ಈಶ್ವರಪ್ಪ ಪಿಎ ಕಿಡ್ನಾಪ್‌ಗೆ ಯತ್ನಿಸಿದ್ದವ ಪರಾರಿ


Team Udayavani, Jul 10, 2017, 11:36 AM IST

eshwarappa-pa-prashanth.jpg

ಬೆಂಗಳೂರು/ಕೆ.ಆರ್‌.ಪುರ: ಮಾಜಿ ಉಪಮುಖ್ಯಮಂತ್ರಿ ಮತ್ತು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್‌ ಮೇಲಿನ ಹಲ್ಲೆ ಮತ್ತು ಅಪಹರಣ ಪ್ರಕರಣದ ಆರೋಪಿಯೊಬ್ಬ ಮೂತ್ರ ವಿಸರ್ಜನೆ ನೆಪದಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ  ಕೆ.ಆರ್‌.ಪುರಂದ ಐಟಿಐ ಮೈದಾನದ ಬಳಿ ಶನಿವಾರ ರಾತ್ರಿ ನಡೆದಿದೆ.

ಮಾರತ್‌ಹಳ್ಳಿಯ ಮಂಜುನಾಥ್‌ನಗರ ನಿವಾಸಿ ಪ್ರಶಾಂತ್‌ ಕುಮಾರ್‌ ಪರಾರಿಯಾದ ಆರೋಪಿ. ಶನಿವಾರ ರಾತ್ರಿ ಪ್ರಕರಣವೊಂದರ ಸಂಬಂಧ ಸ್ಥಳ ಪರಿಶೀಲನೆಗೆ ಕರೆದೊಯ್ದಾಗ ಪ್ರಶಾಂತ್‌ ತಪ್ಪಿಸಿಕೊಂಡಿದ್ದಾನೆ.  ಪ್ರಶಾಂತ್‌ ಕುಮಾರ್‌ ಪತ್ತೆಗಾಗಿ ಇನ್‌ಸ್ಪೆಕ್ಟರ್‌ಗಳಾದ ಸಾದಿಕ್‌ ಪಾಷಾ, ಜಯರಾಜ್‌, ಪ್ರಶಾಂತ್‌ಬಾಬು ನೇತೃತ್ವದ ತಂಡ ರಚಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮೇ 11ರಂದು ಮಹಾಲಕ್ಷಿ ಲೇಔಟ್‌ ಬಳಿ ಕೆ.ಎಸ್‌.ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್‌ ಕಾರಿನಲ್ಲಿ ಹೋಗುವಾಗ ಪ್ರಶಾಂತ್‌ ಕುಮಾರ್‌ ಸೇರಿದಂತೆ ನಾಲ್ಕೈದು ಮಂದಿ ಅಡ್ಡಗಟ್ಟಿ ಬಲವಂತವಾಗಿ ಅಪಹರಣ ಮಾಡಲು ಯತ್ನಿಸಿದ್ದರು. ಈ ಪ್ರಕರಣದಲ್ಲಿ ಪ್ರಶಾಂತ್‌ ಹೊರತು ಪಡಿಸಿ ಇತರೆ ಆರೋಪಿಗಳನ್ನು ಹಿಂದೆಯೇ ಬಂಧಿಸಲಾಗಿತ್ತು. ನಾಪತ್ತೆಯಾಗಿದ್ದ ಈತ ಎರಡು ದಿನಗಳ ಹಿಂದೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದ.

ಮೂತ್ರವಿಸರ್ಜನೆ ನೆಪದಲ್ಲಿ ಪರಾರಿ: ವಿನಯ್‌ ಅಪಹರಣ ಪ್ರಕರಣ ಮತ್ತು ರೌಡಿಶೀಟರ್‌ ಶಿವರಾಜ್‌ನ ತಂದೆ ಕೃಷ್ಣಪ್ಪ ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿ ಪ್ರಶಾಂತ್‌ ಶಾಮೀಲಾಗಿದ್ದ ಎನ್ನಲಾಗಿದ್ದು, ಈ ಪ್ರಕರಣಗಳ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಆತ ಕೋಲಾರದಲ್ಲಿ ತಲೆಮರೆಸಿಕೊಂಡಿದ್ದ. ಈ ಬಗ್ಗೆ ಖಚಿತ ಪಡೆದ ಪೊಲೀಸರ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ಶನಿವಾರ ನಸುಕಿನ 3.30ರ ಸುಮಾರಿಗೆ ನಗರಕ್ಕೆ ಕರೆ ತಂದಿದ್ದರು. ರಾತ್ರಿ 8.30ರ ಸುಮಾರಿಗೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವರ್ತೂರು, ಮಾರತ್‌ಹಳ್ಳಿ, ಕೆ.ಆರ್‌.ಪುರ ಠಾಣಾ ವ್ಯಾಪ್ತಿಯಲ್ಲಿ ಸ್ಥಳ ಪರಿಶೀಲನೆಗೆ ಕರೆದೊಯ್ಯುತ್ತಿದ್ದರು.

ಕೆ.ಆರ್‌.ಪುರದ ಐಟಿಐ ಮೈದಾನದ ಬಳಿ ಹೋಗುತ್ತಿದ್ದಂತೆ ಮೂತ್ರ ವಿಸರ್ಜನೆಗೆ ಹೋಗಬೇಕೆಂದು ಪ್ರಶಾಂತ್‌ ಪೊಲೀಸರ ಬಳಿ ಕೇಳಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್‌ ಸಾದಿಕ್‌ ಪಾಷಾ ಅವರು ಆತನನ್ನು ಕಾನ್‌ಸ್ಟೆàಬಲ್‌ಗ‌ಳಾದ ಕಾಂತರಾಜ್‌ ಮತ್ತು ರವಿಚಂದ್ರ ಜತೆ ಕಳುಹಿಸಿದ್ದಾರೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ಆರೋಪಿ ಪ್ರಶಾಂತ್‌ ತನ್ನೊಂದಿಗೆ ಬಂದಿದ್ದ ಇಬ್ಬರು ಕಾನ್‌ಸ್ಟೆàಬಲ್‌ಗ‌ಳ ಮೇಲೆ ಹಲ್ಲೆ ನಡೆಸಿ ಕಾಂಪೌಂಡ್‌ ಹಾರಿ ಪರಾರಿಯಾಗಿದ್ದಾನೆ. 

ಈ ವೇಳೆ ಕಾನ್‌ಸ್ಟೆಬಲ್‌ಗ‌ಳಿಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಆರೋಪಿ ಪರಾರಿಯಾದ ಮಾಹಿತಿ ತಿಳಿಯುತ್ತಿದ್ದಂತೆ ಇನ್ಸ್‌ಪೆಕ್ಟರ್‌ ಹಾಗೂ ಸಿಬ್ಬಂದಿ ಗಂಟೆಗಳ ಕಾಲ ಹುಡುಕಿದರೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಲು ತಿಳಿಸಿದ್ದಾರೆ.

ಹತ್ಯೆ ಯತ್ನವನ್ನೂ ಮಾಡಿದ್ದ: ಪ್ರಶಾಂತ್‌ನ ಸಹೋದರ ವಿನೋದ್‌ ಎಂಬಾತ ರೌಡಿಶೀಟರ್‌ ಆಗಿದ್ದ. ವಿನೋದ್‌ನನ್ನು ಮತ್ತೂಬ್ಬ ರೌಡಿ ಶೀಟರ್‌ ಶಿವರಾಜ್‌ ಮತ್ತು ತಂಡ ನಡುರಸ್ತೆಯಲ್ಲಿ ಕೊಲೆಗೈದಿತ್ತು. ಇದರಿಂದ ಆಕ್ರೋಶಗೊಂಡಿದ್ದ ಪ್ರಶಾಂತ್‌ ನಾಲ್ಕೈದು ಮಂದಿ ಯುವಕರ ತಂಡ ಕಟ್ಟಿಕೊಂಡು ಶಿವರಾಜ್‌ ಕೊಲೆಗೆ ಸಂಚು ರೂಪಿಸಿದ್ದ. ಆದರೆ, ಅಷ್ಟರಲ್ಲಿ ಶಿವರಾಜ್‌ ಜೈಲು ಸೇರಿದ್ದ. 

ಇತ್ತ ಸಹೋದರ ವಿನೋದ್‌ ಹತ್ಯೆಗೈಯುವಾಗ ಸ್ಥಳೀಯರು ಸಹಾಯಕ್ಕೆ ಬರಲಿಲ್ಲ ಎಂಬ ಕಾರಣಕ್ಕೆ ಆಕ್ರೋಶಗೊಂಡು ಸುಮಾರು 40 ವಾಹನಗಳ ಗಾಜುಗಳನ್ನು ಧ್ವಂಸಗೊಳಿಸಿದ್ದ. ಇದಾದ ಕೆಲವೇ ದಿನಗಳಲ್ಲಿ ಮಾರಕಾಸ್ತ್ರಗಳನ್ನು ಮನೆಗಳ ಮೇಲೆ ಎಸೆದು ದಾಂಧಲೆ ಆರಂಭಿಸಿದ್ದ. ಈ ಸಂಬಂಧ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ.

ಕೆಲ ದಿನಗಳ ಬಿಟ್ಟು ಮತ್ತೆ ನಗರಕ್ಕೆ ಬಂದಿದ್ದ ಆತ ತನ್ನ ಪೋಷಕರೊಂದಿಗೆ ಸೇರಿಕೊಂಡು ರೌಡಿಶೀಟರ್‌ ಶಿವರಾಜ್‌ನ ತಂದೆ ಕೃಷ್ಣಪ್ಪನ ಮೇಲೆ ದಾಳಿ ನಡೆಸಿ ಹತ್ಯೆಗೈಯಲು ಯತ್ನಿಸಿದ್ದ. ಆದರೆ, ಅದೃಷ್ಟವಶಾತ್‌ ಕೃಷ್ಣಪ್ಪ ಬದುಕುಳಿದಿದ್ದರು. ಈ ಪ್ರಕರಣದಲ್ಲೂ ಪ್ರಶಾಂತ್‌ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಚಿತ್ರಮಂದಿರದಲ್ಲೇ ಬಂಧಿಸಬೇಕಿತ್ತು 
ಆರೋಪಿ ಪ್ರಶಾಂತ್‌ ಕೋಲಾರದಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಕೆಲ ದಿನಗಳ ಹಿಂದೆಯೇ ಮಾಹಿತಿ ಲಭ್ಯವಾಗಿತ್ತು. ಅದರಂತೆ ಪೊಲೀಸರು ಆತನ ಚಲನ ವಲನಗಳ ಮೇಲೆ ನಿಗಾ ಇಟ್ಟಿದ್ದರು. ಶುಕ್ರವಾರ ರಾತ್ರಿ ಮದ್ಯ ಸೇವಿಸಿದ್ದ ಆರೋಪಿ ಪ್ರಶಾಂತ್‌ ಅಲ್ಲಿನ ಚಿತ್ರಮಂದಿವೊಂದಕ್ಕೆ ತೆಲುಗು ಚಿತ್ರ ವೀಕ್ಷಣೆಗೆ ಹೋಗಿದ್ದ. ಅದೇ ವೇಳೆ ಆತನನ್ನು ಬೆಂಬತ್ತಿದ ಪೊಲೀಸರು ಚಿತ್ರಮಂದಿರದಲ್ಲೇ ಬಂಧಿಸಿದ್ದಾರೆ. 

ಆದರೆ, ಪೊಲೀಸರು ಮಫ್ತಿಯಲ್ಲಿ ಬಂದಿದ್ದರಿಂದ ಹೈಡ್ರಾಮಾ ಸೃಷ್ಟಿಸಿದ ಪ್ರಶಾಂತ್‌, ಯಾರೋ ತನ್ನನ್ನು ಅಪಹರಿಸುತ್ತಿದ್ದಾರೆ ಎಂದು ಕೂಗಾಡಿದ್ದ. ಇದನ್ನು ಗಮನಿಸಿದ ಚಿತ್ರಮಂದಿರದಲ್ಲಿದ್ದ ಇತರರು ಆತನ ನೆರವಿಗೆ ಬರಲು ಮುಂದಾದರಾದರೂ ಅಷ್ಟರಲ್ಲಿ ಅದು ಪೊಲೀಸರು ಎಂದು ಗೊತ್ತಾಗಿ ಸುಮ್ಮನಾದರು ಎನ್ನಲಾಗಿದೆ. ಕಟ್ಟಡದಿಂದ ಕಟ್ಟಡಕ್ಕೆ ಜಿಗಿಯುವುದನ್ನು ಪ್ರಶಾಂತ್‌ ಕರಗತ ಮಾಡಿಕೊಂಡಿದ್ದ. ಹೀಗಾಗಿ ಚಿತ್ರಮಂದಿರದಲ್ಲೇ ಸೆರೆ ಹಿಡಿಯುವುದು ಅನಿವಾರ್ಯವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಟಾಪ್ ನ್ಯೂಸ್

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

4

Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾವು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.