ದುಬಾರಿ ತೆರಿಗೆ: ಬಡವರಿಗೆ ಕಷ್ಟ
Team Udayavani, Apr 14, 2021, 11:17 AM IST
ಯಲಹಂಕ: ಕೇಂದ್ರ ಸರ್ಕಾರದ ದುಬಾರಿ ತೆರಿಗೆ ಮತ್ತು ಕೊರೊನಾದಿಂದದುಡಿಯುವ ವರ್ಗವಾದ ಬಡವರು,ಆಟೋ-ಟ್ಯಾಕ್ಸಿ ಚಾಲಕರು ಕಷ್ಟ ಅನುಭವಿಸುತ್ತಿದ್ದಾರೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಇಲ್ಲಿಗೆ ಸಮೀಪದ ಜಕ್ಕೂರಿನಲ್ಲಿ ಯುಗಾದಿ ಪ್ರಯುಕ್ತ ಬ್ಯಾಟರಾಯನಪುರ ಕಾಂಗ್ರೆಸ್ ಘಟಕದಿಂದಸಾವಿರಾರು ಆಟೋ-ಟ್ಯಾಕ್ಸಿ ಚಾಲಕರಿಗೆಹೊಸ ಬಟ್ಟೆಗಳನ್ನು ವಿತರಿಸಿ ಮಾತನಾಡಿ,ಶ್ರೀಮಂತರ ಮೇಲೆ ತೆರಿಗೆ ಹಾಕಿ ಅದನ್ನುತೆಗೆದುಕೊಂಡು ಬಡವರಿಗೆ ಸಹಾಯಮಾಡಬೇಕು. ಈ ಬಿಜೆಪಿ ಸರ್ಕಾರದಲ್ಲಿ ಎಲ್ಲಾ ಉಲ್ಟಾ, ಬಡವರುಆಟೋ-ಟ್ಯಾಕ್ಸಿಗಳಿಗೆ ಬೇಕಾದ ಡೀಸಲ್,ಪೆಟ್ರೋಲ್, ಗ್ಯಾಸ್ ಮೇಲೆ ತೆರಿಗೆಹಾಕುವ ಮೂಲಕ ದುಡಿದುದೆಲ್ಲವನ್ನುತೆರಿಗೆ ಕಟ್ಟುತ್ತಿದ್ದಾರೆ. ಆದರೆ, ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿ ಈ ಸರ್ಕಾರ ಮಾಡಿದೆ ಎಂದು ಹೇಳಿದರು.
ಶ್ರೀಮಂತರು 3ನೇಸ್ಥಾನ, ಸಾಮಾನ್ಯರು 141ನೇಸ್ಥಾನ: ಭಾರತದ ಶ್ರೀಮಂತರು ಪ್ರಪಂಚದಲ್ಲಿ ಮೂರನೆ ಸ್ಥಾನದಲ್ಲಿದ್ದಾರೆ. ಆದರೆ, ದುಡಿವ ವರ್ಗದವರು 141ನೇ ಸ್ಥಾನದಲ್ಲಿದ್ದಾರೆ. ಅಂದರೆ ಶ್ರೀಮಂತರುತುಂಬಿ ತುಳುಕುತ್ತಿದ್ದಾರೆ, ಆಟೋ-ಟ್ಯಾಕ್ಸಿ, ಸೇರಿದಂತೆ ದುಡಿಯುವ ವರ್ಗಪ್ರತಿದಿನ ದುಡಿದುಕೊಂಡು ಟ್ಯಾಕ್ಸ್‌ಕಟ್ಟುತ್ತಿದ್ದಾರೆ. ಶ್ರೀಮಂತರು ಅತೀಶ್ರೀಮಂತರಾಗುತ್ತಿದ್ದಾರೆ ಎಂದರು.
ಚಾಲಕರ ಕಾಂಗ್ರೆಸ್ ಘಟಕ: ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್ ಘಟಕವು ಇದೇ ಮೊದಲ ಭಾರಿಗೆಆಟೋ ಮತ್ತು ಟ್ಯಾಕ್ಸಿ ಚಾಲಕರಸಮಸ್ಯೆಗಳನ್ನು ಬಗೆ ಹರಿಸಲು ಅವರಿಗೆಸ್ಪಂದಿಸಿ ಅವರ ಕಷ್ಟ ಸುಖಗಳನ್ನು ತಿಳಿಯಲು ವಾರ್ಡ್ ಮತ್ತುಕ್ಷೇತ್ರಮಟ್ಟದಲ್ಲಿ ಚಾಲಕರ ಕಾಂಗ್ರೆಸ್ ಘಟಕವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.