ನಕಲಿ ನೋಟು ಜಾಲ: ಆರೋಪಿ ಖಾದಿರ್ ಪಶ್ಚಿಮ ಬಂಗಾಳದಲ್ಲಿ ಸೆರೆ
Team Udayavani, Dec 11, 2018, 12:26 PM IST
ಬೆಂಗಳೂರು: ನಕಲಿ ನೋಟು ಜಾಲಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿ ಅಬ್ದುಲ್ ಖಾದಿರ್‌ನನ್ನು ಸೋಮವಾರ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಅಧಿಕಾರಿಗಳು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದಾರೆ. ಈತ ಕರ್ನಾಟಕ ಹಾಗೂ ಪಶ್ಚಿಮ ಬಂಗಾಳದಲ್ಲಿರುವ ತನ್ನ ಸಹಚರರ ನೆರವಿನೊಂದಿಗೆ ಭಾರೀ ಪ್ರಮಾಣದ ಭಾರತದ ನಕಲಿ ನೋಟುಗಳನ್ನು ಸಾಗಣೆ ಮಾಡಿದ ಹಾಗೂ ಸಂಗ್ರಹ ಮಾಡಿಟ್ಟುಕೊಂಡ ಆರೋಪ ಎದುರಿಸುತ್ತಿದ್ದಾನೆ.
ತಲೆಮರೆಸಿಕೊಂಡಿದ್ದ ಖಾದಿರ್‌ನನ್ನು ಬಂಧಿಸುವಲ್ಲಿ ಎನ್‌ಐಎ ಹೈದರಾಬಾದ್‌ನ ತಂಡವು ಯಶಸ್ವಿಯಾಗಿದೆ. ಈ ಮೂಲಕ ಪ್ರಕರಣದಲ್ಲಿ 7 ಮಂದಿಯನ್ನು ಸೆರೆ ಹಿಡಿದಂತಾಗಿದೆ. ಬಾಂಗ್ಲಾದೇಶದಿಂದ ಭಾರತಕ್ಕೆ ನಕಲಿ ನೋಟುಗಳನ್ನು ಸರಬರಾಜು ಮಾಡುತ್ತಿದ್ದ ಆರೋಪದಲ್ಲಿ ಮೂವರ ವಿರುದ್ಧ ಸೋಮವಾರ ಇಲ್ಲಿನ ನ್ಯಾಯಾಲಯಕ್ಕೆ ಎನ್‌ಐಎ ಪೂರಕ ಆರೋಪಪಟ್ಟಿ ಸಲ್ಲಿಸಿದೆ. ಬಾಗಲಕೋಟೆ ಜಿಲ್ಲೆಯ ಗಂಗಾಧರ್ ಕೋಲ್ಕಾರ್ ಅಲಿಯಾ ಗಂಗಪ್ಪ, ಪಶ್ಚಿಮ ಬಂಗಾಳದ ಮಾಲ್ಡಾದವರಾದ ಶುಕೂರುದ್ದೀನ್ ಶೇಖ್ ಹಾಗೂ ಶಹನವಾಜ್ ಕಸೂರಿ ಹೆಸರಲ್ಲಿ ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ.
ಈ ಹಿಂದೆ ಮೊದಲ ಆರೋಪಪಟ್ಟಿ ಸಲ್ಲಿಸಿದ್ದ ಎನ್‌ಐಎ, ಅದರಲ್ಲಿ ದಾಲಿಮ್ ಮಿಯಾ, ಅಶೋಕ್ ಕುಂಬಾರ್ ಮತ್ತು ರಾಜೇಂದ್ರ ಪಾಟೀಲ್ ಎಂಬವರನ್ನು ಆರೋಪಿಗಳೆಂದು ಉಲ್ಲೇಖೀಸಿತ್ತು. ಆರೋಪಿ ಅಶೋಕ್ ಕುಂಬಾರ್ ಮನೆಯಿಂದ 2 ಸಾವಿರ ರೂ. ಮುಖಬೆಲೆಯ 82 ಸಾವಿರ ರೂ. ಮೊತ್ತದ ನಕಲಿ ನೋಟುಗಳನ್ನು ವಶಪಡಿಸಿಕೊಂಡ ಪ್ರಕರಣ ಇದಾಗಿದ್ದು, ಇದು “ಚಿಕ್ಕೋಡಿ ಎಫ್ಐಸಿಎನ್ ಕೇಸ್’ ಎಂದೇ ಕುಖ್ಯಾತಿ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.