ರಾಜಧಾನಿಯಲ್ಲಿ ತುಳುಕೂಟದಿಂದ ಅದ್ದೂರಿ ವಣಸ್ ಸಂಭ್ರಮ
Team Udayavani, Oct 3, 2018, 12:20 PM IST
ಬೆಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪುದ್ದಾರ್ ವಣಸ್(ಹೊಸ ಅಕ್ಕಿ ಊಟ) ಕಾರ್ಯಕ್ರಮ ಮಂಗಳವಾರ ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನಡೆಯಿತು. ಕರಾವಳಿ ಭಾಗದ ಸಾಂಪ್ರದಾಯಿಕ ಆಚರಣೆಯಾಗಿರುವ ಪುದ್ದಾರ್ ವಣಸ್ ಇದೇ ಮೊದಲ ಬಾರಿಗೆ ತುಳುಕೂಟ ಬೆಂಗಳೂರು ಸಂಘಟನೆ ನಗರದಲ್ಲಿ ಆಯೋಜಿಸಿತ್ತು.
ಅವಿಭವಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಣೇಶ ಚತುರ್ಥಿಯಿಂದ ನವರಾತ್ರಿಯ ಮಧ್ಯಭಾಗದಲ್ಲಿ ಹೊಸದಾಗಿ ಬೆಳೆದ ಸುಗ್ಗಿಯ ಮೊದಲ ಪೈರು(ತೆನೆ) ಮನೆಗೆ ತಂದು ಪೂಜೆ ಮಾಡುತ್ತಾರೆ. ನಂತರದ ಅದರಿಂದ ಅನ್ನ ಸಿದ್ದಪಡಿಸಿ ಕುಟುಂಬದವರು, ಸ್ನೇಹಿತರು ಸೇರಿ ಹೊಸ ಅಕ್ಕಿ ಊಟ ಮಾಡುವ ಸಂಪ್ರದಾಯವಿದ್ದು, ಬೆಂಗಳೂರಿನಲ್ಲಿ ತುಳುಕೂಟದಿಂದ ಈ ಸಂಭ್ರಮ ವಿಶೇಷವಾಗಿ ಆಚರಿಸಲಾಯಿತು.
ಕಲ್ಯಾಣ ಮಂಟಪದ ಮುಂಭಾಗದಲ್ಲಿ ಹೂವಿನ ಅಲಂಕಾರ ಮಾಡಿ, ಹಸಿರು ಚಪ್ಪರ ನಿರ್ಮಿಸಲಾಗಿತ್ತು. ಕಾರ್ಯಕ್ರಮಕ್ಕೆ ಬಂದವರಿಗೆ ಕುಚ್ಚಲು ಅಕ್ಕಿ ಅನ್ನ ಸಹಿತವಾಗಿ 14 ಬಗೆಯ ಖಾದ್ಯದ ಭೋಜನದ ಜತೆಗೆ ಹೊಸ ಪೈರು ವಿತರಿಸಲಾಗಿತ್ತು. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಕಾರ್ಯಕ್ರಮಕ್ಕೆ ಆಗಮಿಸಿ, ಇಂತಹ ಆಚರಣೆಗಳು ಸದಾಕಾಲ ಜೀವಂತವಾಗಿರಬೇಕು. ಕರಾವಳಿಯ ಸಂಭ್ರಮ, ಸಂಪ್ರದಾಯ ಹಾಗೂ ಸಂಸ್ಕೃತಿಯ ಪ್ರತಿಕ ಇದಾಗಿದೆ ಎಂದು ಬಣ್ಣಿಸಿದರು.
ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಸಂಬಂಧ ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತದೆ. ತುಳು ಕೂಟಕ್ಕೆ ಬೆಂಗಳೂರಿನಲ್ಲಿ ಜಾಗ ದೊರಕಿಸಿಕೊಡಲು ಸರ್ಕಾರ ಮಟ್ಟದಲ್ಲಿ ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.ಕರಾವಳಿ ಮೂಲದ ಐವರು ಬಿಬಿಎಂಪಿ ಸದಸ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಂಸದ ಪಿ.ಸಿ. ಮೋಹನ್, ಉದ್ಯಮಿ ಗುರ್ಮೇ ಸುರೇಶ್ ಶೆಟ್ಟಿ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ತೂಳುಕೂಟ ಬೆಂಗಳೂರು ಅಧ್ಯಕ್ಷ ಜಿ.ದಿನೇಶ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಪುದ್ದಾರ್ ವಣಸ್ ಸಮಿತಿ ಅಧ್ಯಕ್ಷ ಸುಂದರ್ ರಾಜ್ ರೈ ಮೊದಲಾದವರು ಉಪಸ್ಥಿತರಿದ್ದರು.
ಪುದ್ದರ್ ವಣಸ್: ಪುದ್ದರ್ ವಣಸ್ ವಿಶೇಷವೆಂದರೆ ಮಣ್ಣಿನ ಅಡಿಯಲ್ಲಿ ಬೆಳೆಯುವ ಯಾವುದೇ ತರಕಾರಿ ಬಳಸದೇ ಆಹಾರ ಸಿದ್ಧಪಡಿಸಲಾಗುತ್ತದೆ. ಅನ್ನ ಸಹಿತವಾಗಿ ವಿವಿಧ ಪದಾರ್ಥ ಸಿದ್ಧಪಡಿಸುವ ಪಾತ್ರೆಗೆ ಹೊಸಪೈರು(ತೆನೆ) ಕಟ್ಟಲಾಗುತ್ತದೆ.
ಮಂಗಳವಾರ ನಡೆದ ಪುದ್ದರ್ ವಣಸ್‌ನಲ್ಲಿ ಕುಚ್ಚಲಕ್ಕಿ ಅನ್ನ, ತಿಮರೆ ಚಟ್ನಿ, ನೀರ್ ಕುಕ್(ನೀರಿನಲ್ಲಿಟ್ಟ ಮಾವು) ಚಟ್ನಿ, ಪೆಲಕಾಯಿ ಉಪ್ಪಡ್(ಹಲಸಿನ ಕಾಯಿ) ಪಟ್ಟಿಲ್, ಕಜಂಕ್, ಕಾಡ್‌ಕೆಸು ದಂಟು ಹಾಗೂ ಅಂಬಡೆ ಪುಳಿಮುಂಚಿ, ಕುಡುತ ಚಟ್ನಿ, ಬಾಳೆ ದಂಟಿನ ಚಟ್ನಿ, ಕಡಲೆ ಬೆಳೆ ಪಾಯಸ ಸೇರಿದಂತೆ 14 ಬಗೆಯ ಖಾದ್ಯಗಳಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ
Oscars 2025: ಹೀನಾಯವಾಗಿ ಸೋತರೂ ʼಆಸ್ಕರ್ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.