ಫಸ್ಟ್ ಓಟ್ ಬೆಸ್ಟ್ ಓಟ್
ಯುವ ಮನದಲ್ಲಿ ಫಸ್ ಮೊದಲ ಮತದಾನ ಪುಳಕ
Team Udayavani, Apr 19, 2019, 11:51 AM IST
ಮೊದಲ ಬಾರಿಗೆ ತುಂಬಾ ಉತ್ಸುಕನಾಗಿ ಓಟ್ ಮಾಡಿದೆ. ಇವಿಎಂ ಒತ್ತಿದ ನಂತರ ವಿವಿಪ್ಯಾಟ್ ನಲ್ಲಿ ತಕ್ಷಣ ಚೀಟಿ ಬರಲಿಲ್ಲ. ನಂತರ ಬಂತು. ನನಗೆ ಖುಷಿಯಾಗಿದೆ.
● ಎ.ಎಸ್.ಮೋಹನ್, ವಿದ್ಯಾರ್ಥಿ.
ಮೊದಲ ಬಾರಿಗೆ ಇವಿಎಂ ನೋಡಿದಾಗ ಯಾರಿಗೆ ಓಟ್ ಮಾಡಬೇಕೆಂದು ತಿಳಿಯಲಿಲ್ಲ. ಒಂದು ಸೆಕೆಂಡ್ ಯೋಚಿಸಿ ಸೂಕ್ತ ಅಭ್ಯರ್ಥಿಗೆ ಇವಿಎಂ ಗುಂಡಿ ಒತ್ತಿದೆ.
●ಡಿ.ಸಾಧ್ವಿಕಾ, ವಿದ್ಯಾರ್ಥಿನಿ.
ಮೊದಲ ಬಾರಿಗೆ ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗಿಯಾಗಿರುವುದಕ್ಕೆ ಸಂತಸವಾಗುತ್ತಿದೆ. ಕುಟುಂಬದವರೊಂದಿಗೆ ಹೋಗಿ ಹಕ್ಕು ಚಲಾವಣೆ ಮಾಡಿದ ಸಂಭ್ರಮವಿದೆ.
●ಕೆ.ಎಸ್.ಸಿಂಚನ, ವಿದ್ಯಾರ್ಥಿನಿ.
ಮತಗಟ್ಟೆಗೆ ಹೋಗುವವರೆಗೂ ಗೊಂದಲವಿತ್ತು. ಅಭ್ಯರ್ಥಿಗಳು ಮತ್ತು ಅವರ ಪಕ್ಷ, ಚಿಹ್ನೆ ಎಲ್ಲವೂ ಇವಿಎಂನಲ್ಲಿ ಹೇಗೆ ಜೋಡಿಸಿ ದ್ದಾರೆ, ನೋಡಿ ನನಗೆ ಖುಷಿಯಾಯಿತು.
●ಅಮೋಘ…, ವಿದ್ಯಾರ್ಥಿ
ಮೊಟ್ಟ ಮೊದಲು ಓಟ್ ದೇಶಕ್ಕಾಗಿ ಹಾಕಿದ್ದು ನನ್ನಲ್ಲಿ ಹೆಮ್ಮೆ ಮೂಡಿಸಿದೆ. ಹಕ್ಕು ಚಲಾವಣೆ ರಾಜ್ಯ, ದೇಶದ ಭವಿಷ್ಯ ಉತ್ತಮ ಗೊಳಿಸುವ ನಂಬಿಕೆ ಜನರಲ್ಲಿ ಬರಬೇಕಿದೆ.
●ನಿತಿನ್, ವಿದ್ಯಾರ್ಥಿ.
ನೋಟ ಆಯ್ಕೆ ಇವಿಎಂನಲ್ಲಿ ಹೇಗೆ ನಮೂದಿಸಿರುತ್ತಾರೆ ಎಂದು ತಿಳಿಯುವ ಕುತೂಹಲ ಪೂರ್ಣಗೊಂಡಿತು. ಮೊದಲ ಬಾರಿಗೆ ಮತ ಚಲಾಯಿಸಿ ಪುನೀತನಾದೆ.
●ಭರತ್, ವೈದ್ಯಕೀಯ ವಿದ್ಯಾರ್ಥಿ.
ತಂಗಿಯೊಂದಿಗೆ ಹೋಗಿ ತೋರು ಬೆರಳಿಗೆ ಮೊದಲ ಬಾರಿಗೆ ಮಸಿ ಬಳಿದುಕೊಂಡು ಖುಷಿಪಟ್ಟೆ. ಆಧಾರ್
ಕಾರ್ಡ್ ಮತ್ತು ಓಟರ್ ಐಡಿ ತೆಗೆದುಕೊಂಡು ಹೋಗುವುದು ತಿಳಿಯದೆ ಗೊಂದಲವಾಯಿತು.
●ದೀಕ್ಷಿತ್, ವಿದ್ಯಾರ್ಥಿ.
ಮತ ಚಲಾಯಿಸುವುದರ ಬಗ್ಗೆ ಬಹಳ ದಿನಗಳಿಂದ ಕುತೂಹಲವಿತ್ತು. ಕಳೆದ ಒಂದುವಾರದಿಂದ ಮತದಾನ ಮಾಡುವುದರ ಬಗ್ಗೆ ಮನೆಯವರನ್ನು ಕೇಳಿ ತಿಳಿದು ಕೊಂಡಿದ್ದೆ. ಈಗ ಸಂತಸವಾಗಿದೆ.
●ಎಚ್.ಎನ್.ರಮೇಶ್, ವಿದ್ಯಾರ್ಥಿ
ಮೊದಲ ಬಾರಿ ಮತದಾನ ಮಾಡುತ್ತಿರುವುದರಿಂದ ಸಹಜವಾಗೇ ಗೊಂದಲವಿತ್ತು. ಹೇಗೆ ಮತದಾನ
ಮಾಡುವುದು ಎನ್ನುವುದು ಗೊತ್ತಿರಲಿಲ್ಲ. ಮತದಾನ ಮಾಡಿದ್ದು ಖುಷಿಯಾಗಿದೆ.
●ನರಸಿಂಹ ಮೂರ್ತಿ, ವಿದ್ಯಾರ್ಥಿ
ನಮ್ಮ ನಾಯಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎನ್ನುವುದರ ಬಗ್ಗೆ ಕುತೂಹಲವಿತ್ತು.
ಅತ್ಯಂತ ಜಾಣ್ಮೆಯಿಂದ ಆಯ್ಕೆ ಮಾಡಿದ್ದೀನಿ ಎನ್ನುವ ವಿಶ್ವಾಸವಿದೆ.
●ಮಂಜುನಾಥ್, ವಿದ್ಯಾರ್ಥಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.