ಯುವತಿಗೆ ಸಂಕಷ್ಟ ತಂದಿಟ್ಟ “ಫೈರ್‌ ಶಾಟ್‌’


Team Udayavani, Feb 19, 2019, 6:46 AM IST

yuvatige.jpg

ಬೆಂಗಳೂರು: ಪಬ್‌, ಬಾರ್‌ ಅಂಡ್‌ ರೆಸ್ಟೊರೆಂಟ್‌ಗಳಲ್ಲಿ ಕಿಕ್‌ ತರಿಸುವ “ಫೈರ್‌ ಶಾಟ್‌’ ಮೂಲಕ ಮದ್ಯ ಸೇವಿಸುವ ಸಂದರ್ಭದಲ್ಲಿ ನಡೆಯುವ ಆನಾಹುತಕ್ಕೆ ಇದು ಉದಾಹರಣೆ. “ಫೈರ್‌ ಶಾಟ್‌’ ಎಡವಟ್ಟಿನಿಂದ ಯುವತಿಯೊಬ್ಬಳ ಮುಖ ಹಾಗೂ ಕತ್ತಿನ ಭಾಗ ಸುಟ್ಟ ಘಟನೆ ರೆಸಿಡೆನ್ಸಿ ರಸ್ತೆಯ ಬಾರ್‌ ಅಂಡ್‌ ರೆಸ್ಟೋರೆಂಟ್‌ನಲ್ಲಿ ನಡೆದಿದೆ.

ಗಾಯಾಳು ಯುವತಿ ವಿನಿತಾ (ಹೆಸರುಬದಲಿಸಲಾಗಿದೆ) ಈ ಕುರಿತು ಅಶೋಕನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು ” ಒತ್ತಾಯ ಪೂರ್ವಕವಾಗಿ ಬಾರ್‌ಸಿಬ್ಬಂದಿ “ಫೈರ್‌ ಶಾಟ್‌’ ನೀಡಿದರು’ಎಂದು ಆರೋಪಿಸಿದ್ದಾರೆ. ಯುವತಿಯ ದೂರು ಆಧರಿಸಿ ರೆಸಿಡೆನ್ಸಿ ರಸ್ತೆಯಲ್ಲಿರುವ ಬಾರ್‌ನ ಮದ್ಯ ಸರಬರಾಜು ಮಾಡುವ ಸಿಬ್ಬಂದಿ (ಬಾರ್‌ಟೆಂಡರ್‌) ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

“ಫೆ.15ರಂದು ರಾತ್ರಿ 8 ಗಂಟೆ ಸುಮಾರಿಗೆ ಹಾಗೂ ಸ್ನೇಹಿತರ ಜತೆ ರೆಸಿಡೆನ್ಸಿ ರಸ್ತೆಯ ಕಮ್ಯುನಿಟಿ ಹಾಲ್‌ಗೆ ಊಟಕ್ಕೆ ತೆರಳಿದ್ದು, ಊಟ ಹಾಗೂ ಡ್ರಿಂಕ್ಸ್‌ ಆರ್ಡ್‌ರ್‌ ಮಾಡಿದ್ದೆವು. ಈ ವೇಳೆ ಸಿಬ್ಬಂದಿ ಫೈರ್‌ ಶಾಟ್‌ ನೀಡಲು ಮುಂದಾಗಿದ್ದರು. ನನಗೆ ಇದರ ಅಭ್ಯಾಸವಿಲ್ಲ ಯಾಕೆ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದೆ. ಆದರೆ ಅಲ್ಲಿನ ಸಿಬ್ಬಂದಿ, ಇಲ್ಲಿಗೆ ಬರುವ ಗ್ರಾಹಕರೆಲ್ಲರಿಗೂ ಫೈರ್‌ ಶಾಟ್‌ ಪ್ರಯತ್ನಿಸುತ್ತಾರೆ ಎಂದು ತಿಳಿಸಿದ್ದು,

ಫೈರ್‌ ಶಾಟ್‌ ನೀಡಲು ಮುಂದಾದ ವೇಳೆ ಮದ್ಯದ ಗ್ಲಾಸ್‌ನಲ್ಲಿದ್ದ ಬೆಂಕಿ ಮುಖಕ್ಕೆ ತಾಗಿ ಕತ್ತಿನ ಭಾಗವೂ ಸುಟ್ಟಿದೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆ ಕುರಿತು “ಉದಯವಾಣಿ’ ಜತೆ ಮಾತನಾಡಿದ ದೂರುದಾರೆ ಯುವತಿ ” ನನಗೆ ಫೈರ್‌ ಶಾಟ್‌ ಬಗ್ಗೆ ಗೊತ್ತಿಲ್ಲ ಎಂದರೂ ನೀಡಲು ಮುಂದಾದಾಗ ಈ ಘಟನೆ ಸಂಭವಿಸಿದೆ.

ಸುಟ್ಟಗಾಯಗಳಿಂದ ನಾನು 40 ನಿಮಿಷ ಅಲ್ಲಿಯೇ ನೋವು ಅನುಭವಿಸುತ್ತಿದ್ದರೂ, ಬಾರ್‌ನ ಸಿಬ್ಬಂದಿ ಯಾವುದೇ ಪ್ರಥಮಚಿಕಿತ್ಸೆ ಕೊಡಲು ಮುಂದಾಗಲಿಲ್ಲ. ಬಳಿಕ ನಾನೇ ಖುದ್ದಾಗಿ ಡಯಲ್‌ 100ಗೆ ಕರೆ ಮಾಡಿ ಮಾಹಿತಿ ನೀಡಿದೆ. ಬಳಿಕ ಪೊಲೀಸರು ಬಂದರು. ಸ್ನೇಹಿತರ ಸಹಾಯದಿಂದ ಆಸ್ಪತ್ರೆಗೆ ದಾಖಲಾದೆ. ಸುಟ್ಟಗಾಯಗಳಿಂದ ಮಾತನಾಡಲೂ ಕಷ್ಟವಾಗಿದೆ ಎಂದರು.

ಯುವತಿ ದೂರು ಆಧರಿಸಿ ಬಾರ್‌ನ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದು ಆಕೆಯ ಆರೋಪವನ್ನು ಸಿಬ್ಬಂದಿ ನಿರಾಕರಿಸಿದ್ದಾರೆ. ಆಕೆಯ ಖುದ್ದಾಗಿ ಫೈರ್‌ಶಾಟ್‌ ಆರ್ಡರ್‌ ಮಾಡಿದ್ದು. ಮದ್ಯದ ಗ್ಲಾಸ್‌ ಸರಿಯಾದ ರೀತಿ ಹಿಡಿದುಕೊಳ್ಳದೆ ಪ್ರಯತ್ನಿಸಿದ್ದರಿಂದ ಅವಘಡ ಸಂಭವಿಸಿದೆ ಎಂದು ಹೇಳುತ್ತಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.

ಫೈರ್‌ಶಾಟ್‌ ಎಂದರೇನು?: ಕಾಕ್‌ಟೇಲ್‌ ಸೇರಿದಂತೆ ಇನ್ನಿತರೆ ಮದ್ಯಗಳಿಗೆ ಗ್ಲಾಸ್‌ಗಳಲ್ಲಿ ಹಾಕಿ ಬೆಂಕಿ ಹಚ್ಚಿ ಅದರಿಂದ ಬರುವ ಹೊಗೆಯ ಸುವಾಸನೆ (ಅಮಲು) ಆಸ್ವಾದಿಸುವುದು. ಬೆಂಕಿ ಆರಿದ ಬಳಿಕ ಗ್ಲಾಸ್‌ನಲ್ಲಿರುವ ಮದ್ಯ ಸೇವಿಸುವುದನ್ನು “ಫೈರ್‌ ಶಾಟ್‌’ ಎನ್ನುತ್ತಾರೆ. ಬಹುತೇಕ ಪಬ್‌ ಬಾರ್‌ ಅಂಡ್‌ ರೆಸ್ಟೋರೆಂಟ್‌, ಪಾರ್ಟಿಗಳಲ್ಲಿ ಫೈರ್‌ಶಾಟ್‌ ಎಂಬುದು ಸಾಮಾನ್ಯ. “ಫೈರ್‌ಶಾಟ್‌’ ನಡೆಸಲು ಬಾರ್‌ನವರು ಅಬಕಾರಿ ಇಲಾಖೆ ಅನುಮತಿ ಪಡೆಯುವುದು ಕಡ್ಡಾಯ.

ಎಚ್ಚರ ತಪ್ಪಿದ್ರೆ ಅಪಾಯ!: “ಫೈರ್‌ಶಾಟ್‌’ ಮೂಲಕ ಮದ್ಯವನ್ನು ಅತ್ಯಂತ ಜಾಗರೂಕವಾಗಿ ಸೇವಿಸಬೇಕು. ಇದರ ಅಭ್ಯಾಸವಿರುವವರು ಮಾತ್ರವೇ ಇದನ್ನು ಸೇವಿಸುತ್ತಾರೆ.  ಬೆಂಕಿ ಆರುವ ಮುನ್ನವೇ ಪ್ರಯತ್ನಿಸಬಾರದು. ಹೀಗಾಗಿ ಬೆಂಕಿ ಪೂರ್ಣ ಪ್ರಮಾಣದಲ್ಲಿ ಆರುವವರೆಗೂ ಕಾಯಬೇಕಾಗಿರುತ್ತದೆ. ಮದ್ಯದ ತುಂಬಿದ ಗ್ಲಾಸ್‌ ಕೂಡ ಅತ್ಯಂತ ಬಿಸಿಯಾಗಿರುವುದರಿಂದ ಹಿಡಿತವೂ ಮುಖ್ಯ. ಬೇರೆ ಬೇರೆ ಕಡೆ ಫೈರ್‌ಶಾಟ್‌ ಪ್ರಯತ್ನಿಸುವಾಗ ಗ್ರಾಹಕರು ಎಚ್ಚರತಪ್ಪಿ ದುರ್ಘ‌ಟನೆಗೆ ಈಡಾಗಿದ್ದಾರೆ.

ಪೊಲೀಸರಿಗೆ ನಿಖರ ಮಾಹಿತಿಯಿಲ್ಲ!: ಸ್ವಲ್ಪ ಎಚ್ಚರ ತಪ್ಪಿದರೂ ಗ್ರಾಹಕನ ಜೀವಕ್ಕೆ ಕುತ್ತುತರುವ “ಫೈರ್‌ ಶಾಟ್‌’ ಮಾದರಿಯ ಮದ್ಯ ಮಾರಾಟ ಕಾನೂನು ಅನುಮತಿ ಅಥವಾ ಕಾನೂನು ಬಾಹಿರ ಎಂಬುದರ ಬಗ್ಗೆ ಪೊಲೀಸರಿಗೆ ಸ್ಪಷ್ಟತೆಯಿಲ್ಲ. ಕಾನೂನುಬಾಹಿರ ಚಟುವಟಿಕೆಗಳ ಆರೋಪದ ಮೇಲೆ ಬಾರ್‌ ಆಂಡ್‌ ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸುವ ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ಗೂ ಸ್ಪಷ್ಟತೆ ಸಿಕ್ಕಿಲ್ಲ. ಸಿಸಿಬಿ ಇದುವರೆಗೂ ನಡೆಸಿರುವ ದಾಳಿಗಳಲ್ಲಿ ಈ ಮಾದರಿಯನ್ನು ನಾನು ಗಮನಿಸಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ನುಣುಚಿಕೊಂಡರು. “ಫೈರ್‌ ಶಾಟ್‌’ ವಿಚಾರ, ಬಾರ್‌ನ ಲೈಸೆನ್ಸ್‌ ಬಗ್ಗೆ ಅಬಕಾರಿ ಇಲಾಖೆ ವ್ಯಾಪ್ತಿಗೆ ಬರಲಿದೆ ಎಂದು  ಮತ್ತೂಬ್ಬ ಅಧಿಕಾರಿ ಹೇಳಿದರು.

ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆಯಿಂದ ಅನುಮತಿ ಪಡೆದುಕೊಳ್ಳುವುದು ಕಡ್ಡಾಯ. ಮಾರಾಟದ ಪ್ರಕ್ರಿಯೆಯಲ್ಲಿ ಮಾನವ ದೇಹಕ್ಕೆ ತೊಂದರೆಯಾಗುವ ಮಾದರಿಯಲ್ಲಿ ಕೃತ್ಯ ಸಂಭವಿಸಿದರೆ ಕಾನೂನುಬಾಹಿರ. ಅಶೋಕನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ.
-ಟಿ.ಸುನೀಲ್‌ ಕುಮಾರ್‌, ನಗರ ಪೊಲೀಸ್‌ ಆಯುಕ್ತ 

ಟಾಪ್ ನ್ಯೂಸ್

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

cyber crime

Cyber ​​fraud ಬ್ಯಾಂಕ್‌ ಹೊಣೆ: ಸುಪ್ರೀಂಕೋರ್ಟ್‌

Supreme Court

Supreme Court; ಮೀಸಲಿಂದ ಹೊರಗಿಡುವ ಬಗ್ಗೆ ಶಾಸಕಾಂಗ, ಕಾರ್‍ಯಾಂಗ ನಿರ್ಧರಿಸಲಿ

BJP Symbol

Delhi BJP;ಮಹಾರಾಷ್ಟ್ರ ಮಾದರಿ ಯೋಜನೆ: ವರದಿ

rajnath 2

Aero India 2025:ಇಂದು ರಾಯಭಾರಿಗಳ ಜತೆಗೆ ರಾಜನಾಥ್‌ ಸಭೆ

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ

Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ

Bengaluru: ರೋಡ್‌ ರೇಜ್‌: ಕಾರಿನ ಬಾನೆಟ್‌ ಮೇಲೆ ಹತ್ತಿ ಯುವಕರ‌ ಪುಂಡಾಟ

Bengaluru: ರೋಡ್‌ ರೇಜ್‌: ಕಾರಿನ ಬಾನೆಟ್‌ ಮೇಲೆ ಹತ್ತಿ ಯುವಕರ‌ ಪುಂಡಾಟ

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Naxals-Meet-Cm

Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

cyber crime

Cyber ​​fraud ಬ್ಯಾಂಕ್‌ ಹೊಣೆ: ಸುಪ್ರೀಂಕೋರ್ಟ್‌

Supreme Court

Supreme Court; ಮೀಸಲಿಂದ ಹೊರಗಿಡುವ ಬಗ್ಗೆ ಶಾಸಕಾಂಗ, ಕಾರ್‍ಯಾಂಗ ನಿರ್ಧರಿಸಲಿ

BJP Symbol

Delhi BJP;ಮಹಾರಾಷ್ಟ್ರ ಮಾದರಿ ಯೋಜನೆ: ವರದಿ

rajnath 2

Aero India 2025:ಇಂದು ರಾಯಭಾರಿಗಳ ಜತೆಗೆ ರಾಜನಾಥ್‌ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.