ಮಹಿಳಾ ಸಹಾಯವಾಣಿ ಕುರಿತು ನಕಲಿ ಪೋಸ್ಟ್
Team Udayavani, Dec 9, 2019, 11:19 AM IST
ಬೆಂಗಳೂರು: ಹೈದರಾಬಾದ್‌ನ ಪಶು ವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಬಳಿಕ ಮಹಿಳಾ ಸುರಕ್ಷತೆ ಬಗ್ಗೆ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ನಗರ ಪೊಲೀಸರು ಕೈಗೊಳ್ಳುತ್ತಿದ್ದಾರೆ. ಅದರ ಬೆನ್ನಲ್ಲೇ ಕಿಡಿಗೇಡಿಗಳ ಗುಂಪೊಂದು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಮಹಿಳಾ ಸಹಾಯವಾಣಿ ನಂಬರ್‌ಗಳನ್ನು ಹರಿಬಿಟ್ಟು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.
ಇದಕ್ಕೆ ಸ್ವಂತ ಬೆಂಗಳೂರು ನಗರ ಪೊಲೀಸರೇ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದ್ದು, ನಕಲಿ ಪೋಸ್ಟ್‌ಗಳನ್ನು ಸಾರ್ವಜನಿಕರು ಪರಿಗಣಿಸಬಾರದು. ಈ ರೀತಿ ಯಾವುದೇ ಮಹಿಳಾ ಸಹಾಯವಾಣಿಯನ್ನು ಕಾರ್ಯರೂಪಕ್ಕೆ ತಂದಿಲ್ಲ. ಇದು ಸುಳ್ಳು ಸುದ್ದಿ. ಪೋಸ್ಟ್‌ನಲ್ಲಿ ಇರುವುದು ಪೊಲೀಸ್ ಇಲಾಖೆಯ ನಂಬರ್ ಅಲ್ಲ. ನಕಲಿ ನಂಬರ್. ದಯವಿಟ್ಟು ಅಂತಹ ಸಂದೇಶ, ಪೋಸ್ಟ್‌ಗಳ ಬಗ್ಗೆ ಎಚ್ಚರಿಕೆವಹಿಸಿ ಎಂದು ಮನವಿ ಮಾಡಿದ್ದಾರೆ.
ಅಲ್ಲದೆ, ಸುಳ್ಳು ಸುದ್ದಿಗಳನ್ನು ನಂಬಬೇಡಿ, ಶೇರ್ ಕೂಡ ಮಾಡಬೇಡಿ. ಈ ರೀತಿಯ ಸುಳ್ಳು ಸಂದೇಶಗಳನ್ನು ಹರಿಬಿಟ್ಟಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಬೆಂಗಳೂರು ಸಿಟಿ ಪೊಲೀಸರು ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ. ಅದಕ್ಕೆ ಟ್ವಿಟರ್ ಬಳಕೆದಾರರೊಬ್ಬರು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಿರ್ಭಯಾ ನಂಬರ್ ಬಗ್ಗೆ ಪ್ರಶ್ನಿಸಿದಾಗ, ಅದು ಕೂಡ ನಕಲಿ ನಂಬರ್ ಎಂದು ಪೊಲೀಸರು ಪ್ರತಿಕ್ರಿಯೆಸಿದ್ದಾರೆ. ಹೀಗಾಗಿ ವಾಟ್ಸ್‌ಆ್ಯಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂಗಳಲ್ಲಿ ಹರಿದಾಡುತ್ತಿರುವ ನಕಲಿ ನಂಬರ್‌ಗಳನ್ನು ಶೇರ್ ಮಾಡುವ ಮೊದಲು ಪರಿಶೀಲಿಸಿ. ಒಂದು ವೇಳೆ ಈ ರೀತಿ ಮಹಿಳಾ ಸಹಾಯವಾಣಿಗಳನ್ನು ಕಾರ್ಯರೂಪಕ್ಕೆ ತಂದರೆ ಆ ಬಗ್ಗೆ ಪೊಲೀಸರೇ ಅಧಿಕೃತ ಮಾಹಿತಿ ನೀಡುತ್ತಾರೆ. ಆದ್ದರಿಂದ ಈ ರೀತಿ ಸುಳ್ಳು ಸಂದೇಶ, ಸುದ್ದಿಗಳ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಬೇಕಿದೆ ಎಂದು ಕೋರಿದ್ದಾರೆ.
ನಕಲಿ ಪೋಸ್ಟ್‌ನಲ್ಲಿ ಏನಿದೆ?: ರಾತ್ರಿ ವೇಳೆ ಮಹಿಳೆಯರಿಗೆ ಓಡಾಡಲು ವಾಹನ ಸಿಗದಿದ್ದರೆ ಬೆಂಗಳೂರು ಸಿಟಿ ಪೊಲೀ ಸರು ತಮ್ಮ ವಾಹನದಲ್ಲಿಯೇ ಕರೆದುಕೊಂಡು ಸುರಕ್ಷಿತವಾಗಿ ಮನೆಗೆ ತಲುಪಿಸುತ್ತಾರೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 8 ಗಂಟೆವರೆಗೆ ಮಹಿಳೆಯರು ಪೊಲೀಸರಿಗೆ ಕರೆ ಮಾಡಿ ಸಹಾಯ ಕೋರಬಹುದಾಗಿದೆ. 1091 ಮತ್ತು 7837018555 ಸಂಖ್ಯೆಗೆ 24/7 ಕರೆ ಮಾಡಬಹುದಾಗಿದೆ. ನೀವು ಕರೆ ಮಾಡಿದ ಕೆಲವೇ ನಿಮಿಷಗಳಲ್ಲಿ ಕಂಟ್ರೋಲ್ ರೂಮ್ ಹತ್ತಿರದ ಪಿಸಿಆರ್ ವಾಹನ ಅಥವಾ ಎಸ್‌ಎಚ್‌ಒ ವಾಹನ ನೀವಿದ್ದಲ್ಲಿಗೆ ಬಂದು, ನಿಮ್ಮನ್ನು ಸುರಕ್ಷಿತವಾಗಿ ನೀವು ತಲುಬೇಕಾದ ಸ್ಥಳಕ್ಕೆ ಕರೆದೊಯ್ಯುತ್ತಾರೆ. ಈ ಸೇವೆಯನ್ನು ಪೊಲೀಸರು ಉಚಿತವಾಗಿ ನೀಡುತ್ತಿದ್ದಾರೆ. ದಯವಿಟ್ಟು ಈ ಸಂದೇಶವನ್ನು ಫಾರ್ವರ್ಡ್ ಮಾಡಿ ಎಂದು ನಕಲಿ ಪೋಸ್ಟ್ ಗಳನ್ನು ಕಿಡಿಗೇಡಿಗಳು ಹರಿಬಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ
Imprisonment: ಸಂಘಟನೆಗಾಗಿ ದರೋಡೆ: ಜೆಎಂಬಿ ಉಗ್ರನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ
Fraud: ಆಂಧ್ರ ಮಾಜಿ ಸಿಎಂ ಆಪ್ತನ ಹೆಸರಲ್ಲಿ ವಂಚನೆ
Arrested: ಸರ್ಕಾರಿ ನೌಕರಿ ಆಸೆ ತೋರಿಸಿ 46 ಜನಕ್ಕೆ 1 ಕೋಟಿ ವಂಚನೆ: ರೈಲ್ವೆ ಅಧಿಕಾರಿ ಸೆರೆ
Bengaluru: ಸಿನಿಮೀಯವಾಗಿ ಬೈಕ್ ಕಳ್ಳನನ್ನು ಹಿಡಿದ ಜಲಮಂಡಳಿ ಅಧಿಕಾರಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.