ಸಮಾನತೆ ಆಶಯವಾಗಬೇಕು: ನ್ಯಾ. ಜೋಸೆಫ್ ಕುರಿಯನ್
Team Udayavani, Sep 17, 2017, 11:09 AM IST
ಬೆಂಗಳೂರು: ಪ್ರತಿಯೊಬ್ಬ ನಾಗರಿಕನೂ ಸಮಾನತೆ ಮತ್ತು ಘನತೆಯಿಂದ ಬದುಕಲು ಅವಕಾಶ ಸಿಗಬೇಕು ಎನ್ನುವುದು ಕಾನೂನು ಕಲಿಕೆಯ ಆಶಯವಾಗಿರಬೇಕು ಎಂದು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಜೋಸೆಫ್ ಕುರಿಯನ್ ಅಭಿಪ್ರಾಯಪಟ್ಟರು.
ಸೇಂಟ್ ಜೊಸೇಫ್ ಕಾಲೇಜಿನಲ್ಲಿ ಶನಿವಾರ ನೂತನ ಕಾನೂನು ಕಾಲೇಜು ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ಕಲಿಕೆಯ ಉದ್ದೇಶ ವೃತ್ತಿಗೆ ಸೀಮಿತವಾಗದೇ ಒಬ್ಬ ಜವಾಬ್ದಾರಿಯುತ ನಾಗರಿಕನ್ನಾಗಿಸಬೇಕು. ಪ್ರತಿ ಪ್ರಜೆಯೂ ತಾರತಮ್ಯ ರಹಿತ ಮತ್ತು ಹಕ್ಕಿನ ಬದುಕು ನಡೆಸುವಂತಾಗುವುದೇ ಕಾನೂನು ಮತ್ತು ನ್ಯಾಯದ ನಿಜವಾದ ಆಶಯ ಎಂದು ಹೇಳಿದರು.
ಅವ್ಯವಸ್ಥೆ ಸರಿಪಡಿಸಿದ ಮಾತ್ರಕ್ಕೆ ಕಾನೂನಿನ ಆಶಯ ಈಡೇರುವುದಿಲ್ಲ. ಅವ್ಯವಸ್ಥೆ ಹೋಗಿ ಸುವ್ಯವಸ್ಥೆ ಬಂದಾಗ ನ್ಯಾಯ ಸ್ಥಾಪಿಸಲ್ಪಡುತ್ತದೆ. ಈ ಅಂಶಗಳನ್ನು ಕಾನೂನು ಪದವಿಧರರು ಸದಾ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆರ್ಚ್ ಬಿಷಪ್ ಬರ್ನಾಡ್ ಮೊರಾಸ್, ಶಾಸಕ ಎನ್.ಎ. ಹ್ಯಾರಿಸ್, ಕರ್ನಾಟಕ ರಾಜ್ಯ ಕಾನೂನು ವಿವಿ ಹಂಗಾಮಿ ಕುಲಪತಿ ಡಾ. ಚಿದಾನಂದರೆಡ್ಡಿ, ಹಿರಿಯ ವಕೀಲರಾದ ಜಯಕುಮಾರ್ ಎಸ್. ಪಾಟೀಲ್, ವೈ.ಆರ್. ಸದಾಶಿವರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Bengaluru: ಏರ್ಪೋರ್ಟ್ ಟಿ-2ಗೆ ವರ್ಟಿಕಲ್ ಗಾರ್ಡನ್ ರಂಗು
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.