ಫಲಪುಷ್ಪ ಪ್ರದರ್ಶನ: 2.36 ಕೊಟಿ ಸಂಗ್ರಹ
Team Udayavani, Aug 18, 2018, 2:35 PM IST
ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ ಫಲಪುಷ್ಪ ಪ್ರದರ್ಶನವನ್ನು ಈ ಬಾರಿ ಸುಮಾರು 5 ಲಕ್ಷ ಮಂದಿ ವೀಕ್ಷಿಸಿದ್ದು, ದಾಖಲೆಯ 2.36 ಕೋಟಿ ರೂ. ಶುಲ್ಕ ಸಂಗ್ರಹವಾಗಿದೆ.
ಆ.4ರಿಂದ 15ರವರೆಗೆ 12 ದಿನಗಳ ಕಾಲ ನಡೆದ 208ನೇ ಫಲಪುಷ್ಪ ಪ್ರದರ್ಶನದಲ್ಲಿ ಪ್ರವೇಶ ಶುಲ್ಕದಿಂದ ಒಟ್ಟು 2.36 ಕೋಟಿ ರೂ. ಸಂಗ್ರಹವಾಗಿದೆ. ಫಲಪುಷ್ಪ ಪ್ರದರ್ಶನದ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ಹಣ ಸಂಗ್ರವಾಗಿದೆ. ಕಳೆದ ಬಾರಿ 2.14 ಕೋಟಿ ರೂ. ಸಂಗ್ರವಾಗಿತ್ತು. ಭಾರತೀಯ ರಕ್ಷಣಾ ವ್ಯವಸ್ಥೆ ಹಾಗೂ ಕನ್ನಡ ಚಿತ್ರರಂಗಕ್ಕೆ 85 ವರ್ಷ ತುಂಬಿದ ನೆನಪಿನ ಪರಿಕಲ್ಪನೆಯಲ್ಲಿ ಮೂಡಿ ಬಂದ ಚಂದನವನಕ್ಕೆ ಈ ಬಾರಿ ಜನಸಾಗರವೇ ಹರಿದು ಬಂದಿದ್ದು 4,99,457 ಮಂದಿ ವೀಕ್ಷಿಸಿದ್ದಾರೆ.
ಫಲಪುಷ್ಪ ಪ್ರದರ್ಶನ ಆರಂಭವಾದ ಮೊದಲ ದಿನ 12 ಸಾವಿರಕ್ಕೂ ಅಧಿಕ ಮಂದಿ ಕಣ್ತುಂಬಿಕೊಂಡಿದ್ದು, 8.2 ಲಕ್ಷ ರೂ. ಸಂಗ್ರಹವಾಗಿತ್ತು. ಕೊನೆಯ ದಿನ 1,76,907 ಮಂದಿ ಭೇಟಿ ನೀಡಿದ್ದು, 75.185 ಲಕ್ಷ ರೂ. ಸಂಗ್ರಹವಾಗಿತ್ತು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಬಾರಿ ವಯಸ್ಕರಿಗೆ 70 ರೂ. ಹಾಗೂ ಮಕ್ಕಳಿಗೆ 20 ಶುಲ್ಕ ನಿಗದಿಪಡಿಸಲಾಗಿತ್ತು. ಪ್ರವೇಶ ಶುಲ್ಕ ಹೆಚ್ಚಳದಿಂದ ದಾಖಲೆಯ ಆದಾಯ ಗಳಿಸಲಾಗಿದೆ.
ವಿದ್ಯಾರ್ಥಿಗಳ ಪ್ರಮಾಣ ಹೆಚ್ಚಳ
ರಜಾ ದಿನ ಹೊರತುಪಡಿಸಿ ಉಳಿದ ದಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಿದ್ದರಿಂದ ಈ ಬಾರಿ ಫಲಪುಷ್ಪ ಪ್ರದರ್ಶನಕ್ಕೆ ಹೆಚ್ಚಿನ ಮಕ್ಕಳು ಭೇಟಿ ನೀಡಿದ್ದಾರೆ. ಸುಮಾರು 250ಕ್ಕೂ ಅಧಿಕ ಶಾಲೆಗಳ, 1,29,250 ಮಕ್ಕಳು ಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಂಡಿದ್ದಾರೆ. ಕಳೆದ ಬಾರಿ 26,658 ಮಕ್ಕಳು ಭೇಟಿ ನೀಡಿದ್ದರು.
ಮೆಟ್ರೋ ವಿಶೇಷ ದರ: ಫಲಪುಷ್ಪ ಪ್ರದರ್ಶನದ ಕೊನೆಯ ದಿನವಾದ ಆ.15ರಂದು ಯಾವುದೇ ಮೆಟ್ರೋ ನಿಲ್ದಾಣದಿಂದ ಲಾಲ್‌ಬಾಗ್ ನಿಲ್ದಾಣದವರೆಗೂ ಪ್ರಯಾಣಕ್ಕೆ ಮೆಟ್ರೋ 30 ರೂ. ಟಿಕೆಟ್ ದರ ನಿಗದಿಪಡಿಸಲಾಗಿತ್ತು. ಅಂದು ಲಾಲ್‌ಬಾಗ್ ಮೆಟ್ರೋ ನಿಲ್ದಾಣದ ಮೂಲಕ ಒಟ್ಟು 37,536 ಮಂದಿ ಪ್ರಯಾಣಿಸಿದ್ದಾರೆ.
ಎರಡು ದಿನ ಮುಂದುವರಿಕೆ: ಆ.15ಕ್ಕೆ ಫಲಪುಷ್ಪ ಪ್ರದರ್ಶನ ಕೊನೆಗೊಂಡರೂ ಜನ ಲಾಲ್‌ಬಾಗ್‌ಗೆ ಭೇಟಿ ನೀಡುವುದು ಕಡಿಮೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಫಲಪುಷ್ಪ ಪ್ರದರ್ಶನದ ಪ್ರತಿಕೃತಿಗಳನ್ನು ಇನ್ನೆರಡು ದಿನ ಕಾಲ ಹಾಗೇ ಇರಿಸಲು ತೋಟಗಾರಿಕೆ ಇಲಾಖೆ ತೀರ್ಮಾನಿಸಿದೆ.
2 ಟನ್ ತ್ಯಾಜ್ಯ ಸಂಗ್ರಹ: ಹೂವುಗಳ ತ್ಯಾಜ್ಯವನ್ನೆಲ್ಲ ಸಂಗ್ರಹಿಸಿ ಲಾಲ್‌ಬಾಗ್‌ನಲ್ಲಿರುವ ಜಿಂಕೆ ನರ್ಸರಿ ಗೊಬ್ಬರ ತಯಾರಿಕೆ ಘಟಕಕ್ಕೆ ಸುರಿಯಾಲಾಗುವುದು. ಅಲ್ಲಿ ಗೊಬ್ಬರ ತಯಾರಿಸಿ ಉದ್ಯಾನವನಕ್ಕೆ ಬಳಸಿಕೊಳ್ಳಲಾಗುವುದು. ಆ.4ರಿಂದ 14ರವರೆಗೆ ನಡೆದ ಪ್ರದರ್ಶನದಲ್ಲಿ ಸುಮಾರು 2 ಟನ್‌ಗಿಂತಲೂ ಹೆಚ್ಚು ತ್ಯಾಜ್ಯ ಸಂಗ್ರಹವಾಗಿದೆ. ಆದರೆ ಬುಧವಾರ ಒಂದೇ ದಿನ 2 ಟನ್ ತ್ಯಾಜ್ಯ ಸಂಗ್ರಹವಾಗಿದೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಜಗದೀಶ್ ಮಾಹಿತಿ ನೀಡಿದರು.
6 ವರ್ಷಗಳಲ್ಲಿ ಭೇಟಿ ನೀಡಿದವರು
ವರ್ಷ ವಯಸ್ಕರು ಮಕ್ಕಳು ಒಟ್ಟು
2013 3,23,009 18,010 3,41,019
2014 3,83,064 27,345 4,10,409
2013 3,90,193 26,004 4,16,197
2016 3,00,639 21,278 3,21,917
2017 3,63,998 26,658 3,90,656
2018 3,70,207 1,29,250 4,99,457
ಸಂಗ್ರಹಗೊಂಡ ಶುಲ್ಕ
ವರ್ಷ ಮೊತ್ತ (ಕೋಟಿ ರೂ.ಗಳಲ್ಲಿ)
2013 1.57
2014 1.79
2015 1.87
2016 1.78
2017 2.14
2018 2.36
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.