ಹಸಿರು ಪಟಾಕಿ ಬದಲು ಸಾಮಾನ್ಯ ಪಟಾಕಿ ಬಳಕೆ
50ಕ್ಕೂಹೆಚ್ಚು ಜನರಕಣ್ಣಿಗೆ ಹಾನಿ; ಇಬ್ಬರಿಗೆ ದೃಷ್ಟಿ ಹಾನಿ, 30 ಮಕ್ಕಳಿಗೆ ಗಾಯ
Team Udayavani, Nov 18, 2020, 11:54 AM IST
ಬೆಂಗಳೂರು: ರಾಜ್ಯ ಸರ್ಕಾರದ ಕಡ್ಡಾಯ ಹಸಿರು ಪಟಾಕಿ ಮಾರಾಟ ಮತ್ತು ಬಳಕೆ ನಿಯಮ ಜಾರಿಯಲ್ಲಿದ್ದರೂ, ರಾಜಧಾನಿಯಲ್ಲಿ ಸಾಮಾನ್ಯ ಪಟಾಕಿಯನ್ನೇ ಸಿಡಿಸುವ ಮೂಲಕ 50ಕ್ಕೂ ಹೆಚ್ಚುಮಂದಿ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾರೆ.
ಮಾಲಿನ್ಯ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಈ ಬಾರಿ ದೀಪಾವಳಿಗೆ ಹಸಿರು ಪಟಾಕಿ ಬಳಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಅಲ್ಲದೆ, ನ.12 ರಂದು ಹಸಿರು ಪಟಾಕಿ ಹೊರತಾಗಿ ಇತರೆ ಪಟಾಕಿ ಮಾರಾಟ ಮಾಡುವುದು ಹಾಗೂ ಸಿಡಿಸುವುದನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿತ್ತು.
ಈ ನಿಯಮ ಜಾರಿಗೊಳಿಸುವಂತೆ ಮಾಲಿನ್ಯ ನಿಯಂತ್ರಣಮಂಡಳಿ, ಸ್ಥಳೀಯ ಆಡಳಿತ ಸಂಸ್ಥೆಗಳು,ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿತ್ತು. ಆದರೂ, ಈ ಬಾರಿ ರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯ ಪಟಾಕಿಗಳುಹೆಚ್ಚು ಸದ್ದು ಮಾಡಿದೆ. ಇದರ ಪರಿಣಾಮ 30 ಮಕ್ಕಳನ್ನು ಸೇರಿದಂತೆ 50 ಮಂದಿ ಕಣ್ಣಿನ ಹಾನಿ ಮಾಡಿಕೊಂಡಿದ್ದಾರೆ. ಈ ಪೈಕಿ ಇಬ್ಬರು ಮಕ್ಕಳ ಕಣ್ಣಿಗೆ ತೀವ್ರ ಹಾನಿಯಾಗಿದ್ದು, ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.
ಸಾಮಾನ್ಯ ಪಟಾಕಿಯಿಂದಲೇ ಹಾನಿ: ನಗರದಲ್ಲಿ ಈ ಬಾರಿ ದೀಪಾವಳಿ ಹಬ್ಬದ ಮೂರು ದಿನಗಳಲ್ಲಿ ಪಟಾಕಿಯಿಂದ ಹಾನಿಗೊಳಗಾಗಿ ಮಿಂಟೋ ಆಸ್ಪತ್ರೆಯಲ್ಲಿ 11 ಮಂದಿ, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ19 ಮಂದಿ, ನಾರಾಯಣ ನೇತ್ರಾಲಯದಲ್ಲಿ 11 ಮಂದಿ, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ನಾಲ್ಕು ಮಂದಿ, ನೇತ್ರಧಾಮದಲ್ಲಿ ಮೂವರು ಚಿಕಿತ್ಸೆ ಪಡೆದಿದ್ದಾರೆ. ವೈದ್ಯರ ಬಳಿ ಪಟಾಕಿ ಕುರಿತು ಮಾಹಿತಿ ನೀಡುವ ಸಂದರ್ಭದಲ್ಲಿ ಎಲ್ಲರೂ ಸಾಮಾನ್ಯ ಪಟಾಕಿ ಬಳಸಿರುವುದಾಗಿ ಹೇಳಿದ್ದಾರೆ ಎಂದು ಆಯಾ ಆಸ್ಪತ್ರೆಗಳ ವೈದ್ಯರು “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.
ಮಾರ್ಗಸೂಚಿ ತಡವಾಗಿದ್ದೇ ಸಮಸ್ಯೆಯಾಯಿತೆ?: ಹಬ್ಬಕ್ಕೆ ಒಂದು ವಾರ ಮುಂಚೆ ನ.6 ರಂದು ಹಸಿರು ಪಟಾಕಿ ಬಳಕೆ ಮಾಡಿ ಎಂದಷ್ಟೇ ಮುಖ್ಯಮಂತ್ರಿಗಳು ರಾಜ್ಯದ ಜನರಿಗೆ ಸಂದೇಶ ನೀಡಿದ್ದರು. ಆದರೆ, ಸರ್ಕಾರದಿಂದ ಯಾವುದೇ ಮಾರ್ಗಸೂಚಿ ಇಲ್ಲದೆ ಜನರಿಗೆ ಹಸಿರು ಪಟಾಕಿ ಬಗ್ಗೆ ಸಾಕಷ್ಟು ಗೊಂದಲಗಳಿದ್ದವು. ಈ ಬಗ್ಗೆ ಕೋರ್ಟ್ ಕೂಡಾ ಸ್ಪಷ್ಟ ಮಾಹಿತಿ ನೀಡುವಂತೆ ಸರ್ಕಾರಕ್ಕೆ ತಿಳಿಸಿತ್ತು. ಆ ಬಳಿಕ ಹಬ್ಬದ ಒಂದು ದಿನ ಮುಂಚೆ ನ.12ಕ್ಕೆ ಸರ್ಕಾರದಿಂದ ಪರಿಷ್ಕೃತ ಸುತ್ತೋಲೆ ಹೊರಡಿಸಲಾಯಿತು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೂ ಮಾಹಿತಿ ಪ್ರಕಟಣೆ ನೀಡಿತು. ಮಾರ್ಗಸೂಚಿ ತಡವಾದ ಹಿನ್ನೆಲೆ ಪರಿಣಾಮಕಾರಿಯಾಗಿ ನಿಮಯ ಜಾರಿಗೊಳಿಸಲು ಮತ್ತು ಸಾರ್ವಜನಿಕ ಜಾಗೃತಿ ಮೂಡಿಸಲು ಸಾಧ್ಯವಾಗಿಲ್ಲ. ಹೀಗಾಗಿ, ಸಾಮಾನ್ಯ ಪಟಾಕಿ ಮಾರಾಟ ಮತ್ತು ಬಳಕೆಯಾಗಿರಬಹುದು ಎನ್ನುತ್ತಾರೆ ಪರಿಸರವಾದಿಗಳು.
ನಿರ್ಲಕ್ಷ್ಯವೇ ಕಾರಣ!: ನಗರದ 59 ಕಡೆಗಳಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಇಲ್ಲಿನ ಪಟಾಕಿ ಮಳಿಗೆಗಳಿಗೆ ತೆರಳಿ ಕಡ್ಡಾಯವಾಗಿ ಹಸಿರು ಪಟಾಕಿ ಮಾರಾಟ ಮಾಡುತ್ತಿದ್ದಾರೆಯೇ ತಪಾಸಣೆ ನಡೆಸುವಂತೆ ಸರ್ಕಾರ ಸೂಚಿಸಿತ್ತು. ಆದರೆ, ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಹುತೇಕ ಕಡೆ ಸರಿಯಾಗಿ ತಪಾಸಣೆ ಕಾರ್ಯ ನಡೆದಿಲ್ಲ. ರಾಜಾಜಿನಗರದಲ್ಲಿ ಮಾತ್ರ ಮೂವರು ವ್ಯಾಪಾರಿಗಳಿಗೆ ಸ್ಫೋಟಕ ವಸ್ತುಗಳ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಕಳೆದ ವರ್ಷಕಿಂತ್ಕ ಕಡಿಮೆಹಾನಿ : ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಟಾಕಿಯಿಂದಕಣ್ಣಿಗೆ ಹಾನಿ ಮಾಡಿಕೊಂಡವರ ಸಂಖ್ಯೆ ಅರ್ಧದಷ್ಟುಕಡಿಮೆಯಾಗಿದೆ. ನಗರದಲ್ಲಿ 2019ರಲ್ಲಿ120 ಮಂದಿ ಕಣ್ಣಿಗೆ ಹಾನಿಯಾಗಿತ್ತು. ಈ ಬಾರಿ 50ಕ್ಕೆ ಇಳಿಕೆಯಾಗಿದೆ, ಇದಕ್ಕೆ ಪ್ರಮುಖ ಕಾರಣ ಕೋವಿಡ್ ಹಿನ್ನೆಲೆ ಬಹುತೇಕ ಮಂದಿ ಪಟಾಕಿಯಿಂದ ಹಿಂದುಳಿದಿದ್ದಾರೆ. ಜತೆಗೆ ಹಸಿರು ಪಟಾಕಿ ಬಳಕೆಯು ಪರಿಣಾಮ ಬೀರಿದೆ.
ಸರ್ಕಾರ ಕೊನೆಯ ಹಂತದಲ್ಲಿ ನಿಯಮ ಜಾರಿಗೊಳಿಸಿದ್ದರಿಂದ ಅನೇಕರು ಸಾಮಾನ್ಯ ಪಟಾಕಿ ಪೆಟ್ಟಿಗೆ ಮೇಲೆ ಹಸಿರು ಪಟಾಕಿ ಎಂಬ ನಕಲಿ ಮಾಹಿತಿ ಚೀಟಿ ಹಾಕಿ ಮಾರಾಟ ಮಾಡಿದ್ದಾರೆ. ಆಕೃತಿ, ಗಾತ್ರ ಮತ್ತು ಶಬ್ಧದಲ್ಲಿ ಯಾವುದೇ ವ್ಯತ್ಯಾಸ ಇಲ್ಲದ ಹಿನ್ನೆಲೆ ಗ್ರಾಹಕರು ಕೂಡಾ ಹಸಿರು ಪಟಾಕಿ ಎಂದು ಖರೀದಿಸಿದ್ದಾರೆ. ಹೆಚ್ಚಿನ ಹಣ ಬಂಡವಾಳ ಹಾಕಿ ಹಸಿರು ಪಟಾಕಿ ಮಾರಾಟ ಮಾಡಿದ ಅನೇಕರಿಗೆ ನಷ್ಟವಾಗಿದೆ. – ಶಿವಪ್ರಕಾಶ್, ಹಸಿರು ಪಟಾಕಿ ಮಾರಾಟಗಾರರು
ಹಸಿರು ಪಟಾಕಿಎಂದೇ ಖರೀದಿಸಿದೆವು. ಆದರೆ, ಮನೆಗೆ ತೆರಳಿ ನೋಡಿದಾಗ ಪೆಟ್ಟಿಗೆ ಒಳಗೆ ಸಾಮಾನ್ಯ ಪಟಾಕಿಇದ್ದವು. ಮಗಳುಹೂ ಕುಂಡಹಚ್ಚಿದ್ದು, ಒಮ್ಮೆಗೆ ಸ್ಫೋಟಗೊಂಡಿತು. ಮುಖಭಾಗಹಾನಿಯಾಗಿದೆ. – ಹೆಸರು ಬೇಡ, ಗಾಯಗೊಂಡ ಮಗುವಿನ ತಾಯಿ
ಈ ಬಾರಿ ಪಟಾಕಿ ಹಾನಿಗೊಳಗಾಗಿ ಮಿಂಟೋ ಆಸ್ಪತ್ರೆಗೆ ಬಂದ 11 ಮಂದಿ ಪೈಕಿಎಲ್ಲರೂ ಸಾಮಾನ್ಯ ಪಟಾಕಿಯನ್ನೇ ಬಳಸಿದ್ದಾರೆ. ಹಸಿರು ಪಟಾಕಿ ಮತ್ತು ಅದರ ಲಭ್ಯತೆ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಹೇಳುತ್ತಿದ್ದಾರೆ. ಹೆಚ್ಚಿನ ಮಾಲಿನ್ಯಕಾರಕ ರಾಸಾಯನಿಕಗಳುಕಣ್ಣಿಗೆ ಸೇರಿದ್ದು, ಒಂಬತ್ತು ಮಕ್ಕಳಕಣ್ಣಿನ ಗುಡ್ಡೆಗೆ ತೀವ್ರ ಹಾನಿಯಾಗಿದೆ, ಇಬ್ಬರಿಗೆ ದೃಷ್ಟಿ ಹಾನಿಯಾಗಿದೆ. – ಡಾ.ಸುಜಾತಾ ರಾಥೋಡ್, ನಿರ್ದೇಶಕರು ಮಿಂಟೋ ಕಣ್ಣಿನ ಆಸ್ಪತ್ರೆ
ಹಸಿರು ಹೆಸರಲ್ಲಿ ಸಾಮಾನ್ಯ ಪಟಾಕಿ ಮಾರಾಟ ಕೆಲವೆಡೆ ಹಸಿರು ಪಟಾಕಿ ಹೆಸರಿನಲ್ಲಿ ಸಾಮಾನ್ಯ ಪಟಾಕಿಗಳನ್ನೇ ನೀಡಲಾಗಿದೆ. ಹಬ್ಬದ ಹಿಂದಿನ ದಿನ ಮಾರಾಟಕ್ಕೆ ಅನುಮತಿ ನೀಡಿದ ಹಿನ್ನೆಲೆ ಬಹುತೇಕ ಮಳಿಗೆಗಳಲ್ಲಿ ಜನದಟ್ಟಣೆ ಹೆಚ್ಚಿತ್ತು. ಈ ವೇಳೆ ಸಾಮಾನ್ಯ ಪಟಾಕಿಯನ್ನೇ ಹಸಿರು ಪಟಾಕಿ ಎಂದು ಮಾರಾಟ ಮಾಡಲಾಗಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.