ಎನ್ನಾರೈಗಳ ಮೂಲಕ ಎಕ್ಸ್‌ಚೇಂಜ್?
Team Udayavani, May 15, 2017, 11:37 AM IST
ಬೆಂಗಳೂರು: ಅಪಹರಣ, ಸುಲಿಗೆ ಬ್ಲ್ಯಾಕ್ ಆ್ಯಂಡ್ ವೈಟ್ ಪ್ರಕರಣಗಳಲ್ಲಿ ಬಂತನಾಗಿ ಪೊಲೀಸರ ಕಸ್ಟಡಿಯಲ್ಲಿರುವ ಮಾಜಿ ಕಾಫೊìರೇಟರ್ ವಿ. ನಾಗರಾಜು, ನೋಟು ಅಮಾನ್ಯ ನಂತರ ಚಲಾವಣೆಯಲ್ಲಿ ಇಲ್ಲದ ಹಳೆಯ ನೋಟುಗಳನ್ನು ಪರಿಚಯಸ್ಥ ಎನ್‌ಆರ್‌ಐಗಳ ಮೂಲಕ ಬದಲಿಸಿಕೊಳ್ಳಲು ಯೋಜನೆ ರೂಪಿಸಿದ್ದ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಹಣದ ಆಮಿಷಕ್ಕೆ ಒಳಗಾಗಿದ್ದ ನಾಗರಾಜು, ಉದ್ಯಮಿ ಉಮೇಶ್ ಸೇರಿದಂತೆ ಹಲವರನ್ನು ಸುಲಿಗೆ ಮಾಡಿ ರದ್ದಾದ 500, 1000 ಮುಖಬೆಲೆಯ ನೋಟುಗಳ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿಟ್ಟಿದ್ದ. ಆ ಹಣವನ್ನು ಚೆನೈನಲ್ಲಿರುವ, ತನಗೆ ಪರಿಚಯವಿರುವ ಎನ್‌ಆರ್‌ಐ ಮಣಿ ಸೇರಿದಂತೆ ಐದು ಮಂದಿಯನ್ನು ಸಂಪರ್ಕಿಸಿ ಹಣ ಬದಲಾಯಿಸಿಕೊಳ್ಳಲು ಮಾತುಕತೆ ನಡೆಸಲಾಗಿತ್ತು. ಆದರೆ ಹಲವು ಕಾರಣಗಳಿಂದ ಭಾರೀ ಮೊತ್ತದ ನೋಟುಗಳನ್ನು ಬದಲಾಯಿಸಲು ಸಾಧ್ಯವಾಗಲೇ ಇಲ್ಲ ಎಂದು ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ತನಿಖಾಕಾರಿಯೊಬ್ಬರು ತಿಳಿಸಿದರು.
ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ವಂಚನೆ ಪ್ರಕರಣಕ್ಕೆ ಸಂಬಂಸಿದಂತೆ ನಾಗ, ಆತನ ಇಬ್ಬರು ಮಕ್ಕಳು ಸೇರಿ ಒಟ್ಟು 11 ಮಂದಿಯನ್ನು ಬಂಸಲಾಗಿದೆ. ಎಲ್ಲ ಆರೋಪಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿದೆ. ನಾಗನ ವಂಚನೆಗಳ ಬಗ್ಗೆ ಕೆಲವು ಮಹತ್ವದ ಮಾಹಿತಿ ಹೊರಬೀಳುತ್ತಿದ್ದು, ಆರೋಪಿಗಳು ನಾಗನ ಸೂಚನೆಯಂತೆ ಹಣ ಬದಲಾಯಿಸಿಕೊಳ್ಳಲು ಹವಣಿಸುತ್ತಿದ್ದ ಉದ್ಯಮಿಗಳಿಗೆ ಗಾಳ ಹಾಕಿ ಕರೆಸಿಕೊಳ್ಳುತ್ತಿದ್ದರು. ಬಳಿಕ ಐದು ಮಂದಿ ಬೌನ್ಸರ್‌ಗಳನ್ನು ಮುಂದೆ ಬಿಟ್ಟು ಸುಲಿಗೆ ಮಾಡುತ್ತಿದ್ದರು ಎಂದು ಅಧಿಕಾರಿ ತಿಳಿಸಿದರು.
ಕಾಲು ಹಿಡಿದು ಗೋಳಾಡಿದ ನಾಗ!
ಮತ್ತೂಂದೆಡೆ ಪೊಲೀಸ್ ವಿಚಾರಣೆಯಲ್ಲಿ ಆರೋಪಿ ನಾಗ ಹೈಡ್ರಾಮ ಸೃಷ್ಟಿಸುತ್ತಿ ದ್ದಾನೆ. “ಜಾಮೀನು ಸಿಗುತ್ತದೆ ಎಂಬ ಕಾರಣಕ್ಕೆ ಅಹಂಕಾರದಿಂದ ವರ್ತಿಸುತ್ತಿದ್ದೆೆ. ಜಾಮೀನು ಸಿಗುವುದಿಲ್ಲ ಎಂದು ಗೊತ್ತಾದ ಬಳಿಕ ಶರಣಾಗಲು ನಿರ್ಧರಿಸಿದ್ದೆ. ಆದರೆ ಭಯದಿಂದ ಅವಿತುಕೊಂಡಿದ್ದೆ. ನನಗೆ ಪೊಲೀಸರನ್ನು ಕಂಡರೆ ಭಯವಿದೆ, ಇದೊಂದು ಬಾರಿ ಕ್ಷಮಿಸಿಬಿಡಿ’ ಎಂದು ಗೋಳಾಟ ನಡೆಸುತ್ತಿದ್ದಾನೆ. ವಿಚಾರಣೆ ನಡೆಸುವ ಸಲುವಾಗಿ ಬಂದ ಎಸಿಪಿ ರವಿಕುಮಾರ್ ಅವರ ಕಾಲಿಗೆ ಬಿದ್ದ ನಾಗರಾಜ, ಐದು ನಿಮಿಷಕ್ಕೂ ಹೆಚ್ಚು ಕಾಲ “ಸಾರ್, ತಪ್ಪಾಯಿತು ಬಿಟ್ಟು ಬಿಡಿ’ ಎಂದು ಅವಲತ್ತುಕೊಂಡು ವಿಚಿತ್ರವಾಗಿ ಆಡುತ್ತಿದ್ದಾ ನೆ. ಕ್ಷಣಕ್ಕೊಂದು ಹೇಳಿಕೆ ನೀಡಿ ವಿಚಿತ್ರವಾಗಿ ವರ್ತಿಸುತ್ತಾನೆ ಎಂದು ಹಿರಿಯ ಅಕಾರಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.