ಪರಿಸರ ದಸರಾ: ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ಬಳಸಿದರೆ ದಂಡ

Team Udayavani, Oct 14, 2018, 12:37 PM IST

parisara.jpg

ಬೆಂಗಳೂರು: ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಮುಕ್ತ ದಸರಾ ಹಬ್ಬ ಆಚರಣೆಗೆ ಪ್ರೋತ್ಸಾಹಿಸಲು ಮುಂದಾಗಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ಬಳಸುವವರಿಗೆ ಭಾರಿ ದಂಡ ವಿಧಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲು ಮುಂದಾಗಿದೆ. 

ನವರಾತ್ರಿಯ ಭಾಗವಾಗಿ ಆಯುಧ ಪೂಜೆಯನ್ನು ರಾಜ್ಯದೆಲ್ಲೆಡೆ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಅಂದು ವಾಹನಗಳು, ಕಾರ್ಖಾನೆಗಳು, ಕಂಪೆನಿಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಸಿಹಿ ಹಂಚಿಕೆ ವೇಳೆ ಭಾರಿ ಪ್ರಮಾಣದಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ಗಳನ್ನು ಬಳಕೆ ಮಾಡಲಾಗುತ್ತದೆ. 

ಹೀಗಾಗಿ, ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಒತ್ತು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲು ಮಂಡಳಿ ತೀರ್ಮಾನಿಸಿದೆ. ಅದರಂತೆ ಹಬ್ಬದ ಸಂದರ್ಭದಲ್ಲಿ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸುವಂತೆ, ಆನಂತರವೂ ನಿಯಮ ಉಲ್ಲಂ ಸಿದವರಿಗೆ ಭಾರಿ ಪ್ರಮಾಣದ ದಂಡ ವಿಧಿಸುವಂತೆ ಸೂಚನೆ ನೀಡಲು ನಿರ್ಧರಿಸಿದೆ. 

ರಾಜ್ಯದಾದ್ಯಂತ 2016ರ ಮಾರ್ಚ್‌ 11 ರಂದು ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಬಳಕೆಯನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಆದರೂ, ಪ್ಲಾಸ್ಟಿಕ್‌ ಉತ್ಪನ್ನಗಳ ಬಳಕೆ ಮುಂದುವರಿಸಿದ್ದು, ದಸರಾ ಹಾಗೂ ದೀಪಾವಳಿಯ ಹಬ್ಬಗಳಲ್ಲಿ ಭಾರಿ ಪ್ರಮಾಣದಲ್ಲಿ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಬಳಕೆ ಮಾಡಲಾಗುತ್ತದೆ.

ಈ ಕುರಿತು ಹಲವಾರು ಸೂಚನೆ ನೀಡಿದರೂ ನಿಯಂತ್ರಣಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದ ದಂಡವನ್ನು ವಿಧಿಸಿ, ಪ್ಲಾಸ್ಟಿಕ್‌ ಉತ್ಪನ್ನಗಳನ್ನು ವಶಕ್ಕೆ ಪಡೆಯುವಂತೆ ಸೂಚನೆ ನೀಡಲಾಗುವುದು ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್‌ “ಉದಯವಾಣಿ’ಗೆ ತಿಳಿಸಿದ್ದಾರೆ.
 
ಪ್ಲಾಸ್ಟಿಕ್‌ ಯಾವುದು?: ಪಾಲಿ ಪ್ರೊಪೈಲಿನ್‌, ನಾನ್‌ ಓವನ್‌ ಪಾಲಿ ಪ್ರೊಪೈಲಿನ್‌, ಮಲ್ಟಿಲೇಯರ್‌ ಕೊ ಎಕ್ಸ್‌ಟ್ರೂಡರ್‌ ಪಾಲಿ ಪ್ರೊಪೈಲಿನ್‌, ಪಾಲಿ ಇಥಲೀನ್‌, ಪಾಲಿ ವಿನೈಲ್ಡ್‌ ಕ್ಲೋರೈಡ್‌, ಹೈ ಮತ್ತು ಲೋ ಡೆನ್ಸಿಟಿ ಪಾಲಿ ಇಥಲೀನ್‌, ಥರ್ಮೊಕೋಲ್‌ ಪಾಲಿ ಸ್ಪಿರಿನ್‌, ಪಾಲಿ ಅಮೈಡ್ಸ್‌, ಪಾಲಿ ಟೆರೆಪೈಲೇಟ್‌, ಪಾಲಿ ಮಿಥೈಲ್‌ ಮೆಥಕ್ರಿಲೇಟ್‌, ಪ್ಲಾಸ್ಟಿಕ್‌ ಮೈಕ್ರೋಬಿಡ್‌ಗಳಿಂದ ತಯಾರದ ವಸ್ತುಗಳು. 

ನಿಷೇಧಿಕ ಪ್ಲಾಸ್ಟಿಕ್‌ ವಸ್ತುಗಳಿವು: ಪ್ಲಾಸ್ಟಿಕ್‌ನಿಂದ ತಯಾರಾದ ಕೈಚೀಲ, ಭಿತ್ತಿಪತ್ರ, ತೋರಣ, ಫ್ಲೆಕ್ಸ್‌, ಬಾವುಟ, ತಟ್ಟೆ, ಲೋಟ, ಚಮಚ, ಕ್ಲಿಂಗ್ಸ್‌ ಫಿಲ್ಮ್ಸ್, ಊಟದ ಟೇಬಲ್‌ಗ‌ಳ ಮೇಲೆ ಹಾಸಲು ಬಳಸುವ ಹಾಳೆ, ಥರ್ಮಾಕೋಲ್‌ ಹಾಗೂ ಮೈಕ್ರೋಬಿಡ್‌ಗಳಿಂದ ತಯಾರಿಸಿದ ವಸ್ತುಗಳು. 

ನಿಷೇಧಿತ ಪ್ಲಾಸ್ಟಿಕ್‌ ಬಳಸುವವರಿಗೆ ಶಿಕ್ಷೆಯೇನು?: ಪ್ಲಾಸ್ಟಿಕ್‌ ನಿಷೇಧ ಆದೇಶವನ್ನು ಉಲ್ಲಂ ಸಿದವರಿಗೆ ಪರಿಸರ ಸಂರಕ್ಷಣಾ ಕಾಯ್ದೆಯಡಿಯಲ್ಲಿ 5 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ.ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. ಒಂದೊಮ್ಮೆ ದಂಡ ಪಾವತಿಸಲು ತಪ್ಪಿದ್ದಲ್ಲಿ ಹೆಚ್ಚುವರಿಯಾಗಿ ದಿನಕ್ಕೆ 5 ಸಾವಿರಷ್ಟು ದಂಡ ಕಟ್ಟಬೇಕಾಗುತ್ತದೆ. ಇನ್ನು ತಪ್ಪೆಸಗಿ ಶಿಕ್ಷೆಗೆ ಒಳಗಾದವರು ಮತ್ತೆ ತಪ್ಪು ಮಾಡಿದರೆ ಇಷ್ಟೇ ಪ್ರಮಾಣದ ದಂಎ ವಿಧಿಸಬಹುದಾಗಿದ್ದು, ಶಿಕ್ಷೆಯ ಪ್ರಮಾಣವನ್ನು 7 ವರ್ಷದವರೆಗೆ ವಿಸ್ತರಿಸಬಹುದಾಗಿದೆ. 

ರಾಜ್ಯದಾದ್ಯಂತ ಪಾಸ್ಟಿಕ್‌ ಮುಕ್ತ ದಸರಾ ಹಬ್ಬ ಆಚರಣೆಯ ಉದ್ದೇಶದಿಂದ ನಿಷೇಧಿತ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸುವಂತೆ ಹಾಗೂ ನಿಯಮ ಉಲ್ಲಂ ಸಿದವರಿಗೆ ಭಾರಿ ಪ್ರಮಾಣದ ದಂಡ ವಿಧಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು. 
-ಲಕ್ಷ್ಮಣ್‌, ಅಧ್ಯಕ್ಷರು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

* ವೆಂ. ಸುನೀಲ್‌ಕುಮಾರ್‌

ಟಾಪ್ ನ್ಯೂಸ್

Mahesh

Hubli; ಆಂತರಿಕ ಕಚ್ಚಾಟದಿಂದ ರಾಜ್ಯ ಸರ್ಕಾರ ಬಿದ್ದರೆ ನಮ್ಮ ಹೈಕಮಾಂಡ್..: ಮಹೇಶ ಟೆಂಗಿನಕಾಯಿ

Sagara: ತಮ್ಮ ವ್ಯಾಪ್ತಿಯಲ್ಲೇ ಕೆಲಸ ಮಾಡಲು ವಿಎಗಳಿಗೆ ಸೂಚನೆ; ಕಾಗೋಡು ಆಗ್ರಹ

Sagara: ತಮ್ಮ ವ್ಯಾಪ್ತಿಯಲ್ಲೇ ಕೆಲಸ ಮಾಡಲು ವಿಎಗಳಿಗೆ ಸೂಚನೆ; ಕಾಗೋಡು ಆಗ್ರಹ

15 ದಿನದಲ್ಲಿ‌ ಸಮಸ್ಯೆಗೆ ಸ್ಪಂದಿಸಿ.. ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಶಾಸಕ ಭೀಮಣ್ಣ‌ ನಾಯ್ಕ

15 ದಿನದಲ್ಲಿ‌ ಸಮಸ್ಯೆಗೆ ಸ್ಪಂದಿಸಿ.. ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಶಾಸಕ ಭೀಮಣ್ಣ‌ ನಾಯ್ಕ

Siruguppa: ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಪಡಿತರ ಅಕ್ಕಿ ವಶ

Siruguppa: ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಪಡಿತರ ಅಕ್ಕಿ ವಶ

India:ಭಾರತದಲ್ಲಿ ವಿದ್ಯುತ್‌ ಬಳಕೆ ಪ್ರಮಾಣ ಶೇ.9ರಷ್ಟು ಹೆಚ್ಚಳ;ಜೂನ್‌ ನಲ್ಲಿ 152 BU ಬಳಕೆ

India:ಭಾರತದಲ್ಲಿ ವಿದ್ಯುತ್‌ ಬಳಕೆ ಪ್ರಮಾಣ ಶೇ.9ರಷ್ಟು ಹೆಚ್ಚಳ;ಜೂನ್‌ ನಲ್ಲಿ 152 BU ಬಳಕೆ

NDWvsSAW; ಚೆನ್ನೈನಲ್ಲಿ ಹರಿಣಗಳ ಬೇಟೆಯಾಡಿದ ಟೀಂ ಇಂಡಿಯಾ; ಏಕೈಕ ಟೆಸ್ಟ್ ನಲ್ಲಿ ಭರ್ಜರಿ ಜಯ

INDWvsSAW; ಚೆನ್ನೈನಲ್ಲಿ ಹರಿಣಗಳ ಬೇಟೆಯಾಡಿದ ಟೀಂ ಇಂಡಿಯಾ; ಏಕೈಕ ಟೆಸ್ಟ್ ನಲ್ಲಿ ಭರ್ಜರಿ ಜಯ

Indian Films: ಮೊದಲ ದಿನವೇ 100 ಕೋಟಿ ಕೊಳ್ಳೆ ಹೊಡೆದ ಭಾರತೀಯ ಸಿನಿಮಾಗಳಿವು…

Indian Films: ಮೊದಲ ದಿನವೇ 100 ಕೋಟಿ ಕೊಳ್ಳೆ ಹೊಡೆದ ಭಾರತೀಯ ಸಿನಿಮಾಗಳಿವು…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road mishap: ವಿಶ್ವಕಪ್‌ ಜೋಶ್‌ನಲ್ಲಿ ಬೈಕ್‌ ಓಡಿಸಿ ಡಿವೈಡರ್‌ಗೆ ಢಿಕ್ಕಿ; ಸವಾರನ ಸಾವು

Road mishap: ವಿಶ್ವಕಪ್‌ ಜೋಶ್‌ನಲ್ಲಿ ಬೈಕ್‌ ಓಡಿಸಿ ಡಿವೈಡರ್‌ಗೆ ಢಿಕ್ಕಿ; ಸವಾರನ ಸಾವು

6

Bengaluru: ರಸ್ತೆ ಬದಿ ನಿಂತಿದ್ದ ಲಾರಿಗೆಬೈಕ್‌ ಡಿಕ್ಕಿ: ದುರ್ಮರಣ

4

ಸಾಲ ಪಡೆದು ವಂಚನೆ ಮಾಡಿದ್ದ ಯುವಕನ ಅಪಹರಣ: ಫಾರ್ಮ್ ಹೌಸ್ ನಲ್ಲಿರಿಸಿ ಹಲ್ಲೆ

Kidnap: ಮಹಿಳೆಯರಿಂದಲೇ ಯುವಕನ ಕಿಡ್ನ್ಯಾಪ್; 6 ಮಂದಿ ವಿರುದ್ಧ ಕೇಸ್‌ ‌

Kidnap: ಮಹಿಳೆಯರಿಂದಲೇ ಯುವಕನ ಕಿಡ್ನ್ಯಾಪ್; 6 ಮಂದಿ ವಿರುದ್ಧ ಕೇಸ್‌ ‌

2

Disease: ಡೆಂಘೀ ಜತೆ ಮಕ್ಕಳ ಕಾಡುತ್ತಿದೆ ಕಾಲು ಬಾಯಿ ರೋಗ!

MUST WATCH

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

ಹೊಸ ಸೇರ್ಪಡೆ

ಪುತ್ತೂರು: ಅಡಿಕೆ ಪಾಲದ ಮೇಲೆ ಜೀವ ಪಣಕ್ಕಿಟ್ಟು ನಡಿಗೆ!

ಪುತ್ತೂರು: ಅಡಿಕೆ ಪಾಲದ ಮೇಲೆ ಜೀವ ಪಣಕ್ಕಿಟ್ಟು ನಡಿಗೆ!

Mahesh

Hubli; ಆಂತರಿಕ ಕಚ್ಚಾಟದಿಂದ ರಾಜ್ಯ ಸರ್ಕಾರ ಬಿದ್ದರೆ ನಮ್ಮ ಹೈಕಮಾಂಡ್..: ಮಹೇಶ ಟೆಂಗಿನಕಾಯಿ

Sagara: ತಮ್ಮ ವ್ಯಾಪ್ತಿಯಲ್ಲೇ ಕೆಲಸ ಮಾಡಲು ವಿಎಗಳಿಗೆ ಸೂಚನೆ; ಕಾಗೋಡು ಆಗ್ರಹ

Sagara: ತಮ್ಮ ವ್ಯಾಪ್ತಿಯಲ್ಲೇ ಕೆಲಸ ಮಾಡಲು ವಿಎಗಳಿಗೆ ಸೂಚನೆ; ಕಾಗೋಡು ಆಗ್ರಹ

15 ದಿನದಲ್ಲಿ‌ ಸಮಸ್ಯೆಗೆ ಸ್ಪಂದಿಸಿ.. ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಶಾಸಕ ಭೀಮಣ್ಣ‌ ನಾಯ್ಕ

15 ದಿನದಲ್ಲಿ‌ ಸಮಸ್ಯೆಗೆ ಸ್ಪಂದಿಸಿ.. ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಶಾಸಕ ಭೀಮಣ್ಣ‌ ನಾಯ್ಕ

Siruguppa: ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಪಡಿತರ ಅಕ್ಕಿ ವಶ

Siruguppa: ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಪಡಿತರ ಅಕ್ಕಿ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.