ಫ್ಯಾಟ್ ಸರ್ಜರಿ ಜೀವಕ್ಕೇ ವರಿ: ಹೆಚ್ಚುತ್ತಿದೆ ಸೌಂದರ್ಯ ಚಿಕಿತ್ಸೆ ಟ್ರೆಂಡ್
Team Udayavani, May 23, 2022, 1:35 PM IST
ಬೆಂಗಳೂರು ಫ್ಯಾಷನ್ ಹಾಗೂ ಸಿನಿ ಲೋಕಕ್ಕೆ ಸಮೀಪ. ಸೊಂಟ ಅರ್ಧ ಇಂಚು ದಪ್ಪವಾದರೆ ಎಲ್ಲಿ ಸೌಂದರ್ಯ ಕಡಿಮೆಯಾಗುತ್ತದೆಯೋ ಎನ್ನುವ ಆತಂಕದಲ್ಲಿ ಕಾಸ್ಮೆಟಿಕ್ ಶಸ್ತ್ರ ಚಿಕಿತ್ಸೆಗಾಗಿ ಒಳಗಾಗುತ್ತಿರುವವರ ಸಂಖ್ಯೆಯಲ್ಲಿ ಯುವಜನರಲ್ಲಿ ಮಾತ್ರವಲ್ಲದೇ ವಯಸ್ಕರಲ್ಲಿಯೂ ಕಂಡು ಬರುತ್ತಿದೆ. ಸರಿಯಾಗಿ ಚಿಕಿತ್ಸೆ ಸಿಗದೇ ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ.
ಬೆಂಗಳೂರು: ಸುಂದರವಾಗಿ ಕಾಣಬೇಕು ಎಂಬ ಹಂಬಲ ಎಲ್ಲರಲ್ಲಿಯೂ ಇರುತ್ತದೆ. ಬದಲಾದ ಜೀವನ ಶೈಲಿ ಹಾಗೂ ಒತ್ತಡ, ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಥೈರಾಯಿಡ್ ಸಮಸ್ಯೆಮತ್ತು ಹಾರ್ಮೋನುಗಳ ಅಸಮತೋಲನಗಳಿಂದ ದೇಹದಲ್ಲಿ ಹೆಚ್ಚು ಕೊಬ್ಬು ಶೇಖರಣೆಯಾಗುತ್ತಿದೆ. ಇದನ್ನು ಕರಗಿಸಿಕೊಳ್ಳಲು ದೈಹಿಕ ಶ್ರಮ ಹಾಗೂ ಆಹಾರ ಕ್ರಮ ಬದಲಾಯಿಸಲು ಇಚ್ಛಿಸಿದವರು ಸಲುಭವಾಗಿ ಫ್ಯಾಟ್ ರಿಮೂವಲ್ ಸೇರಿದಂತೆ ಇತರೆ ದೇಹದ ಭಾಗಗಳ ಸರ್ಜರಿಗೆ ಒಳಗಾಗುವ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ ಬೆಂಗಳೂರು ನಗರದಲ್ಲಿ ಸೌಂದರ್ಯ ಚಿಕಿತ್ಸೆಗಳು ಟ್ರೆಂಡ್ ಆಗಿ ಬೆಳೆಯುತ್ತಿವೆ.
ಸಾಮಾನ್ಯವಾಗಿ ಹೊಟ್ಟೆ, ಎದೆ, ಒಳ ಮೊಣಕಾಲುಗಳು, ಸೊಂಟ, ಪಾಶ್ವ, ಕಂಠರೇಖೆ ಮತ್ತು ಗಲ್ಲದ ಅಡಿಯಲ್ಲಿನ ಭಾಗ, ತೊಡೆಗಳು, ಹೊರ ಮತ್ತು ಒಳ ತೊಡೆಗಳು, ಮೇಲಿನ ತೋಳುಗಳಲ್ಲಿ ಇರುವ ಹೆಚ್ಚಿನಕೊಬ್ಬನ್ನು ತೆಗೆಯಲು ಸೌಂದರ್ಯ ಚಿಕಿತ್ಸೆ ಮಾಡಿಕೊಳ್ಳುತ್ತಿದ್ದಾರೆ.ತೂಕವನ್ನು ಕಡಿಮೆ ಮಾಡಲು ಮತ್ತು ತೂಕ-ಸಂಬಂಧಿತ ಅಸ್ವಸ್ಥತೆಗಳು ಅಥವಾ ಸಹ-ಅಸ್ವಸ್ಥತೆಗಳನ್ನು ನಿವಾರಿಸುವುದಕ್ಕೆ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ (ತೂಕ-ಸಂಬಂಧಿತ ಅಸ್ವಸ್ಥತೆಗಳು ನಿವಾರಿಸುವುದು) ಹಾಗೂ ಅನಗತ್ಯ ಕೊಬ್ಬನ್ನು ಕರಗಿಸಲು ಲಿಪೊಸಕ್ಷನ್‌ಗೆ ಒಳಪಡುತ್ತಾರೆ.
ಬೆಂಗಳೂರಿನಲ್ಲಿ ಅಸಮತೋಲನ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯಿಂದ ತೂಕವನ್ನು ಹೆಚ್ಚಿಸುವುದರ ಜತೆಗೆ ಸೌಂದರ್ಯದ ಬಗ್ಗೆಅತೀಯಾದ ಕಾಳಜಿ ಹೊಂದಿರುವವರು ಮಹಿಳೆಯರು ಸೇರಿದಂತೆ ಪುರುಷರು ಬೊಜ್ಜನ್ನು ಕರಗಿಸಲು ಹೆಚ್ಚಾಗಿ ಲಿಪೊಸಕ್ಷನ್ ಶಸ್ತ್ರ ಚಿಕಿತ್ಸೆ ಮೊರೆ ಹೋಗುತ್ತಿದ್ದಾರೆ. ಲೇಸರ್ ಚಿಕಿತ್ಸೆ ಇದಾಗಿದೆ.
ಸಣ್ಣ ರಂಧ್ರ ಕೊರೆದು ವಿದ್ಯುತ್ ಪ್ರವಹಿಸುತ್ತಾ ಕೊಬ್ಬು ಕರಗಿಸಲಾಗುತ್ತದೆ. ಸರ್ಜರಿ ಮಾಡುವಾಗ ರೋಗಿಗೆ ತುರ್ತು ಚಿಕಿತ್ಸೆಗೆ ಸರಿಯಾದ ಸಿದ್ಧತೆಯಿಲ್ಲದೆ ಶಸ್ತ್ರಚಿಕಿತ್ಸೆ ನಡೆಸಿದರೆ, ಶ್ವಾಸಕೋಶದಲ್ಲಿ ನೀರು ಸಂಗ್ರಹವಾಗುವುದರೊಂದಿಗೆ ವ್ಯಕ್ತಿಯ ಜೀವವೇ ಹೋಗಬಹುದು.
ಆರೋಗ್ಯಕರ ಜೀವನಶೈಲಿ: ಶಸ್ತ್ರಚಿಕಿತ್ಸೆ ಮೂಲಕ ತೂಕ ಇಳಿಸಿಕೊಂಡವರು ಮತ್ತೆ ಅನಾರೋಗ್ಯಕ್ಕೀಡಾಗಿ ದೇಹದ ತೂಕದ ಜತೆಗೆ ಹಾಸಿಗೆ ಹಿಡಿಯುವ ಪರಿಸ್ಥಿತಿ ಎದುರಾಗುತ್ತದೆ. ಶಸ್ತ್ರಚಿಕಿತ್ಸೆಯಲ್ಲಿ ಕೊಬ್ಬಿನ ಕೋಶಗಳನ್ನು ಶಾಶ್ವತ ವಾಗಿ ತೆಗೆದು ಹಾಕಿದ ಬಳಿಕ ದೇಹದ ಆಕಾರವನ್ನು ಬದಲಾಯಿಸುತ್ತದೆ. ಸುಮಾರು 3 ವಾರದಿಂದ 3 ತಿಂಗಳು ಗುಣಮುಖರಾಗಲು ಸಮಯದ ಅಗತ್ಯವಿದೆ. ಈ ವೇಳೆ ರೋಗಿಯು ಆರೋಗ್ಯಕರ ಜೀವನ ಶೈಲಿಯನ್ನು ನಡೆಸದಿದ್ದರೆ, ಉಳಿದ ಕೊಬ್ಬಿನ ಕೋಶ ಗಳು ದೊಡ್ಡದಾಗಿ ಬೆಳೆಯುವ ಅಪಾಯವಿದೆ. ಜೊತೆಗೆ ಸೋಂಕು, ಮರ ಗಟ್ಟುವಿಕೆ
ಮತ್ತು ಗುರುತು ಉಳಿದು ಕೊಳ್ಳುವುದು ಸೇರಿದಂತೆ ಕೆಲವು ಅಪಾಯಗಳಿವೆ. ನಿಯಮಿತ ಆರೋಗ್ಯಕರವಾದ ಆಹಾರ ಅಭ್ಯಾಸವನ್ನು ರೂಢಿಸಿಕೊಳ್ಳಬೇಕಾಗುತ್ತದೆ.
ಸೌಲಭ್ಯ ಬಗ್ಗೆ ಮಾಹಿತಿಯೇ ಇಲ್ಲ : ಲಿಪೊಸಕ್ಷನ್ ಶಸ್ತ್ರಚಿಕಿತ್ಸೆಯಲ್ಲಿ ಕೊಬ್ಬಿನ ಕೋಶಗಳನ್ನು ಶಾಶ್ವತವಾಗಿ ತೆಗೆದುಹಾಕಲಾಗುತ್ತದೆ. ಇದು ದೇಹದ ಆಕಾರವನ್ನು ಬದಲಾಯಿಸುತ್ತದೆ. ಪ್ರಸ್ತುತ ನಗರದಲ್ಲಿನ ಕಾಸ್ಮೆಟಿಕ್ ಸರ್ಜರಿ ಕೇಂದ್ರಗಳಲ್ಲಿ ವ್ಯವಸ್ಥೆಗಳಿಲ್ಲದೆ ಇರುವುದು ಕಂಡು ಬರುತ್ತಿದೆ. ಕಾಸ್ಮೆಟಿಕ್ ಸರ್ಜರಿ, ಪ್ಲಾಸ್ಟಿಕ್ ಸರ್ಜರಿ ಕೇಂದ್ರಗಳಲ್ಲಿ ಅಂತಹ ಸೌಕರ್ಯಗಳಿವೆಯೇ ಎಂಬುದು ಜನರಿಗೆಮಾಹಿತಿಯೇ ಇಲ್ಲ. ಬೆಂಗಳೂರು ನಗರದಲ್ಲಿ ಇಂತಹ ಶಸ್ತ್ರಚಿಕಿತ್ಸೆ ನಡೆಸುವ ಆಸ್ಪತ್ರೆಗಳು ಮತ್ತುಕ್ಲಿನಿಕ್‌ಗಳು ತಲೆ ಎತ್ತಿ ನಿಂತಿವೆ. ಅವುಗಳಲ್ಲಿ ಏನೆಲ್ಲ ವ್ಯವಸ್ಥೆ, ಯಾರು ಶಸ್ತ್ರ ಚಿಕಿತ್ಸೆ ಮಾಡುತ್ತಾರೆ, ಆಸ್ಪತ್ರೆಯ ಅರ್ಹತೆಯುಳ್ಳ ವೈದ್ಯರು ಕಾರ್ಯಾಚರಣೆ, ಆಸ್ಪತ್ರೆಗಳು ಸೂಕ್ತ ಲೈಸೆನ್ಸ್ ಇದೆಯೋ ಅಥವಾ ಇಲ್ಲವೋ ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ ಸಾಕಷ್ಟು ಸೌಂದರ್ಯ ಶಸ್ತ್ರ ಚಿಕಿತ್ಸೆ ಮಾಡುವ ಕ್ಲಿನಿಕ್ ತಲೆ ಎತ್ತಿವೆ.
ಬುಲೆಟ್ ಪ್ರಕಾಶ್ ನಿಧನ : ಚಂದನವನದ ಹಾಸ್ಯ ನಟ ಬುಲೆಟ್ ಪ್ರಕಾಶ್(46) ಫ್ಯಾಟ್ ಸರ್ಜರಿಗೆ ಒಳಗಾಗಿದ್ದರು. 2018ರಲ್ಲಿ ತೂಕ ಹೆಚ್ಚಾಗಿದ್ದ ಕಾರಣ ನಟ ಪ್ರಕಾಶ್ ಫ್ಯಾಟ್ ಸರ್ಜರಿಗೆ ಒಳಗಾಗಿದ್ದರು. ಸರ್ಜರಿ ನಂತರ 35 ಕೆ.ಜಿ ತೂಕವನ್ನು ಇಳಿಸಿಕೊಂಡರು. ಅನಂತರದ ಕಿಡ್ನಿ ಹಾಗೂ ಲಿವರ್ ವೈಫಲ್ಯ ಅವರನ್ನು ಇನ್ನಷ್ಟು ಜರ್ಜರಿತಗೊಳಿಸಿತ್ತು. 2020 ಏಪ್ರಿಲ್ 6ರಂದು ಅನಾರೋಗ್ಯದಿಂದ ನಿಧನರಾದರು.
ಚೇತನಾ ರಾಜ್ :
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗೀತಾ, ದೊರೆಸಾನಿ ಹಾಗು ಒಲವಿನ ನಿಲ್ದಾಣ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿದ್ದ ನಟಿ ಚೇತನಾ ರಾಜ್ (21) ಕೂಡ ಬೆಂಗಳೂರು ಖಾಸಗಿ ಆಸ್ಪತ್ರೆಯೊಂದರಲ್ಲಿ ಫ್ಯಾಟ್ ಸರ್ಜರಿಗೆ ಒಳಗಾಗುತ್ತಿರುವ ಸಂದರ್ಭದಲ್ಲಿಯೇ ಹೃದಯಾಘಾತದಿಂದ ಸಾವನಪ್ಪಿದ್ದಾರೆ.
ಬೆಳಕಿಗೆ ಬಾರದವೆಷ್ಟೂ? :
ಕೇವಲ ಫ್ಯಾಟ್ ಸರ್ಜರಿ ಮಾತ್ರವಲ್ಲದೇ ಬೆಂಗಳೂರು ನಗರದಲ್ಲಿ ಕೂದಲು ಕಸಿ ಮಾಡಿಕೊಳ್ಳುವ ಸಂದರ್ಭದಲ್ಲಿ ಸಹ ಮೃತಪಟ್ಟಿರುವ ಪ್ರಕರಣಗಳಿವೆ. ಈ ಬಗ್ಗೆ ಎಚ್ಚರ ವಹಿಸುವ ಅಗತ್ಯವಿದೆ. ಕಸಿ ಹಾಗೂ ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಮೃತಪಟ್ಟಿರುವವರಲ್ಲಿ ಕೇವಲ ಚಿತ್ರ ರಂಗ ನಟ-ನಟಿಯರ ಪ್ರಕರಣಗಳಲ್ಲಿ ಮಾತ್ರ ಪ್ರಸ್ತುತ ಬೆಳಕಿಗೆ ಬರುತ್ತಿದೆ. ಜನಸಾಮಾನ್ಯರು, ಶಾಸ್ತ್ರ ಚಿಕಿತ್ಸೆಯ ಮೂರರಿಂದ 4 ತಿಂಗಳ ಬಳಿಕ ಮೃತಪಡುವ ಪ್ರಕರಣಗಳು ಇನ್ನೂ ಬೆಳಕಿಗೆ ಬಂದಿಲ್ಲ.
ಫ್ಯಾಟ್, ಲೀಪ್ ಸೇರಿದಂತೆ ಇತರೆ ಸರ್ಜರಿಗಳು ಶೇ.99ರಷ್ಟು ಜನರಿಗೆ ಹೊಂದಿಕೆಯಾಗುವುದಿಲ್ಲ. ಶೇ.1ರಷ್ಟು ಮಂದಿಗೆ ಮಾತ್ರ ಹೊಂದಿಕೆಯಾಗುತ್ತದೆ.2013ರಲ್ಲಿ ನಾನು ಸಾಕಷ್ಟು ಸ್ಲಿಮ್ ಇದ್ದರೂ, ಫ್ಯಾಟ್‌ಸರ್ಜರಿಗೆ ಒಳಗಾಗಿದ್ದೆ. ಇದಾದ ಬಳಿಕ ನನ್ನ ಆತ್ಮ ವಿಶ್ವಾಸ ಸಂಪೂರ್ಣವಾಗಿ ಕುಸಿತವಾಗಿತ್ತು. ನಂತರ ದಿನದಲ್ಲಿ ಇರುವುದರಲ್ಲಿ ಖುಷಿಪಟ್ಟೆ. ನಮ್ಮನ್ನು ನಾವು ಪ್ರೀತಿಸಿಕೊಂಡಾಗ ಇಡೀ ಜಗತ್ತು ನಮ್ಮಗೆ ಸುಂದರವಾಗಿ ಕಾಣುತ್ತದೆ. – ನೀತು , ಚಲನಚಿತ್ರ ನಟಿ
ಶಸ್ತ್ರಚಿಕಿತ್ಸೆಗೆ ಬೇಕಾಗುವ ಸಲಕರಣೆ ಮತ್ತು ಸೌಕರ್ಯಗಳನ್ನು ಆಸ್ಪತ್ರೆ ಅಥವಾ ಕ್ಲಿನಿಕ್ ಹೊಂದಿರಬೇಕು. ಡೆರ್ಮಾಟೋಲೊಜಿಸ್ಟ್ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದರೆ ಅರಿವಳಿಕೆ ಹಾಗೂ ಪ್ಲಾಸ್ಟಿಕ್ ಸರ್ಜನ್ ಉಪಸ್ಥಿತರಿಬೇಕು. ಗುಣಮುಖರಾಗಲು ಮೂರು ವಾರದಿಂದ 3 ತಿಂಗಳು ಅಗತ್ಯವಿದೆ. ಈ ವೇಳೆ ರೋಗಿಯು ಆರೋಗ್ಯಕರ ಜೀವನಶೈಲಿಯನ್ನು ನಡೆಸದಿದ್ದರೆ, ಉಳಿದ ಕೊಬ್ಬಿನ ಕೋಶಗಳು ದೊಡ್ಡದಾಗಿ ಬೆಳೆಯುವ ಅಪಾಯವಿದೆ.– ಡಾ| ಭವ್ಯಶ್ರೀ, ಡೆರ್ಮಾಟೋಲೊಜಿಸ್ಟ್ ಸರ್ಜನ್, ಬೆಂಗಳೂರು
– ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.