ಆಯಕಟ್ಟಿನ ಹುದ್ದೆಗಳಲ್ಲಿ ಸ್ತ್ರೀ ಶಕ್ತಿ


Team Udayavani, Mar 8, 2019, 6:00 AM IST

ayakatiin.jpg

ಬೆಂಗಳೂರು: ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ಐದು ಪ್ರಮುಖ ಆಯಕಟ್ಟಿನ ಹುದ್ದೆಗಳಲ್ಲಿ ಮಹಿಳಾ ಅಧಿಕಾರಿಗಳ ಕಾರ್ಯಕ್ಷಮತೆಯ ಛಾಪು ಮೂಡಿದೆ. ರಾಜ್ಯ ಪೊಲೀಸ್‌ ಇಲಾಖೆಯ ಮುಖ್ಯಸ್ಥರಾಗಿ ನೀಲಮಣಿ ಎನ್‌. ರಾಜು ಯಶಸ್ವಿಯಾಗುತ್ತಿರುವ ಬೆನ್ನಲ್ಲೇ, ಮೊದಲ ಬಾರಿ ಬೆಂಗಳೂರು ನಗರ ಕಮಿಷನರೇಟ್‌ನ ಐದು ಪ್ರಮುಖ ಹುದ್ದೆಗಳ ಜವಾಬ್ದಾರಿ ಮಹಿಳಾ ಅಧಿಕಾರಿಗಳ ಹಿಡಿತದಲ್ಲಿದೆ. ಇದು ಇಲಾಖೆಯಲ್ಲಿನ ಮಹಿಳಾ ಸಿಬ್ಬಂದಿ, ಅಧಿಕಾರಿಗಳ ಆತ್ಮಬಲ ಹೆಚ್ಚಿಸಿದೆ.

ಕಾನೂನು ಸುವ್ಯವಸ್ಥೆಯ 8 ಡಿಸಿಪಿ ಹುದ್ದೆಗಳ ಪೈಕಿ, ಎರಡರಲ್ಲಿ ಐಪಿಎಸ್‌ ಅಧಿಕಾರಿಗಳಾದ ಡಾ. ಕಲಾಕೃಷ್ಣಸ್ವಾಮಿ ಹಾಗೂ ಇಶಾಪಂಥ್‌ ಇದ್ದಾರೆ. ಸಂಚಾರ ವಿಭಾಗದ ಮೂರು ಡಿಸಿಪಿ ಹುದ್ದೆಗಳಲ್ಲಿ ಸಾರಾ ಫಾತೀಮಾ, ಡಾ.ಸೌಮ್ಯಲತಾ ಎಸ್‌.ಕೆ ಕಾರ್ಯನಿರ್ವಹಿಸುತ್ತಿದ್ದಾರೆ. ನಗರ ಸಶಸ್ತ್ರ ಮೀಸಲು ಪಡೆ (ಸಿಎಆಆರ್‌) ಡಿಸಿಪಿಯಾಗಿ ವರ್ತಿಕಾ ಕಟಿಯಾರ್‌ ಸೇವೆ ಸಲ್ಲಿಸುತ್ತಿದ್ದಾರೆ.

ವಿಶೇಷವೆಂದರೆ ಇಶಾ ಪಂಥ್‌ ಮಧ್ಯಪ್ರದೇಶದಲ್ಲಿ ಎರವಲು ಸೇವೆಯಲ್ಲಿ ಕಾರ್ಯನಿರ್ವಹಿಸುವಾಗ ಡ್ರಗ್ಸ್‌, ಮದ್ಯ ಮಾಫಿಯಾ ವಿರುದ್ಧ ಹೋರಾಡಿ ದಿಟ್ಟತನ ಪ್ರದರ್ಶಿಸಿದ್ದರು. ಅವರ ಜೀವನಗಾಥೆ ಬಾಲಿವುಡ್‌ನ‌ “ಜೈ ಗಂಗಾಜಲ್‌’ ಸಿನಿಮಾಗೆ ಪ್ರೇರಣೆಯಾಗಿದೆ.

ಇಶಾ ಪಂಥ್‌: ವಿಧಿವಿಜ್ಞಾನ ಪ್ರಯೋಗಾಲಯದ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಐಪಿಎಸ್‌ ಅಧಿಕಾರಿ ಇಶಾ ಪಂಥ್‌ ದಕ್ಷತೆಗೆ ಹೆಸರಾದವರು. ಅವರು ಮಾರ್ಚ್‌ 1ರಿಂದ ಆಗ್ನೇಯ ವಿಭಾಗದ ಡಿಸಿಪಿಯಾಗಿ ಸೇವೆ ಆರಂಭಿಸಿದ್ದಾರೆ. ಈ ಹಿಂದೆ ಮಧ್ಯಪ್ರದೇಶದ ಜಬಲ್‌ಪುರ್‌ನಲ್ಲಿ ಎಸ್ಪಿ ಆಗಿ ಸೇವೆ ಸಲ್ಲಿಸುವಾಗ ಡ್ರಗ್ಸ್‌, ಮದ್ಯ ಮಾಫಿಯಾಗೆ ಕಡಿವಾಣ ಹಾಕಿದ ಹೆಗ್ಗಳಿಕೆ ಇಶಾ ಅವರದ್ದು.

ಆಗ್ನೇಯ ವಿಭಾಗದ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾಫಿಯಾದ ಕೇಸ್‌ಗಳು ಹೆಚ್ಚು ವರದಿಯಾಗುತ್ತಿರುತ್ತವೆ. ಈಶಾನ್ಯ ರಾಜ್ಯಗಳ ಜನರೊಂದಿಗೆ ಸೌಹಾರ್ದತೆ ಬೆಸೆಯುವ ಜತೆಗೆ, ಮಾದಕ ಮಾಫಿಯಾಗೆ ಕಡಿವಾಣ ಹಾಕುವ ಸವಾಲಿದೆ. ನಾಲ್ವರು ಸೋದರಿಯರಲ್ಲಿ ಒಬ್ಬರು ಐಎಫ್ಎಸ್‌, ಇನ್ನೊಬ್ಬರು ಭಾರತೀಯ ವಾಯುಸೇನೆಯಲ್ಲಿ ಸ್ಕ್ವಾರ್ಡನ್‌ ಲೀಡರ್‌ ಆಗಿದ್ದಾರೆ.

ಡಾ.ಕಲಾ ಕೃಷ್ಣಸ್ವಾಮಿ: ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ವಿದೇಶಿ ಪ್ರಜೆಗಳು, ಅನ್ಯ ರಾಜ್ಯಗಳ ನಿವಾಸಿಗಳು ಅತಿ ಹೆಚ್ಚು ವಾಸವಿರುವ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಆಫ್ರಿಕನ್‌ ಪ್ರಜೆಗಳ ಉಪಟಳದ ಜತೆಗೆ, ರೊಹಿಂಗ್ಯಾ ಮುಸ್ಲಿಂರ ಕ್ಯಾಂಪ್‌ಗ್ಳು ಇವೆ ಎನ್ನಲಾದ ಈಶಾನ್ಯ ವಿಭಾಗದ ಡಿಸಿಪಿ ಡಾ.ಕಲಾ ಕೃಷ್ಣಸ್ವಾಮಿ.

ಅತ್ಯಂತ ಸೂಕ್ಷ ವಿಭಾಗದಲ್ಲಿ ಒಂದು ವರ್ಷದಿಂದ ಡಿಸಿಪಿಯಾಗಿರುವ ಡಾ. ಕಲಾ ಕೃಷ್ಣಸ್ವಾಮಿ, ಏರೋ ಇಂಡಿಯಾ, ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನದ ವೇಳೆ ಬಿಗಿ ಬಂದೋಬಸ್ತ್, ಕಾನೂನು ಸುವ್ಯಸ್ಥೆಯ ನೇತೃತ್ವ ವಹಿಸಿದ್ದರು. ಜತೆಗೆ, ಪುಲ್ವಾಮ ಘಟನೆ ಹಿನ್ನೆಲೆಯಲ್ಲಿ ಉಗ್ರನ ಪರವಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿಕೊಂಡಿದ್ದ ಕಾಶ್ಮೀರ ಮೂಲದ ಯುವಕ ಬಂಧನ ಕೂಡ ಡಾ,ಕಲಾ ಅವರ ನೇತೃತ್ವದಲ್ಲಿ ನಡೆದಿತ್ತು.

ಸಾರಾ ಫಾತಿಮಾ: ರಾಜಧಾನಿಯಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಉಂಟಾಗುವ ಪ್ರದೇಶವೆಂದು ಗುರುತಿಸಲಾಗಿರುವ ಹೆಬ್ಟಾಳ ಬ್ರಿಡ್ಜ್, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ದೇವನಹಳ್ಳಿ ವ್ಯಾಪ್ತಿಯನ್ನು ಒಳಗೊಂಡಿರುವ ಉತ್ತರ ವಿಭಾಗದ (ಸಂಚಾರ) ಡಿಸಿಪಿಯಾಗಿ ಸಾರಾ ಫಾತಿಮಾ ಸೇವೆ ಸಲ್ಲಿಸುತ್ತಿದ್ದಾರೆ. ಸಂಚಾರ ನಿರ್ವಹಣೆ ಜವಾಬ್ದಾರಿ ಜತೆಗೆ ಏರ್‌ಪೋರ್ಟ್‌ ರಸ್ತೆಯ ವಿವಿಐಪಿಗಳ ಸಂಚಾರ, ಗಣ್ಯರ ಕಾರ್ಯಕ್ರಮಗಳು, ಸಮಾವೇಶಗಳ ಸಂಧರ್ಭಗಳಲ್ಲಿ ಆಗುವ ಭಾರೀ ಸಂಚಾರ ದಟ್ಟಣೆ ನಿರ್ವಹಣೆಯ ಹೊಣೆಯನ್ನು ಡಿಸಿಪಿ ಸಾರಾ ನಿಭಾಯಿಸುತ್ತಿದ್ದಾರೆ.

ಡಾ.ಸೌಮ್ಯಲತಾ: ಪ್ರತಿ ನಿತ್ಯ, ದಿನದ ಬಹುತೇಕ ಎಲ್ಲಾ ಅವಧಿಯಲ್ಲೂ ತೀವ್ರ ಸಂಚಾರದಟ್ಟಣೆಗೆ ಸಾಕ್ಷಿಯಾಗಿರುವ ಮೈಸೂರು ರಸ್ತೆ, ಗೊರಗುಂಟೆಪಾಳ್ಯ ಜಂಕ್ಷನ್‌ ಸೇರಿದಂತೆ ಪಶ್ಚಿಮ ವಿಭಾಗದ ಸಂಚಾರ ನಿರ್ವಹಣೆಯ ಉಸ್ತುವಾರಿಯನ್ನು ಡಾ.ಸೌಮ್ಯಲತಾ ಹೊತ್ತಿದ್ದಾರೆ.

ವರ್ತಿಕಾ ಕಟಿಯಾರ್‌: 2015ರ ನವೆಂಬರ್‌ 10ರಂದು ಮಡಿಕೇರಿಯಲ್ಲಿ ನಡೆದ ಟಿಪ್ಪು ಜಯಂತಿ ಆಚರಣೆ ವೇಳೆ ಉಂಟಾದ ಪ್ರಕ್ಷುಬ್ಧ ಪರಿಸ್ಥಿತಿ ಹತೋಟಿಗೆ ತರಲು ಜೀವದ ಹಂಗು ತೊರೆದು ಪ್ರಯತ್ನಿಸಿ, ಸೈ ಎನಿಸಿಕೊಂಡಿದ್ದ ಅಂದಿನ ಕೊಡಗು ಎಸ್ಪಿ ವರ್ತಿಕಾ ಕಟಿಯಾರ್‌, ಸದ್ಯ ನಗರ ಸಶಸ್ತ್ರ ಮೀಸಲು ಪಡೆ ಕೇಂದ್ರ ಕಚೇರಿಯ ಡಿಸಿಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಲಾಖೆಯ ಶಸ್ತ್ರಾಸ್ತ್ರಗಳ ರಕ್ಷಣೆ, ವಿವಿಐಪಿಗಳ ಭದ್ರತೆ, ಅಗತ್ಯ ಸಂಧರ್ಭಗಳಲ್ಲಿ ಬಂದೋಬಸ್ತ್ ನಿಯೋಜನೆ ಸೇರಿದಂತೆ ಹಲವು ಆಡಳಿತಾತ್ಮಕ ಜವಾಬ್ದಾರಿಗಳನ್ನು ವರ್ತಿಕಾ ನಿರ್ವಹಿಸುತ್ತಿದ್ದಾರೆ.

* ಮಂಜುನಾಥ ಲಘುಮೇನಹಳ್ಳಿ

ಟಾಪ್ ನ್ಯೂಸ್

1-dee

ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗ‌ಳ ದರವೂ ಹೆಚ್ಚಳ

1-dam

ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ

1-ran

National Anthem Controversy:ಭಾಷಣ ಮಾಡದೆ ಹೋದ ತಮಿಳುನಾಡು ರಾಜ್ಯಪಾಲ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು

Belthangady ಶಾರ್ಟ್ ಸರ್ಕ್ಯೂಟ್: ಮನೆ ಬೆಂಕಿಗಾಹುತಿ

Belthangady ಶಾರ್ಟ್ ಸರ್ಕ್ಯೂಟ್: ಮನೆ ಬೆಂಕಿಗಾಹುತಿ

Uppinangady: ಬಸ್‌ ನಿಲ್ದಾಣದಲ್ಲಿ ಕಳವು

Uppinangady: ಬಸ್‌ ನಿಲ್ದಾಣದಲ್ಲಿ ಕಳವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಮಾದಕವಸ್ತು ದಂಧೆ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: ಮಾದಕವಸ್ತು ದಂಧೆ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Bengaluru: ಸೆಂಟ್ರಿಂಗ್‌ ಮರ ಬಿದ್ದು ಬಾಲಕಿ ಸಾವು: ಎಂಜಿನಿಯರ್‌ ವಶಕ್ಕೆ

Bengaluru: ಸೆಂಟ್ರಿಂಗ್‌ ಮರ ಬಿದ್ದು ಬಾಲಕಿ ಸಾವು: ಎಂಜಿನಿಯರ್‌ ವಶಕ್ಕೆ

Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ

Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ

Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್‌, ಮತ್ತಿಬ್ಬರ ಮೇಲೆ ಕೇಸ್‌

Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್‌, ಮತ್ತಿಬ್ಬರ ಮೇಲೆ ಕೇಸ್‌

Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ

Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-shiv

ಪಟ್ನಾದಲ್ಲಿ ಸುಮಾರು 500 ವರ್ಷಗಳ ಹಿಂದಿನ ದೇಗುಲ ಪತ್ತೆ

1-dee

ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗ‌ಳ ದರವೂ ಹೆಚ್ಚಳ

1-devvvi

ಕಂದಹಾರ್‌ ಹೈಜಾಕ್‌ ವೇಳೆಯ ಪೈಲಟ್‌ ದೇವಿ ಶರಣ್‌ ನಿವೃತ್ತಿ

1-dam

ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ

1-ran

National Anthem Controversy:ಭಾಷಣ ಮಾಡದೆ ಹೋದ ತಮಿಳುನಾಡು ರಾಜ್ಯಪಾಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.