ವಿರೋಧಕ್ಕೆ ಹೆದರಿದರೆ ಪರಿಹಾರ ಸಾಧ್ಯವೇ?
Team Udayavani, Mar 11, 2017, 12:13 PM IST
ಯಾವುದೋ ಸಣ್ಣ ವಿರೋಧಕ್ಕೆ ಹೆದರಿ, ಬಹಳಷ್ಟು ಜನರಿಗೆ ಉಪಯೋಗವಾಗುತ್ತಿದ್ದ ಯೋಜನೆಯನ್ನು ಸರ್ಕಾರ ಕೈಬಿಡಬಾರದಿತ್ತು ಎಂಬುದು ಬೆಂಗಳೂರಿನ ಕೃಷಿ ವಿವಿ ಕುಲಪತಿ ಶಿವಣ್ಣ ಮತ್ತು ಕಾವೇರಿ ಬಿಇಡಿ ಕಾಲೇಜಿನ ಪ್ರಾಂಶುಪಾಲ ರಾಜೇಶ್ ಅವರ ಅಭಿಮತ. ಯೋಜನೆ ವಿರೋಧಿಸುತ್ತಿರುವವರಿಗೆ ಈ ಭಾಗದ ಸಮಸ್ಯೆಯ ಗಂಭೀರತೆ ಅರಿವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಬಹುಜನರಿಗೆ ಆಗುತ್ತಿದ್ದ ಅನುಕೂಲ ತಪ್ಪಿತು : ಯಾವುದಾದರೊಂದು ಯೋಜನೆ ಅಥವಾ ಕಾರ್ಯಕ್ರಮ ರೂಪಿಸುವಾಗ, ಅದರಿಂದ ಒಂದು ವರ್ಗಕ್ಕೆ ಅನುಕೂಲ ಮತ್ತೂಂದು ವರ್ಗಕ್ಕೆ ಅನಾನುಕೂಲ ಆಗೇ ಆಗುತ್ತದೆ. ಒಂದು ವರ್ಗಕ್ಕಾಗುವ ತೊಂದರೆಯನ್ನೇ ನೆಪಮಾಡಿಕೊಂಡು ಯೋಜನೆಯನ್ನೇ ಕೈಬಿಡುವುದು ಸರಿಯಲ್ಲ.
ಹೆಬ್ಟಾಳ ಮಾರ್ಗದಲ್ಲಿ ನಿತ್ಯ ಉಂಟಾಗುವ ಸಂಚಾರದಟ್ಟಣೆಯಿಂದ ವಿದ್ಯಾರ್ಥಿಗಳು ಸೇರಿದಂತೆ ಲಕ್ಷಾಂತರ ಜನ ಸಮಸ್ಯೆ ಎದುರಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಈ ಸಮಸ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಹಾಗಿದ್ದರೆ, ಅಲ್ಲಿನ ಭಾಗದ ಜನರಿಗೆ ಆಗುತ್ತಿರುವ ಅನಾನುಕೂಲಕ್ಕೆ ಪರಿಹಾರ ಏನು?
ಮರಗಳಿಗೆ ಹಾನಿಯಾಗುತ್ತದೆ ಎಂದು ಹೇಳಲಾಗುತ್ತಿದೆ. ಇದೇ ವಿಷಯವನ್ನು ಮುಂದಿಟ್ಟುಕೊಂಡು ಯೋಜನೆಯನ್ನೇ ಕೈಬಿಡುವುದು ಸಮಂಜಸವಲ್ಲ. ಯಾಕೆಂದರೆ, ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಹೊರದೇಶಗಳ ನಗರಗಳಲ್ಲೆಲ್ಲಾ ವರ್ಟಿಕಲ್ ಗಾರ್ಡನ್ ಹೆಚ್ಚು ಪ್ರಚಲಿತದಲ್ಲಿದೆ. ಪರಿಸರ ರಕ್ಷಣೆಗೆ ಇಂತಹ ತಂತ್ರಜ್ಞಾನಗಳ ಮೂಲಕ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಮನಸ್ಸು ಮಾಡಬೇಕಿದೆ. ಇಲ್ಲವಾದರೆ ಬದಲಾವಣೆಗಳೇ ಸಾಧ್ಯವಿಲ್ಲ.
ಉಕ್ಕಿನ ಸೇತುವೆ ಸಾಧ್ಯವಾಗದಿದ್ದರೆ, ಸರ್ಕಾರ ಆ ಮಾರ್ಗದಲ್ಲಿ ವಾಹನದಟ್ಟಣೆಯಿಂದ ಮುಕ್ತಿ ನೀಡಲು ಇನ್ನಾವುದಾದರೂ ಸೇತುವೆ, ಮೆಟ್ರೋ ಸೇರಿದಂತೆ ಯಾವುದಾದರೂ ಪರ್ಯಾಯ ಕೊಡಬೇಕು. ಸೇತುವೆ ಜತೆಗೆ ಇತರ ಪರ್ಯಾಯಗಳೂ ಸರ್ಕಾರದ ಮುಂದಿವೆ. ಆ ನಿಟ್ಟಿನಲ್ಲೂ ಯೋಚನೆ ಮಾಡಬೇಕು. ಇಲ್ಲವಾದರೆ ಭವಿಷ್ಯದಲ್ಲಿ ಈ ಸಮಸ್ಯೆ ಹೆಚ್ಚಾಗುತ್ತಲೇ ಹೋಗುತ್ತದೆ.
ಡಾ.ಎಚ್. ಶಿವಣ್ಣ, ಕುಲಪತಿ, ಬೆಂಗಳೂರು ಕೃಷಿ ವಿವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.