ಸ್ಕೈವಾಕ್ ಹತ್ತಲು ಎಸ್ಕಲೇಟರ್ ನಿರ್ಮಾಣ
Team Udayavani, Mar 22, 2022, 1:08 PM IST
ಬೆಂಗಳೂರು: ನಗರದ ಸ್ಕೈ ವಾಕ್‌ಗಳಲ್ಲಿ ಮೆಟ್ಟಿಲು ಹತ್ತಿ ಇಳಿಯಲು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಬಿಬಿಎಂಪಿ ನಗರದಲ್ಲಿ ಪಿಪಿಪಿ ಮಾಡೆಲ್ ಮೂಲಕ ಎಸ್ಕಲೇಟರ್ ನಿರ್ಮಿಸಲು ಮುಂದಾಗಿದೆ.
ಸಾರ್ವಜನಿಕ ಸಹಭಾಗಿತ್ವದಲ್ಲಿ ಬಿಬಿಎಂಪಿ ವ್ಯಾಪ್ತಿ ಯ ಸ್ಕೈ ವಾಕ್‌ಗಳಲ್ಲಿ ಎಸ್ಕಲೇಟರ್ ಅಳವಡಿಸಲು ಪಾಲಿಕೆ ಮುಂದಾಗಿದ್ದು, ಪ್ರಾಯೋಗಿಕವಾಗಿ ರಾಷ್ಟ್ರೀ ಯ ಕ್ಷಯ ರೋಗ ಸಂಸ್ಥೆ ಮುಂಭಾಗದ ಸ್ಕೈವಾಕ್ ಎರಡು ಭಾಗದಲ್ಲಿ ಎಸ್ಕಲೇಟರ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ.
ಮುಂದಿನ ಒಂದು ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಸಿದ್ಧವಾಗಲಿದೆ. ರಾಷ್ಟ್ರೀಯ ಕ್ಷಯ ರೋಗ ಸಂಸ್ಥೆ ಸಮೀಪದ ಸ್ಕೈ ವಾಕ್‌ನಲ್ಲಿ ಎರಡು ಕಡೆಯಲ್ಲಿ ಎಸ್ಕಲೇಟರ್ ನಿರ್ಮಾ ಣ ವಾಗುತ್ತಿದೆ. 5.5 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಇದರ ಸಂಪೂರ್ಣ ವೆಚ್ಚವನ್ನು ಪಿಪಿಪಿ ಮಾಡೆಲ್ ಮೂಲಕ ಅಕಾರ್ಡ್ ಡಿಸ್ಪೈಸ್ ಪ್ರೈವೇ ಟ್ ಲಿಮಿಟೆಡ್ ಭರಿಸಲಿದೆ. ಮುಂದಿನ 20 ವರ್ಷ ಗಳ ಇದರ ನಿರ್ವಹಣೆ ಜವಾಬ್ದಾರಿ ಈ ಸಂಸ್ಥೆ ಮಾಡ ಲಿದೆ. ಇಲ್ಲಿನ ಜಾಹೀರಾತಿನಲ್ಲಿ ಬರುವ ಆದಾಯ ಖಾಸಗಿ ಸಂಸ್ಥೆಗೆ ಹೋಗಲಿದೆ. ಬಿಬಿಎಂಪಿ ಯಿಂದ ಯಾವುದೇ ರೀತಿಯಾದ ಅನುದಾನ ಎಸ್ಕಲೇಟರ್ ನಿರ್ಮಾಣಕ್ಕೆ ಬಳಕೆಯಾಗುತ್ತಿಲ್ಲ. ಈ ಮಾರ್ಗದಲ್ಲಿ ವಿಶೇಷವಾಗಿ ಬೆಳಗ್ಗೆ ಮತ್ತು ಸಂಜೆ ಶಾಲಾ ಕಾಲೇಜು ಮತ್ತು ಕಚೇರಿಗಳು ಆರಂಭವಾಗುವ ಮುಂಚೆ ಮತ್ತು ಮುಗಿದ ನಂತರ ವಾಹನ ದಟ್ಟಣೆ ಹೆಚ್ಚಾಗಿ ಪಾದಚಾರಿಗಳು ರಸ್ತೆ ದಾಟಲು 10ರಿಂದ 15 ನಿಮಿಷಗಳ ಕಾಲ ಕಾಯಬೇಕಾಗುತ್ತದೆ.
ಸ್ಕೈ ವಾಕ್‌ನಲ್ಲಿ ಮೆಟ್ಟಿಲು ಹತ್ತಬೇಕಾಗುತ್ತದೆ ಎಂಬ ಕಾರಣಕ್ಕೆ ಹಿರಿಯ ನಾಗರಿಕರು ಹಾಗೂ ಮಹಿಳೆಯರು ಸ್ಕೈವಾಕ್ ಬಳಕೆ ಮಾಡುತ್ತಿಲ್ಲ. ಹೀಗಾಗಿ, ಎಸ್ಕಲೇಟರ್ ಅಳವಡಿಕೆ ಜನರಿಗೆ ಉಪಯೋಗವಾಗಲಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.
ಸ್ಕೈವಾಕ್ ಬಳಕೆ ಇಲ್ಲ : ಕ್ಷಯ ರೋಗ ಸಂಸ್ಥೆಯ ಸಮೀಪದ ಸ್ಕೈ ವಾಕ್‌ನಲ್ಲಿ ಸುಮಾರು 30ನಿಮಿಷದ ಅವಧಿಯಲ್ಲಿ ಸುಮಾರು 30ರಿಂದ 40 ಪ್ರಯಾಣಿಕರು ಬಸ್ಸುನಿಂದ ಇಳಿದಿದ್ದಾರೆ. ಅವರಲ್ಲಿ ಯಾರೊಬ್ಬರೂ ಸ್ಕೈ ವಾಕ್ ಬಳಕೆ ಮಾಡಿಲ್ಲ. ಅವರಲ್ಲಿ 15ರಿಂದ 40ವರ್ಷದವರು ಅಧಿಕವಾಗಿದ್ದಾರೆ. ಸ್ಕೈ ವಾಕ್‌ನ ಒಂದು ತುದಿಯಿಂದ ಇನ್ನೊಂದು ತುದಿಗೆ ಸುಮಾರು 70ಕ್ಕೂ ಅಧಿಕ ಮೆಟ್ಟಿಲು ಇವೆ. ಇದನ್ನು ಬಳಸಿಕೊಂಡು ರಸ್ತೆ ದಾಟಲು ಸುಮಾರು 5ರಿಂದ 6 ನಿಮಿಷ ಸಾಕು. ಆದರೆ ಪ್ರಯಣಿಕರು ಮಾತ್ರ 10ರಿಂದ 15 ನಿಮಿಷ ಕಾದು ರಸ್ತೆ ದಾಟುತ್ತಾರೆ ಎಂದು ತಿಳಿಸುತ್ತಾರೆ.
ಸಾಮಾನ್ಯವಾಗಿ ಈ ಮಾರ್ಗದಲ್ಲಿ ಸ್ಕೈ ವಾಕ್ ಇದ್ದರೂ ಉಪಯೋಗಿಸುವವರ ಸಂಖ್ಯೆ ತೀರ ಕಡಿಮೆ ಇದೆ. ಏಕೆಂದರೆ ಸುಮಾರು 70ಕ್ಕೂ ಅಧಿಕ ಮೆಟ್ಟಿಲು ಹತ್ತಿ ಇಳಿಯುವುದು ನಮ್ಮಂತಹ ಹಿರಿಯ ನಾಗರಿಕರಿಗೆ ಸಾಧ್ಯವಾಗದು. ಈ ಹಿನ್ನೆಲೆಯಲ್ಲಿ ನಾವು ರಸ್ತೆ ದಾಟಿಕೊಂಡೇ ಹೋಗಬೇಕಾಗುತ್ತದೆ. ಇದೀಗ ಎಸ್ಕಲೇಟರ್ ನಿರ್ಮಾಣವಾಗುತ್ತಿರುವುದು ಸಂತಸ. –ಸೋಮನಾಥ, ಪಾದಚಾರಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ಪಿಪಿಪಿ ಮಾಡೆಲ್ ಮೂಲಕ ರಾಷ್ಟ್ರೀಯ ಕ್ಷಯ ರೋಗ ಸಂಸ್ಥೆ ಸಮೀಪದ ಸ್ಕೈ ವಾಕ್‌ಗೆ ಎಸ್ಕಲೇಟರ್ ಅಳವಡಿಸಲಾಗುತ್ತದೆ. ಇದರ ನಿರ್ವಹಣೆ ಜವಾಬ್ದಾರಿ ಹಾಗೂ ಕಾಮಗಾರಿ ವೆಚ್ಚವನ್ನು ಖಾಸಗಿ ಸಂಸ್ಥೆ ವಹಿಸಲಿದೆ. ಮೊದಲ ಪ್ರಾಯೋಗಿಕ ಯೋಜನೆಯಾಗಿ ಆಯ್ಕೆ ಮಾಡಿದ್ದು, ಇದು ಯಶಸ್ವಿಯಾದರೆ ಉಳಿದೆಡೆಯೂ ಈ ಯೋಜನೆಯ ಮೂಲಕ ಎಸ್ಕಲೇಟರ್ ನಿರ್ಮಿಸುವ ಚಿಂತನೆಯಿದೆ. – ಪ್ರವೀಣ್ ಲಿಂಗಯ್ಯ, ಸಹಾಯ ಎಂಜಿನಿಯರ್
–ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.