ಸ್ತ್ರೀ ರಕ್ಷಣೆಗೆ ಪಿಂಕ್‌ ಹೊಯ್ಸಳ, ಸುರಕ್ಷಾ


Team Udayavani, Apr 11, 2017, 12:34 PM IST

pink hoysala.jpg

ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ನಗರ ಪೊಲೀಸ್‌ ಆಯುಕ್ತರು ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಲಂಡನ್‌ ಮಾದರಿಯ ಪೊಲೀಸ್‌ ವ್ಯವಸ್ಥೆ ಜಾರಿಗೆ ತಂದಿರುವ ಪೊಲೀಸರು, ಅದಕ್ಕಾಗಿ “ಸುರಕ್ಷಾ’ ಎಂಬ ನೂತನ ವಿಶೇಷ ಆ್ಯಪ್‌ನ್ನು ಬಿಡುಗಡೆ ಮಾಡಿದ್ದಾರೆ.

ಈ ಮೂಲಕ ಮಹಿಳೆಯರು ಅಥವಾ ತೊಂದರೆಯಲ್ಲಿರುವ ಸಾರ್ವಜನಿಕರು ನೇರವಾಗಿ ಕಮಿಷನರ್‌ ಕಚೇರಿಯಲ್ಲಿರುವ ಕಮಾಂಡೋ ಕೇಂದ್ರವನ್ನು ಸಂಪರ್ಕಿಸಬಹುದು. ತತ್‌ಕ್ಷಣವೇ ಕೇಂದ್ರದ ಅಧಿಕಾರಿಗಳು ಸ್ಪಂದಿಸಲಿದ್ದು, ಸ್ಥಳಕ್ಕೆ ನೂತನ ಪಿಂಕ್‌ ಹೊಯ್ಸಳ ವಾಹನ ಕಳುಹಿಸಲಿದ್ದಾರೆ.

ಏನಿದು “ಸುರಕ್ಷಾ’?: ಸಾರ್ವಜನಿಕರು ತಮ್ಮ ಸ್ಮಾರ್ಟ್‌ ಫೋನ್‌ನ ಗೂಗಲ್‌ ಪೇÉ ಸ್ಟೋರ್‌ ಮೂಲಕ ಉಚಿತವಾಗಿ “ಸುರಕ್ಷಾ’ ಆಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಮೊಬೈಲ್‌ ನಂಬರ್‌ ಅನ್ನು ಓಟಿಪಿ ಮೂಲಕ ದೃಢೀಕರಿಸಿ, ಸಬ್‌ಮಿಟ್‌ ಕ್ಲಿಕ್‌ ಮಾಡಿ, ನಂತರ ಸ್ವ-ವಿವರ ದಾಖಲಿಸಿ, ಇಬ್ಬರು ಪರಿಚಯಸ್ಥರ ನಂಬರ್‌ಗಳನ್ನು ಕಡ್ಡಾಯವಾಗಿ ನಮೂದಿಸಿ ಉಪಯೋಗಿಸಬಹುದು. 

ಬಳಕೆ ಹೇಗೆ?: ತುರ್ತು ಪರಿಸ್ಥಿತಿ ಎದುರಾದಾಗ ಆ್ಯಪ್‌ ತೆರೆದು “ಪ್ರಸ್‌’ ಎಂಬ ಕೆಂಪು ಬಣ್ಣದ ಬಟನ್‌ ಅಥವಾ ಮೊಬೈಲ್‌ ಪವರ್‌ ಗುಂಡಿಯನ್ನು ಅನ್ನು 5 ಬಾರಿ ಒತ್ತಬೇಕು. ಆಗ ಪರಿಚಯಸ್ಥರ ನಂಬರ್‌ ಹಾಗೂ ಕಮಾಂಡೋ ಸೆಂಟರ್‌ಗೆ ಮಾಹಿತಿ ರವಾನೆಯಾಗುತ್ತದೆ. ನಂತರ ಲೈವ್‌ ವೆಹಿಕಲ್‌ ಟ್ಯಾ†ಕಿಂಗ್‌ ಸಿಸ್ಟಂ ಮೂಲಕ ಕಮಾಂಡೋ ಸೆಂಟರ್‌ನ ಸಿಬ್ಬಂದಿ ಹತ್ತಿರದ ಹೊಯ್ಸಳ ಅಥವಾ ಪಿಂಕ್‌ ಹೊಯ್ಸಳ ಮತ್ತು ಸ್ಥಳೀಯ ಠಾಣೆಗೂ ಮಾಹಿತಿ ನೀಡಲಿದ್ದಾರೆ.

ಅಲ್ಲದೇ ಪೊಲೀಸ್‌ ಸಿಬ್ಬಂದಿ ಸ್ಥಳಕ್ಕೆ ಬಂದು ದೂರುದಾರರ ರಕ್ಷಣೆಯ ಕ್ರಮದ ಬಗ್ಗೆ ಕಮಾಂಡೋ ಸೆಂಟರ್‌ಗೆ ಮಾಹಿತಿ ನೀಡುತ್ತಾರೆ. ಒಂದು ವೇಳೆ ಗಂಭೀರ ಘಟನೆಯಾದರೆ ಹತ್ತಿರದ ಠಾಣೆಗೆ ಹೊಯ್ಸಳ ಸಿಬ್ಬಂದಿಯೇ ಪ್ರಕರಣವನ್ನು ವರ್ಗಾಯಿಸುತ್ತಾರೆ. ಆ್ಯಪ್‌ ಬಿಡುಗಡೆಯಾದ ಒಂದೆರಡು ದಿನಗಳಲ್ಲೇ ನಗರಾದ್ಯಂತ ಸುಮಾರು 5,800 ಕ್ಕೂ ಅಧಿಕ ಮಂದಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.

ಮಹಿಳೆಯರ ರಕ್ಷಣೆಗೆ ನಿಂತ ಮಹಿಳಾ ಸಿಬ್ಬಂದಿ
ಬೆಂಗಳೂರು:
ರಾಜಧಾನಿಯಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ 51 ಹೊಸ ಪಿಂಕ್‌ ಹೊಯ್ಸಳ ವಾಹನಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. 
ವಿಧಾನಸೌಧದ ಮುಂಭಾಗದಲ್ಲಿ ಹೊಸ ಪಿಂಕ್‌ ಹೊಯ್ಸಳ ವಾಹನ ಹಾಗೂ ಸುರಕ್ಷಾ ಆಪ್‌ಗೆ  ಚಾಲನೆ ನೀಡಿದ ಅವರು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಪಿಂಕ್‌ ಹೊಯ್ಸಳ ವಾಹವನ್ನು ಲೋಕಾರ್ಪಣೆ ಮಾಡಿದ್ದೇವೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ, ಸರಗಳ್ಳತನ ಹಾಗೂ ಗೂಂಡಾಗಳ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಪೊಲಿಸ್‌ ಇಲಾಖೆ ಚುರುಕಾಗಿದ್ದಾರೆ ಎಂದು ಹೇಳಿದರು.

ನಗರದಲ್ಲಿ ಈಗಾಗಲೇ 221 ಹೊಯ್ಸಳ ವಾಹನಗಳು ಗಸ್ತು ತಿರುಗುತ್ತಿವೆ. ಈಗ 51 ಪಿಂಕ್‌ ಹೊಯ್ಸಳ ಸೇರ್ಪಡೆಯಾಗಲಿವೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವ ಹಾಗೂ ವಾಸಿಸುವ ಪ್ರದೇಶಗಳಲ್ಲಿ ಪಿಂಕ್‌ ಹೊಯ್ಸಳ ಗಸ್ತು ತಿರುಗಲಿದೆ. ಪಿಂಕ್‌ ಹೊಯ್ಸಳದಲ್ಲಿ ಮಹಿಳಾ ಸಿಬ್ಬಂದಿಯೇ ಹೆಚ್ಚಿನ ಸಂಖ್ಯೆಯಲ್ಲಿ ಇರುವಂತೆ ನೋಡಿಕೊಳ್ಳಲು ಪೋಲಿಸ್‌ ಇಲಾಖೆ ನಿರ್ಧರಿಸಿದೆ. 

ಯಡಿಯೂರಪ್ಪ ಯೋಗ್ಯತೆ ಇಲ್ಲದ ವ್ಯಕ್ತಿ: ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಮತದಾರರಿಗೆ ಹಣ ಹಂಚಿಕೆ ಮಾಡಿದೆ ಎಂದು ಆರೋಪಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಯಡಿಯೂರಪ್ಪನವರು ಯೋಗ್ಯತೆ ಇಲ್ಲದ ವ್ಯಕ್ತಿ. ತಾವು ಮಾಡಿದ್ದನ್ನು ಅವರು ನಮ್ಮ ಮೇಲೆ ಹಾಕುತ್ತಿದ್ದಾರೆ ಎಂದು  ಆಕ್ರೋಶ ವ್ಯಕ್ತಪಡಿಸಿದರು.

15 ನಿಮಿಷದಲ್ಲಿ ಸ್ಥಳಕ್ಕೆ
ಸುರಕ್ಷಾ ಆ್ಯಪ್‌ “ಪಿಂಕ್‌ ಹೊಯ್ಸಳ’ದೊಂದಿಗೆ ಲಿಂಕ್‌ ಆಗಿದೆ. ಹೋಯ್ಸಳ ವಾಹನಗಳು ಸೋಮವಾರದಿಂದ ರಸ್ತೆಗಿಳಿದಿವೆ. ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಉದ್ದೇಶದಿಂದಲೇ 51 ಪಿಂಕ್‌ ಹೊಯ್ಸಳ ವಾಹನಗಳು ನಗರಾದ್ಯಂತ ಗಸ್ತು ತಿರುಗಲಿವೆ. ಒಟ್ಟಾರೆ 272 ಹೊಯ್ಸಳ ವಾಹನಗಳು ಸಂಚರಿಸಲಿವೆ.

ಈ ವಾಹನದಲ್ಲಿ ಮೊಬೈಲ್‌ ಡೆಟಾ ಟರ್ಮಿನಲ್‌(ಮಾರ್ಗ ತೋರಿಸುವ ವ್ಯವಸ್ಥೆ), ವೈರ್‌ಲೆಸ್‌, ಅಗ್ನಿನಂದಕ, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಸಾxéಂಡರ್ಡ್‌ ಆಪರೇಟರ್‌ ಪ್ರೋಸಿಜರ್‌ ಸೇರಿದಂತೆ ಇತರೆ ಉಪಯೋಗಳು ಈ ವಾಹನದಲ್ಲಿ ಅಳವಡಿಸಲಾಗಿದೆ. ಜತೆಗೆ ಈ ವಾಹನದಲ್ಲಿ ಪುರುಷ ಚಾಲಕ(ಕಾನ್‌ಸ್ಟೆಬಲ್‌), ಮಹಿಳಾ ಹೆಡ್‌ ಕಾನ್‌ಸ್ಟೆಬಲ್‌ ಅಥವಾ ಕಾನ್‌ಸ್ಟೆಬಲ್‌ ಹಾಗೂ ಒಬ್ಬ ಮಹಿಳಾ ಎಎಸ್‌ಐ ಇರಲಿದ್ದಾರೆ.

ಲಂಡನ್‌ ಮಾದರಿ
ಪೊಲೀಸ್‌ ಕಂಟ್ರೋಲ್‌ ರೂಂಗೆ ಕರೆ ಬಂದು ಕೇವಲ 15 ನಿಮಿಷದಲ್ಲೇ ಸ್ಥಳಕ್ಕೆ ತೆರಳಿ ಸಂತ್ರಸ್ತೆರಿಗೆ ನೆರವು ನೀಡುವ ಲಂಡನ್‌ ಮಾದರಿಯ ಪೊಲೀಸ್‌ ವ್ಯವಸ್ಥೆಯನ್ನು ರಾಜ್ಯದಲ್ಲಿ ತರಲು ಪೊಲೀಸ್‌ ಆಯುಕ್ತರು ಮುಂದಾಗಿದ್ದಾರೆ. ವಿದೇಶಿದ ಮಾದರಿಯಲ್ಲೇ ಸುರಕ್ಷಾ ಆ್ಯಪ್‌ ಸಿದ್ಧಪಡಿಸಿದ್ದು, ಪಿಂಕ್‌ ಹೊಯ್ಸಳ ವಾಹನ ವ್ಯವಸ್ಥೆಯನ್ನೂ ಜಾರಿಗೆ ತಂದಿದ್ದಾರೆ.

ಲಂಡನ್‌ನಲ್ಲಿ ಘಟನೆ ನಡೆದ 8-10 ನಿಮಿಷದಲ್ಲಿ ಪೊಲೀಸರು ಸ್ಥಳ ತಲುಪುತ್ತಾರೆ. ಆದರೆ, ಬೆಂಗಳೂರಿನಲ್ಲಿ ಸಂಟಾರ ದಟ್ಟಣೆ ಇರುವುದರಿಂದ ಕನಿಷ್ಠ 20-25 ನಿಮಿಷ ಬೇಕಾಗುತ್ತದೆ. ಇದನ್ನು 10-15 ನಿಮಿಷಕ್ಕೆ ಇಳಿಸಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.

100ಕ್ಕೆ ಡಯಲ್‌ ಮಾಡಿದರೂ ಸಾಕು 
ಆಯ್ದ ಸ್ಥಳಗಳಲ್ಲಿ 3-4 ಪಿಂಕ್‌ ವಾಹನಗಳು 4 ತಾಸು ನಿಂತಿರುತ್ತವೆ. ದೂರುಗಳು ಬಂದರೆ ತಕ್ಷಣ ಸ್ಥಳಕ್ಕೆ ಹೋಗಿ, ತೊಂದರೆಯಲ್ಲಿ ಸಿಲುಕಿದವರಿಗೆ ನೆರವು ನೀಡಿ, ಮತ್ತೆ ಅದೇ ಸ್ಥಳಕ್ಕೆ ಬಂದು ನಿಲ್ಲುತ್ತದೆ. ಕಮಾಂಡೋ ಸೆಂಟರ್‌ ಮಾತ್ರವಲ್ಲದೇ, ಪೊಲೀಸ್‌ ಕಂಟ್ರೋಲ್‌ ರೂಂ 100ಕ್ಕೆ ಡಯಲ್‌ ಮಾಡಿದರು ಪಿಂಕ್‌ ಹೊಯ್ಸಳ ವಾಹನಗಳು ಸ್ಪಂದಿಸಲಿವೆ.

ಈ ಹಿನ್ನೆಲೆಯಲ್ಲಿ ಕಮಾಂಡೋ ಸೆಂಟರ್‌ ಮತ್ತು ಪೊಲೀಸ್‌ ಕಂಟ್ರೋಲ್‌ ರೂಂ 100 ಲೈನ್‌ಗಳನ್ನು ಮತ್ತಷ್ಟು ದ್ವಿಗುಣಗೊಳಿಸಲಾಗುತ್ತದೆ. ಇದಕ್ಕಾಗಿ ಸುಮಾರು 20 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಲಾಗುತ್ತದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಟಾಪ್ ನ್ಯೂಸ್

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

4

Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.