ಫೆ.21ರಿಂದ ಚಲನಚಿತ್ರೋತ್ಸವ
Team Udayavani, Jan 31, 2019, 6:59 AM IST
ಬೆಂಗಳೂರು: ಸಿನಿಪ್ರಿಯರಿಗೆ ಫೆಬ್ರವರಿ ಯಲ್ಲಿ ಸಿನಿಮಾ ಹಬ್ಬದೂಟ. ಹೌದು ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದ್ದು, ಫೆಬ್ರವರಿ 21 ರಿಂದ 28 ರವರೆಗೆ ಹನ್ನೊಂ ದನೇ ಬೆಂಗಳೂರು ಅಂತಾ ರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿ ಸಲಾ ಗಿದೆ. ಈ ಕುರಿತು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಅವರು ಚಿತ್ರೋತ್ಸವದ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರು.
‘ವಿಧಾನಸೌಧದ ಬಾಂಕ್ವೇಟ್ ಹಾಲ್‌ನಲ್ಲಿ ಅಂತಾರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನಾ ಸಮಾರಂಭ ನೆರವೇರಲಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಚಿತ್ರೋತ್ಸವಕ್ಕೆ ಚಾಲನೆ ನೀಡಲಿ ದ್ದಾರೆ. ಇನ್ನು, ಒಂದು ವಾರದ ಕಾಲ ನಡೆಯಲಿರುವ ಈ ಚಿತ್ರೋತ್ಸವದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ. ದೇಶ, ವಿದೇಶಗಳ ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಸಹ ಈ ಚಿತ್ರೋತ್ಸವದ ಮುಖ್ಯ ಆಕರ್ಷಣೆಯಾಗಲಿದ್ದಾರೆ. ಇನ್ನು, ಸಮಾರೋಪ ಸಮಾರಂಭದಲ್ಲಿ ರಾಜ್ಯಪಾಲರಾದ ವಾಜೂಭಾಯಿ ವಾಲಾ ಅವರು ಏಷಿಯನ್, ಭಾರತೀಯ ಮತ್ತು ಕನ್ನಡ ಚಿತ್ರ ವಿಭಾಗಗಳಲ್ಲಿ ಸ್ಪರ್ಧಿಸಿ ವಿಜೇತವಾದ ಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ನಗರದ ಒರಾಯನ್ ಮಾಲ್‌ನಲ್ಲಿರುವ ಪಿವಿಆರ್ ಸಿನಿಮಾಸ್‌ನ ಹನ್ನೊಂದು ಪರದೆಗಳಲ್ಲಿ ಫೆ.22 ರಿಂದ ಏಳು ದಿನಗಳ ಕಾಲ ಸುಮಾರು 60 ದೇಶಗಳ 200ಕ್ಕೂ ಹೆಚ್ಚಿನ ವಿಶೇಷ ಹಾಗು ಅಪರೂಪದ ಚಲನಚಿತ್ರಗಳು ಪ್ರದರ್ಶನ ಗೊಳ್ಳಲಿವೆ. ಚಲನಚಿತ್ರೋತ್ಸವದ ಪ್ರವೇಶ, ಟಿಕೆಟ್ ಬುಕ್ಕಿಂಗ್ ಮತ್ತಿತರ ಮಾಹಿತಿಗಾಗಿ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ವೆಬ್‌ಸೈಟ್‌ಗೆ ಭೇಟಿ ನೀಡ ಬಹುದು’ ಎಂದು ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
ಚಿತ್ರೋತ್ಸವದ ವಿಶೇಷತೆಗಳು: ರಾಷ್ಟ್ರಪಿತ ಗಾಂಧೀಜಿ ಅವರ 150 ನೇ ಜನ್ಮದಿನೋತ್ಸವದ ಅಂಗವಾಗಿ ಶ್ಯಾಮ್ ಬೆನಗಲ್ ಅವರ ‘ಮೇಕಿಂಗ್ ಆಫ್ ಮಹಾತ್ಮ’, ಫೀರೋಜ್ ಅಬ್ಟಾಸ್‌ಖಾನ್ ಅವರ ‘ಗಾಂಧಿ ಮೈ ಫಾದರ್’, ಗಿರೀಶ್ ಕಾಸರವಳ್ಳಿ ಅವರ ‘ಕೂರ್ಮಾವತಾರ’ ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಇನ್ನು, ಇದೇ ಸಂದರ್ಭದಲ್ಲಿ ಇತ್ತೀಚೆಗೆ ಅಗಲಿದ ನಟ ಅಂಬರೀಶ್, ನಿರ್ದೇಶಕ ಮೃಣಾಲ್ ಸೇನ್, ಎಂ.ಭಕ್ತವತ್ಸಲಂ, ಸಾಹಿತಿ ಎಂ.ಎನ್.ವ್ಯಾಸರಾವ್, ನಟ ಸಿ.ಎಚ್.ಲೋಕನಾಥ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸ ಲಾಗುವುದು. ಹೆಸರಾಂತ ಛಾಯಾಗ್ರಾಹಕ ಜಿ.ಎಚ್.ಭಾಸ್ಕರ್ ಅವರ ಸಲಹೆಯೊಂದಿಗೆ ಬೆಂಗಳೂರು ಮೂಲದ ಸಾಕ್ಷ್ಯ ಚಿತ್ರ ನಿರ್ಮಾತೃ ವಿನೋದ್‌ರಾಜ್ ಉತ್ಸವದ ಪ್ರಾಕೃತಿಕ ವಿಕೋಪ ವಿಷಯ ಕುರಿತು ಸಂಗ್ರಹಿಸಿದ ಸಾಕ್ಷ್ಯಚಿತ್ರ ಪ್ರದರ್ಶನ ಗೊಳ್ಳಲಿದೆ. ಜತೆಗೆ ಮನರಂಜನಾ ಸ್ಪರ್ಧೆಗಳನ್ನೂ ಏರ್ಪಡಿಸಲಾಗಿದೆ.
ಇದರೊಂದಿಗೆ ಆತ್ಮಕಥೆ ವ್ಯಕ್ತಿಚಿತ್ರಗಳ ವಿಭಾಗದಲ್ಲಿ ನಿರ್ದೇಶಕ ಋತುಪರ್ಣೋ ಘೋಷ್, ಚಿತ್ರತಾರೆ ರೋಮಿ ಸ್ನೆ„ಡರ್, ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ, ಗೀತರಚನೆಕಾರ ಡಾ.ದೊಡ್ಡ ರಂಗೇಗೌಡ, ಸಾವಯವ ಕೃಷಿಕ ನಾಡೋಜ ನಾರಾಯಣ ಗೌಡ ಅವರ ಸಾಕ್ಷ್ಯಚಿತ್ರ ಪ್ರದರ್ಶನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.