ಅಸಾಂವಿಧಾನಿಕ ನಡೆ ವಿರುದ್ಧ ಹೋರಾಡುವೆ


Team Udayavani, May 19, 2017, 11:49 AM IST

devegorwda.jpg

ಬೆಂಗಳೂರು: “ರಾಷ್ಟ್ರದ ಒಕ್ಕೂಟ ವ್ಯವಸ್ಥೆಗೆ ತೊಂದರೆಯಾಗುವ ರೀತಿಯಲ್ಲಿ ಬಿಜೆಪಿ ನಡೆದುಕೊಳ್ಳುತ್ತಿದೆ. ಅದರ ವಿರುದ್ಧ ಹೋರಾಟಕ್ಕೆ ನಾನು ಸದಾ ಸಿದ,’œ ಎಂದು ಮಾಜಿ ಪ್ರಧಾನಮಂತ್ರಿ ಎಚ್‌.ಡಿ.ದೇವೇಗೌಡ ಹೇಳಿದರು.

ಐಟಿ ಕನ್ನಡಿಗರ ಒಕ್ಕೂಟ ಗುರುವಾರ ಆಯೋಜಿಸಿದ್ದ “ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಸ್ತುತತೆ’ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, “ಒಂದು ದೇಶ, ಒಂದೇ ಭಾಷೆ ಹೆಸರಿನಲ್ಲಿ ಹಿಂದೂ ರಾಷ್ಟ್ರ ಮಾಡಲು ಬಿಜೆಪಿ ಹೊರಟಿದೆ. ಸಂವಿಧಾನಕ್ಕೆ ವಿರುದ್ಧವಾಗಿ ನಡೆಯುವ ಯಾವುದೇ ಕಾರ್ಯಚಟುವಟಿಕೆ ವಿರುದ್ಧ ನಾನು ಹೋರಾಡುತ್ತೇನೆ. ಜಾತಿ ರಾಜಕಾರಣ ನಮ್ಮಲ್ಲಿ ಹೆಚ್ಚುತ್ತಿದೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಅದನ್ನು ಮೆಟ್ಟಿ ನಿಲ್ಲಬೇಕು,’  ಎಂದರು.

ಪ್ರಧಾನಿಗೆ ನೇರವಾಗಿಯೇ ಹೇಳಿದ್ದೇನೆ: “ಈ ಬಾರಿ ಕೇಂದ್ರದಲ್ಲಿ ಬಿಜೆಪಿ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿಕೆ ನೀಡಿದ್ದೆ. ಆದರೆ, ಲೋಕಸಭೆಯಲ್ಲಿ ಬಿಜೆಪಿ ವರ್ತನೆ ಹೇಗಿರುತ್ತದೆ ಎಂಬುದು ಗೊತ್ತಿದ್ದ ಕಾರಣ, ರಾಜೀನಾಮೆ ನೀಡಲಿಲ್ಲ. ಕೇಂದ್ರ ಸರ್ಕಾರದ ಇಂದಿನ ವರ್ತನೆ ನನಗೆ ಗೊತ್ತಿದ್ದು, ಈ ಕುರಿತು ನೇರವಾಗಿ ಪ್ರಧಾನಮಂತ್ರಿ ಮೋದಿ ಅವರಿಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದೇನೆ,’ ಎಂದು ಹೇಳಿದರು. 

“ರಾಜ್ಯದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಪಕ್ಷಗಳು ಪಕ್ಷಾತೀತವಾಗಿ ಕೆಲಸ ಮಾಡಬೇಕು. ನನಗೆ ಪಕ್ಷಕ್ಕಿಂತ ದೇಶ ಮುಖ್ಯ. ನಮ್ಮ ಜನ ಮುಖ್ಯ. ಇದೇ ಕಾರಣಕ್ಕೆ ಕಾವೇರಿ ವಿವಾದದ ಸಂದರ್ಭದಲ್ಲಿ ಸಿದ್ದರಾಮಯ್ಯ ಕರೆದಾಗ ನಾನು ಹೋಗಿ ಅವರೊಂದಿಗೆ ಮಾತುಕತೆ ನಡೆಸಿದ್ದೆ. ಪ್ರಸ್ತುತ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗಗಳು ತಮ್ಮ ವರ್ಚಸ್ಸು ಕಳೆದುಕೊಳ್ಳುತ್ತಿವೆ,’ ಎಂದು ವಿಷಾದ ವ್ಯಕ್ತಪಡಿಸಿದರು.

ಚಿತ್ರಕಲಾ ಪರಿಷತ್ತು ಅಧ್ಯಕ್ಷ ಬಿ.ಎಲ್‌.ಶಂಕರ್‌ ಮಾತನಾಡಿ, “ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಒಂದು ದೇಶ, ಒಂದು ತೆರಿಗೆ ಮಾದರಿಯ ವಿಧೇಯಕದಿಂದ ರಾಜ್ಯಗಳ ಮೇಲೆ ಕೇಂದ್ರ ಹಿಡಿತ ಮತ್ತಷ್ಟು ಹೆಚ್ಚಾಗಲಿದೆ. ಇದು ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಲಿದೆ. ಇಂತಹ ವ್ಯವಸ್ಥೆ ವಿರುದ್ಧ ಮಾತನಾಡುವವರಿಗೆ ದೇಶದ್ರೋಹಿ ಪಟ್ಟಕಟ್ಟಲಾಗುತ್ತಿದೆ,’ ಎಂದು ಆತಂಕ ವ್ಯಕ್ತಪಡಿಸಿದರು. 

“ಇತ್ತೀಚಿನ ದಿನಗಳಲ್ಲಿ ಶಾಸಕರು, ಸಚಿವರುಗಳಿಗೆ ನೂತನ ಯೋಜನೆಗಳ ಬಗ್ಗೆ ಒಂದಿಷ್ಟು ಮಾಹಿತಿಯೂ ಇರುವುದಿಲ್ಲ. ಯೋಜನೆಗಳನ್ನು ಸಂಕ್ಷಿಪ್ತವಾಗಿ ಅಭ್ಯಾಸ ಮಾಡುವ ಯಾವುದೇ ಗೋಜಿಗೆ ಅವರು ಹೋಗದೆ, ಕಡತಗಳು ತಮ್ಮ ಬಳಿಗೆ ಬಂದಾಗ ಪರಿಶೀಲಿಸಿ ತೀರ್ಮಾನಿಸಬಹುದು ಎಂದು ಬರೆದು ಕೈತೊಳೆದುಕೊಳ್ಳುತ್ತಾರೆ. ಪ್ರಸ್ತುತ ಸಹಿ ಹಾಕಲು ಬಂದರೆ ಸಾಕು ಮಂತ್ರಿಯಾಗಬಹುದು ಎಂಬ ಸ್ಥಿತಿ ಇದೆ. ವಿಧಾನಸೌಧ, ವಿಕಾಸಸೌಧದಲ್ಲಿ ಕನ್ನಡವೇ ಮರೆಯಾಗುತ್ತಿದೆ,’ ಎಂದು ಬೇಸರ ವ್ಯಕ್ತಪಡಿಸಿದರು.

ಅನ್ಯಾಯದ ಪಟ್ಟಿ ನನ್ನ ಬಳಿ ಇದೆ: ರಾಷ್ಟ್ರೀಯ ಪಕ್ಷಗಳಿಂದ ಕರ್ನಾಟಕಕ್ಕೆ ಸಂದಿರುವ ನ್ಯಾಯ ಕುರಿತು ವಿಚಾರ ಮಂಡಿಸಿದ ಶಾಸಕ ವೈಎಸ್‌ವಿ ದತ್ತ, “ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ಮಾಡಿರುವ ನ್ಯಾಯದ ಬಗ್ಗೆ ಹುಡುಕಾಡಿದರು ಒಂದೂ ಸಿಗಲಿಲ್ಲ. ಆದರೆ, ಸುಮಾರು 50ಕ್ಕೂ ಹೆಚ್ಚು ಅನ್ಯಾಯಗಳ ಪಟ್ಟಿಯೇ ನನ್ನ ಬಳಿಯಲ್ಲಿದೆ,’ ಎಂದು ಹೇಳಿದರು.

ಹಿಂದಿ  ಹೇರಿಕೆ ಸಾಂಸ್ಕೃತಿಕ ಮತ್ತು ರಾಜಕೀಯ ಪರಿಣಾಮದ ಕುರಿತು ಮಾತನಾಡಿದ ಪತ್ರಕರ್ತ ಎನ್‌.ಎ.ಎಮ್‌.ಇಸ್ಮಾಯಿಲ್‌, “ಹಿಂದಿಯನ್ನು ಸಾಂಸ್ಕೃತಿಕವಾಗಿ ಹೆದರಿಸುವುದಲ್ಲ. ಒಂದು ಪ್ರಾದೇಶಿಕ ರಾಜಕೀಯ ಪಕ್ಷವಾಗಿ ಹೆದರಿಸುವ ಅಗತ್ಯವಿದೆ. ಈ ಮೂಡಲ ರಾಜ್ಯದ ಮಾತೃಭಾಷಾ ಉಳಿವಿಗೆ ಪ್ರಾದೇಶಿಕ ಪಕ್ಷದಿಂದಲೇ ಸಾಧ್ಯ,’ ಎಂದರು. 

ಹುಟ್ಟುಹಬ್ಬ ಸರಳವಾಗಿ ಆಚರಿಸಿಕೊಂಡ ಎಚ್ಡಿಡಿ
ಬೆಂಗಳೂರು:
ಎಂಬತ್ತೈದನೇ ವಸಂತಕ್ಕೆ ಕಾಲಿಟ್ಟ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಹುಟ್ಟುಹಬ್ಬದ ದಿನ ತಿರುಪತಿ ವೆಂಕಟೇಶ್ವರನ ದರ್ಶನ ಪಡೆದ ದೇವೇಗೌಡರು ನಂತರ ನಗರಕ್ಕೆ ಆಗಮಿಸಿ ಅಭಿಮಾನಿಗಳು ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಪಕ್ಷದ ಸಂಸದರು, ಶಾಸಕರು, ಮುಖಂಡರು, ಕಾರ್ಯರ್ತರು ಮನೆಗೆ ಆಗಮಿಸಿ ಹುಟ್ಟುಹಬ್ಬದ ಶುಭ ಕೋರಿದರು. ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬರ, ರೈತರ ಆತ್ಮಹತ್ಯೆ ಹಿನ್ನೆಲೆಯಲ್ಲಿ ನನ್ನ ಹುಟ್ಟುಹಬ್ಬ ಸರಳವಾಗಿ ಆಚರಿಸಲು ಮನವಿ ಮಾಡಿದ್ದೆ.  40 ವರ್ಷಗಳಿಂದ ಹುಟ್ಟುಹಬ್ಬದಂದು ತಿರುಪತಿ ವೆಂಕಟೇಶ್ವರನ ದರ್ಶನ ಮಾಡುತ್ತಿದ್ದೇನೆ.

ರಾಜ್ಯ, ದೇಶದಲ್ಲಿ ಸನ್ನಿವೇಶ ಸರಿಯಿಲ್ಲ. ಇದನ್ನು ಸರಿಮಾಡುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ಹೇಳಿದರು. ನನ್ನ ಹುಟ್ಟುಹಬ್ಬದಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿರುವುದು ಸಂತೋಷ ತಂದಿದೆ. ಅಧಿಕಾರ ಕಳೆದುಕೊಂಡ ಮೇಲೂ ಇಷ್ಟು ಪ್ರೀತಿ ತೋರುತ್ತಿದ್ದಾರೆ. ಇದಕ್ಕೆ ಧನ್ಯವಾದ ಎಂದರು.

ಶುಭ ಕೋರಿದ ರಾಷ್ಟ್ರಪತಿ, ಪ್ರಧಾನಿ: ರಾಷ್ಟ್ರಪತಿ, ಪ್ರಧಾನಿಯವರು ಪತ್ರ ಬರೆದು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಶುಭಾಶಯ ಕೋರಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದರು. 

ಅಪ್ಪಾಜಿ ಕ್ಯಾಂಟೀನ್‌ ಅಧಿಕೃತ ಘೋಷಣೆ: ವಿಧಾನಪರಿಷತ್‌ ಸದಸ್ಯ ಟಿ.ಎ.ಶರವಣ, ಬಸವನಗುಡಿಯಲ್ಲಿ “ನಮ್ಮ ಅಪ್ಪಾಜಿ ಕ್ಯಾಂಟೀನ್‌’ ಆರಂಭಿಸುವುದಾಗಿ ಅಧಿಕೃತ ಘೋಷಣೆ ಮಾಡಿದರು. ತಿಂಗಳಲ್ಲಿ ಈ ಕ್ಯಾಂಟೀನ್‌ ಪ್ರಾರಂಭವಾಗಲಿದ್ದು  5 ರೂ.ಗೆ ತಿಂಡಿ, 10 ರೂ.ಗೆ ಊಟ ದೊರೆಯಲಿದೆ.

ಟಾಪ್ ನ್ಯೂಸ್

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ

Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ

Bengaluru: ರೋಡ್‌ ರೇಜ್‌: ಕಾರಿನ ಬಾನೆಟ್‌ ಮೇಲೆ ಹತ್ತಿ ಯುವಕರ‌ ಪುಂಡಾಟ

Bengaluru: ರೋಡ್‌ ರೇಜ್‌: ಕಾರಿನ ಬಾನೆಟ್‌ ಮೇಲೆ ಹತ್ತಿ ಯುವಕರ‌ ಪುಂಡಾಟ

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Naxals-Meet-Cm

Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.