ಸಂಕಷ್ಟದಲ್ಲಿ ಪಟಾಕಿ ಮಾರಾಟಗಾರರು

ಈಗಾಗಲೇ ಮಾರುಕಟೆಯಲ್ಲಿ ಸಾಮಾನ್ಯ ಪಟಾಕಿಗಳು,, ಸರ್ಕಾರದ ಕೊನೇ ಕ್ಷಣದ ನಿರ್ಧಾರದಿಂದ ಆತಂಕ ಸೃಷ್ಟಿ

Team Udayavani, Nov 8, 2020, 2:38 PM IST

ಸಂಕಷ್ಟದಲ್ಲಿ ಪಟಾಕಿ ಮಾರಾಟಗಾರರು

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಗೆ ಸರ್ಕಾರ”ಹಸಿರು ಪಟಾಕಿ’ಗೆ ಮಾತ್ರ ಅವಕಾಶ ನೀಡಿ ಆದೇಶಹೊರಡಿಸಿದ ಬೆನ್ನಲ್ಲೇ ಪಟಾಕಿ ವಿತರಕರು ಮತ್ತುಮಾರಾಟಗಾರರು ಪೇಚಿಗೆ ಸಿಲುಕಿದ್ದಾರೆ.

ಹಬ್ಬಕ್ಕೆ ಕೇವಲ ಒಂದು ವಾರ ಬಾಕಿ ಇರುವಾಗ ಈಆದೇಶ ಹೊರಡಿಸಲಾಗಿದೆ. ಆದರೆ, ಈಗಾಗಲೇಸಾಮಾನ್ಯ ಪಟಾಕಿಗಳು ಮಾರುಕಟ್ಟೆಗೆ ಬಂದಿಳಿದಿವೆ.ಕೋವಿಡ್ ವೈರಸ್‌ ಹಾವಳಿ ನಡುವೆಯೂಕೋಟ್ಯಂತರ ರೂ. ಸುರಿದು ವ್ಯಾಪಾರಿಗಳು ಪಟಾಕಿಖರೀದಿ ಮಾಡಿ ಗೋದಾಮುಗಳಲ್ಲಿ ಸಂಗ್ರಹಿಸಿಟ್ಟಿದ್ದಾರೆ.ಇನ್ನು ಹಲವರು ತಯಾರಕರಿಗೆ ಮುಂಗಡ ಹಣನೀಡಿ, ಆರ್ಡರ್‌ ಕೊಟ್ಟು ಬಂದಿದ್ದಾರೆ. ಈ ವೇಳೆ ಸರ್ಕಾರ ಪಟಾಕಿ ನಿಷೇಧಿಸಿ ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಿದೆ.

ಹಸಿರು ಪಟಾಕಿ ಹೇಗಿರುತ್ತದೆ?ಅದನ್ನು ಗುರುತಿಸುವುದು ಹೇಗೆ? ಎಲ್ಲಿ ಸಿಗುತ್ತದೆ ಎಂಬುದರ ಸ್ಪಷ್ಟತೆಗ್ರಾಹಕರಿಗಿಲ್ಲ. ಅತ್ತ ವ್ಯಾಪಾರಿಗಳೂ ಭಾರಿ ನಷ್ಟದ ಆತಂಕದಲ್ಲಿದ್ದಾರೆ. “ಹಸಿರು ಪಟಾಕಿಗಳಲ್ಲಿ ಭೂ ಚಕ್ರ, ಸುರುಬತ್ತಿಯಂತಹ ಕೆಲವೇ ಉತ್ಪನ್ನಗಳು ಮಾರುಕಟ್ಟೆಯಲ್ಲಿಸಿಗುತ್ತವೆ. ಅಲ್ಲದೆ, ಕೌನ್ಸಿಲ್‌ ಆಫ್ ಸೈಂಟಿಫಿಕ್‌ ಆಂಡ್‌ಇಂಡಸ್ಟ್ರಿಯಲ್‌ ರಿಸರ್ಚ್‌ (ಸಿಎಸ್‌ಐಆರ್‌) ಸೂಚಿಸಿದ ರಾಸಾಯನಿಕ ಸಂಯೋಜನೆಗಳಿಂದಾಗಿ ಲಭ್ಯವಿರುವ ಹಸಿರು ಪಟಾಕಿಗಳೂ ಪರಿಣಾಮಕಾರಿಯಾಗಿಲ್ಲ.ಇದರಿಂದ ಗ್ರಾಹಕರೂ ಅವುಗಳ ಖರೀದಿಗೆ ಮನಸ್ಸು ಮಾಡುವುದಿಲ್ಲ’ ಎಂಬ ವಾದ ಪಟಾಕಿ ವಿತರಕರು ಮತ್ತು ಚಿಲ್ಲರೆ ವ್ಯಾಪಾರಿಗಳದ್ದಾಗಿದೆ.

“ಈಗಾಗಲೇ ಪ್ರತಿ ವರ್ಷದಂತೆ ಸಾಮಾನ್ಯಪಟಾಕಿಗಳು ನಮ್ಮಲ್ಲಿ ಬಂದಿಳಿದಿವೆ. ಈ ಬಾರಿ ಒಂದುಕೋಟಿ ಮೊತ್ತದ ಪಟಾಕಿ ಉತ್ಪನ್ನಗಳನ್ನು ತಂದಿದ್ದೇವೆ. ಹಸಿರು ಪಟಾಕಿಗಳು ಬೆರಳೆಣಿಕೆಯಷ್ಟು ಬ್ರ್ಯಾಂಡ್‌ಗಳಲ್ಲಿ ಮಾತ್ರ ಲಭ್ಯವಿದ್ದು, ಅವೂ ಸಹ ವಿರಳ. ಕೊನೆ ಪಕ್ಷ ಮೂರು ತಿಂಗಳು ಮುಂಚಿತವಾಗಿ ಸರ್ಕಾರಈ ಆದೇಶ ನೀಡಿದ್ದರೆ, ಅನುಕೂಲ ಆಗುತ್ತಿತ್ತು. ಈಗಪರವಾನಗಿ, ಸಂಗ್ರಹ ಮತ್ತಿತರ ಶುಲ್ಕ ಪಾವತಿಸಿತಂದಿಡಲಾಗಿದೆ. ಕೊನೆಕ್ಷಣದಲ್ಲಿ ಹೀಗೆಹೇಳುತ್ತಿರುವುದು ಎಷ್ಟು ಸೂಕ್ತ’ ಎಂದು ಕಟ್ಟಿಗೇನ ಹಳ್ಳಿ ವೈಷ್ಣವಿ ಕ್ರ್ಯಾಕರ್ ಶಾಪ್‌ನ ವಿ. ನವೀನ್‌ ತಿಳಿಸುತ್ತಾರೆ.

ನಮ್ಮಲ್ಲಿರುವುದೇ ಹಸಿರು ಪಟಾಕಿ! : “ಶಿವಕಾಶಿಯಲ್ಲಿಸಿಎಸ್‌ಐಆರ್‌ಅನುಮತಿನೀಡಿದತಯಾರಕರಿಂದಲೇನಾವು ಖರೀದಿಸುತ್ತಿದ್ದು, ನಮ್ಮ ಬಳಿ ಇರುವುದೇ ಹಸಿರು ಪಟಾಕಿಗಳು. ಸುಮಾರು ಒಂದೂವರೆ ಕೋಟಿಮೊತ್ತದ ಪಟಾಕಿಯನ್ನು ಪ್ರತಿ ವರ್ಷ ಮಾರಾಟ ಮಾಡುತ್ತಿದ್ದು, ಈ ವರ್ಷವೂ ಇದೇ ಗುರಿ ಹೊಂದಿದ್ದೇವೆ. ಪಟಾಕಿ ಉತ್ಪನ್ನಗಳ ಬಾಕ್ಸ್‌ ಮೇಲೆನಮೂದಿಸಿರುವ ರಾಸಾಯನಿಕ ಸಂಯೋಗಗಳು, ಅಧಿಕೃತ ಸಂಸ್ಥೆಯ ಮುದ್ರೆಯಿಂದ ಅದನ್ನು ಗ್ರಾಹಕರು ದೃಢಪಡಿಸಿಕೊಳ್ಳಬಹುದು’ ಎಂದು ಕರ್ನಾಟಕ ಸಗಟು ಪಟಾಕಿಗಳ ವಿತರಕರ ಸಂಘದಸದಸ್ಯ ಜೆ. ಮದನ್‌ಕುಮಾರ್‌ ಸ್ಪಷ್ಟಪಡಿಸುತ್ತಾರೆ.

“ಬೆಂಗಳೂರಿನಲ್ಲಿ ಅಧಿಕೃತ ಸಗಟು ಪಟಾಕಿಗಳ ವಿತರಕರು ಅಬ್ಬಬ್ಟಾ ಎಂದರೆ 20-30 ಜನ ಇರಬಹುದು. ಚಿಲ್ಲರೆ ಪಟಾಕಿ ವ್ಯಾಪಾರಿಗಳು ನೂರಾರುಜನ ಇದ್ದಾರೆ. ನಗರದಾದ್ಯಂತ ಪ್ರತಿ ವರ್ಷದೀಪಾವಳಿಯಲ್ಲಿ ಮೂರು ದಿನಗಳು ಸರಿ ಸುಮಾರು ನೂರು ಕೋಟಿ ಮೊತ್ತದ ಪಟಾಕಿ ಸುಡಲಾಗುತ್ತದೆ.ಹಸಿರು ಪಟಾಕಿಗಳಲ್ಲಿ ಕೆಲವು ಭಾರ ಲೋಹದ ರಾಸಾಯನಿಕಗಳನ್ನು ಹಾಕಿರುವುದಿಲ್ಲ. ಹಾಗಾಗಿ,ಅಂತಹ ಪಟಾಕಿಗಳಿಂದ ಹೊರಬರುವ ಹೊಗೆ ಮತ್ತು ಸದ್ದು ಶೇ.30- 40 ಕಡಿಮೆ ಇರುತ್ತದೆ’ ಎಂದೂ ಅವರು ಹೇಳಿದರು.

ಟಾಪ್ ನ್ಯೂಸ್

1-nikil

Channapatna; ಜನಾದೇಶಕ್ಕೆ ತಲೆಬಾಗುತ್ತೇನೆ, ಪ‌ಲಾಯನ ಮಾಡಲ್ಲ: ನಿಖಿಲ್‌

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

renukaacharya

BJP; ಹರಕುಬಾಯಿ ನಾಯಕರಿಂದಲೇ ಸೋಲು: ರೇಣುಕಾಚಾರ್ಯ ಆಕ್ರೋಶ

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ

1-modi

BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ

Exam 2

SSLC ಪರೀಕ್ಷೆ ನೋಂದಣಿ: ನ.30ರವರೆಗೆ ಅವಧಿ ವಿಸ್ತರಣೆ

R Ashok (2)

R. Ashok; ಪಾಪ, ನಿಖಿಲ್‌ ಅದೃಷ್ಟವೇ ಸರಿಯಿಲ್ಲ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

9-bng

Bengaluru: ಹನಿಟ್ರ್ಯಾಪ್‌: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ

6-bng

Bengaluru: ಬಸ್‌ಗಳಲ್ಲಿ ಮೊಬೈಲ್‌ ಕಳ್ಳತನ: ಇಬ್ಬರು ಆರೋಪಿಗಳ ಸೆರೆ‌, 60 ಫೋನ್‌ ಜಪ್ತಿ

5-bng

Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ

4-bng

Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

1-nikil

Channapatna; ಜನಾದೇಶಕ್ಕೆ ತಲೆಬಾಗುತ್ತೇನೆ, ಪ‌ಲಾಯನ ಮಾಡಲ್ಲ: ನಿಖಿಲ್‌

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

World Super Kabaddi League: ವಿಶ್ವ ಕಬಡ್ಡಿ ಲೀಗ್‌ಗೆ ಅನುಮತಿ

World Super Kabaddi League: ವಿಶ್ವ ಕಬಡ್ಡಿ ಲೀಗ್‌ಗೆ ಅನುಮತಿ

renukaacharya

BJP; ಹರಕುಬಾಯಿ ನಾಯಕರಿಂದಲೇ ಸೋಲು: ರೇಣುಕಾಚಾರ್ಯ ಆಕ್ರೋಶ

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.