ರೈತರ ಬೆಳೆ ರಕ್ಷಣೆಗೆ ಬರಲಿದೆ “ಲೈಡಾರ್‌’

Team Udayavani, Dec 1, 2018, 6:00 AM IST

ban01121806medn.jpg

ಬೆಂಗಳೂರು: ಗಡಿ ರಕ್ಷಣೆಯಲ್ಲಿ ಬಳಸಲಾಗುವ “ಲೈಡಾರ್‌’ ತಂತ್ರಜ್ಞಾನ ಈಗ ರೈತರ ಬೆಳೆಗಳ ರಕ್ಷಣೆಗೂ ಬರಲಿದೆ.
ಲೈಡಾರ್‌ ಅನ್ನು ಕೃಷಿಯಲ್ಲಿ ಪರಿಚಯಿಸಲು ಅಮೆರಿಕ ಮೂಲದ ಸೂøಸ್‌ ಕ್ಯಾಪಿಟಲ್‌ ಪಾರ್ಟನರ್ ಕಂಪೆನಿಯೊಂದು ಮುಂದಾಗಿದ್ದು, ಇದರಿಂದ ಜಮೀನಿನಲ್ಲಿಯ ಪ್ರತಿಯೊಂದು ಗಿಡವೂ ಡಿಜಿಟಲೀಕರಣಗೊಳ್ಳಲಿದೆ.

ಅಮೆರಿಕದಲ್ಲಿ ಆಲ್ಮಂಡೊ ಪ್ಲಾಂಟೇಷನ್‌ ಮೇಲೆ ಇದರ ಪ್ರಯೋಗ ಯಶಸ್ವಿಯಾಗಿದ್ದು, ಕೃಷಿ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಈ ತಂತ್ರಜ್ಞಾನ ಬಳಸಲಾಗುತ್ತಿದೆ. ಶೀಘ್ರದಲ್ಲೇ ಮಲೇಷಿಯಾ, ಬ್ರೆಜಿಲ್‌ ಮತ್ತು ಭಾರತದ ತೆಂಗು, ಅಡಿಕೆಯಂತಹ ಪ್ಲಾಂಟೇಷನ್‌ ಬೆಳೆಗಳ ನಿರ್ವಹಣೆಗಾಗಿ ಲೈಡಾರ್‌ ((LiDAR)) ತಂತ್ರಜ್ಞಾನವನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ಕೆಲವೇ ದಿನಗಳಲ್ಲಿ ಇದು ಭಾರತ ಪ್ರವೇಶಿಸಲಿದೆ ಕಂಪೆನಿಯ ಸಹ ಪಾಲುದಾರ ಗಣೇಶಮೂರ್ತಿ ಕಿಶೋರ್‌ ತಿಳಿಸಿದರು.

ಬೆಂಗಳೂರು ಟೆಕ್‌ ಸಮಿಟ್‌ನಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣವೊಂದರಲ್ಲಿ ಭಾಗವಹಿಸಿ ನಂತರ “ಉದಯವಾಣಿ’ಯೊಂದಿಗೆ ಮಾತಿಗಿಳಿದ ಅವರು,”ಸಾಮಾನ್ಯವಾಗಿ ರಕ್ಷಣಾ ಕ್ಷೇತ್ರದಲ್ಲಿ ಲೈಡಾರ್‌ ಬಳಸಲಾಗುತ್ತಿದೆ. ಆದರೆ, ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಇದನ್ನು ಕೃಷಿ ಕ್ಷೇತ್ರದಲ್ಲಿ ಪರಿಚಯಿಸಲಾಗುತ್ತಿದೆ. ಇದು ಗಿಡಗಳ ಮೇಲೆ ಲೇಸರ್‌ ಕಿರಣಗಳನ್ನು ಬಿಡುತ್ತದೆ. ಅದರ ಪ್ರತಿಫ‌ಲನವನ್ನು ಆಧರಿಸಿ, ಗಿಡಗಳ ಆರೋಗ್ಯದ ಸ್ಥಿತಿಗತಿಯನ್ನು ನಿರ್ಧರಿಸುತ್ತದೆ. ಯಾವ ಗಿಡ ಆರೋಗ್ಯವಾಗಿದೆ? ಯಾವುದಕ್ಕೆ ರೋಗಬಾಧೆ ಕಾಡುತ್ತಿದೆ? ನೀರಿನ ಅಂಶ ಎಷ್ಟಿದೆ? ಯಾವಾಗ ಮತ್ತು ಎಷ್ಟು ನೀರು ಪೂರೈಕೆ ಮಾಡಬೇಕು? ಯಾವುದು ದ್ಯುತಿ ಸಂಶ್ಲೇಷಣೆ ಕ್ರಿಯೆ ಚೆನ್ನಾಗಿ ಮಾಡುತ್ತಿದೆ ಅಥವಾ ಯಾವುದು ಸರಿಯಾಗಿ ಆಗುತ್ತಿಲ್ಲ? ಇಳುವರಿ ಮುನ್ಸೂಚನೆ, ಮಣ್ಣಿನ ಫ‌ಲವತ್ತತೆ ಸೇರಿದಂತೆ ಹತ್ತಾರು ಮಾಹಿತಿಯನ್ನು ಇದು ಒದಗಿಸಲಿದೆ ಎಂದು ಮಾಹಿತಿ ನೀಡಿದರು.

ದಿನಕ್ಕೆ ಸಾವಿರ ಎಕರೆ ಕವರ್‌ ಮಾಡುತ್ತೆ
ಇದರ ಬಳಕೆಯಿಂದ ಕ್ಯಾಲಿಫೋರ್ನಿಯಾದಲ್ಲಿ ಒಂದು ಎಕರೆ ಆಲ್ಮಂಡೊಗೆ ಸಾವಿರ ಡಾಲರ್‌ ಹಣ ಉಳಿತಾಯ ಆಗುತ್ತಿದೆ. ಒಂದು ದಿನದಲ್ಲಿ ಸಾವಿರ ಎಕರೆಯಷ್ಟು ಪ್ರದೇಶವನ್ನು ಈ ಲೈಡಾರ್‌ ಅನಾಯಾಸವಾಗಿ ಸುತ್ತಿಬರುತ್ತದೆ. ನಂತರ ಆ ಎಲ್ಲ ಮಾಹಿತಿಯು ಕಂಪ್ಯೂಟರ್‌ನಲ್ಲಿ ದಾಖಲಾಗುವ ಮೂಲಕ ಡಿಜಟಲೀಕರಣಗೊಳ್ಳಲಿದೆ. ಡ್ರೋಣ್‌ನಲ್ಲಿ ಈಗ ಸಾಮಾನ್ಯ ಕ್ಯಾಮೆರಾ ಬಳಸಲಾಗುತ್ತದೆ. ಅದು ಸೆರೆಹಿಡಿಯುವ ಚಿತ್ರಗಳನ್ನು ಸಂಗ್ರಹಿಸಿ, ಮ್ಯಾನ್ಯುವಲ್‌ ಆಗಿ ವಿಶ್ಲೇಷಣೆ ಮಾಡಲಾಗುತ್ತದೆ. ಆದರೆ, ಲೈಡಾರ್‌ ಏರಿಯಲ್‌ ನೋಟದಿಂದ ಪ್ರತಿ “3ಡಿ’ (ಮೂರೂ ದೃಷ್ಟಿಕೋನಗಳಿಂದ) ರೂಪದಲ್ಲಿ ಸಂಗ್ರಹಿಸಿ, ಗಿಡದ ಸ್ಥಿತಿಗತಿಯನ್ನು ವಿಶ್ಲೇಷಿಸುತ್ತದೆ. ಡ್ರೋಣ್‌ನಲ್ಲಿ ಈ ಡಿವೈಸ್‌ ಅನ್ನು ಅಳವಡಿಸಿ, ತೋಟ ಅಥವಾ ಜಮೀನುಗಳ ಮೇಲೆ ಕಾರ್ಯಾಚರಣೆಗೆ ಬಿಟ್ಟರೆ ಸಾಕು ಎಂದು ಡಾ.ಗಣೇಶಮೂರ್ತಿ ಕಿಶೋರ್‌ ವಿವರಿಸಿದರು.

ಅರಣ್ಯದಲ್ಲೂ ಬಳಸಬಹುದು
ಗಿಡಗಳ ಮಾಹಿತಿ ಡಿಜಿಟಲೀಕರಣಗೊಳ್ಳುವುದರಿಂದ ಹಿಂದಿನ ವರ್ಷ ಮತ್ತು ಈ ವರ್ಷದ ಬೆಳೆಗಳ ಸ್ಥಿತಿಗತಿಯನ್ನೂ ಹೋಲಿಕೆ ಮಾಡಲು ಇದರಲ್ಲಿ ಅವಕಾಶ ಇದೆ. ಅದರಲ್ಲೂ ಅರಣ್ಯ ಪ್ರದೇಶಗಳಲ್ಲಿ ಇದು ಹೆಚ್ಚು ಉಪಯುಕ್ತ. ನಿರ್ದಿಷ್ಟ ಅರಣ್ಯದಲ್ಲಿರುವ ಮರಗಳೆಷ್ಟು? ಯಾವ ಮರ ನಾಪತ್ತೆಯಾಗಿದೆ? ಯಾವುದು ಬೀಳುವ ಸ್ಥಿತಿಯಲ್ಲಿದೆ ಎಂಬುದರ ನಿಖರ ಮಾಹಿತಿ ಸಿಗುತ್ತದೆ ಎಂದೂ ಅವರು ಹೇಳಿದರು.

ಲೈಡಾರ್‌ ಡಿವೈಸ್‌ ಅನ್ನು ರಕ್ಷಣಾ ಕ್ಷೇತ್ರದಲ್ಲಿ ಕಟ್ಟಡಗಳ ಅಧ್ಯಯನಕ್ಕೆ ಬಳಸಲಾಗುತ್ತದೆ. ಭೂಮಿಯ ನಕ್ಷೆ, ನೀರುಗಾಲುವೆಗಳಲ್ಲಿ ಅಕ್ರಮವಾಗಿ ಪೈಪ್‌ ಅಳವಡಿಸಿ ನೀರು ಕದಿಯುವುದು, ವಿದ್ಯುತ್‌ ಕಳ್ಳತನ ಸೇರಿದಂತೆ ಹತ್ತಾರು ಉದ್ದೇಶಗಳಿಗೆ ಉಪಯೋಗಿಸಲು ಅವಕಾಶಗಳಿವೆ. ಆದರೆ, ಇದಕ್ಕೆ ಮನಸ್ಸು ಮಾಡಬೇಕಷ್ಟೇ ಎಂದು ಅವರು ಸ್ಪಷ್ಟಪಡಿಸಿದರು.

ಕಾರ್ಯವೈಖರಿ ಹೀಗೆ
ಲೇಸರ್‌ ಕಿರಣಗಳನ್ನು ಬೆಳೆಗಳ ಮೇಲೆ ಬಿಡುತ್ತದೆ. ಅದರಿಂದ ಪ್ರತಿಫ‌ಲನಗೊಳ್ಳುವ ಕಿರಣವನ್ನು ಲೈಡಾರ್‌ ವಿಶ್ಲೇಷಣೆ ಮಾಡುತ್ತದೆ. ಕಾಂಡ ಅಥವಾ ಎಲೆ ದಪ್ಪವಾಗಿದ್ದರೆ, ಪ್ರತಿಫ‌ಲನ ಹೆಚ್ಚು ತೀಕ್ಷ್ಣವಾಗಿರುತ್ತದೆ. ತೆಳುವಾಗಿದ್ದರೆ, ಮಂದವಾಗಿರುತ್ತದೆ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.