌ಆರ್‌ನ 14ರಿಂದ 15 ಲಕ್ಷ ಮೊತ್ತದ ವಿವಿಧ ಮೌಲ್ಯಾಧಾರಿತ ಉತ್ಪನ್ನಗಳು ಮಾರಾಟವಾಗಿವೆ. ಹೊಸ ರೀತಿಯ ವಿಧಾನಗಳನ್ನು ಸಾವಯವ ಕೃಷಿಗೆ ಒತ್ತು ಕೊಡುವ ಉತ್ಪನ್ನಗಳನ್ನು ಮತ್ತು ಹೊಸ ತಳಿಗಳನ್ನು ಅದರಲ್ಲೂ ರೋಗನಿರೋಧಕ ತಳಿಗಳನ್ನು ಪ್ರದರ್ಶನ ಮಾಡಿದ್ದು, ರೈತರ ಮೆಚ್ಚುಗೆಗೆ ಪಾತ್ರವಾದವು. ಬೀಜ, ಗೊಬ್ಬರ, ಮೌಲ್ಯಾಧಾರಿತ ಉತ್ಪನ್ನಗಳು ಸೇರಿ ಒಟ್ಟಾರೆ 12-15 ಲಕ್ಷ ಮೊತ್ತದಷ್ಟು ಮಾರಾಟ ಆಗಿವೆ ಎಂದು ಡಾ. ದಿನೇಶ್‌ ಹೇಳಿದರು.

ಇಪ್ಪತ್ತು ಲಕ್ಷ ರೂ. ವಹಿವಾಟು :

ತಳಿ, ತಂತ್ರಜ್ಞಾನಗಳ ತಾಕುಗಳ ಪೈಕಿ ಮೇಳದಲ್ಲಿ ಸುಮಾರು 250ಕ್ಕೂ ಹೆಚ್ಚು ತಾಕುಗಳಿದ್ದು, ಹೂವು-ಹಣ್ಣು-ತರಕಾರಿಗಳ ತಳಿಗಳು, ಯಂತ್ರೋಪಕರಣಗಳು ಮೆಚ್ಚುಗೆಗೆ ವ್ಯಕ್ತವಾಯಿತು. ಸುಮಾರು ನೂರರಷ್ಟು ಮಳಿಗೆಗಳಿದ್ದು, ಅಂದಾಜು 20 ಲಕ್ಷ ವಹಿವಾಟು ಆಗಿರಬಹುದು ಎಂದು ಅಂದಾಜಿಸಲಾಗಿದೆ.

ಟಾಪ್ ನ್ಯೂಸ್

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು

Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು

Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್‌

Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್‌

Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ

Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ

Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್‌ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?

Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್‌ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?

3

Bengaluru: ಕ್ಯಾಬ್‌ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್‌ ಎಂಜಿನಿಯರ್‌ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.