ನಾಳಿನ ನಾಗರಿಕರಿಗೆ ಪರಿಸರ ಪಾಠ


Team Udayavani, Jan 29, 2018, 12:28 PM IST

naalina-nagar.jpg

ಬೆಂಗಳೂರು: ಮಕ್ಕಳ ಮನಸ್ಸು ಹಸಿ ಗೋಡೆಯಂತೆ, ಏನನ್ನೇ ಎಸೆದರೂ ತಡಮಾಡದೆ ಹಿಡಿದಿಟ್ಟುಕೊಳ್ಳುತ್ತದೆ. ಚಿಕ್ಕಂದಿನಲ್ಲಿ ಕಲಿಸಿದ್ದು ಕಡೆವರೆಗೂ ಉಳಿಯುತ್ತದೆ. ಹೀಗಾಗಿ ಇಂಥ ಎಳೆಯ ಮನಸ್ಸುಗಳಲ್ಲಿ ಹಸಿರು ಪ್ರೀತಿ ಹುಟ್ಟುಹಾಕಿ, ಪರಿಸರ ಕಾಳಜಿ ಮೂಡಿಸುವ ಉದ್ದೇಶದಿಂದ “ಅರ್ಥ್ವರ್ಮ್’ ಸಂಸ್ಥೆ ಸದ್ದಿಲ್ಲದೆ ಕಾರ್ಯನಿರ್ವಹಿಸುತ್ತಿದೆ.

ಕಳೆದ ತಿಂಗಳಷ್ಟೇ ಅಸ್ತಿತ್ವಕ್ಕೆ ಬಂದ ಅರ್ಥ್ವರ್ಮ್, ಗಿಡ ನೆಟ್ಟು ಬೆಳೆಸುವ ಕುರಿತು ಬಾಣಸವಾಡಿಯ ಮೈಡ್ರೀವ್‌ಗಾರ್ಡನ್‌ ಆವರಣದಲ್ಲಿ ಮಕ್ಕಳಿಗಾಗಿ ಕಾರ್ಯಾಗಾರ ಹಮ್ಮಿಕೊಂಡಿತ್ತು. ನಗರದ ವಿವಿಧ ಬಡಾವಣೆಯ ಚಿಣ್ಣರು ತಾರಸಿ ತೋಟದಲ್ಲಿ ಓಡಾಡುತ್ತಾ ಗೊಂಚಲರಳಿಸಿದ್ದ ಟೊಮೇಟೋ ಕುಂಡ, ಫ‌ಲಬಿಟ್ಟ ದಾಳಿಂಬೆ, ಸಪೋಟ ಗಿಡಗಳನ್ನು ಕುತೂಹಲದಿಂದ ನೋಡುತ್ತಿದ್ದರೆ, ಇತ್ತ ಸಂಸ್ಥೆಯ ಸಹ-ಸಂಸ್ಥಾಪಕಿ ಸ್ಮಿತಾ ಬನ್ಸಲ್‌ ಪರಿಸರ ಪಾಠ ಆರಂಭಿಸಿದರು.

ಗಿಡಗಳಿಂದಾಗುವ ಪ್ರಯೋಜನಗಳನ್ನು ಮಕ್ಕಳಿಗೆ ತಿಳಿಸಿ, ಗಿಡ ನೆಟ್ಟು ಬೆಳೆಸುವ ವಿಧಾನವನ್ನು ಎಳೆಯ ಮನಸ್ಸುಗಳಿಗೆ ವಿವರಿಸಿದರು. ರಾಸಾಯನಿಕಗಳನ್ನು ಬಳಸದೆ ಸಾವಯವ ರೀತಿಯಲ್ಲಿ ತರಕಾರಿಗಳನ್ನು ಮನೆಯ ಆವರಣ ಅಥವಾ ತಾರಸಿಯಲ್ಲಿ ಬೆಳೆಯುವುದರಿಂದ ಹೇಗೆ ಆರೋಗ್ಯಪೂರ್ಣ ಆಹಾರ ಸೇವಿಸಬಹುದು ಎಂಬುದನ್ನು ಮಕ್ಕಳ ಪೋಷಕರಿಗೂ ಮನವರಿಕೆ ಮಾಡಿಕೊಟ್ಟರು.

ಸಂಪನ್ಮೂಲ ವ್ಯಕ್ತಿ ಶರವಣಕುಮಾರ್‌, ಮಕ್ಕಳನ್ನು ತಾರಸಿ ತೋಟದಲ್ಲಿ ಸುತ್ತಾಡಿಸಿ ವೈವಿಧ್ಯಮಯ ತರಕಾರಿ, ಹಣ್ಣಿನ ಗಿಡಗಳನ್ನು ಪರಿಚಯಿಸಿದರು.ಬೀನ್ಸ್‌, ಬದನೆ, ಬೆಂಡೆಯಿಂದ ಹಿಡಿದು ಸೌತೆ, ಕುಂಬಳ, ಹಾಗಲಕಾಯಿ ವರೆಗೆ ಪ್ರತಿಯೊಂದರ ಕುರಿತು ಮಾಹಿತಿ ನೀಡಿದರು.

ಸರ್ವಸಂಬಾರದ ಎಲೆಯನ್ನು ಕಿವುಚಿ ಮೂಗಿಗೆ ಹಿಡಿದ ಕೆಲವರು ವಾಹ್‌ಎನ್ನುತ್ತಲೇ ಕಡುನೇರಳೆ ಬಣ್ಣದಕ್ಯಾಬೇಜನ್ನು ಕಣ್ಣರಳಿಸಿ ನೋಡುತ್ತಿದ್ದರು.ಕೆಲವರಿಗೆತಾವು ದಿನವೂ ತಿನ್ನುವಆಲೂಗಡ್ಡೆ, ಕ್ಯಾರೆಟ್‌, ಮೂಲಂಗಿ ಮಣ್ಣಿನೊಳಗೆ ಬೆಳೆಯುವಂಥವು ಎಂಬುದುಅಚ್ಚರಿಯ ವಿಷಯವಾಗಿತ್ತು.

ಎರಡನೇ ಹಂತದಲ್ಲಿ ಮಕ್ಕಳಿಗೆ ಪ್ರಾಯೋಗಿಕ ತರಬೇತಿ ಸಹ ನೀಡಲಾಯಿತು. ನೆಲದಲ್ಲಿಒಂದು ಬುಟ್ಟಿಯಷ್ಟು ತೆಂಗಿನ ನಾರಿನ ಪುಡಿ ಹರಡಿ ಅದಕ್ಕೆಎರೆಗೊಬ್ಬರ, ಬೇವಿನ ಹುಡಿ, ಹೊಂಗೆ ಹಿಂಡಿ, ಬೋನ್‌ ಮೀಲ್‌ ಇತ್ಯಾದಿಗಳನ್ನು ಸೇರಿಸಿ ಕೆಂಪುಮಣ್ಣನ್ನುಬೆರೆಸಿ ಗಿಡನೆಡುವುದಕ್ಕೆ ಬೇಕಾದ ಮಿಶ್ರಣವನ್ನು ಸಿದ್ಧಪಡಿಸುವ ಕೆಲಸದಲ್ಲಿಮಕ್ಕಳು ಉತ್ಸಾಹದಿಂದ ಬಾಗಿಯಾದರು.

ಮನೆಗಳಲ್ಲಿ ತ್ಯಾಜ್ಯ ಎಂದು ಬಿಸಾಡುವ ಪ್ಲಾಸ್ಟಿಕ್‌ ಬಾಟಲಿ ಅಥವಾ ಚೀಲಗಳನ್ನು ತರುವಂತೆ ಮುಂಚಿತವಾಗಿಯೇ ಸೂಚಿಸಲಾಗಿತ್ತು. ಪುಟಾಣಿಗಳು ಅಂತಹ ಬಾಟಲಿಗಳಲ್ಲಿ ಮಿಶ್ರಣವನ್ನುತುಂಬಿ ಲೆಟ್ಯೂಸ್‌, ಬದನೆ, ಚೆಂಡುಹೂವು ಮತ್ತು ತುಳಸಿ ಗಿಡಗಳನ್ನು ನೆಟ್ಟು ಸಂಭ್ರಮಿಸಿದರು.

ಪ್ಲಾಸ್ಟಿಕ್‌ ಬಾಟಲಿಗಳನ್ನು ಕತ್ತರಿಸಿ ನೇತಾಡುವ ಕುಂಡಗಳನ್ನಾಗಿ ಬಳಸುವ ವಿಧಾನವನ್ನು ತೋರಿಸಿಕೊಟ್ಟರು ಸಹ ಸಂಸ್ಥಾಪಕ ಎಂ.ಪ್ರಭುರೋಸ್‌ ತೋರಿಸಿಕೊಟ್ಟರು. ಗಿಡನೆಟ್ಟು ನೀರುಣಿಸಿದ ಬಳಿಕ ಮಕ್ಕಳು ಕುಂಡ-ಬಾಟಲಿಗಳನ್ನು ಅಲಂಕಾರ ಮಾಡುವಲ್ಲಿ ಮಕ್ಕಳು ನಿರತರಾದರು. ಬ್ರಷ್‌ ಹಿಡಿದು ಬಣ್ಣ ಬಳಿಯತೊಡಗಿದರೆ ಪೋಷಕರೂ ಕೈಜೋಡಿಸಿ ಬಾಟಲಿಗೆ ರಿಬ್ಬನ್‌ ಬಿಗಿದು ಇನ್ನಷ್ಟು ಸುಂದರಗೊಳಿಸಿದರು.

ಗಿಡಗಳನ್ನು ನಾಜೂಕಿನಿಂದ ಬೆಳೆಸುವ ಕನಸು.ನ್ಯೂ ಮಿಲೆನಿಯಮ್‌ ಶಾಲೆಯ ವಿದ್ಯಾರ್ಥಿ ಆರುಷ್‌ಗೆ. ಮುಂದೊಂದು ದಿನ ಕೃಷಿಕನಾಗುವ ಹಂಬಲ.ಡಾ. ವಿಕ್ರಮ್‌ ಮತ್ತು ಶು¸‌Åತಾ ದಂಪತಿಗೆ, ತಮ್ಮ ಮಕ್ಕಳಲ್ಲಿ ಹಸಿರುಪ್ರೀತಿಯನ್ನು ಬೆಳೆಸುವ ಕಾಳಜಿ.ಅದಕ್ಕಾಗಿಯೇ ಸುಮೇರು ಮತ್ತು ಸುಧನ್ವರನ್ನುಕರೆತಂದಿದ್ದರು. ಎಂಬಿಎ ಬಳಿಕ ಕೈತುಂಬ ಸಂಬಳದಉದ್ಯೋಗದಲ್ಲಿದ್ದ ಸ್ಮಿತಾ ಮತ್ತುಐಟಿ ಕಂಪೆನಿಗೆ ವಿದಾಯ ಹೇಳಿರುವ ಪ್ರಭು ಇಬ್ಬರಿಗೂ ಪರಿಸರರಕ್ಷಣೆಯ ಬಗ್ಗೆ ಹೆಚ್ಚಿನ ಒಲವು.

ಪ್ರವಾಸೋದ್ಯಮದ ನೆಪದಲ್ಲಿಅರಣ್ಯ ಗರ್ಭವನ್ನೂ ಹಿಮಶಿಖರಗಳನ್ನೂ ಬಿಡದೆ ಎಲ್ಲೆಂದರಲ್ಲಿತಾಂಡವಾಡುತ್ತಿರುವ ಪ್ಲಾಸ್ಟಿಕ್‌ ತ್ಯಾಜ್ಯದ ಬಗ್ಗೆಆತಂಕ.
ಪ್ರಕೃತಿಯ ಸಾಸ್ಥ್ಯದ ಜತೆಗೆಜನತೆಯ ಆರೋಗ್ಯವನ್ನೂ ಕಾಪಾಡಬೇಕಾದರೆ ಮಕ್ಕಳನ್ನು ಪರಿಸರ ಸಾಕ್ಷರರನ್ನಾಗಿರೂಪಿಸುವುದೊಂದೇ ದಾರಿ ಎಂದು ಮನಗಂಡಿರುವಅವರು ಈ ನಿಟ್ಟಿನಲ್ಲಿ ಹತ್ತು-ಹಲವು ಕಾರ್ಯಕ್ರಮಗಳನ್ನು ಸಾಕಾರಗೊಳಿಸಲು ಅಣಿಯಾಗುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ- www.earthwormindia.com ಸಂಪರ್ಕಿಸಬಹುದು.

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

1

Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.