ಮಂಡಿನೋವಿಗೆ ಔಷಧಿ ನೀಡುವ ನೆಪದಲ್ಲಿ ಐದು ಲಕ್ಷ ವಂಚನೆ


Team Udayavani, Feb 21, 2018, 12:44 PM IST

mandi-novu.jpg

ಬೆಂಗಳೂರು: ರಸ್ತೆಯಲ್ಲಿ ಹೋಗುವ ಹಿರಿಯ ಜೀವಗಳೇ ಇವರ ಟಾರ್ಗೆಟ್‌. ಪ್ರತಿಷ್ಠಿತ ರಸ್ತೆಗಳೇ ಕಾರ್ಯಸ್ಥಾನ. ಅಲ್ಲಿ ಕುಂಟುತ್ತಾ ಸಾಗುವ  ಹಿರಿಯ ನಾಗರಿಕರೊಂದಿಗೆ ಮಾತಿಗಿಳಿಯುತ್ತಾರೆ. ಅವರ ಕಾಯಿಲೆ ವಾಸಿಮಾಡುವ ನೆಪದಲ್ಲಿ  ಲಕ್ಷಗಟ್ಟಲೆ ಹಣ ಕೀಳ್ತಾರೆ!

ಇಂತಹ  ವ್ಯವಸ್ಥಿತ ವಂಚಕರ ಜಾಲಕ್ಕೆ ಇಂದಿರಾ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯೊಂದರಲ್ಲೇ ಐವರು ಹಿರಿಯ ನಾಗರಿಕರು ಈ ಬಲೆಗೆ ಬಿದ್ದಿರುವುದು ಬೆಳಕಿಗೆ ಬಂದಿದೆ. ಈ ಪೈಕಿ ವಂಚನೆಗೊಳಗಾದ ವಾಯುಸೇನೆಯ ನಿವೃತ್ತ ಗ್ರೂಪ್‌ ಕಮಾಂಡರ್‌ ಸೇರಿ ಐವರು ಸಂತ್ರಸ್ತರು ಈ ವಂಚಕರ ವಿರುದ್ಧ ಪೊಲೀಸ್‌ ಠಾಣೆ ಏರುವ  ಪ್ರಯತ್ನ ಮಾಡಿದ್ದಾರೆ. ದೂರುದಾರರಿಂದ 9 ಲಕ್ಷಕ್ಕೂ ಅಧಿಕ ಹಣ ಪಡೆದು ತಲೆಮರೆಸಿಕೊಂಡಿರುವ ವಂಚಕರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

” ಭಸ್ಮ ಔಷಧಿಗೆ  5 ಲಕ್ಷ ರೂ.: ವಾಯುಸೇನೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ  ಗ್ರೂಪ್‌ ಕಮಾಂಡರ್‌ ಕ್ಯಾಪ್ಟನ್‌ ಎ.ಜಿ ಪಶೀಲ್ಕರ್‌ (76) ಓಲ್ಡ್‌ ಏರ್‌ಪೋರ್ಟ್‌ ರಸ್ತೆಯಲ್ಲಿರುವ ಎನ್‌ಎಎಲ್‌ ಕ್ಯಾಂಪಸ್‌ ಬಡಾವಣೆಯಲ್ಲಿ ವಾಸವಿದ್ದು, ಜ. 21ರಂದು ಮಧ್ಯಾಹ್ನ ಕಾರ್ಯನಿಮಿತ್ತ ಇಂದಿರಾನಗರದ ಮುಖ್ಯರಸ್ತೆಗೆ ಆಗಮಿಸಿದ್ದರು.

ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಬಂದು ಮಾತನಾಡಿಸಿ, ಆರೋಗ್ಯದ ಬಗ್ಗೆ ವಿಚಾರಿಸಿದ್ದು, ತಾವು ಮಂಡಿನೋವಿನಿಂದ ಬಳಲುತ್ತಿರುವುದಾಗಿ ಪಶೀಲ್ಕರ್‌ ಹೇಳಿಕೊಂಡಿದ್ದಾರೆ. ಈ ಅವಕಾಶಕ್ಕಾಗಿಯೇ ಕಾಯುತ್ತಿದ್ದ ವಂಚಕ, ನಾನು ನಿಮ್ಮ  ಮಂಡಿನೋವಿಗೆ ಆಯುರ್ವೇದ ಔಷಧಿಯನ್ನು  ನಿಮ್ಮ ಮನೆಗೆ ಬಂದು ಮಾಡಿಕೊಡುತ್ತೇನೆ ಎಂದು ನಂಬಿಸಿ ಅಡ್ರೆಸ್‌ ಪಡೆದು ಹೋಗಿದ್ದ.

5.44 ಲಕ್ಷ ರೂ. ವಂಚನೆ: ಮಾರನೇ ದಿನವೇ ಪಶೀಲ್ಕರ್‌ ಅವರ ಮನೆಗೆ ಬಂದಿದ್ದ ವಂಚಕ ತನ್ನ ಹೆಸರನ್ನು ಗಣೇಶ್‌ ಎಂದು ಪರಿಚಯಿಸಿಕೊಂಡು, ತಮ್ಮ ಕಚೇರಿಗೆ ಬಂದರೆ ಔಷಧಿ ಮಾಡಿಕೊಡುತ್ತೇನೆ ಎಂದಿದ್ದು 16ನೇ ಕ್ರಾಸ್‌ನಲ್ಲಿರುವ ಪರಂಪರ ಆಯುರ್ವೇದಿಕ್‌ ಬೋರ್ಡ್‌ ಹಾಕಿದ್ದ ಕಚೇರಿಗೆ ಕರೆದೊಯ್ದಿದ್ದ. ಆತ ಹೇಳಿದಂತೆ 100 ಗ್ರಾಂ ಕೊಬ್ಬರಿ ಎಣ್ಣೆ, ಕರ್ಪೂರ, ತೆಗೆದುಕೊಂಡು ಹೋಗಿದ್ದೆ.

ಆದರೆ, ಆತ ಕೆಲವು ಭಸ್ಮಗಳನ್ನು ತೋರಿಸಿ ಇದರಿಂದ ಔಷಧಿ ತಯಾರಿಸಿದ್ದೇನೆ. ಇದನ್ನು ಹಚ್ಚಿಕೊಂಡರೆ ನಿಮ್ಮ ಮಂಡಿನೋವು ವಾಸಿಯಾಗಲಿದೆ. ಇದಕ್ಕಾಗಿ 5,44,700 ರೂ ನೀಡುವಂತೆ ತಿಳಿಸಿದ. ಮಂಡಿನೋವು ವಾಸಿಯಾಗಲಿದೆ ಎಂಬ ಆಸೆಯಿಂದ ನನ್ನ ಬಳಿಯಿದ್ದ 10,700 ರೂ.ನಗದು ಹಾಗೂ ಉಳಿದ ಮೊತ್ತಕ್ಕೆ ಎರಡು ಬ್ಯಾಂಕ್‌ ಚೆಕ್‌ಗಳನ್ನು ನೀಡಿ ಔಷಧಿ ತೆಗೆದುಕೊಂಡು ವಾಪಾಸ್‌ ಬಂದಿದ್ದೆ. ಹಲವು ದಿನಗಳ ಕಾಲ ಔಷಧಿ ಹಚ್ಚಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಹೀಗಾಗಿ ಔಷಧಿ ನೀಡಿದ್ದ ಗಣೇಶ್‌ ಎಂಬಾತನಿಗೆ ಕರೆ ಮಾಡಿದಾಗ ಸ್ವಿಚ್‌ ಆಫ್ ಬಂದಿದ್ದು, ಕಚೇರಿ ನೋಡಿದಾಗ ಬೀಗ ಹಾಕಿತ್ತು. ಬಳಿಕ ವಂಚಿಸುರುವುದು ಗೊತ್ತಾಗಿದೆ. ಈಗಾಗಲೇ ಹಲವು ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದು ಆರೋಪಿ ಗಣೇಶ್‌ ಎಂಬಾತ ಬಳಸಿದ್ದ ಮೊಬೈಲ್‌ ಕರೆಗಳ ಪರಶೀಲನೆ  ನಡೆಸಲಾಗುತ್ತಿದೆ. ಆರೋಪಿಗಳು ಇನ್ನೂ ಹಲವರಿಗೆ ವಂಚಿಸಿರುವ ಸಾಧ್ಯತೆಯಿದೆ ಎಂದು ಪೊಲೀಸ್‌ ಅಧಿಕಾರಿ ಹೇಳಿದರು.

ಮನೆಗೆ ಬಂದು ದುಡ್ಡುಪಡೆದ ವಂಚಕರು!: ಕ್ಯಾ.ಪಶೀಲ್ಕರ್‌ ಅಲ್ಲದೆ  ಪದ್ಮಾವತಿ, ಲಿಲ್ಲಿ, ಜಿ. ರಮೇಶ್‌, ಜಗನ್ನಾಥ್‌ ಎಂಬುವವರಿಗೂ ಆರೋಪಿಗಳು ತಲಾ 10 ಸಾವಿರದಿಂದ  2ಲಕ್ಷ ರೂ.ಗಳವರೆಗೆ ಪಡೆದುಕೊಂಡು ವಂಚಿಸಿದ್ದಾರೆ.  ದೂರುದಾರರನ್ನು ರಸ್ತೆಮಾರ್ಗಗಳಲ್ಲಿ ಪರಿಚಯಿಸಿಕೊಂಡು ಆಯುರ್ವೇದ ಚಿಕಿತ್ಸೆ ನೀಡುತ್ತೇವೆ ಎಂದು ನಂಬಿಸಿದ್ದಾರೆ.

ಬಳಿಕ ಅವರ ಮನೆಗಳಿಗೆ ತೆರಳಿ ಕೊಬ್ಬರಿ ಎಣ್ಣೆ,  ಕರ್ಪೂರ ಮಿಕ್ಸ್‌ ಮಾಡುವುದು, ಅಥವಾ ಅಪರೂಪದ ಭಸ್ಮ ಔಷಧಿ ಇದು ಎಂದು ನಂಬಿಸಿ ಬಾಟಲ್‌ನಲ್ಲಿ ನೀಡುವುದು ಹಣ ಪಡೆದುಕೊಂಡು ವಾಪಾಸ್‌ ಆಗಿದ್ದಾರೆ. ವಂಚಕರು ಅಧಿಕೃತವಾಗಿ ಕಚೇರಿಯೇನು ಹೊಂದಿಲ್ಲ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಟಾಪ್ ನ್ಯೂಸ್

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

17-

Bengaluru: ದೆಹಲಿಯ ನೇಲ್‌ ಆರ್ಟಿಸ್ಟ್ ನೇಣಿಗೆ

16-cm

Bengaluru: ತ್ಯಾಜ್ಯ ವರ್ಗಾವಣೆ ಘಟಕಕ್ಕೆ ಸಿದ್ದರಾಮಯ್ಯ ಚಾಲನೆ

15-ccb

Bengaluru: ಜೀವಾ ಆತ್ಮಹತ್ಯೆ: ಡಿವೈಎಸ್ಪಿಗೆ ಸಿಸಿಬಿ ನೋಟಿಸ್‌ ಸಾಧ್ಯತೆ

14-fruad

Bengaluru: ಸಾಲ ಕೊಡಿಸುವುದಾಗಿ 37 ಲಕ್ಷ ವಂಚನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

byndoor

Bantwal: ಅಪಘಾತ; ಗಾಯಾಳು ಸಾವು

POlice

Kumble: ಬುರ್ಖಾಧಾರಿ ಯುವಕ ವಶಕ್ಕೆ; ಕುಖ್ಯಾತ ಕಳವು ತಂಡದ ಸದಸ್ಯನೇ ಎಂಬ ಬಗ್ಗೆ ತನಿಖೆ

5

Mangaluru: ಎಎಸ್‌ಐಗೆ ಗಾಯ; ಡಿವೈಎಫ್ಐ ವಿರುದ್ಧ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.