ಬೆಂಗಳೂರಿಗೆ ಶಂಕಿತ ಉಗ್ರಗಾಮಿಗಳ ಎಂಟ್ರಿ
Team Udayavani, Nov 24, 2018, 6:00 AM IST
ಬೆಂಗಳೂರು: ಶಂಕಿತ ಭಯೋತ್ಪಾದಕರು ಬೆಂಗಳೂರು ಮತ್ತು ರಾಜ್ಯದ ಇತರ ಭಾಗಗಳಿಗೆ ಪ್ರವೇ ಶಿಸಿ ದುಷ್ಕೃತ್ಯ ನಡೆಸಲು ಸಂಚು ಹೂಡುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.
ಪಾಕಿಸ್ತಾನದ ಜೈಷ್- ಎ- ಮೊಹಮದ್ ಸಂಘಟನೆಯ ಆರು ಶಂಕಿತ ಉಗ್ರರು ದೇಶದೊಳಗೆ ನುಸುಳಿದ್ದಾರೆ ಎಂಬ ಕೇಂದ್ರ ಗುಪ್ತಚರ ಮಾಹಿತಿ ಬೆನ್ನಲ್ಲೇ ರಾಜ್ಯದೊಳಗೆ ಉಗ್ರ ಸಂಘಟನೆಯ ಸದಸ್ಯರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೇಂದ್ರ ಗೃಹ ಸಚಿವಾಲಯದ ಸುಳಿವಿನ ಮೇರೆಗೆ ದೆಹಲಿ ಪೊಲೀಸರ ತಂಡ ಹಾಗೂ ಆಂಧ್ರದ ಭಯೋತ್ಪಾದನಾ ನಿಗ್ರಹ ಘಟಕ (ಎಟಿಎಸ್) ರಾಜ್ಯಕ್ಕೆ ಭೇಟಿ ನೀಡಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದೆ. ಜತೆಗೆ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಭಯೋತ್ಪಾದಕ ಸಂಘಟನೆಗಳ ಸದ ಸ್ಯ ರನ್ನು ಸಮಗ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕಳೆದ ಕೆಲದಿನಗಳ ಹಿಂದೆ ಆಂಧ್ರಪ್ರದೇಶದ ಭಯೋತ್ಪಾದನಾ ನಿಗ್ರಹ ಘಟಕ ಶಂಕಿತ ಉಗ್ರರ ಜಾಡು ಹಿಡಿದು ಬೆಂಗಳೂರಿಗೆ ಆಗಮಿಸಿದೆ. ಆಂಧ್ರ ಎಟಿಎಸ್‌ನ ಅಧಿಕಾರಿಗಳು ಈ ಕುರಿತು ರಾಜ್ಯ ಪೊಲೀಸ್ ಇಲಾಖೆಯ ಜತೆ ಗಂಭೀರ ಚರ್ಚೆ ನಡೆಸಿದ್ದಾರೆ. ಜತೆಗೆ ರಾಜ್ಯದಲ್ಲಿ ಈ ಹಿಂದೆ ಸಕ್ರಿಯಗೊಂಡಿದ್ದ ಭಯೋತ್ಪಾದನಾ ಸಂಘಟನೆಗಳು, ಅದರ ಸದಸ್ಯರ ಸಂಪೂರ್ಣ ಮಾಹಿತಿ ಪಡೆದುಕೊಂಡಿವೆ.
ರಾಜ್ಯ ಪೊಲೀಸರ ಸಹಕಾರ ಕೋರಿರುವ ಆಂಧ್ರ ಎಟಿಎಸ್ ಅಧಿಕಾರಿಗಳ ತಂಡ ಪರಪ್ಪನ ಅಗ್ರಹಾರಕ್ಕೂ ಭೇಟಿ ನೀಡಿ, ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾದ ಆರೋಪಗಳಲ್ಲಿ ಜೈಲು ಸೇರಿರುವ ಉಗ್ರರ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದೆ. ರಾಜ್ಯದಲ್ಲಿ ತಲೆಮರೆಸಿಕೊಂಡಿರುವ ಶಂಕಿತ ಉಗ್ರರಿಗೂ ಜೈಲು ಸೇರಿರುವ ವಿವಿಧ ಭಯೋತ್ಪಾದನಾ ಸಂಘಟನೆಗಳಿಗೆ ಸೇರಿದ ಶಂಕಿತ ಉಗ್ರರಿಗೂ ಸಂಪರ್ಕ ಇರಬ ಹುದಾದ ಅನು ಮಾನದ ಹಿನ್ನೆಲೆಯಲ್ಲಿ, ಜೈಲುವಾಸಿ ಉಗ್ರರನ್ನು ತೀವ್ರ ವಿಚಾರಣೆಗೊಳಪಡಿಸಿದೆೆ ಎಂದು ಪೊಲೀಸ್ ಇಲಾಖೆಯ ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.
ಉಗ್ರ ಸಂಘಟನೆಯ ಚಟುವಟಿಕೆಗಳು ಹಾಗೂ ಸದಸ್ಯರು ರಾಜ್ಯದಲ್ಲಿರುವ ಬಗ್ಗೆ ಎಟಿಎಸ್ ತಂಡ ಮಾಹಿತಿ ಕೇಳಿದ್ದಾರೆ. ಆದರೆ, ಯಾವ ಸಂಘಟನೆಗೆ ಉಗ್ರರು ಸೇರಿದವರು ಎಂಬ ಮಾಹಿತಿಯನ್ನು ಮೂಲಗಳು ಹಂಚಿಕೊಂಡಿಲ್ಲ.
2013ರಲ್ಲಿ ಹೈದರಾಬಾದ್‌ನ ದಿಲ್‌ಸುಖ್ ನಗರದಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಜತೆಗೆ, ಚುನಾವಣಾ ಹಿನ್ನೆಲೆಯಲ್ಲಿ ಕೆಲವು ಉಗ್ರ ಚಟುವಟಿಕೆಗಳು ನಡೆಯುವ ಬಗ್ಗೆ ಎಟಿಎಸ್‌ಗೆ ಮಾಹಿತಿ ಲಭ್ಯವಾಗಿದ್ದು, ಹೀಗಾಗಿ ರಾಜ್ಯಕ್ಕೆ ಆಗಮಿಸಿತ್ತು ಎಂದು ತಿಳಿದು ಬಂದಿದೆ.
ರಾಯಭಾರಿ ಕಚೇರಿಗಳಲ್ಲಿ ಭದ್ರತೆ ತಪಾಸಣೆ!
ಶಂಕಿತ ಉಗ್ರರು ಸಕ್ರಿಯರಾಗಿದ್ದಾರೆ ಎಂಬ ಮಾಹಿತಿ ಬೆನ್ನಲ್ಲೇ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ ರಾಜಧಾನಿಯಲ್ಲಿರುವ ವಿದೇಶಿ ರಾಯಭಾರ ಕಚೇರಿಗಳಲ್ಲಿ ಭದ್ರತಾ ತಪಾಸಣೆಯ ಪರಿಶೀಲನೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ರಾಯಭಾರ ಕಚೇರಿಗಳಿಗೂ ಮಾಹಿತಿ ನೀಡಿದ್ದು, ಅಲ್ಲಿನ ಭದ್ರತೆ ವ್ಯವಸ್ಥಿತವಾಗಿದೆಯೇ? ಮತ್ತಷ್ಟು ಅಗತ್ಯವಿದೆಯೇ ಎಂಬುದರ ಬಗ್ಗೆ ಹಲವು ದಿನಗಳಿಂದ ಒಂದು ತಂಡ ಕಾರ್ಯ ನಿರ್ವಹಿಸುತ್ತಿದೆ. ಈಗಾಗಲೇ ಕೆಲವು ದೇಶಗಳ ರಾಯಭಾರಿ ಕಚೇರಿಗಳ ಭದ್ರತೆ ತಪಾಸಣೆ ಪೂರ್ಣಗೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಹಿಂದೆ ಭಾರತೀಯ ಉಪಖಂಡದ ಅಲ್‌ಖೈದಾ (ಎಕ್ಯೂಐಎಸ್) ಸಂಘಟನೆಯು ಬೆಂಗಳೂರಿನಲ್ಲಿರುವ ಇಸ್ರೇಲ್ ಕಾನ್ಸುಲೇಟ್ (ರಾಯಭಾರಿ ಕಚೇರಿ) ಮತ್ತಿತರ ರಾಯಭಾರಿ ಕಚೇರಿಗಳಿಗೆ ಬೆದರಿಕೆ ಒಡ್ಡಿತ್ತು. ಈಗ ಅಂತಹ ಬೆದರಿಕೆ ಇರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದಾರೆ.
ಜತೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಸ್ಥಳಗಳ ಭದ್ರತೆ ಕುರಿತಂತೆ ಹೆಚ್ಚಿನ ನಿಗಾವಹಿಸಲು ಜಿಲ್ಲಾ ಎಸ್‌ಪಿಗಳಿಗೂ ಸಂದೇಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ದೂರವಾಣಿ ಕರೆ ವಿನಿಮಯ ಶಂಕೆ?
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಉಗ್ರರು ಪಾಕ್ ಸೇರಿದಂತೆ ದೇಶದ ಹೊರಗಡೆ ಇರುವ ಉಗ್ರ ಸಂಘಟನೆ ಸದಸ್ಯರ ಜೊತೆ ಸಂಪರ್ಕದಲ್ಲಿರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ, ಆ ಆಯಾಮದಲ್ಲಿಯೂ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ತಿಳಿದುಬಂದಿದೆ. 2006ರಲ್ಲಿ ಮೈಸೂರಿನಲ್ಲಿ ಬಂಧಿತನಾಗಿದ್ದ ಪಾಕ್ ಮೂಲದ ಆಲ್-ಬದರ್ ಉಗ್ರ ಸಂಘಟನೆಯ ಮೊಹಮದ್ ಫಯಾದ್ ಕೊಯಾ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಬ್ಯಾರಕ್‌ನಿಂದ ಪಾಕ್ ಉಗ್ರ ಮೊಹಮದ್ ಅಲಿ ಹುಸೇನ್ ಜತೆ ಸಂಪರ್ಕವಿಟ್ಟುಕೊಂಡು ದೂರವಾಣಿ ಮೂಲಕ ಮಾತನಾಡುತ್ತಿದ್ದ ಎಂಬ ಬಗ್ಗೆ ಗುಪ್ತಚರ ದಳ ವರದಿ ನೀಡಿತ್ತು. ಇದಕ್ಕೆ ಸಾಕ್ಷ್ಯ ಎಂಬಂತೆ 2016ರಲ್ಲಿ ಆತನ ಬ್ಯಾರಕ್ ಮುಂದೆ ಸಿಮ್ ಕಾರ್ಡ್ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಗುಲ್ಬರ್ಗ ಜೈಲಿಗೆ ವರ್ಗಾಯಿಸಲಾಗಿತ್ತು.
– ಮಂಜುನಾಥ್ ಲಘುಮೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್
Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್; ಬೆಳಗಾವಿಗೆ ವಂದೇ ಭಾರತ್ ವಿಸ್ತರಣೆಗೆ ಮನವಿ
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Sringeri: ನನಗೆ ಯಾರ ಬೆಂಬಲವೂ ಬೇಡ….: ಡಿಕೆ ಶಿವಕುಮಾರ್ ಮಾರ್ಮಿಕ ಮಾತು
MUST WATCH
ಹೊಸ ಸೇರ್ಪಡೆ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್
Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್; ಬೆಳಗಾವಿಗೆ ವಂದೇ ಭಾರತ್ ವಿಸ್ತರಣೆಗೆ ಮನವಿ
Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.