ನಗರದೆಲ್ಲೆಡೆ ಸಂಭ್ರಮದ ಕ್ರಿಸ್‌ಮಸ್‌


Team Udayavani, Dec 26, 2018, 12:05 PM IST

nagaradellede.jpg

ಬೆಂಗಳೂರು: ನಗರದಲ್ಲಿ ಕ್ರಿಸ್‌ಮಸ್‌ ಹಬ್ಬವನ್ನು ಸಡಗರ -ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಹಿನ್ನೆಲೆ ನಗರದ ಬಹುತೇಕ ಚರ್ಚ್‌ಗಳು ಸಿಂಗಾರಗೊಂಡಿದ್ದವು. ಪುರಾತನ ಚರ್ಚ್‌ಗಳ ಅವರಣದಲ್ಲಿ ಗೋದಲಿ (ಕ್ರಿಬ್‌) ಗಳನ್ನು ನಿರ್ಮಾಣ ಮಾಡಿ, ಕ್ರಿಸ್‌ಮಸ್‌ ಟ್ರೀಗಳನ್ನು ಇಡಲಾಗಿತ್ತು.

ಶುಭ ಸಂಕೇತದ ಗಂಟೆ, ನಕ್ಷತ್ರಗಳ ಮಿಂಚು, ಬಲೂನ್‌ಗಳ ಚಿತ್ತಾರಗಳಿಂದ ಎಲ್ಲಾ ಚರ್ಚ್‌ಗಳು ಝಗಮಗಿಸುತ್ತಿದ್ದವು. ಇನ್ನು ಕ್ರೈಸ್ತ ಬಾಂಧವರು ಬಡವರಿಗೆ ಬಟ್ಟೆ, ಹಣ ಇತ್ಯಾದಿ ದಾನ ಮಾಡಿ, ಸ್ನೇಹಿತರೊಂದಿಗೆ ಉಡುಗೊರೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ತಮ್ಮ ಮನೆಗಳಲ್ಲಿ ಸಿಹಿ ತಿಂಡಿಗಳು, ವಿಶೇಷ ಖಾದ್ಯಗಳನ್ನು ತಯಾರಿಸಿ ಬಂಧು ಮಿತ್ರರೊಂದಿಗೆ ಸವಿದು ಕ್ರಿಸ್‌ಮಸ್‌ ಆಚರಿಸಿದರು.

ಸೋಮವಾರ ಸಂಜೆಯಿಂದಲೇ ಚರ್ಚ್‌ಗಳಲ್ಲಿ ಪ್ರಾರ್ಥನೆ ಆರಂಭವಾಗಿತ್ತು. ರಾತ್ರಿ 12ಕ್ಕೆ ಬಾಲಕ ಯೇಸು ವನ್ನು ಮೆರವಣಿಗೆಯ ಮೂಲಕ ತಂದು ಮೊದಲೇ ನಿರ್ಮಾಣಗೊಂಡಿ ದ್ದ ಗೋದಲಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಈ ವೇಳೆ ಪವಿತ್ರ ತೀರ್ಥದ ಪ್ರೋಕ್ಷಣೆ ನಡೆಯಿತು. ಧೂಪದ ಆರತಿ, ಪುಷ್ಪದ ಅರ್ಚನೆಗಳಾದವು.

ಆನಂತರ ಬ್ರೆಡ್‌-ದ್ರಾಕ್ಷಾರಸವನ್ನು ಪ್ರಸಾದವಾಗಿ ಭಕ್ತರಿಗೆ ವಿತರಿಸಲಾಯಿತು. ಮಂಗಳವಾರ ಬೆಳಗ್ಗೆ 6 ರಿಂದ 11 ಗಂಟೆವರೆಗೆ ನಗರದ ಪ್ರಮುಖ ಚರ್ಚ್‌ಗಳಲ್ಲಿ ಇಂಗ್ಲಿಷ್‌, ಕನ್ನಡ, ತಮಿಳು, ಹಿಂದಿ ಭಾಷೆಗಳಲ್ಲಿ ಪ್ರತ್ಯೇಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಧರ್ಮ ಗುರುಗಳು ಸಾಮಾಜಿಕ ಬಾಂಧವ್ಯ ಮತ್ತು ಜಾಗತಿಕ ಶಾಂತಿಯ ಕುರಿತು ಸಂದೇಶಗಳನ್ನು ಸಾರಿದರು.

ಅತ್ಯಂತ ಪ್ರಾಚೀನ ಚರ್ಚ್‌ ಗ ಳಲ್ಲಿ ಒಂದಾದ ಫ್ರೇಜರ್‌ ಟೌನ್‌ ನ ಲ್ಲಿ ರುವ ಸೇಂಟ್‌ ಫ್ರಾನ್ಸಿಸ್‌ ಕ್ಸೇವಿ ಯರ್‌ ಕೆಥೆ ಡ್ರಲ್‌ ಚರ್ಚ್‌ ಕ್ರಿಸ್‌ಮಸ್‌ ಪ್ರಾರ್ಥನೆಗೆ ಪ್ರಧಾನಾಲಯವಾಗಿದ್ದು, ಇಲ್ಲಿ ಬೆಂಗಳೂರು ಕ್ಯಾಥೋಲಿಕ್‌ ಚರ್ಚ್‌ಗಳ ಧರ್ಮಾಧ್ಯಕ್ಷರಾದ ಪೀಟರ್‌ ಮಚಾಡೋ ಬಲಿಪೂಜೆ (ಮಾಸ್‌), ಪ್ರಾರ್ಥನೆ ಸಲ್ಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಕ್ತರು ಬೈಬಲ್‌ನ ಸಾಲುಗಳನ್ನು ಪಠಿಸಿದರು.

ಚರ್ಚ್‌ನ ಆವರಣದಲ್ಲಿ ಸಾಂತಾಕ್ಲಾಸ್‌ ಮಕ್ಕಳಿಗೆ ಚಾಕೋಲೆಟ್‌, ಕೇಕ್‌ ವಿತರಿಸಿದನು. ಚರ್ಚ್‌ ಸುತ್ತಮುತ್ತಲ ರಸ್ತೆಗಳಲ್ಲಿ ವ್ಯಾಪಾರ ವಹಿವಾಟು ಜೋರಿತ್ತು. ಬ್ರಿಗೇಡ್‌ ರಸ್ತೆ ಪೂರ್ತಿ ವಿದ್ಯುತ್‌ದೀಪಾಲಂಕಾರಗಳಿಂದ ಸಿಂಗರಿಸಲಾಗಿತ್ತು. ಕ್ರಿಸ್‌ಮಸ್‌ ಅಂಗವಾಗಿ ನಗರದ ಬಹುತೇಕ ಮಾಲ್‌ಗ‌ಳು ವಿಶೇಷ ಅಲಂಕಾರಗೊಂಡು ಗ್ರಾಹಕರನ್ನು ಆಕರ್ಷಿಸುತ್ತಿದ್ದವು. 

ಚರ್ಚ್‌ಗಳಲ್ಲಿ ವಿಶೇಷ ಪೂಜೆ: ಶಿವಾ ಜಿ ನ ಗ ರ ದ  ಸೇಂಟ್‌ ಮೇರಿಸ್‌ ಬೆಸಿ ಲಿಕಾ ಚರ್ಚ್‌ನಲ್ಲಿ ಪ್ರಧಾನ ಫಾದರ್‌ ಜಾನ್‌ ರೋಜ್‌ ಅವರ ಉಪಸ್ಥಿತಿಯಲ್ಲಿ ಪ್ರಾರ್ಥನೆ ಜರುಗಿದವು. ಇವುಗಳ ಜತೆಗೆ ಬ್ರಿಗೇಡ್‌ ರಸ್ತೆ ಯ ಲ್ಲಿ ರುವ ಸಂತ ಪ್ಯಾಟ್ರಿಕ್ಸ್‌ ಚರ್ಚ್‌, ಸೇಂಟ್‌ ಮಾರ್ಕ್ಸ್ ಕೆಥೆ ಡ್ರಲ್‌, ಚಾಮ ರಾ ಜ ಪೇ ಟೆಯ ಸೇಂಟ್‌ ಜೋಸೆಫ್‌ ಚರ್ಚ್‌, ಎಂಜಿ ರಸ್ತೆಯ ಈಸ್ಟ್‌ ಪೆರೇಡ್‌ ಚರ್ಚ್‌, ರಿಚ್‌ಮಂಡ್‌ ರಸ್ತೆಯಲ್ಲಿರುವ ಸೇಕ್ರೇಡ್‌ ಹಾರ್ಟ್‌ ಚರ್ಚ್‌, ಹಲಸೂರಿನ ಹೋಲಿ ಟ್ರಿನಿಟಿ ಚರ್ಚ್‌, ಸಂಪಂಗಿ ರಾಮನಗರದ ಹಡ್ಸನ್‌ ಸ್ಮಾರಕ ಚರ್ಚ್‌ ಸೇರಿ ದಂತೆ ನಗ ರದ ಹಲವು ಕ್ಯಾಥೊ ಲಿಕ್‌ ಮತ್ತು ಪ್ರೊ ಟೆ ಸ್ಟೆಂಟ್‌ ಚರ್ಚ್‌ ಗ ಳಲ್ಲಿ (ಸಿಎ ಸ್‌ಐ) ವಿಶೇಷ ಪ್ರಾರ್ಥನೆ ಜರುಗಿದವು.

ಟಾಪ್ ನ್ಯೂಸ್

Parliament winter session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Parliament Winter Session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

4

Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು

3

Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ

2

Kadalekai Parishe: ಇಂದಿನಿಂದ ಬಸವನಗುಡಿ ಕಡಲೆಕಾಯಿ ಪರಿಷೆ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

4

Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು

3

Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ

2

Kadalekai Parishe: ಇಂದಿನಿಂದ ಬಸವನಗುಡಿ ಕಡಲೆಕಾಯಿ ಪರಿಷೆ

Parliament winter session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Parliament Winter Session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.