ಪ್ರಮೋಷನ್ ಸಿಗದ್ದಕ್ಕೆ ಮಹಿಳಾ ಉದ್ಯೋಗಿ ನೇಣಿಗೆ
Team Udayavani, May 26, 2017, 12:18 PM IST
ಬೆಂಗಳೂರು: ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಕ್ಕಿದ್ದ ಮಹಿಳೆಯೊಬ್ಬರು ವೃತ್ತಿಯಲ್ಲಿ ಬಡ್ತಿ ಸಿಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಿಂಡ್ಲುವಿನ ವಿಘ್ನೇಶ್ವರ ಲೇಔಟ್‌ನಲ್ಲಿ ನಡೆದಿದೆ. ಕೊಡಗು ಮೂಲದ ದಿವ್ಯ ದಮಯಂತಿ (28) ಆತ್ಮಹತ್ಯೆಗೆ ಶರಣಾದವರು.
ಪತಿ ತಿಮ್ಮಯ್ಯ ಹಾಗೂ ಮೂರು ವರ್ಷದ ಗಂಡುಮಗುವಿನ ಜೊತೆ ಹಲವು ವರ್ಷಗಳಿಂದ ವಿಘ್ನೇಶ್ವರ ಲೇಔಟ್‌ನಲ್ಲಿ ನೆಲೆಸಿದ್ದ ದಿವ್ಯಾ, ಖಾಸಗಿ ಕಂಪೆನಿಯೊಂದರ ಉದ್ಯೋಗಿಯಾಗಿದ್ದರು. ತನಗೆ ಹಿರಿತನ ಇದ್ದು ಫ್ಲೋರ್ ಮ್ಯಾನೇಜರ್ ಪ್ರಮೋಷನ್ ನೀಡಬೇಕು ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು.
ಆದರೆ ಕಳೆದ ಒಂದು ವರ್ಷದಿಂದ ಹಲವು ಕಾರಣಗಳನ್ನು ಮುಂದಿಟ್ಟು ಬಡ್ತಿ ತಡೆಯಲಾಗಿತ್ತು. ಇದರಿಂದ ಖನ್ನರಾಗಿದ್ದ ದಿವ್ಯ, ಬುಧವಾರ ಕೂಡ ಕಚೇರಿಯಲ್ಲಿ ಈ ಬಗ್ಗೆ ಚರ್ಚಿಸಿದ್ದಾರೆ. ಆದರೆ, ಯಾವುದೇ ಭರವಸೆ ದೊರೆತಿರಲಿಲ್ಲ.
ಇದೇ ನೋವಿನಿಂದ ಸಂಜೆ ಮನೆಗೆ ಆಗಮಿಸಿದ್ದ ದಿವ್ಯ, ಮಗುವನ್ನು ಸಂಬಂಧಿಕರ ಮನೆಗೆ ಬಿಟ್ಟು, ಮರಳಿಗೆ ಮನಗೆ ಬಂದು ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾರೆ. ರಾತ್ರಿ ಕೆಲಸ ಮುಗಿಸಿಕೊಂಡು ಪತಿ ತಿಮ್ಮಯ್ಯ ಮನೆಗೆ ಬಂದಾಗ ಘಟನೆ ಗೊತ್ತಾಗಿದೆ. ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್
Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್; ಬೆಳಗಾವಿಗೆ ವಂದೇ ಭಾರತ್ ವಿಸ್ತರಣೆಗೆ ಮನವಿ
Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.