ಹನಿಟ್ರ್ಯಾಪ್ ಗ್ಯಾಂಗ್‌ನ ಐವರ ಬಂಧನ
Team Udayavani, Jan 19, 2018, 11:23 AM IST
ಬೆಂಗಳೂರು: ಯುವತಿಯರ ಜೊತೆ ಸುಖ ಬಯಸುವ ಶ್ರೀಮಂತ ವ್ಯಕ್ತಿಗಳನ್ನು ” ಹನಿಟ್ರ್ಯಾಪ್’ ಮೂಲಕ ಸುಲಿಗೆ ಮಾಡುತ್ತಿದ್ದ ತಂಡವನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೆಗಡೆ ನಗರದ ನಿವಾಸಿ ಶಾಹಿನ್ (40) ನೂರಿ ಶಾಮಾ (35), ಸಲ್ಮಾ ಫರ್ವೀನ್ (27), ಸಜೀದ್ ಶೇಖ್ (38) ಹಾಗೂ ಶಬ್ಬೀರ್ ಶರೀಫ್ (30) ಬಂಧಿತ ಆರೋಪಿಗಳು. ಈ ತಂಡದ ಮತ್ತಿಬ್ಬರು ಸದಸ್ಯರಾಗಿರುವ ಶಿವಾಜಿನಗರದ ಸಲೀಂ ಹಾಗೂ ಮೆಂಟಲ್ ಆಸೀಫ್ ಎಂಬುವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಆರೋಪಿಗಳ “ಹನಿಟ್ರ್ಯಾಪ್’ನಿಂದ ಐದು ಸಾವಿರ ರೂ. ಕಳೆದುಕೊಂಡು 45 ಸಾವಿರ ಹಣ ನೀಡುವ ಬೆದರಿಕೆ ಎದುರಿಸುತ್ತಿದ್ದ ಡಿ.ಜೆ ಹಳ್ಳಿ ನಿವಾಸಿಯಾದ ಮೀನು ವ್ಯಾಪಾರಿ ರೆಹಮತ್ (51) ಎಂಬುವರು ನೀಡಿದ ದೂರಿನ ಮೇರೆಗೆ, ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು ಹಲವು ವರ್ಷಗಳಿಂದ ಹನಿಟ್ರ್ಯಾಪ್ ದಂಧೆ ನಡೆಸಿರುವ ಸಾಧ್ಯತೆಯಿದ್ದು, ಇನ್ನೂ ಹಲವರನ್ನು ಸುಲಿಗೆ ಮಾಡಿರುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಹಣ ಕೀಳುವ ಯತ್ನ: ಪ್ರಮುಖ ಆರೋಪಿ ಶಾಹೀನ್, ತನಗೆ ಪರಿಚಿತವಾಗಿರುವ ನೂರಿಶಾಮಾ ಹಾಗೂ ಸಲ್ಮಾ ಪರ್ವೀನ್‌ರನ್ನು ಮುಂದಿಟ್ಟುಕೊಂಡು ಹೆಗಡೆ ನಗರದಲ್ಲಿರುವ ತನ್ನ ಹೆಂಚಿನ ಮನೆಯಲ್ಲಿ ಶ್ರೀಮಂತ ವ್ಯಕ್ತಿಗಳನ್ನು ಕರೆಸಿಕೊಂಡು ಹನಿಟ್ರ್ಯಾಪ್ ನಡೆಸುತ್ತಿದ್ದಳು. ಇತರೆ ಆರೋಪಿಗಳನ್ನು ಮನೆಗೆ ಬಂದವರನ್ನು ಬೆದರಿಸಿ ಹಣ ಕೀಳಲು ಇಟ್ಟುಕೊಂಡಿದ್ದಳು.
ದೂರುದಾರ ರಹಮತ್‌ರನ್ನು ಬುಧವಾರ ಮಾತನಾಡಿಸಿದ್ದ ಶಾಹೀನಾ, ತನ್ನ ಮನೆಯಲ್ಲಿ ಯುವತಿಯಿದ್ದು ಮೂರು ಸಾವಿರ ನೀಡಿದರೆ ಲೈಂಗಿಕ ಕ್ರಿಯೆಗೆ ಅವಕಾಶ ಕಲ್ಪಿಸಿಕೊಡುತ್ತೇನೆ ಎಂದು ಹೇಳಿದ್ದಳು. ಆಕೆಯ ಮಾತು ನಂಬಿದ ರಹಮತ್, ಮೂರು ಸಾವಿರ ನೀಡಿ ಆಕೆಯ ಹೆಂಚಿನ ಮನೆಗೆ ಹೋಗಿ ಸಲ್ಮಾ ಜೊತೆಯಿದ್ದರು. ಈ ವೇಳೆ ಶಾಹೀನ್ ಹೊರಗಡೆ ಬಂದು ಬಿಟ್ಟಿದ್ದರು.
ಬೇಡಿಕೆ: ಇದಾದ ಐದು ನಿಮಿಷಗಳಲ್ಲಿ ಕೊಠಡಿಗೆ ಬಂದ ಉಳಿದ ಆರೋಪಿಗಳು, ಬೆತ್ತಲೆಯಾಗಿ ನಿಂತಿದ್ದ ರಹಮತ್ ಹಾಗೂ ಸಲ್ಮಾ ಪರ್ವೇಜ್ ವಿಡಿಯೋ ಮಾಡಿದ್ದೂ, ಅಲ್ಲದೆ ಗುಂಪಿನಲ್ಲಿದ್ದ ಆರೋಪಿಯೊಬ್ಬ, ನನ್ನ ಪತ್ನಿ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದೀಯಾ, ನಿನ್ನ ಮೇಲೆ ಅತ್ಯಾಚಾರ ಕೇಸ್ ಹಾಕಿಸುತ್ತೇನೆ. ಈ ವಿಡಿಯೋವನ್ನು ನಿನ್ನ ಪತ್ನಿ ಮಕ್ಕಳಿಗೆ ತೋರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತೇವೆ.
ನಿನ್ನ ಮರ್ಯಾದೆ ಉಳಿಯಬೇಕೆಂದರೆ 50 ಸಾವಿರ ರೂ, ನೀಡು ಎಂದು ಬೇಡಿಕೆಯಿಟ್ಟಿದ್ದಾರೆ. ಇದಕ್ಕೊಪ್ಪದಿದ್ದಾಗ ರಹಮತ್ ಬಳಿಯಿದ್ದ ಐದು ಸಾವಿರ ರೂ. ಕಿತ್ತುಕೊಂಡು, ಸಂಜೆ ವೇಳೆಗೆ 45 ಸಾವಿರ ಕೊಡಬೇಕು ಎಂದು ಬೆದರಿಸಿ ಬಿಟ್ಟುಕಳುಹಿಸಿದ್ದರು. ಈ ಘಟನೆಯಿಂದ ಆತಂಕಕ್ಕೊಳಗಾದ ರಹಮತ್ ಧೈರ್ಯ ಮಾಡಿ ದೂರು ನೀಡಿದ್ದು, ಈ ನಿಟ್ಟಿನಲ್ಲಿ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.