ಸೌಧದ ಬೀದಿಯಲ್ಲಿ ಹಬ್ಬದ ಸೊಬಗು


Team Udayavani, Dec 25, 2017, 12:35 PM IST

soudha-beedi.jpg

ಬೆಂಗಳೂರು: ಶಕ್ತಿ ಕೇಂದ್ರ ವಿಧಾನಸೌಧ ಆವರಣದಲ್ಲಿ ಭಾನುವಾರ ಹೈಟೆಕ್‌ ಜಾತ್ರೆ ಸೊಬಗು. ಅಲ್ಲಿ ಅನಾವರಣಗೊಂಡದ್ದು “ಬ್ರ್ಯಾಂಡ್‌ ಬೆಂಗಳೂರು’. ಇಡೀ ದಿನ ನಡೆದ ಬೆಂಗಳೂರು ಹಬ್ಬ ಭರ್ಜರಿ ಮನರಂಜನೆಯೊಂದಿಗೆ ಜನಮನಸೂರೆಗೊಂಡಿತು.

ಪ್ರವಾಸೋದ್ಯಮ ಇಲಾಖೆಯ ಎರಡನೇ ಆವೃತ್ತಿಯ “ನಮ್ಮ ಬೆಂಗಳೂರು ಹಬ್ಬ’ ಈ ಬಾರಿ ಹಲವು ವಿಶೇಷತೆಗಳಿಗೆ ಕಾರಣವಾಗಿತ್ತು. ಸಾಮಾನ್ಯವಾಗಿ ವೀಕೆಂಡ್‌ ಬಂದರೆ ಉದ್ಯಾನವನಗಳು, ರೆಸ್ಟೋರೆಂಟ್‌, ದೂರದ  ಸ್ಥಳಗಳಿಗೆ ತೆರಳುತ್ತಿದ್ದ ಸಿಲಿಕಾನ್‌ ಸಿಟಿ ಮಂದಿ, ಭಾನುವಾರ ಬೆಂಗಳೂರು ಹಬ್ಬದ ಕಡೆ ಹೆಜ್ಜೆ ಹಾಕಿದರು. ಪರಿಣಾಮ ಅಂಬೇಡ್ಕರ್‌ ರಸ್ತೆ ಹಾಗೂ ವಿಧಾನಸೌಧದ ಆವರಣ ಜನರಿಂದ ತುಂಬಿ ತುಳುಕುತಿತ್ತು. ವಿದೇಶಿಗರು ವಿಸ್ಮಯದಿಂದ ಶಕ್ತಿಸೌಧ ಕಣ್ತುಂಬಿಕೊಂಡ ದೃಶ್ಯಗಳು ಸಾಮಾನ್ಯವಾಗಿದ್ದವು.

ಪುಟ್ಟ ಮಕ್ಕಳು ಪೋಷಕರ ಕೈ ಹಿಡಿದು ಸಿಹಿ ತಿಂಡಿ ಕೊಡಿಸುವಂತೆ ಒತ್ತಾಯಿಸುತ್ತಿದ್ದ ದೃಶ್ಯಗಳು ಒಂದೆಡೆಯಾದರೆ, ನಾಡಿನ ಸಾಂಸ್ಕೃತಿಕ ಕಲೆಗಳಾದ ಡೊಳ್ಳುಕುಣಿತ, ವೀರಗಾಸೆ, ಬೊಂಬೆ ಕುಣಿತಗಳ, ಅತ್ತ ಯುವಜನರನ್ನು ಆಕರ್ಷಿಸುವ ಪಾಶ್ಚಿಮಾತ್ಯ ಸಂಗೀತದ ಅಬ್ಬರವೂ ಜೋರಾಗಿತ್ತು.

ಮೈಸೂರು ಮಹಾರಾಜರ ಕಾಲದಲ್ಲಿ ಬಳಕೆಯಲ್ಲಿದ್ದ ನಾಣ್ಯ ಸೇರಿದಂತೆ ಬೆಂಗಳೂರಿನ ಐತಿಹಾಸಿಕ ಸ್ಥಳಗಳ ಚಿತ್ರಪಟಗಳ ಸಂಗ್ರಹ, ಇತಿಹಾಸ ಹೇಳುವ ಕಡತಪುಸ್ತಕ ಒಂದೊಂದೆ ಹಾಳೆಗಳನ್ನು ಯಾಂತ್ರಿಕವಾಗಿ ತಿರುವಿ ಹಾಕುತ್ತಿತ್ತು. ಬೊಂಬೆಗಳು, ಸ್ಥಳದಲ್ಲಿಯೇ ಮಣ್ಣಿನಿಂದ ದೀಪದ ಬಟ್ಟಲು, ಹುಂಡಿ ತಯಾರಿಸಿ ಕೊಡುತ್ತಿದ್ದ ಮಳಿಗೆ, ಚಿತ್ರ ಸಂತೆಯ ಮನಮೋಹಕ ಚಿತ್ರಪಟಗಳು ಗಮನಸೆಳೆದವು. 

ಥರ್ಮಾಕೋಲ್‌ನಿಂದ ಸಿದ್ಧಪಡಿಸಿದ್ದ ಕಡಲೆಕಾಯಿ ಬಸವಣ್ಣನ ಮೈದಡವಿ ಸಂಭ್ರಮಿಸಿದ ಜನತೆ, ಸ್ವಾಗತ ಕೋರಲು ಸಜ್ಜಾಗಿ ನಿಂತಿದ್ದ ಗಜರಾಜನ ಮಾದರಿ ಜತೆ ಫೋಟೋ ತೆಗೆಸಿಕೊಳ್ಳಲು ಮರೆಯಲಿಲ್ಲ. ಒಂದು ತಂಡ ಕಿವಿಗಪ್ಪಳಿಸುವ ರ್ಯಾಪ್‌ ಸಾಂಗ್‌ ಹಾಡಿದರೆ, ಆಸಕ್ತರು ತಮ್ಮ ಗಾಯನ ಕಲೆ ತೋರ್ಪಡಿಸಲು  ಮೈಕ್‌ ಇಡಲಾಗಿತ್ತು.

ಇನ್ನು ಅಂಬೇಡ್ಕರ್‌ ವೀದಿಯ ಎಡ ಭಾಗದಲ್ಲಿ ವಿವಿಧ ರೀತಿಯ ಅಂಗಡಿಗಳ ಸಾಲುಗಳಿಂದ ಕೂಡಿತ್ತು. ಸಾವಯವ ಧಾನ್ಯಗಳು, ಬಟ್ಟೆ, ಮಹಿಳೆಯರ ಅಲಂಕಾರಿಕ ವಸ್ತುಗಳ ಮಾರಾಟ ಜೋರಾಗಿತ್ತು. ಫಾಸ್ಟ್‌ ಫ‌ುಡ್‌ ಮಳಿಗೆಗಳಲ್ಲಿ ಬಾಯಲ್ಲಿ ನೀರೂರಿಸುವ ಖಾದ್ಯಗಳು ಆಹಾರ ಪ್ರಿಯರನ್ನು ಆಕರ್ಷಿಸಿದವು. ಈ ನಡುವೆ ವಿಧಾನಸೌಧ ಸೇರಿ ಹಬ್ಬದಲ್ಲಿದ್ದ ವಿಶೇಷ ಆಕೃತಿ, ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವವರ ಸಂಖ್ಯೆಯೂ ಕಡಿಮೆ ಇರಲಿಲ್ಲ.

ಫ್ರೀ ಸೈಕಲ್‌ ರೈಡ್‌!: ಬೆಂಗಳೂರು ಹಬ್ಬದಲ್ಲಿ “ನಮ್ಮ ನಿಮ್ಮ ಫೌಂಡೇಶನ್‌’ ಪರಿಸರ ಸ್ನೇಹಿ ಸೈಕಲ್‌ ರೈಡ್‌ಗೆ ಅವಕಾಶ ಮಾಡಿಕೊಡಲು ಸ್ಟಾಲ್‌ ಹಾಕಿಕೊಂಡಿತ್ತು. ಸೈಕಲ್‌ ರೈಡ್‌ ಬಯಸುವವರು ಆಧಾರ್‌ ಕಾರ್ಡ್‌ ಅಥವಾ ಅಧಿಕೃತ ಗುರುತಿನ ಚೀಟಿ ನೀಡಿದರೆ 15 ನಿಮಿಷ ಸುತ್ತಾಡಲು ಸೈಕಲ್‌ ಸಿಗುತ್ತಿತ್ತು. ಮಕ್ಕಳೂ ಸೇರಿ ನೂರಾರು ಮಂದಿ ಉಚಿತ ಸೈಕಲ್‌ ರೈಢ್‌ನ ಮೋಜನುಭವಿಸಿದರು. ಹಾಗೇ ಆಸಕ್ತರಿಗೆ ಸ್ಕೇಟಿಂಗ್‌ ಮಾಡಲು ಅವಕಾಶವಿತ್ತು. ನಡು ರಸ್ತೆಯಲ್ಲಿ ಕೆಲವರು ಸ್ಕೇಟಿಂಗ್‌ ಮಾಡುತ್ತಾ ಸಂಭ್ರಮಿಸಿದರೆ, ಜನ ಚಪ್ಪಾಳೆ ಮೂಲಕ ಹುರಿದುಂಬಿಸುತ್ತಿದ್ದರು.

ಸಂಜೆಗೆಂಪಿಗೆ ರಂಗೆರೆದ ಲೇಸರ್‌ ಬೆಳಕು: ಮತ್ತೂಂದೆಡೆ ಸಂಜೆಯಾಗುತ್ತಿದ್ದಂತೆ ಬೆಂಗಳೂರು ಹಬ್ಬ ರಂಗೇರತೊಡಗಿತು. ವಿಧಾನಸೌಧದ ಎದುರಿನ ವೇದಿಕೆಯ ಪರದೆಯಲ್ಲಿ ಲೇಸರ್‌ ಮೂಲಕ ಇಡೀ ಬೆಂಗಳೂರಿನ ಚಿತ್ರಣ ಮೂಡಿಬಂತು. ಸಿಲಿಕಾನ್‌ ಸಿಟಿ ಎಂದಾಕ್ಷಣ ಕಣ್ಮುಂದೆ ಬರುವ ಬೆಂಗಳೂರು ಅರಮನೆ, ವಿಧಾನಸೌಧ, ಗಗನಚುಂಬಿ ಕಟ್ಟಡಗಳು, ನಮ್ಮ ಮೆಟ್ರೋ ಸೇರಿದಂತೆ ನಗರವನ್ನು ಪ್ರತಿಬಿಂಬಿಸುವ ಹೆಗ್ಗುರುತುಗಳನ್ನು ಲೇಸರ್‌ನಲ್ಲಿ ಕಟ್ಟಿಕೊಟ್ಟಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಬೆಂಗಳೂರಿನ ಐತಿಹಾಸಿಕ ಪ್ರತಿರೂಪವಾಗಿರುವ ಬೆಂಗಳೂರಿನ ಕರಗದ ಪ್ರತಿಬಿಂಬವೂ ಕಂಡುಬಂತು.

ಪ್ರತಿ ಮೂರು ತಿಂಗಳಿಗೊಮ್ಮೆ ಬೆಂಗಳೂರು ಹಬ್ಬ ನಡೆಸುವ ಆಲೋಚನೆಯಿದೆ. ಇದಕ್ಕೆ ನಗರದ ಜನರ ಸಹಕಾರವೂ ಮುಖ್ಯ. ಯಾವ್ಯಾವ ಭಾಗದಲ್ಲಿ ಜನರ ಸಹಕಾರ ಸಿಗಲಿದೆಯೋ ಅಲ್ಲಿ ಹಬ್ಬ ಆಯೋಜಿಸಲಾಗುತ್ತದೆ. ಮುಂದಿನ ಬಾರಿ ಫ್ರೀಡಂ ಪಾರ್ಕ್‌ನಲ್ಲಿ  ಆಯೋಜಿಸುವ ಚಿಂತನೆಯಿದೆ. 
-ಪ್ರಿಯಾಂಕ್‌ ಖರ್ಗೆ, ಪ್ರವಾಸೋಧ್ಯಮ ಸಚಿವ 

ಕಬ್ಬನ್‌ ಪಾರ್ಕ್‌ ಹಾಗೂ ಲಾಲ್‌ಬಾಗ್‌ ತೋರಿಸುವ ಸಲುವಾಗಿ ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಬಂದಿದ್ದೆವು. ಆದರೆ, ಬೆಂಗಳೂರು ಹಬ್ಬ ನೋಡುವ ಅದೃಷ್ಟ ನಮ್ಮದಾಯಿತು. ಮುಖ್ಯವಾಗಿ ವಿಧಾನಸೌಧವನ್ನು ಹತ್ತಿರದಿಂದ ನೋಡಲು ಅವಕಾಶ ಸಿಕ್ಕಿದ್ದರಿಂದ ಮಕ್ಕಳು ಸಂತೋಷಪಟ್ಟರು. 
-ಬಸವರಾಜು, ಸರ್ಕಾರಿ ಶಿಕ್ಷಕ, ಲಕ್ಷ್ಮೇಶ್ವರ, ಗದಗ ಜಿಲ್ಲೆ 

ಬ್ರ್ಯಾಂಡ್‌ ಬೆಂಗಳೂರು ಲೋಗೋ ಒಳ್ಳೆಯ ಯೋಜನೆ. ಲೋಗೋ ವಿನ್ಯಾಸ ಚೆನ್ನಾಗಿದ್ದು, ಜನರನ್ನು ಹೆಚ್ಚು ಆಕರ್ಷಿಸಲಿದೆ. ವೀಕೆಂಡ್‌ ಕಳೆಯಲು ಬೆಂಗಳೂರು ಹಬ್ಬ ತುಂಬಾ ಸಹಕಾರಿಯಾಯ್ತು. ವಾರವಿಡೀ  ಕೆಲಸದಲ್ಲಿಯೇ ಮಗ್ನರಾಗಿರುವ ನಮಗೆ ಇಂತಹ ಕಾರ್ಯಕ್ರಮಗಳು ಹೆಚ್ಚು ಖುಶಿ ನೀಡಬಲ್ಲವು. 
-ಹರ್ಬೀತ್‌, ಜೆ.ಪಿ.ನಗರ ನಿವಾಸಿ 

ಜಾಗತಿಕ ಮಟ್ಟದಲ್ಲಿ ಬೆಂಗಳೂರು ಹೆಮ್ಮೆಯ ಪ್ರತೀಕ. ಜರ್ಮನಿಯಲ್ಲೂ ಈ ರೀತಿಯ ಹಬ್ಬಗಳು ನಡೆಯುತ್ತವೆ. ಆದರೆ, ನಮ್ಮೂರ ಹಬ್ಬವೇ ನಮಗೆ ಹೆಚ್ಚು ಆಪ್ತ. ಬೆಂಗಳೂರು ನೋಡಲು ಬಂದಿದ್ದ ನನ್ನ ಸ್ನೇಹಿತರು, ವಿಧಾನಸೌಧದ ವಿನ್ಯಾಸ ಹಾಗೂ ದೇಸಿ ಸೊಗಡನ್ನು ಹೆಚ್ಚು ಇಷ್ಟಪಟ್ಟರು.
-ಮೋಹನ, ಇಂದಿರಾನಗರ ನಿವಾಸಿ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

5

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ

IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.