ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಿ
Team Udayavani, Jun 14, 2021, 5:48 PM IST
ಬೆಂಗಳೂರು: ಸೇವಾ ಸಿಂಧು ಪೋರ್ಟಲ್ ಮೂಲಕಸಹಾಯಧನ ಪಡೆಯುವ ಪ್ರಕ್ರಿಯೆ ಗೊಂದಲಮಯ ವಾಗಿದ್ದುಸಹಾಯ ಧನಕ್ಕೆ ಅರ್ಜಿಸಲ್ಲಿಸುವ ಅವಧಿ ವಿಸ್ತರಿಸುವಂತೆ ಎಎಪಿ ಸರ್ಕಾರಕ್ಕೆ ಮನವಿ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವಪಕ್ಷದ ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾಜಶೇಖರ್ ದೊಡ್ಡಣ್ಣ, ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಸರ್ಕಾರಸಹಾಯ ಧನ ಪಡೆಯಲು ಸೇವಾ ಸಿಂಧು ಆ್ಯಪ್ ಮೂಲಕಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು. ಆದರೆ ಈ ಪ್ರಕ್ರಿಯೆ ಗೊಂದಲಮಯವಾಗಿದ್ದು ಅರ್ಜಿಸಲ್ಲಿಕೆ ಮಾಡುವ ಅವಧಿಯನ್ನು ಈ ತಿಂಗಳಕೊನೆಯ ವರೆಗೂ ವಿಸ್ತರಿಸುವಂತೆ ಮನವಿ ಮಾಡಿದೆ.
ಸರಕಾರಚಮ್ಮಾರ, ಅಕ್ಕಸಾಲಿಗ ಮೊದಲಾದ ಸಂಘಟಿತ ವಲಯಗಳು ಮತ್ತುಆಟೋ ಹಾಗೂ ಕ್ಯಾಬ್ ಚಾಲಕರಿಗೆ ಪರಿಹಾರ ಘೋಷಿಸಿದೆ.ಆದರೆ ಅನೇಕ ಫಲಾನುಭವಿಗಳಿಗೆ ಆನ್‌ಲೈನ್ ಮೂಲಕ ಅರ್ಜಿಸಲ್ಲಿಸಲು ತಾಂತ್ರಿಕ ಪ್ರಕ್ರಿಯೆಯ ಬಗ್ಗೆ ಅರಿವಿಲ್ಲ. ಇದರಿಂದ ಸಾವಿರಾರು ಮಂದಿಗೆ ಈ ಪರಿಹಾರ ಧನ ತಲುಪುತ್ತಿಲ್ಲ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.