ಜ್ಞಾನಪೀಠ ಸಿಕ್ಕರೆ ಖುಷಿ, ಲಾಬಿ ಮಾಡಲ್ಲ


Team Udayavani, Sep 30, 2018, 12:28 PM IST

jnanapiota.jpg

ಬೆಂಗಳೂರು: ಜ್ಞಾನಪೀಠ ಪ್ರಶಸ್ತಿಗೆ ನಾನು ಯಾವುದೇ ಲಾಬಿ ಮಾಡುವುದಿಲ್ಲ. ಸಹಜವಾಗಿಯೇ ಸಿಕ್ಕರೆ ಖುಷಿಯಿಂದ ಸ್ವೀಕರಿಸುತ್ತೇನೆ ಎಂದು ಸಾಹಿತಿ ಕುಂ.ವೀರಭದ್ರಪ್ಪ ತಿಳಿಸಿದರು.

ಸಪ್ನ ಬುಕ್‌ಹೌಸ್‌ ಹೊರ ತಂದಿರುವ ಕುಂ.ವೀ ಅವರ “ಕಿಲುಬು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ನೀಡುವ ಯಾವುದೇ ಅಕಾಡೆಮಿ ಅಧ್ಯಕ್ಷ ಸ್ಥಾನ ಹಾಗೂ ಸೈಟಿಗಾಗಿ ನಾನು ಕಾದು ಕುಳಿತಿಲ್ಲ. ನಮ್ಮೂರಿನಲ್ಲಿ ನನಗೆ ದೇವರು ಕೊಟ್ಟ ಸ್ಥಳವಿದ್ದು, ಯಾವುದೇ ಸ್ಥಾನಕ್ಕೆ ಲಾಬಿ ಮಾಡುವುದಿಲ್ಲ ಎಂದು ಹೇಳಿದರು. 

ಪ್ರಸ್ತುತ ಸಂದರ್ಭದಲ್ಲಿ ರಾಜಕೀಯ ವ್ಯವಸ್ಥೆ ಹಾಳಾಗಿದ್ದು, ರಾಜ್ಯದಲ್ಲಿ ಎರಡು ವರ್ಷದಿಂದ ಅಧಿಕಾರ ನಡೆಯುತ್ತಿಲ್ಲ. ವಿಧಾನಸೌಧ ಬಿಗ್‌ ಬಜಾರ್‌ ರೀತಿಯಲ್ಲಿ ಮಾರಾಟ ಕೇಂದ್ರವಾಗಿದ್ದು, ಕೋಟಿಗೆ ಮುಖಂಡರನ್ನು ಖರೀದಿಸುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಟೀಕಿಸಿದರು. 

ನನ್ನ ಕಾದಂಬರಿ “ಕಿಲುಬು’ ನಲ್ಲಿ ರಾಜಕೀಯ ವಿಡಂಬಣೆಯಿದ್ದು, ಬಹುಶಃ ಕಾರಂತರ ಬಳಿಕ ಯಾವ ಲೇಖಕರು ಸಹ ರಾಜಕೀಯ ವಿಡಂಬಣೆ ಕುರಿತು ಬರೆದಿರಲಿಲ್ಲ. ಒಬ್ಬ ಲೇಖಕನಾದವನಿಗೆ ಪ್ರಶ್ನಿಸುವ ಹಕ್ಕಿರಬೇಕಿದ್ದಾಗ ಮಾತ್ರ ವಾಸ್ತವ ಸಂಗತಿಗಳನ್ನು ಬರೆಯಲು ಸಾಧ್ಯವಾಗುತ್ತದೆ ಎಂದ ಅವರು, ಕೆಲವು ರಾಜಕಾರಣಿಗಳು ಗೌರಿ ಹತ್ಯೆ ಆರೋಪಿಗಳ ಪರವಾಗಿ ಮಾತನಾಡುವ ಮೂಲಕ ಸಂವಿಧಾನಕ್ಕೆ ದ್ರೋಹವೆಸಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಮರ್ಶಕ ಡಾ.ಸಿ.ಎನ್‌.ರಾಮಚಂದ್ರನ್‌ ಮಾತನಾಡಿದರು. ಮುಖ್ಯಮಂತ್ರಿಯಾಗಲು ರಾಜಕೀಯ ಮುಖಂಡರೊಬ್ಬರು ನಡೆಸುವ ರಾಜಕೀಯ ತಂತ್ರಗಾರಿಕೆ ಈ ಕಾದಂಬರಿಯ ಕಥಾ ಹಂದರವಾಗಿದೆ. ಅನಿರೀಕ್ಷಿತವಾಗಿ ಕಾದಂಬರಿ ಮುಕ್ತಾಯಗೊಳ್ಳುತ್ತದೆ. ಆದರೆ, ಈ ರಾಜಕೀಯ ಪರಿಸ್ಥಿತಿ ಒಂದು ರೀತಿಯ ವಿಷ ಚಕ್ರವಿದ್ದಂತೆ ಹೀಗಾಗಿ ಎಲ್ಲಿಗೆ ಮುಗಿಸಿದರೂ ಅಷ್ಟೇ ಅರ್ಥವಿರುತ್ತದೆ ಎಂದು ಅಭಿಪ್ರಾಯಪಟ್ಟರು. 

ಕುಂ.ವೀರಭದ್ರಪ್ಪ ಅವರ ಕೃತಿಗಳು ಸಾಮಾಜಿಕ ನ್ಯಾಯದ ಬಗ್ಗೆ ರಚನೆಯಾಗಿರುವುದರಿಂದ ಅವರನ್ನು ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಶಿಫಾರಸು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. 
-ಡಾ.ಮನು ಬಳಿಗಾರ್‌, ಕಸಾಪ ಅಧ್ಯಕ್ಷ

ಈವರೆಗೆ ಸಿಕ್ಕಿರುವ ಪ್ರಶಸ್ತಿಗಳಲ್ಲಿ ನಾನು ಖುಷಿ ಕಂಡಿದ್ದೇನೆ. ಹೀಗಾಗಿ ನನಗೆ ಯಾವ ಸೈಟೂ ಬೇಡ. ಕೊನೆಗಾಲದಲ್ಲಿ ಬೇಕಾದ ಆರು-ಮೂರು ಅಡಿ ಜಾಗವನ್ನು ನನ್ನೂರಿನಲ್ಲಿ ದೇವರು ನನಗೆ ಕೊಟ್ಟಿದ್ದಾನೆ. 
-ಕುಂ.ವೀರಭದ್ರಪ್ಪ, ಸಾಹಿತಿ

ಟಾಪ್ ನ್ಯೂಸ್

ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತಾ ಆಪ್: ಕೇಜ್ರಿವಾಲ್ ಹೇಳಿದ್ದೇನು?

AAP: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತಾ.. ಕೇಜ್ರಿವಾಲ್ ಹೇಳಿದ್ದೇನು?

Bidar: ಬಸವಣ್ಣಗೆ ಅವಮಾನ ಮಾಡಿದ ಯತ್ನಾಳ್‌ ಮಾನಸಿಕ ರೋಗಿ: ಈಶ್ವರ ಖಂಡ್ರೆ

Bidar: ಬಸವಣ್ಣಗೆ ಅವಮಾನ ಮಾಡಿದ ಯತ್ನಾಳ್‌ ಮಾನಸಿಕ ರೋಗಿ: ಈಶ್ವರ ಖಂಡ್ರೆ

Belve: ಸ್ನಾನಕ್ಕೆಂದು ನದಿಗಿಳಿದಿದ್ದ ಇಬ್ಬರು ಬಾಲಕರು ನೀರುಪಾಲು

Belve: ಸ್ನಾನಕ್ಕೆಂದು ನದಿಗಿಳಿದಿದ್ದ ಇಬ್ಬರು ಬಾಲಕರು ನೀರುಪಾಲು

yatnal

Belagavi: ವಕ್ಫ್ ಹೋರಾಟ ಮಾಡುವುದು ತಪ್ಪಾ..: ವಿಜಯೇಂದ್ರ ದೂರಿನ ಬಗ್ಗೆ ಯತ್ನಾಳ್‌ ಮಾತು

Koppala: ತೊಗರಿ ಬೆಳೆ ಕಟಾವಿಗೆ ಬಂತು ಯಂತ್ರ‌; 14 ಕ್ವಿಂಟಲ್‌ ಸಾಮರ್ಥ್ಯದ ಕಂಟೇನರ್‌

Koppala: ತೊಗರಿ ಬೆಳೆ ಕಟಾವಿಗೆ ಬಂತು ಯಂತ್ರ‌; 14 ಕ್ವಿಂಟಲ್‌ ಸಾಮರ್ಥ್ಯದ ಕಂಟೇನರ್‌

RAJ-KUNDRA

ED Summons: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಇಡಿ ಸಮನ್ಸ್

BSF Raising Day 2024:ಭಾರತೀಯ ಗಡಿ ರಕ್ಷಕರ ಸ್ಮರಣೆ- ಭಾರತದ ಶಕ್ತಿಯ ಪ್ರತೀಕ ಬಿಎಸ್ಎಫ್

BSF Raising Day 2024:ಭಾರತೀಯ ಗಡಿ ರಕ್ಷಕರ ಸ್ಮರಣೆ- ಭಾರತದ ಶಕ್ತಿಯ ಪ್ರತೀಕ ಬಿಎಸ್ಎಫ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-bng

Bengaluru: ಚಕ್ರ ವಾಹನಗಳು, ಮನೆ ಕಳ್ಳತನ: ಮೂವರು ಆರೋಪಿಗಳ ಬಂಧನ

10-

Bengaluru: ಸಿನಿಮಾ ಡ್ರೋನ್‌ ಟೆಕ್ನಿಷಿಯನ್‌ ಆತ್ಮಹತ್ಯೆ ಯತ್ನ

9-munirathna

Bengaluru: ಮುನಿರತ್ನ ವಿರುದ್ದ ಇನ್ನೊಂದು ಹನಿಟ್ರ್ಯಾಪ್‌, ಕೊಲೆ ಯತ್ನ ಕೇಸ್‌

8-crime

Bengaluru:ಅಕ್ರಮ ಸಂಬಂಧ: ಪತಿ ಹತ್ಯೆ-ಪ್ರಿಯಕರ,ಆತನ ಸ್ನೇಹಿತನ ಜತೆಗೆ ಸೇರಿ ಕೊಲೆಗೈದ ಪತ್ನಿ

ಮಹಿಳೆ- ಮಕ್ಕಳ ಆರೋಗ್ಯದ ಚಿಕಿತ್ಸೆಯನ್ನು ಸೇವೆ ಎಂಬಂತೆ ಮಾಡಬೇಕು: ಮಾಜಿ ಸಚಿವ ಅರವಿಂದ ಲಿಂಬಾವಳಿ

ಮಹಿಳೆ- ಮಕ್ಕಳ ಆರೋಗ್ಯದ ಚಿಕಿತ್ಸೆಯನ್ನು ಸೇವೆ ಎಂಬಂತೆ ಮಾಡಬೇಕು: ಅರವಿಂದ ಲಿಂಬಾವಳಿ

MUST WATCH

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

ಹೊಸ ಸೇರ್ಪಡೆ

12-

Dharmasthala – 2024ರ ಲಕ್ಷದೀಪೋತ್ಸವಕ್ಕೆ ತೆರೆ

ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತಾ ಆಪ್: ಕೇಜ್ರಿವಾಲ್ ಹೇಳಿದ್ದೇನು?

AAP: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತಾ.. ಕೇಜ್ರಿವಾಲ್ ಹೇಳಿದ್ದೇನು?

8

Mangaluru: ಹಳೆಯ ಕಾಲದ ಕಥೆ ಹೇಳಿದ ಚಿತ್ರಗಳು, ಸಾಂಸ್ಕೃತಿಕ ಚಿತ್ರಣ

Bidar: ಬಸವಣ್ಣಗೆ ಅವಮಾನ ಮಾಡಿದ ಯತ್ನಾಳ್‌ ಮಾನಸಿಕ ರೋಗಿ: ಈಶ್ವರ ಖಂಡ್ರೆ

Bidar: ಬಸವಣ್ಣಗೆ ಅವಮಾನ ಮಾಡಿದ ಯತ್ನಾಳ್‌ ಮಾನಸಿಕ ರೋಗಿ: ಈಶ್ವರ ಖಂಡ್ರೆ

Priyanka Upendra: 25ರ ಸಂಭ್ರಮದಲ್ಲಿ ʼಉಗ್ರಾವತಾರʼ

Priyanka Upendra: 25ರ ಸಂಭ್ರಮದಲ್ಲಿ ʼಉಗ್ರಾವತಾರʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.