ಮಣಿಪಾಲ್ ಗ್ಲೋಬಲ್ ಜತೆ ಈಕ್ವಿಫ್ಯಾಕ್ಸ್ ಒಪ್ಪಂದ
Team Udayavani, Oct 6, 2018, 9:32 AM IST
ಬೆಂಗಳೂರು: ದೇಶದಲ್ಲಿ ಮುಂಚೂಣಿ ಶಿಕ್ಷಣ ಸೇವೆ ಒದಗಿಸುತ್ತಿರುವ ಪ್ರತಿಷ್ಠಿತ ಮಣಿಪಾಲ್ ಗ್ಲೋಬಲ್ ಎಜುಕೇಷನ್ ಸರ್ವೀಸಸ್ (ಎಂಎಜಿಇ)ನ ವೃತ್ತಿಪರ ಕಲಿಕಾ ಸಂಸ್ಥೆ ಮಣಿಪಾಲ್ ಪ್ರೊಲರ್ನ್ ಹಾಗೂ ಜಾಗತಿಕ ಮಟ್ಟದ ಮಾಹಿತಿ ಪರಿಹಾರ ಕಂಪನಿ ಈಕ್ವಿಫ್ಯಾಕ್ಸ್ ಇಂಕ್ ಗುರುವಾರ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿವೆ.
ನಗರದ ಹೋಟೆಲೊಂದರಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಣಿಪಾಲ್ ಗ್ಲೋಬಲ್ ಎಜುಕೇಷನ್ ಸರ್ವೀಸಸ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರವಿ ಪಂಚನಾಥನ್ ಹಾಗೂ ಈಕ್ವಿಫ್ಯಾಕ್ಸ್ ಕ್ರೆಡಿಟ್ ಇನ್ಮಾರೆ¾àಷನ್ ಸರ್ವೀಸಸ್ ಪ್ರೈ.ಲಿ., ವ್ಯವಸ್ಥಾಪಕ ನಿರ್ದೇಶಕ (ಕಂಟ್ರಿ ಹೆಡ್-ಭಾರತ) ಮತ್ತು ಎಂಇಎ ನಾಣಯ್ಯ ಕಲೆಂಗಡ ಅವರು ಒಪ್ಪಂದ ಪತ್ರ ವಿನಿಮಯ ಮಾಡಿಕೊಂಡರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂಎಜಿಇನ ರವಿ ಪಂಚನಾಥನ್ ಅವರು, ಬ್ಯಾಂಕಿಂಗ್ ಫೈನಾನ್ಷಿಯಲ್ ಸರ್ವೀಸಸ್ ಆ್ಯಂಡ್ ಇನ್ಶೂರೆನ್ಸ್ (ಬಿಎಫ್‌ಎಸ್‌ಐ) ಕ್ಷೇತ್ರಕ್ಕೆ ಅಗತ್ಯವಿರುವ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ ಸ್ಕಿಲ್ಸ್‌ನಲ್ಲಿ ವೃತ್ತಿಪರರನ್ನು ಸಿದ್ಧಪಡಿಸುವುದು ಈ ಒಡಂಬಡಿಕೆಯ ಪ್ರಮುಖ ಉದ್ದೇಶ. ಮಣಿಪಾಲ್ ಪ್ರೊಲರ್ನ್ನಲ್ಲಿ ಡೇಟಾ ಸೈನ್ಸ್ ಪ್ರೋಗ್ರಾಮ್‌ಗಳಿಗೆ ನೋಂದಣಿ ಮಾಡಿಸಿಕೊಂಡಿರುವ ಎಲ್ಲ ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗೆ ಇದರ ಪ್ರಯೋಜನ ದೊರೆಯಲಿದೆ. ಒಪ್ಪಂದದ ಮೂಲಕ ಮಣಿಪಾಲ್ ಗ್ಲೋಬಲ್ ತನ್ನ ವಿದ್ಯಾರ್ಥಿಗಳ ಕಲಿಕಾ ಅನುಭವವನ್ನು ಮೇಲ್ದರ್ಜೆಗೇರಿಸಲಿದೆ ಹಾಗೂ ಇದಕ್ಕೆ ಪೂರಕವಾದ ಕೇಸ್ ಸ್ಟಡೀಸ್, ಇತರ ಉದ್ದಿಮೆ ಸಂಬಂಧಿತ ಮಾಹಿತಿಗಳನ್ನು ನೀಡಲಿದೆ.
ಪ್ರಸ್ತುತ ಡೇಟಾ ಅನಾಲಿಟಿಕ್ಸ್‌ಗೆ ವೃತ್ತಿಪರರ ಅಗತ್ಯತೆ ಹೆಚ್ಚಿದೆ. ಬಿಎಫ್‌ಎಸ್‌ಐ ಕ್ಷೇತ್ರದಲ್ಲಿ ಶೇ.40 ರಿಂದ 45 ರಷ್ಟು ವೃತ್ತಿಪರರು ಬೇಕಾಗಿದ್ದಾರೆ. ಈ ಬೇಡಿಕೆಯ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈಕ್ವಿಫ್ಯಾಕ್ಸ್ ನಡುವಿನ ಒಪ್ಪಂದ ನೆರವಾಗಲಿದೆ. ಉದ್ಯಮಕ್ಕೆ ಅಗತ್ಯವಿರುವ ಡೇಟಾ ಸೈನ್ಸ್ ಮತ್ತು ಡೇಟಾ ಅನಾಲಿಟಿಕ್ಸ್ ಬಗ್ಗೆ ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗುತ್ತದೆ. ಬ್ಯಾಂಕಿಂಗ್ ಡೊಮೇನ್‌ನಲ್ಲಿ ಅನಾಲಿಟಿಕ್ಸ್ ನಿರ್ವಹಣೆ ಮಾಡುವ ಕುರಿತು ತಾಂತ್ರಿಕ ಕೌಶಲ್ಯವನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ವೃತ್ತಿಪರರನ್ನಾಗಿ ತಯಾರು ಮಾಡಲಿದೆ.
ಒಪ್ಪಂದ: ಒಪ್ಪಂದದ ಪ್ರಕಾರ ಈಕ್ವಿಫ್ಯಾಕ್ಸ್ ಇನ್ನು ಮುಂದೆ ನಿಯಮಿತ ವೆಬಿನಾರ್ ಮತ್ತು ತರಗತಿ ಬೋಧನೆಯನ್ನು ನಡೆಸಿಕೊಡಲಿದೆ. ಈ ತರಗತಿಗಳು ಮಣಿಪಾಲ್ ಗ್ಲೋಬಲ್‌ನ ವಿದ್ಯಾರ್ಥಿಗಳಿಗೆ ಬಿಎಫ್‌ಎಸ್‌ಐ ಉದ್ಯಮದ ಡೇಟಾ ಅನಾಲಿಟಿಕ್ಸ್ ಬಗ್ಗೆ ಸೂಕ್ತ ತರಬೇತಿ ನೀಡಲಿವೆ. ಇಷ್ಟೇ ಅಲ್ಲದೆ, ಈಕ್ವಿಫ್ಯಾಕ್ಸ್ ಇಂಡಿಯಾ ಸಂಸ್ಥೆಯು ತನ್ನ ಅನಾಲಿಟಿಕ್ಸ್ ತಂಡಕ್ಕೆ ಮಣಿಪಾಲ್ ಪ್ರೊಲರ್ನ್ ವಿದ್ಯಾರ್ಥಿಗಳನ್ನು ನಿರಂತರವಾಗಿ ಸೇರ್ಪಡೆ ಮಾಡಿಕೊಳ್ಳಲಿದೆ. ಇತ್ತೀಚೆಗೆ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಈಕ್ವಿಫ್ಯಾಕ್ಸ್ ಡೇಟಾ ಸೈನ್ಸ್‌ನಲ್ಲಿ ಪಿಜಿ ಡಿಪ್ಲೊಮಾ ಪಡೆದ ನಾಲ್ವರು ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ಒದಗಿಸಿದೆ ಎಂದು ಅವರು ವಿವರಿಸಿದರು.
ಈಕ್ವಿಫ್ಯಾಕ್ಸ್ ವ್ಯವಸ್ಥಾಪಕ ನಿರ್ದೇಶಕ ನಾಣಯ್ಯ ಕಲೆಂಗಡ ಅವರು ಮಣಿಪಾಲ್ ಗ್ಲೋಬಲ್ ಎಜುಕೇಷನ್ ಸರ್ವೀಸಸ್ ಜತೆಗೆ ಒಡಂಬಡಿಕೆ ಮಾಡಿಕೊಳ್ಳುತ್ತಿರುವುದಕ್ಕೆ ಸಂತಸವೆನಿಸುತ್ತಿದೆ. ಇಂದಿನ ದಿನಗಳಲ್ಲಿ ಪದವಿ ಜೊತೆ ಸೂಕ್ತ ಕೌಶಲ್ಯದ ಅಗತ್ಯವಿರುತ್ತದೆ. ಈಗಾಗಲೇ ಡೇಟಾ ಸೈನ್ಸಸ್‌ಗೆ ಸಾಕಷ್ಟು ಬೇಡಿಕೆ ಇದೆ. ಡೇಟಾ ಮತ್ತು ಅನಾಲಿಟಿಕ್ಸ್‌ನಲ್ಲಿ ಜಾಗತಿಕ ಮಟ್ಟದಲ್ಲಿ ಅಗ್ರ ಸ್ಥಾನದಲ್ಲಿರುವ ಈಕ್ವಿಫ್ಯಾಕ್ಸ್ ನೇಮಕಾತಿಗೆ ವೇದಿಕೆಯನ್ನು ಸೃಷ್ಟಿ ಮಾಡುತ್ತಿದೆಯಲ್ಲದೆ, ಉದ್ಯಮಕ್ಕೆ ಅಗತ್ಯವಾದ ರೀತಿ-ನೀತಿಗಳನ್ನು, ಪಠ್ಯಕ್ರಮಗಳನ್ನು ಅಳವಡಿಸಿ ಅದಕ್ಕೆ ಪೂರಕವಾದ ವಿದ್ಯಾರ್ಥಿಗಳನ್ನು ತಯಾರು ಮಾಡುವ ಕೆಲಸ ಮಾಡಲಿದೆ.
ಮೂರು ಪ್ರಮುಖ ಅಂಶಗಳು: ಅನಾಲಿಟಿಕ್ಸ್ ಕ್ಷೇತ್ರದಲ್ಲಿ ಈಕ್ವಿಫ್ಯಾಕ್ಸ್ ಮೂರು ಪ್ರಮುಖ ಅಂಶಗಳಾದ ದೃಢವಾಡ ಮಾಹಿತಿ (ರೋಬಸ್ಟ್ ಡೇಟಾ), ವಿಶ್ಲೇಷಣೆಗಳು (ಅನಾಲಿಟಿಕ್ಸ್) ಮತ್ತು ಸುಧಾರಿತ ತಂತ್ರಜ್ಞಾನ (ಅಡ್ವಾನ್ಸ್‌ಡ್ ಟೆಕ್ನಾಲಜಿ)ವನ್ನು ವಾಣಿಜ್ಯೋದ್ಯಮಗಳಿಗೆ ಪೂರೈಕೆ ಮಾಡುತ್ತಿದೆ. ಈ ಕ್ರಿಯಾತ್ಮಕ ಒಳನೋಟಗಳ ಪೂರೈಕೆಯಿಂದ ಕಂಪನಿ ಗ್ರಾಹಕರನ್ನು ಸೆಳೆಯಲು, ಸಾಲ ವಿಸ್ತರಣೆ ಮಾಡಲು, ಸಾಲ ತಗ್ಗಿಸುವಿಕೆ, ವಂಚನೆ ತಪ್ಪಿಸಲು ಸಹಾಯಕವಾಗಲಿದೆ ಹಾಗೂ ನಿರ್ವಹಣೆ ಬಂಡವಾಳವನ್ನು ಉತ್ತಮಗೊಳಿಸುವಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ವಿದ್ಯಾರ್ಥಿಗಳನ್ನು ಶಕ್ತಗೊಳಿಸಲಿದೆ. ಆ ಮೂಲಕ ಬಿಎಫ್‌ಎಸ್‌ಐ ಅನಾಲಿಟಿಕ್ಸ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ಕೌಶಲ್ಯ ವೃದ್ಧಿಪಡಿಸಿಕೊಳ್ಳಬಹುದಾಗಿದೆ ಹಾಗೂ ವಿಶೇಷ ಜ್ಞಾನವನ್ನು ಸಂಪಾದಿಸಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಮಣಿಪಾಲ್ ಗ್ಲೋಬಲ್ ಹಿರಿಯ ಅಧಿಕಾರಿ ಇದು 11 ತಿಂಗಳ ಪಿಜಿ ಡಿಪ್ಲೊಮಾ ವಸತಿ ಶಿಕ್ಷಣ ತರಬೇತಿಯಾಗಿದೆ. ಪದವಿ ಪಡೆದ ವಿದ್ಯಾರ್ಥಿಗಳು ಹಾಗೂ ವೃತ್ತಿಪರರು ತರಬೇತಿ ಪಡೆಯಬಹುದಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಕ್ಯಾಂಪಸ್‌ನಲ್ಲಿ ವಾರಾಂತ್ಯದ ಪಾರ್ಟ್‌ಟೈಂ ಕೋರ್ಸ್ ತರಬೇತಿಯನ್ನು ವೃತ್ತಿಯಲ್ಲಿರುವವರು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.