ಮೇಳದಲ್ಲಿ ತಂತ್ರಜ್ಞಾನದತ್ತ ರೈತರ ಚಿತ್ತ
Team Udayavani, Oct 26, 2019, 10:15 AM IST
ಬೆಂಗಳೂರು: ಸಾಂಪ್ರದಾಯಿಕ ಪದ್ಧತಿಗೆ ಅಂಟಿಕೊಂಡಿದ್ದ ರೈತರು ನಿಧಾನವಾಗಿ ತಂತ್ರಜ್ಞಾನದತ್ತ ಮುಖಮಾಡುತ್ತಿದ್ದಾರೆ. ಕುತೂಹಲದಿಂದ ವೀಕ್ಷಿಸಿ, ಅವುಗಳನ್ನು ಅಳವಡಿಸಿಕೊಳ್ಳುವ ಉತ್ಸುಕತೆ ತೋರಿಸುತ್ತಿದ್ದಾರೆ. – ಇಂತಹದ್ದೊಂದು ಪೂರಕ “ಟ್ರೆಂಡ್’ ಈ ಬಾರಿ ಕೃಷಿ ಮೇಳದಲ್ಲಿ ಕಂಡುಬರುತ್ತಿದೆ.
ಅದಕ್ಕೆ ತಕ್ಕಂತೆ ತಂತ್ರಜ್ಞಾನಗಳ ಪ್ರದರ್ಶನಕ್ಕೆ ಹೆಚ್ಚು ಒತ್ತುಕೊಡಲಾಗಿದೆ. ಅದಕ್ಕೆ ತಕ್ಕಂತೆ ಕಳೆದೆರಡು ದಿನಗಳಲ್ಲಿ ಭೇಟಿ ನೀಡಿದ ರೈತರು ಕೂಡ ಕೃಷಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಳಿಗೆಗಳು ಮತ್ತು ಪ್ರಾತ್ಯಕ್ಷಿಕೆಗಳಿಗೆ ಭೇಟಿ ನೀಡಿ, ಮಾಹಿತಿ ಪಡೆಯುತ್ತಿರುವುದು ಕಂಡುಬಂದಿತು. ಸೆನ್ಸರ್ ಆಧಾರಿತ ಬೇಸಾಯ, ಡ್ರೋನ್ ಬಳಕೆ, ಕಡಿಮೆ ಜಮೀನಿನಲ್ಲಿ ನಿಖರ ಬೇಸಾಯ ಪದ್ಧತಿಯಿಂದ ಹೆಚ್ಚು ಬೆಳೆಗಳನ್ನು ಬೆಳೆಯುವುದು, ನೀರಿನ ಸದ್ಬಳಕೆಗೆ ಸೂಕ್ಷ್ಮ ನೀರಾವರಿ, ನೀರಿನೊಂದಿಗೆ ಪೋಷಕಾಂಶ ಪೂರೈಸುವ ರಸಾವರಿ, ಸಂರಕ್ಷಿತ ಬೇಸಾಯ ಸೇರಿದಂತೆ ಹಲವು ಪ್ರದರ್ಶನಗಳು ಈ ಬಾರಿಯ ಪ್ರಮುಖ ಆಕರ್ಷಣೆಗಳಾಗಿವೆ. ಭೇಟಿ ನೀಡುವ ರೈತರು, ತಂತ್ರಜ್ಞಾನದ ಕಾರ್ಯವೈಖರಿ, ಖರ್ಚು-ವೆಚ್ಚದ ಮಾಹಿತಿ ಪಡೆಯುತ್ತಿದ್ದಾರೆ ಎಂದು ಜಿಕೆವಿಕೆ ವಿಜ್ಞಾನಿಗಳು ತಿಳಿಸುತ್ತಾರೆ.
250ಕ್ಕೂ ಅಧಿಕ ಜನ ಅಳವಡಿಕೆಗೆ ಆಸಕ್ತಿ: “ನಾನು ಕಳೆದ ಆರು ವರ್ಷಗಳಿಂದ ಕೃಷಿ ಮೇಳವನ್ನು ನೋಡುತ್ತಿದ್ದೇನೆ. ಈ ಬಾರಿ ರೈತರ ಆಸಕ್ತಿ ಕೊಂಚ ಭಿನ್ನವಾಗಿದೆ. ಭತ್ತದ ಬೆಳೆಯಲ್ಲಿ ಅಳವಡಿಸಿದ ನಿಖರ ಕೃಷಿಯನ್ನು ಕಳೆದೆರಡು ದಿನಗಳಲ್ಲಿ 30 ಸಾವಿರಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಇದರಲ್ಲಿ ಸುಮಾರು 250 ಜನ ಸಾಕಷ್ಟು ಮಾಹಿತಿ ಪಡೆದುಕೊಂಡು, ಅಳವಡಿಸಿ ಕೊಳ್ಳುವ ಭರವಸೆ ನೀಡಿದರು. ಹೀಗೆ ತಂತ್ರಜ್ಞಾನ ಅಳವಡಿಕೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ’ ಎಂದು ಬೇಸಾಯ ಶಾಸ್ತ್ರಜ್ಞ ಡಾ.ಡಿ.ಸಿ. ಹನುಮಂತಪ್ಪ ಹೇಳಿದರು.
ಇದಲ್ಲದೆ, ಪ್ರಸಕ್ತ ಸಾಲಿನಲ್ಲಿ ಬಿ2ಬಿ ಆಯೋಜಿಸಲಾಗಿದೆ. ರೈತರು ಮತ್ತು ಉದ್ಯಮಿಗಳು ಹಾಗೂ ವಿಜ್ಞಾನಿಗಳ ನಡುವೆ ಸಂಪರ್ಕ ಕಲ್ಪಿಸಲು ಈ ವೇದಿಕೆಯನ್ನು ಮೊದಲ ಬಾರಿಗೆ ರೂಪಿಸಲಾಗಿದೆ. ಕೆಲವು ರೈತರು ನೀರು ನಿರ್ವಹಣೆ, ಸಮಗ್ರ ಬೇಸಾಯ ಪದ್ಧತಿ ಸೇರಿದಂತೆ ಸಂಬಂಧಪಟ್ಟ ವಿಜ್ಞಾನಿಗಳಿಗೆ ನೀಡಲಾಗುವುದು. ಮೇಳ ಮುಗಿದ ನಂತರ ಆ ರೈತರನ್ನು ಸಂಪರ್ಕಿಸಿ, ಮಾರ್ಗದರ್ಶನ ನೀಡಲಾಗುವುದು ಎಂದು ಬಿ2ಬಿಯಲ್ಲಿದ್ದ ಜಿಕೆವಿಕೆಯ ಅಗ್ರಿಕಲ್ಚರಲ್ ಮಾರ್ಕೆಟಿಂಗ್ ಆಂಡ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ವಿಭಾಗದ ಸಿಬ್ಬಂದಿ ಡಾ.ಕಾವ್ಯ ತಿಳಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ: ಪೊಲೀಸ್ ಆಯುಕ್ತ
Munirathna ವಿರುದ್ಧದ ಅತ್ಯಾಚಾರ ಆರೋಪ ರುಜುವಾತು
Bengaluru; ನಿದ್ರೆಗೆ ಜಾರಿದ ಕ್ಯಾಬ್ ಡ್ರೈವರ್: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video
Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್ ಮ್ಯಾನೇಜರ್!
Namma Metro; ಡಿಸೆಂಬರ್ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ
INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್: ಕೊನೆಯಲ್ಲಿ ಕಾಡಿದ ಲಿಯಾನ್- ಬೊಲ್ಯಾಂಡ್
Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ
Bengaluru ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ: ಪೊಲೀಸ್ ಆಯುಕ್ತ
Heart attack; ಹೃದಯಾಘಾತ: ಖಂಡಿತವಾಗಿಯೂ ನಿರ್ಲಕ್ಷ್ಯ ಬೇಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.