Bangalore: ಸಾಕು ನಾಯಿ ವಿಚಾರಕ್ಕೆ ಹೊಡೆದಾಟ; ಪೊಲೀಸರ ರಾಜಿ ಸಂಧಾನದಲ್ಲಿ ಇತ್ಯರ್ಥ
Team Udayavani, Feb 5, 2024, 11:27 AM IST
ಬೆಂಗಳೂರು: ಸಾಕು ನಾಯಿ ವಿಚಾರಕ್ಕೆ ಫ್ಲ್ಯಾಟ್ ಮಾಲೀಕರು ಹಾಗೂ ಬಾಡಿಗೆದಾರರ ನಡುವೆ ಜಗಳ ನಡೆದಿದ್ದು, ಪರಸ್ಪರ ಹಲ್ಲೆ ಆರೋಪ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಪ್ರಕರಣ ಕೊನೆಗೆ ರಾಜೀ ಸಂಧಾನದಲ್ಲಿ ಸುಖಾಂತ್ಯವಾಗಿದೆ.
ಪಂಜಾಬ್ ಮೂಲದ ಪೂಜಾ ಕುಟುಂಬದೊಂದಿಗೆ ಜೀವನಭೀಮಾನಗರದ ಪ್ರಮಿಳಾ ಎಂಬವರ ಅಪಾರ್ಟ್ ಮೆಂಟ್ನ ಫ್ಲ್ಯಾಟ್ವೊಂದರಲ್ಲಿ ಭೋಗ್ಯಕ್ಕೆ ಪಡೆದು ವಾಸವಾಗಿದ್ದರು. ಭೋಗ್ಯದ ವೇಳೆ ಮನೆಯಲ್ಲಿ ನಾಯಿ ಸಾಕುವಂತಿಲ್ಲ ಎಂದು ಮಾಲೀಕರು ಷರತ್ತು ವಿಧಿಸಿದ್ದರು. ಆದರೂ, ಪೂಜಾ ಮನೆಯಲ್ಲಿ ನಾಯಿ ಸಾಕಿದ್ದರು. ಇದೇ ವಿಚಾರವಾಗಿ ಫೆ.2ರ ತಡರಾತ್ರಿ ಪೂಜಾ ಮತ್ತು ಪ್ರಮಿಳಾ ಮನೆಯವರ ನಡುವೆ ಪರಸ್ಪರ ಜಗಳ ನಡೆದು ಹೊಡೆದಾಡಿಕೊಂಡಿದ್ದರು. ಬಾಡಿಗೆದಾರರಾದ ಪೂಜಾ, ಮನೆಯ ಮಾಲೀಕರಾದ ಪ್ರಮೀಳಾ ಹಾಗೂ ಅವರ ಸಹಚರರ ವಿರುದ್ಧ ಜೀವನಭೀಮಾನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ, ನಿಂದನೆ ಆರೋಪದಡಿ ದೂರು ನೀಡಿದ್ದರು.
ಇದರ ಬೆನ್ನಲ್ಲೇ ಮನೆ ಮಾಲೀಕರಾದ ಪ್ರಮೀಳಾ, ಬಾಡಿಗೆದಾರರಾದ ಪೂಜಾ ಹಾಗೂ ಅವರ ಕುಟುಂಬದ ವಿರುದ್ಧವೂ ಹಲ್ಲೆ ಆರೋಪದಡಿ ದೂರು ನೀಡಿದ್ದರು. ಎರಡು ಪ್ರಕರಣದಲ್ಲೂ ಪೊಲೀಸರು ಎನ್ಸಿಆರ್ ಮಾಡಿದ್ದಾರೆ. ಅಲ್ಲದೆ, ಎರಡೂ ಕಡೆಯವರನ್ನು ಕರೆಯಿಸಿ ವಿಚಾರಣೆ ಮಾಡಿದ್ದು, ಈ ವೇಳೆ ಇಬ್ಬರು ತಮ್ಮ ತಪ್ಪಿನ ಅರಿವಾಗಿ ರಾಜಿ ಮಾಡಿಕೊಳ್ಳುವುದಾಗಿ ತಿಳಿಸಿ ದೂರು ಹಿಂಪಡೆದಿದ್ದಾರೆ. ಇನ್ನು ಮುಂದೆ ಯಾವುದೇ ಜಗಳ ಮಾಡಿಕೊಳ್ಳದೆ ಹೊಂದಾಣಿಕೆಯಿಂದ ಇರುವುದಾಗಿ ಇಬ್ಬರೂ ಲಿಖಿತವಾಗಿ ಬರೆದುಕೊಟ್ಟು ಹೋಗಿದ್ದಾರೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.