ಈಶ್ವರಪ್ಪ, ನಾನು ಗುಡ್ ಫ್ರೆಂಡ್ಸ್
Team Udayavani, Feb 9, 2018, 6:35 AM IST
ವಿಧಾನ ಪರಿಷತ್: ಈಶ್ವರಪ್ಪ ನಾನು ಬಹಿರಂಗವಾಗಿ ಬೈದಾಡಿಕೊಳ್ಳುತ್ತೇವೆ. ಆಂತರಿಕವಾಗಿ ಇಬ್ಬರೂ ಆತ್ಮೀಯ ಸ್ನೇಹಿತರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ ಮಾತು ಸದನವನ್ನು ನಗೆಗಡಲಲ್ಲಿ ತೇಲಿಸಿತ್ತು.
ಬಿ.ಜಿ.ಬಣಕಾರ್ ಅವರ ಸಂತಾಪ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಸಿದ್ದರಾಮಯ್ಯ, ಬಣಕಾರ್ ಅವರು ನೇರ ನುಡಿಯವರಾಗಿದ್ದರು. ಈಗಿನವರ ಹಾಗೆ ಹಿಂದೊಂದು ಮುಂದೊಂದು ಮಾತನಾಡುತ್ತಿರಲಿಲ್ಲ ಎಂದು ಈಶ್ವರಪ್ಪ ಅವರತ್ತ ನೋಡುತ್ತಾ ಹೇಳಿದರು. ಆಗ ಈಶ್ವರಪ್ಪ ತಕ್ಷಣ ಎದ್ದು ನಿಂತರು. ಆಗ ಸಿದ್ದರಾಮಯ್ಯ, ಅಯ್ಯೋ ನೀನ್ಯಾಕಪ್ಪ ಏಳ್ತಿಯಾ, ಕುಂಬಳ ಕಾಯಿ ಕಳ್ಳ ಅಂದ್ರೆ ಹೆಗಲ್ ಮುಟ್ಕೊಳ್ತಿಯಲ್ಲಾ ಅಂದರು. ನೀವು ನನ್ನ ಕಡೆ ಕೈ ಮಾಡಿದ್ದಕ್ಕೆ ಎದ್ದೆ. ಅವರ ಬಗ್ಗೆ ಇರುವುದನ್ನೇ ಹೇಳಿದ್ದೀರಿ ಎಂದರು.
ಆಗ ಸಿದ್ದರಾಮಯ್ಯ ಅವರು, ನಾನು ಈಶ್ವರಪ್ಪ ಒಳ್ಳೆಯ ಸ್ನೇಹಿತರು. ಬಹಿರಂಗವಾಗಿ ಸುಮ್ನೆ ಬೈದಾಡಿಕೊಳ್ತೀವಿ. ಆಂತರಿಕವಾಗಿ ಇಬ್ಬರೂ ಒಳ್ಳೆಯ ಸ್ನೇಹಿತರು. ಹೌದೆನಲ್ಲಪ್ಪಾ ಈಶ್ವರಪ್ಪ, ನೀನೂ ಎಲ್ಲರಿಗೂ ಇದೆ° ಹೇಳು ಎಂದರು. ಈಶ್ವರಪ್ಪ ಹೌದು ಎಂದು ತಲೆಯಾಡಿಸಿದರು. ಆಗ ಮಧ್ಯ ಪ್ರವೇಶಿಸಿದ ಬಿಜೆಪಿಯ ಕೆ.ಬಿ. ಶಾಣಪ್ಪ, ಇಬ್ಬರೂ ಸೇರಿ ನಮ್ಮನ್ನು ದಿಕ್ಕು ತಪ್ಪಿಸುತ್ತಿದ್ದೀರಿ ಎಂದು ಕಿಚಾಯಿಸಿದರು. ಹಾಗೆ ಭಾವಿಸಿಕೊಳ್ಳಬಹುದು ಎಂದು ಸಿಎಂ ಹೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.