BBMP Marshals: ವಾರ್ಡ್ ಮಾರ್ಷಲ್ ಇದ್ರೂ ಪ್ಲಾಸ್ಟಿಕ್‌ಗಿಲ್ಲ ತಡೆ
Team Udayavani, Sep 23, 2023, 10:38 AM IST
ಬೆಂಗಳೂರು: ಏಕ ಬಳಕೆ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಬಿಬಿಎಂಪಿ ಮಾರ್ಷಲ್‌ಗಳು ನಗರದ ತುಂಬೆಲ್ಲ ಕಾಲಕಾಲಕ್ಕೆ ದಾಳಿ ನಡೆಸುತ್ತಲೇ ಇದ್ದಾರೆ. ಆದರೂ ಪಾಸ್ಟಿಕ್ ಬಳಕೆಯ ಮಾಫಿಯಾಕ್ಕೆ ಇನ್ನೂ ಕಡಿವಾಣ ಬಿದ್ದಿಲ್ಲ. ದಾಳಿ ಗಳು ಕೂಡ ದಂಡಕ್ಕೆ ಸೀಮಿತ ವಾಗಿಯೇ ಉಳಿದುಕೊಂಡಿದೆ. ಆ ಹಿನ್ನೆಲೆಯಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಹಾವಳಿ ದ್ವಿಗುಣವಾಗುತ್ತಲೇ ಇದೆ.
ದಾಳಿಯ ವೇಳೆ ನಿಂದನೆ, ಅಪಮಾನ ಸಾಮಾನ್ಯವಾದರೂ ಅವುಗಳನ್ನು ಸಹಿಸಿಕೊಂಡು ಕಾರ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಮಾರ್ಷಲ್ ಗಳದ್ದಾಗಿದೆ. ಆದರೆ ಕೆಲವು ದಾಳಿ ಸಂದರ್ಭಗಳಲ್ಲಿ ಪ್ರಾಣ ಬೆದರಿಕೆ ಎದುರಿಸಿದ್ದು ಇದೆ. ಕೆಲವು ಸಲ ಕಿರಾಣಿ ಅಂಗಡಿ ಮತ್ತು ಹೋಟೆಲ್, ತರಕಾರಿ, ಮಾಂಸದ ಅಂಗಡಿಗಳ ಮೇಲೆ ಮಾರ್ಷಲ್‌ಗಳು ದಾಳಿ ನಡೆಸಿದಾಗ ದೊಡ್ಡ ಮೊತ್ತದ ದಂಡ ವಿಧಿಸಲು ಮುಂದಾಗುತ್ತಾರೆ. ಆದರೆ, ಕೆಲವು ಸಲ ಸ್ಥಳೀಯ ರಾಜಕೀಯ ಮುಖಂಡರು ಮಾರಾಟಗಾರರ ನೆರವಿಗೆ ಬರುವ ಹಿನ್ನೆಲೆಯಲ್ಲಿ ಸಣ್ಣ ಮೊತ್ತದ ದಂಡಕ್ಕೂ ಕಾರಣವಾಗುತ್ತದೆ.
ಕಳೆದ 21 ದಿನಗಳಲ್ಲಿ 1,317 ಕೆ.ಜಿ. ಪ್ಲಾಸ್ಟಿಕ್ ಜಪ್ತಿ ಮಾಡಿದ್ದು, 15.15 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. ಅಂದರೆ ಬೆಂಗಳೂರಂಥ ದೊಡ್ಡ ನಗರದಲ್ಲಿ ದಿನಕ್ಕೆ ಸರಾಸರಿ 62 ಕೆ.ಜಿ. ಪ್ಲಾಸ್ಟಿಕ್ ಮಾತ್ರ ಜಪ್ತಿ ಮಾಡಿದಂತಾಗಿದೆ. ಹೀಗಾಗಿ ನಗರದಲ್ಲಿ ನಡೆಯುತ್ತಿರುವ ಪ್ಲಾಸ್ಟಿಕ್ ಮಾಫಿಯಾ ಹೆಡೆಮುರಿ ಕಟ್ಟಲು ಪ್ರತ್ಯೇಕ ದಳ ಅಗತ್ಯವಿದೆ.
ಜೈಲು ಶಿಕ್ಷೆ ವಿಧಿಸಿದ ಪ್ರಕರಣಗಳಿಲ್ಲ: ಪ್ಲಾಸ್ಟಿಕ್ ನಿಷೇಧ ನಿಯಮ ಉಲ್ಲಂ ಸಿದರೆ 3 ರಿಂದ 6 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದು. ಒಂದು ಲಕ್ಷ ರೂ. ವರೆಗೆ ದಂಡ ವಿಧಿಸಬಹುದು. ಕೆಲವು ಪ್ರಕರಣಗಳಲ್ಲಿ ಎರಡಕ್ಕೂ ಅವಕಾಶವಿದೆ. ಆದರೆ ಇದುವರೆಗೆ ಯಾರೊಬ್ಬರಿಗೂ ಜೈಲು ಶಿಕ್ಷೆಯಾ ಗಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಬಳಕೆಗೆ ಮೂಗುದಾರ ಬಿದ್ದಿಲ್ಲ.
ಪ್ರತಿ ವಾರ್ಡ್‌ಗೊಬ್ಬ ಮಾರ್ಷಲ್: ಪ್ರತಿ ವಾರ್ಡ್‌ಗೂ ಒಬ್ಬ ಮಾರ್ಷಲ್‌ನನ್ನು ಬಿಬಿಎಂಪಿ ನೇಮಿಸಿದ್ದು, 196 ಮಾರ್ಷಲ್‌ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ಲಾಸ್ಟಿಕ್ ಉತ್ಪಾದನಾ ಘಟಕಗಳ ಮೇಲೆ ದಾಳಿ ಮಾಡುವುದಿಲ್ಲ. ಆದರೆ, ಸ್ಥಳೀಯ ಕಿರಾಣಿ ಅಂಗಡಿ, ಮಾಂಸದ ಅಂಗಡಿ, ದರ್ಶಿನಿ ಹೋಟೆಲ್, ಫುಟ್‌ಪಾತ್ ಅಂಗಡಿಗಳ ಮೇಲೆ ದಾಳಿ ನಡೆಸುತ್ತಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
ಈ ಹಿಂದೆ ಕೆ.ಆರ್.ಮಾರುಕಟ್ಟೆ ಪ್ರದೇಶ, ಕಲಾಸಿ ಪಾಳ್ಯ, ಚಿಕ್ಕಪೇಟೆ, ಬಿನ್ನಿಪೇಟೆ ವ್ಯಾಪ್ತಿಯಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಅವ್ಯಹತವಾಗಿತ್ತು. ಆದರೆ, ಈಗ ಅದು ನಿಯಂತ್ರಣಕ್ಕೆ ಬಂದಿದೆ. ಪ್ಲಾಸ್ಟಿಕ್‌ಗೆ ಪರ್ಯಾಯ ವಾಗಿ ಪೇಪರ್ ಬ್ಯಾಗ್ ಇದ್ದರೂ ಅದನ್ನು ಎಲ್ಲಾ ವಸ್ತುಗಳಿಗೂ ಬಳಸಲು ಆಗಲ್ಲ. ಹೀಗಾಗಿ ಜನರಿಗೆ ಸಮಜಾಯಿಷಿ ನೀಡುವುದೇ ಒಂದು ಸವಾಲಾ ಗಿದೆ ಎಂದು ಮಾರ್ಷಲ್‌ಗಳು ಹೇಳುತ್ತಾರೆ.
ಬೆಂಗಳೂರಿನಲ್ಲಿ 400 ಟನ್ ತ್ಯಾಜ್ಯ ಶೇಖರಣೆ: ಬೆಂಗಳೂರಿನಲ್ಲಿ ವಾರ್ಷಿಕವಾಗಿ 4000 ಟನ್ ನಷ್ಟು ತ್ಯಾಜ್ಯ ಶೇಖರಣೆ ಆಗುತ್ತಿದೆ. ಅದರಲ್ಲಿ ಬಹುತೇಕ ಪ್ಲಾಸ್ಟಿಕ್ ತ್ಯಾಜ್ಯಗಳು ಆಗಿವೆ. ನಗರದಲ್ಲಿ ನಿತ್ಯ ನಡೆಯುವ ವಿವಿಧ ಸಮಾರಂಭಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಹೆಚ್ಚು ಬಳಕೆ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕುವಂತೆ ಕಲ್ಯಾಣಮಂಟಪ/ ಪಾರ್ಟಿಹಾಲ್ / ಕ್ಯಾಟ ರಿಂಗ್ ಉದ್ದಿಮೆಗಳ ಮಾಲೀಕರಿಗೆ ಬಿಬಿಎಂಪಿ ಅಧಿಕಾರಿಗಳು ತಾಕೀತು ಮಾಡಿದ್ದಾರೆ. ಅದರ ಬದಲಾಗಿ ಅಡಕೆ ಪಟ್ಟೆ, ಬಾಳೆ ಎಲೆ, ಮರು ಬಳಸಬಹುದಾದಂತಹ ವಸ್ತುಗಳನ್ನು ಬಳಕೆ ಮಾಡುವಂತೆ ಮನವಿ ಮಾಡಿದ್ದಾರೆ.
ನಗರದ ಪ್ರತಿ ವಾರ್ಡ್‌ನಲ್ಲೂ ಮಾರ್ಷಲ್‌ಗಳಿದ್ದು, ಪಾಸ್ಟಿಕ್ ಬಳಕೆ ಮೇಲೆ ಹದ್ದಿನ ಕಣ್ಣೀರಿಸಿದ್ದಾರೆ. ಹೀಗಾಗಿ ಮಾರುಕಟ್ಟೆ ಮತ್ತಿತರ ಕಡೆ ಏಕ ಬಳಕೆ ಪ್ಲಾಸ್ಟಿಕ್‌ಗೆ ಕಡಿವಾಣ ಬಿದ್ದಿದೆ. ●ಹೆಸರು ಹೇಳು ಇಚ್ಛಿಸದ ಹಿರಿಯ ಮಾರ್ಷಲ್
–ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 series: ಪಾಕಿಸ್ಥಾನಕ್ಕೆ ವೈಟ್‌ವಾಶ್ ಟಿ20: ಆಸ್ಟ್ರೇಲಿಯ 3-0 ಜಯಭೇರಿ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ
Hosanagar: ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಅಪಘಾತ: 29 ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.