ಸುಳ್ಳು ಆರೋಪ ಮಾಡಿದ್ರೆ ಸುಮ್ಮನಿರಲ್ಲ: ನ್ಯಾ. ವಿಶ್ವನಾಥ ಶೆಟ್ಟಿ


Team Udayavani, Jan 27, 2017, 3:45 AM IST

Kar-lokayukta.jpg

ಬೆಂಗಳೂರು: ಕೆಲವು ಕಹಿ ಘಟನೆಗಳಿಂದ ಜನರ ವಿಶ್ವಾಸ ಕಳೆದುಕೊಂಡಿರುವ ಲೋಕಾಯುಕ್ತ ಸಂಸ್ಥೆಯನ್ನು ಪರಿಣಾಮಕಾರಿಯಾಗಿ ಬಲಬಡಿಸುವುದು ತಮ್ಮ ಆದ್ಯತೆಯಾಗಿದೆ. ಭ್ರಷ್ಟಾಚಾರವನ್ನು ತೊಡೆದುಹಾಕುವುದರ ಜತೆಗೆ ಜನ ಸಾಮಾನ್ಯರ ಕಷ್ಟಕ್ಕೆ ನನ್ನದೇ ಆದ ಶೈಲಿಯಲ್ಲಿ ಸ್ಪಂದಿಸಲು ಲೋಕಾಯುಕ್ತರಾಗಿ ಶ್ರಮಿಸುತ್ತೇನೆ ಎಂದು ಲೋಕಾಯುಕ್ತ ಹುದ್ದೆಗೆ ಆಯ್ಕೆಗೊಂಡಿರುವ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನ್ಯಾ.ಪಿ.ವಿಶ್ವನಾಥ ಶೆಟ್ಟಿ ಹೇಳಿದ್ದಾರೆ.

ಈ ಕುರಿತು “ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿರುವ ಅವರು, ತಮ್ಮ ಮೇಲೆ ವಿನಾ ಕಾರಣ ಮಾಡಿದ ಆರೋಪಗಳಿಂದ ನೋವಾಗಿತ್ತು. ಈಗ ಸತ್ಯಾಸತ್ಯತೆ ತಿಳಿದು ಲೋಕಾಯುಕ್ತರನ್ನಾಗಿ ತಮ್ಮನ್ನು ನೇಮಕ ಮಾಡುವ ಸರ್ಕಾರದ ಪ್ರಸ್ತಾವನೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಇದು ತಮಗೆ ಸಂತಸ ತಂದಿದ್ದು, ತಮ್ಮ ಹೊಸ ಜವಾಬ್ದಾರಿ ಮತ್ತು ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಹೇಳಿದ್ದಾರೆ.

ನ್ಯಾ. ವಿಶ್ವನಾಥ ಶೆಟ್ಟಿ ಅವರ ಸಂದರ್ಶನ ಪೂರ್ಣ ಪಾಠ ಹೀಗಿದೆ.

ಲೋಕಾಯುಕ್ತರಾಗಲಿರುವ ವಿಷಯ ತಿಳಿದು ಏನನ್ನಿಸಿತು?
      ಖುಷಿಯಾಗಿದೆ. ಏಕೆಂದರೆ, ಲೋಕಾಯುಕ್ತ ಸ್ಥಾನಕ್ಕೆ ಸರ್ಕಾರ ನನ್ನ ಹೆಸರನ್ನು ಅಂತಿಮಗೊಳಿಸಿ ರಾಜ್ಯಪಾಲರಿಗೆ ಶಿಫಾರಸು ಮಾಡಿದಾಗ ಕೆಲವರು ವೈಯಕ್ತಿಕವಾಗಿ ನನ್ನ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಇದರಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಏನೂ ತಪ್ಪು ಮಾಡದ ನನಗೆ ಇದೆಲ್ಲ ಬೇಕಿತ್ತಾ ಎಂದೆನಿಸಿತ್ತು. ಆದರೆ, ಅನೇಕ ಹಿರಿಯ-ಕಿರಿಯ ಸ್ನೇಹಿತರು ಸಮಾಧಾನದ ಮಾತುಗಳನ್ನು ಹೇಳಿ ಧೈರ್ಯ ತುಂಬಿದರು. ಲೋಕಾಯುಕ್ತ ಸಂಸ್ಥೆಯನ್ನು ಎಷ್ಟು ದಿನ ಹೀಗೆ ಖಾಲಿ ಬಿಟ್ಟಿರಬೇಕು ಎಂದು ಪ್ರಶ್ನಿಸಿದ್ದರು. ಹೀಗಾಗಿ, ಯಾವ ಆರೋಪಗಳಿಗೂ ತಲೆಕೆಡಿಸಿಕೊಳ್ಳದೆ ಎಲ್ಲ ಅವಮಾನಗಳನ್ನು ಸಹಿಸಿಕೊಂಡು ಮೌನವಾಗಿದ್ದೆ. ಇಲ್ಲದಿದ್ದರೆ, ಆಗಲೇ ಹಿಂದೆ ಸರಿಯುತ್ತಿದ್ದೆ. ಕೊನೆಗೂ ಸತ್ಯ, ನ್ಯಾಯಕ್ಕೆ ಬೆಲೆ ಸಿಕ್ಕಿದೆ.

ಆರೋಪ ಮಾಡಿದವರಿಗೆ ಈಗ ನಿಮ್ಮ ಉತ್ತರ ಏನು ?
      ನನ್ನ ಮೇಲೆ ಈ ರೀತಿ ಇಲ್ಲ-ಸಲ್ಲದ ಆರೋಪಗಳನ್ನು ಮುಂದುವರಿಸಿದರೆ ಇನ್ನು ಮುಂದೆ ಕಾನೂನು ಬಲ್ಲವನಾಗಿ ಸುಮ್ಮನಿರಲು ಸಾಧ್ಯವಿಲ್ಲ. ಸತ್ಯಕ್ಕೆ ದೂರವಾದ ಆರೋಪಗಳಿಗೆ ಕಾನೂನು ಪ್ರಕಾರ ಏನು ಕ್ರಮ ಜರುಗಿಸಬೇಕು ಎಂಬುದು ನನಗೆ ಚೆನ್ನಾಗಿ ಗೊತ್ತು. ಮರ್ಯಾದೆಗೆ ಹೆದರುತ್ತೇನೆಯೇ ಹೊರತು ಹುರುಳಿಲ್ಲದ ಆರೋಪ, ಬೆದರಿಕೆಗಳಿಗೆ ಬಗ್ಗುವುದಿಲ್ಲ. ಸುಳ್ಳು ಆರೋಪ ಮಾಡಿದವರಿಗೆ ತಕ್ಕ ಪಾಠ ಕಲಿಸುತ್ತೇನೆ.

ಭ್ರಷ್ಟಾಚಾರ ಪ್ರಕರಣಗಳಿಂದ ಬಲಹೀನವಾಗಿರುವ ಲೋಕಾಯುಕ್ತ ಸಂಸ್ಥೆಗೆ ಹೇಗೆ ಮರುಜೀವ ಕೊಡುತ್ತೀರಿ ?
      ಯಾವುದೇ ಸಂಸ್ಥೆ ಕೂಡ ವ್ಯಕ್ತಿ ಆಧಾರಿತ ಅಲ್ಲ. ಅದೊಂದು ವ್ಯವಸ್ಥೆ, ಮೊದಲು ಆ ವ್ಯವಸ್ಥೆಯನ್ನು ಕೆಳ ಹಂತದಿಂದ ಮೇಲಿನ ತನಕ ಗಟ್ಟಿಗೊಳಿಸಬೇಕು. ಲೋಕಾಯುಕ್ತದಲ್ಲಿ ಗುಮಾಸ್ತನಿಂದ ಹಿಡಿದು ಉನ್ನತ ಸ್ಥಾನದ ತನಕ ಪ್ರತಿ ಅಧಿಕಾರಿಯೂ ಲೋಕಾಯುಕ್ತರಾಗಿ ಕೆಲಸ ಮಾಡಬೇಕಾಗುತ್ತದೆ. ಅವರ ಪೈಕಿ ನಾನು ಒಬ್ಬನಾಗಿ ಕೆಲಸ ಮಾಡುವೆ. ಮುಂದೆ ಆ ಸಂಸ್ಥೆಗೆ ಯಾರೇ ಬರಲಿ, ಹೋಗಲಿ; ಸಂಸ್ಥೆ ಮಾತ್ರ ಬಲಿಷ್ಠವಾಗಿ ಮುಂದುವರಿಯಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಇಡೀ ಲೋಕಾಯುಕ್ತ ವ್ಯವಸ್ಥೆಯನ್ನು ಬಲಗೊಳಿಸುವುದಕ್ಕೆ ನನ್ನ ಮೊದಲ ಆದ್ಯತೆ.

ಮುಂದೆ ನಿಮ್ಮ ಕಾರ್ಯ  ಶೈಲಿ ಹೇಗಿರುತ್ತದೆ ?
      ಈ ಹಿಂದೆ ಲೋಕಾಯುಕ್ತರಾಗಿದ್ದವರು, ಅವರವರ ಅವಧಿಯಲ್ಲಿ ಅವರವರ ಕಾರ್ಯ ಶೈಲಿಯಲ್ಲಿ ನಡೆದುಕೊಂಡಿದ್ದಾರೆ. ಹಿಂದಿನವರ ಒಳ್ಳೆಯ ಅನುಭವಗಳನ್ನು ಮುಂದುವರಿಸುತ್ತೇನೆ. ನನಗೆ ಪ್ರಚಾರದ ಹುಚ್ಚು ಇಲ್ಲ. ಈ ಹುದ್ದೆಗೆ ಬಂದು ದುಡ್ಡು ಮಾಡುವ ಅಗತ್ಯವೂ ಇಲ್ಲ. 52 ವರ್ಷಗಳ ಕಾನೂನು ಅನುಭವದೊಂದಿಗೆ ನನ್ನದೇ ಆದ ಶೈಲಿಯಲ್ಲಿ ಒಳ್ಳೆಯ ಕೆಲಸ ಮಾಡಿ ತೋರಿಸುವೆ.

ನಿಮ್ಮ  ಮಗ ಕೂಡ ಜನಪ್ರಿಯ ವಕೀಲ.  ನೀವು ಲೋಕಾಯುಕ್ತರಾದರೆ ಈ ಹಿಂದೆ ಆದಂತೆ ಅಪ್ಪನ ಕೆಲಸದಲ್ಲಿ ಮಗನ ಹಸ್ತಕ್ಷೇಪವಾಗಬಹುದೇ?
      ನಿಮಗೆ ಸರಿಯಾಗಿ ಕೆಲಸ ಮಾಡುವ ಅನುಭವ, ಸಾಮರ್ಥ್ಯ ಇಲ್ಲದೆ ಹೋದಾಗ ಮಕ್ಕಳು, ಸಂಬಂಧಿಕರು ಸೇರಿದಂತೆ ಬೇರೆಯವರನ್ನು ಹತ್ತಿರಕ್ಕೆ ಸೇರಿಸಿಕೊಳ್ಳಬೇಕಾಗುತ್ತದೆ. ಕೆಲಸದ ಬಗ್ಗೆ ಸರಿಯಾದ ಜ್ಞಾನವಿದ್ದರೆ, ಮಕ್ಕಳು ಸೇರಿದಂತೆ ಯಾರು ಕೂಡ ಹಸ್ತಕ್ಷೇಪ ಮಾಡುವುದಿಲ್ಲ. ಹಾಗಂತ, ಜಡ್ಜ್ಗಳ ಮಕ್ಕಳು ವಕೀಲರಾಗಬಾರದೇ ? ನನ್ನ ಮಕ್ಕಳೆಲ್ಲ ಉತ್ತಮ ಸ್ಥಿತಿಯಲ್ಲಿದ್ದು, ನಿರೀಕ್ಷೆಗೂ ಮೀರಿದ ಸಂಪಾದನೆ ಇದೆ. ಹೀಗಿರುವಾಗ, ನನ್ನ ಅಧಿಕಾರಾವಧಿಯಲ್ಲಿ ಲೋಕಾಯುಕ್ತದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯ ಅವರಿಗಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ನನ್ನ ಕೆಲಸದಲ್ಲಿ ಕುಟುಂಬದವರ ಹಸ್ತಕ್ಷೇಪಕ್ಕೆ ಅವಕಾಶ ನೀಡುವಷ್ಟು ಕೀಳು ಮಟ್ಟದ ವ್ಯಕ್ತಿತ್ವ ನನ್ನದಲ್ಲ.

ಲೋಕಾಯುಕ್ತದಲ್ಲೀಗ ಬೆಟ್ಟದಷ್ಟು ಸಮಸ್ಯೆ, ಹಗರಣಗಳಿದ್ದು ಸರಿಪಡಿಸುವುದು ದೊಡ್ಡ ಸವಾಲು ಅಲ್ಲವೇ ?
      ನಾನೊಬ್ಬ ಶಿಸ್ತಿನ ಸಿಪಾಯಿ. ಚಿಕ್ಕ ವಯಸ್ಸಿನಿಂದಲೂ ಸವಾಲಿನ ಕೆಲಸಗಳನ್ನು ನಿಭಾಯಿಸುತ್ತಾ ಬೆಳೆದವನು. ಲೋಕಾಯುಕ್ತ ಸಂಸ್ಥೆಯಲ್ಲಿನ ಎಲ್ಲ ಬೆಳವಣಿಗೆಗಳ ಬಗ್ಗೆಯೂ ಗೊತ್ತಿದೆ. ಅಲ್ಲಿರುವ ಎಲ್ಲ ರೀತಿಯ ಕಾಯಿಲೆಗೂ ಸರಿಯಾದ ಔಷಧ ಕೊಡುವ ಸಾಮರ್ಥ್ಯ, ಯೋಗ್ಯತೆ ನನ್ನಲ್ಲಿ ಇದೆ. ಹಾಗಂತ, ರಾತ್ರಿ ಬೆಳಗಾಗುವುದರೊಳಗೆ ನನ್ನೊಬ್ಬನಿಂದಲೇ ಎಲ್ಲವೂ ಬದಲಾಗುತ್ತದೆ ಎಂಬ ಭ್ರಮೆಯೂ ಇಲ್ಲ. ಸಮಸ್ಯೆಗಳು ಎಲ್ಲ ಕಡೆ ಇರುತ್ತದೆ. ಅದನ್ನು ಸರಿಪಡಿಸಲು ನಾನು ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕೆಲಸ ಮಾಡುತ್ತೇನೆ.

ಭ್ರಷ್ಟರನ್ನು ಹೇಗೆ ಮಟ್ಟ ಹಾಕುತ್ತೀರಿ?
     ಜನಸಾಮಾನ್ಯರಿಗೆ ಒಳ್ಳೆಯ ಕೆಲಸ ಮಾಡಲು ಹೋದಾಗ, ಭ್ರಷ್ಟರಿಗೆ ತೊಂದರೆ ಆಗುವುದು ಸಹಜ. ಜಡ್ಜ್ ಅಗಿದ್ದ ನನಗೆ ಸಾರ್ವಜನಿಕರ ಸೇವೆ ಮಾಡುವುದಕ್ಕೆ ಇದು ಮತ್ತೂಂದು ಅವಕಾಶ. ನನ್ನ ಮನಸ್ಸು, ನಡತೆ ಸ್ವತ್ಛವಾಗಿದೆ. ಹೀಗಿರುವಾಗ, ಭ್ರಷ್ಟಾಚಾರ ನಿರ್ಮೂಲನೆ ಮಾಡುವ ವಿಚಾರ ಬಂದಾಗ ಯಾವುದಕ್ಕೂ ಹೆದರುವ, ಹಿಂಜರಿಯುವ ವ್ಯಕ್ತಿಯಲ್ಲ. ಎಲ್ಲವನ್ನೂ ಕಾನೂನು ಪ್ರಕಾರ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವ ವ್ಯಕ್ತಿ ನಾನು.

ಲೋಕಾಯುಕ್ತಕ್ಕೆ ಪರ್ಯಾಯವಾಗಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕೂಡ ಅಸ್ತಿತ್ವಕ್ಕೆ ಬಂದಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು?
      ಈ ಹಂತದಲ್ಲಿ ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.

ನಿಮಗೆ ಲೋಕಾಯುಕ್ತರಾಗುವ ಆಸೆ ಅಥವಾ ನಿರೀಕ್ಷೆ ಇತ್ತೇ?
     ಖಂಡಿತಾ ಇಲ್ಲ. ಜಡ್ಜ್ ಆಗಿ ನಿವೃತ್ತಿ ಹೊಂದಿದ ಬಳಿಕ ರಾಷ್ಟ್ರ ಮಟ್ಟದಲ್ಲಿ “ಇಂಟಲೆಚ್ಚುéವಲ್‌ ಪ್ರಾಪರ್ಟಿ ಅಪಲೆಟ್‌ ಟ್ರಿಬ್ಯೂನಲ್‌’ ಹಾಗೂ ಸುಪ್ರೀಂಕೋರ್ಟ್‌ನ ಇ-ಕಮಿಟಿ ಅಧ್ಯಕ್ಷ ಸ್ಥಾನಕ್ಕೆ ನೇಮಕವಾಗುವ ಅವಕಾಶ ನನಗೆ ಬಂದಿತ್ತು. ಆದರೆ, ಈ ಎರಡು ಉನ್ನತ ಹುದ್ದೆಯನ್ನೂ ನಯವಾಗಿ ತಿರಸ್ಕರಿಸಿದ್ದೆ. ಲೋಕಾಯುಕ್ತನಾಗುವ ನಿರೀಕ್ಷೆ ಅಥವಾ ಆಸೆ ಖಂಡಿತಾ ಇರಲಿಲ್ಲ. ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದ್ದರಿಂದ ಅದನ್ನು ಒಪ್ಪಿಕೊಂಡೆ.

ಒಂದೊಮ್ಮೆ, ರಾಜ್ಯಪಾಲರು ನಿಮ್ಮ ಹೆಸರನ್ನೂ ವಾಪಾಸು ಕಳುಹಿಸುತ್ತಿದ್ದರೆ?
      ನಾನೇನು ನಿರುದ್ಯೋಗಿಯಾಗಿ ಕುಳಿತಿರಲಿಲ್ಲ. ಸುಪ್ರೀಂಕೋರ್ಟ್‌ನಲ್ಲಿ ವಕೀಲನಾಗಿ ಕೈತುಂಬ ಕೆಲಸವೂ ಇದೆ, ದುಡ್ಡು ಕೂಡ ಬರುತ್ತಿದೆ. ಹೀಗಿರುವಾಗ, ದುಡ್ಡು, ಅಧಿಕಾರದ ಆಸೆಗೋಸ್ಕರ ಲೋಕಾಯುಕ್ತನಾಗಬೇಕೆಂದು ಯಾವತ್ತೂ ಆಸೆಪಟ್ಟಿಲ್ಲ. ಹುದ್ದೆ ಕೈತಪ್ಪಿ ಹೋಗುತ್ತಿದ್ದರೆ, ವೈಯಕ್ತಿಕವಾಗಿ ಯವುದೇ ನಷ್ಟ ಕೂಡ ಆಗುತ್ತಿರಲಿಲ್ಲ.

ಲೋಕಾಯುಕ್ತರಾಗಿ ನಿಮ್ಮ ಮೇಲೆ ರಾಜ್ಯದ ಜನತೆ ಬಹಳಷ್ಟು  ನಿರೀಕ್ಷೆ ಇಟ್ಟುಕೊಳ್ಳಬಹುದು?
      ಒಬ್ಬನಿಂದಲೇ ಎಲ್ಲವನ್ನೂ ಸರಿಪಡಿಸಲು ಸಾಧ್ಯವಿಲ್ಲ. ಒಂದು ಸಂಸ್ಥೆಗೆ ಗಟ್ಟಿಯಾದ ತಳಪಾಯ ಮತ್ತು ಯಜಮಾನನಿರಬೇಕು. ಯಜಮಾನನ ತಲೆ ಹೋದರೂ ಆ ಸಂಸ್ಥೆ ಯಥಾಸ್ಥಿತಿ ಮುಂದುವರಿಯುವ ವಾತಾವರಣ ನಿರ್ಮಾಣವಾಗಬೇಕು. ನಾವು ಸರಿಯಾಗಿದ್ದರೆ ಎಲ್ಲವೂ ಸರಿಯಾಗಿ ನಡೆಯುತ್ತದೆ; ಎಲ್ಲರಿಂದಲೂ ಸಹಕಾರ ದೊರೆಯುತ್ತದೆ. ಒಂದುವೇಳೆ, ಸಂಸ್ಥೆಯಲ್ಲಿ ಕೆಟ್ಟ ವ್ಯಕ್ತಿಗಳು ಇದ್ದರೂ ನಾವು ಇರುವ ತನಕ ಅವರೆಲ್ಲ ಒಳ್ಳೆಯವರಾಗಿ ಕೆಲಸ ಮಾಡುತ್ತಾರೆ. ಹೀಗಾಗಿ, ಜನರ ನಿರೀಕ್ಷೆಗಳನ್ನು ಹುಸಿಗೊಳಿಸದ ರೀತಿ ಕೆಲಸ ಮಾಡುವ ನಂಬಿಕೆ ನನಗಿದೆ.

– ಸುರೇಶ್‌ ಪುದುವೆಟ್ಟು

ಟಾಪ್ ನ್ಯೂಸ್

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

FIR–Court

FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.