ಮಾನವನ ತಪ್ಪಿನಿಂದ ಅತಿವೃಷ್ಟಿ
Team Udayavani, Aug 21, 2018, 12:01 PM IST
ಬೆಂಗಳೂರು: ಕೇರಳ ಹಾಗೂ ಕೊಡಗು ಭಾಗದಲ್ಲಿ ಉಂಟಾಗಿರುವ ಅತಿವೃಷ್ಟಿ ಮಾನವ ತಪ್ಪುಗಳಿಂದ ಆಗಿರುವುದೇ ಹೊರತು ಪ್ರಕೃತಿ ವಿಕೋಪವಲ್ಲ ಎಂದು ಪರಿಸರ ತಜ್ಞ ನಾಗೇಶ ಹೆಗಡೆ ಎಂದು ಅಭಿಪ್ರಾಯಪಟ್ಟರು.
ನವಕರ್ನಾಟಕ ಪ್ರಕಾಶನವು ಕೆಂಪೇಗೌಡ ರಸ್ತೆಯಲ್ಲಿನ ತನ್ನ ಮಳಿಗೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸುಮಂಗಲಾ ಎಸ್.ಮುಮ್ಮಿಗಟ್ಟಿ ಅವರು ಅನುವಾದಿಸಿರುವ “ಕೊನೆಯ ಅಲೆ’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಮಾನವನ ಆಕ್ರಮಣ ಮಿತಿಮೀರಿದ ಪರಿಣಾಮದಿಂದಾಗಿ ಪ್ರಕೃತಿ ವಿಕೋಪಕ್ಕೆ ತಿರುಗಿದೆ.
ಅತಿವೃಷ್ಠಿ ಅಥವಾ ಅನಾವೃಷ್ಠಿಗೆ ಕಾರಣವಾಗುವಂತಹ ಅಂಶಗಳನ್ನು ಅಕಾಡೆಮಿಗಳ ಮಟ್ಟದಲ್ಲಿ ಚರ್ಚೆಯಾಗುತ್ತಿದೆಯೇ ಹೊರತು ಸಾಮಾನ್ಯ ಜನರಿಗೆ ತಲುಪುತ್ತಿಲ್ಲ. ಪರಿಸರದ ವಿನಾಶ ಮತ್ತು ಉಳಿವಿನ ಬಗ್ಗೆ ಜನ ಸಾಮಾನ್ಯರಿಗೆ ಅರ್ಥವಾಗಬೇಕು. ಆಗಲೇ ಪರಿಸರ ಉಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕೊನೆಯ ಅಲೆ ಕೃತಿ ಕಾದಂಬರಿ ಸ್ವರೂಪದಲ್ಲಿದ್ದರೂ ಕಾಡಿನ ವಿನಾಶದೊಂದಿಗೆ ಸಂಸ್ಕೃತಿಯೂ ವಿನಾಶವಾಗುತ್ತಿರುವುದರ ಬಗ್ಗೆ ವಾಸ್ತವ ಅಂಶಗಳನ್ನು ತೆರೆದಿಟ್ಟಿದೆ. ಅಂಡಮಾನ್‌ನಂತಹ ಪುಟ್ಟ ದ್ವೀಪಗಳು ಜೀವ ವೈವಿಧ್ಯಗಳ ರಾಶಿ. ಆದರೆ ಅವುಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ನಾಶ ಮಾಡಲಾಗುತ್ತಿದೆ. ಹಿಂದೆ ಅಂಡಮಾನ್ ದ್ವೀಪದಲ್ಲಿ 20 ಸಾವಿರ ಜರೋವಾ ಎಂಬ ಆದಿವಾಸಿಗಳು ಬದುಕುತ್ತಿದ್ದರು.
ಆದರೆ ಇಂದು ಕೇವಲ 300 ಮಂದಿ ಬದುಕುಳಿದಿದ್ದಾರೆ. ನಾಗರಿಕರು ಎನ್ನಿಸಿಕೊಂಡಿರುವ ನಾವು ಅಂಡಮಾನ್ ದ್ವೀಪಕ್ಕೆ ಹೋಗಿ ಬ್ರಿಟಿಷರಂತೆ ಅದನ್ನು ಆಕ್ರಮಿಸಿಕೊಂಡಿದ್ದೇವೆ. ಜೊತೆಗೆ ಅಲ್ಲಿನ ಮೂಲನಿವಾಸಿಗಳನ್ನು ನಮ್ಮಂತೆ ಬದಲಾವಣೆ ಮಾಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಅನುಭೋಗಿಸುವ ಜಗತ್ತು ನಮ್ಮನ್ನಾಳುತ್ತಿದೆ. ಕೊಳ್ಳುಬಾಕುತನ ಸಂಸ್ಕೃತಿ ಬದುಕನ್ನು ಮುಳುಗಿಸುತ್ತದೆ ಎಂಬ ಅರಿವಿದ್ದರೂ ಹಳ್ಳಿಗಳಲ್ಲಿ ನೆಮ್ಮದಿಯಾಗಿ ಬದುಕು ನಡೆಸುತ್ತಿರುವವರನ್ನು ಈ ಸಂಸ್ಕೃತಿಯೆಡೆಗೆ ಸೆಳೆಯಲಾಗುತ್ತಿದೆ. ಗ್ರಾಹಕ ಅನುಭೋಗದ ಸಂಸ್ಕೃತಿಯಿಂದಾಗಿ ನಮ್ಮ ನಾಡಿನ ಆದಿವಾಸಿಗಳಗಳು ವಿನಾಶದ ಕೊನೆಯ ಹಂತದಲ್ಲಿದ್ದಾರೆ.
ಅಭಿವೃದ್ಧಿಯ ಏರುಗತಿ ಪ್ರಕೃತಿ, ಸಂಸತಿ ಮತ್ತು ಜೀವ ವೈವಿಧ್ಯದ ವಿನಾಶಕ್ಕೆ ಕಾರಣವಾಗಿದೆ. ನಿಸರ್ಗ ವಿಕೋಪಕ್ಕೆ ಕಾರಣ ಮಾನವವನೇ ಹೊರತು ಮತಾöರು ಅಲ್ಲ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಮೂಲ ಲೇಖಕ ಪಂಕಜ್ ಸೇಖ್‌ಸರಿಯಾ, ಅನುವಾದಕಿ ಸುಮಂಗಲಾ ಎಸ್.ಮುಮ್ಮಿಗಟ್ಟಿ, ನವಕರ್ನಾಟಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕ ಡಾ.ಸಿದ್ದನಗೌಡ ಪಾಟೀಲ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಸಿಸಿಬಿಗೆ ವರ್ಗಾವಣೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Hyderabad: ಗಂಟಲಿಗೆ ಪೂರಿ ಸಿಲುಕಿ ವಿದ್ಯಾರ್ಥಿ ಸಾವು
Narendra Modi: ನಾನು ಯಾರದ್ದೇ ಅಧಿಕಾರ ವ್ಯಾಪ್ತಿ ಅತಿಕ್ರಮಿಸಿಕೊಂಡಿಲ್ಲ: ಮೋದಿ
US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್!
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.